2022ಕ್ಕೆ ಬಾಬಾ ವಾಂಗಾ ಹೇಳಿದ 6ರಲ್ಲಿ 2 ಭವಿಷ್ಯವಾಣಿ ನಿಖರ.. ಉಳಿದ ಭಯಾನಕ ಭವಿಷ್ಯವಾಣಿಗಳಿವು..

ಭವಿಷ್ಯದ ಬಗ್ಗೆ ನಿಖರವಾದ ಮುನ್ಸೂಚನೆಗಳನ್ನು ನೀಡುವ ಪ್ರಸಿದ್ಧ ಅತೀಂದ್ರಿಯ ಬಾಬಾ ವಾಂಗಾ ಅವರು 2022 ರ ಬಗ್ಗೆ ಹಲವಾರು ಭವಿಷ್ಯ ನುಡಿದಿದ್ದಾರೆ. ಅವುಗಳಲ್ಲೆರಡು ಈಗಾಗಲೇ ನಿಜವಾಗಿವೆ.. ಇನ್ನೂ ಬಾಕಿ ಉಳಿದ ಭಯ ಹುಟ್ಟಿಸೋ ಭವಿಷ್ಯ ಯಾವುವು ನೋಡೋಣ..

Baba Vangas 2 out of 6 predictions for 2022 come true skr

ಬಾಬಾ ವಾಂಗಾ, ನಾಸ್ಟ್ರಾಡಾಮಸ್‌ ಇವರೆಲ್ಲ ಜೀವಿಸಿ ಶತಶತಮಾನಗಳೇ ಕಳೆದಿದ್ದರೂ ಅವರು ನುಡಿದ ಭವಿಷ್ಯವಾಣಿಗಳು ಇಂದಿಗೂ ಸತ್ಯವಾಗುತ್ತಲೇ ಇವೆ. ಹಾಗಾಗಿ, ಅವರ ಭವಿಷ್ಯನುಡಿಗಳಿಗೆ ಇಂದಿಗೂ ವಿಶ್ವದಾದ್ಯಂತ ಜನ ಕಾತರದಿಂದ ಎದುರು ನೋಡುತ್ತಾರೆ. 

ಭವಿಷ್ಯದ ಬಗ್ಗೆ ನಿಖರವಾದ ಮುನ್ನೋಟಗಳನ್ನು ಮಾಡಲು ಹೆಸರುವಾಸಿಯಾಗಿರುವ ಬ್ಲೈಂಡ್ ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಾಂಗಾ, 9/11 ದಾಳಿಗಳು ಮತ್ತು ಬ್ರೆಕ್ಸಿಟ್‌ನಂತಹ ಅನೇಕ ಐತಿಹಾಸಿಕ ಘಟನೆಗಳು ಸಂಭವಿಸುವ ಮೊದಲೇ ಅವನ್ನು ಹೇಳಿದ್ದರು. ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೇ ಅಡ್ಡಹೆಸರು ಹೊಂದಿರುವ ಆಕೆಯ ದೃಷ್ಟಿಕೋನಗಳು 85 ಪ್ರತಿಶತ ಸರಿಯಾಗಿವೆ ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಕೆಲವು ಚೆರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು, ಸೋವಿಯತ್ ಒಕ್ಕೂಟದ ವಿಸರ್ಜನೆ, 2004 ರ ಥೈಲ್ಯಾಂಡ್ ಸುನಾಮಿ ಮತ್ತು ಬರಾಕ್ ಒಬಾಮಾ ಅವರ ಅಧ್ಯಕ್ಷತೆಯನ್ನು ಒಳಗೊಂಡಿವೆ.

ಭಾರಿ ಚಂಡಮಾರುತದ ಸಮಯದಲ್ಲಿ 12 ವರ್ಷದವಳಿದ್ದಾಗ ದೃಷ್ಟಿ ಕಳೆದುಕೊಂಡ ಬಾಬಾ ವಾಂಗಾಗೆ ದೇವರಿಂದ ದೊರೆತ ಅಪರೂಪದ ಉಡುಗೊರೆ ಅತೀಂದ್ರಿಯ ಶಕ್ತಿ ಎಂದು ಸ್ವತಃ ವಾಂಗಾ ಹೇಳಿದ್ದರು.  ಆಕೆಯ ಅನೇಕ ಭವಿಷ್ಯವಾಣಿಗಳು ಹಿಂದೆ ನಿಜವಾಗಿದ್ದರೂ, ಹಲವಾರು ಸಂದೇಹವಾದಿಗಳು ಇವೆಲ್ಲವೂ ಕೇವಲ ಕಾಕತಾಳೀಯ ಎಂದು ಹೇಳಿದ್ದಾರೆ.

ಅದೇನೇ ಇರಲಿ, 2022ಕ್ಕೆ ಆರು ಮುನ್ಸೂಚನೆಗಳನ್ನು ಕೊಟ್ಟಿದ್ದರು. ಅವುಗಳಲ್ಲಿ 2 ಈಗಾಗಲೇ ನಿಜವಾಗಿದ್ದು, ಉಳಿದ ನಾಲ್ಕು ಭವಿಷ್ಯವಾಣಿಗಳ ಕಡೆ ಎಲ್ಲರ ದೃಷ್ಟಿ ಹರಿಯುತ್ತಿದೆ. ಅಷ್ಟೇ ಅಲ್ಲ, ಭಯಾನಕ ಭವಿಷ್ಯಗಳು ನಿಜವಾಗುವ ಭಯ ಎಲ್ಲೆಡೆ ಆವರಿಸಿದೆ. 

ಜನ್ಮಾಷ್ಟಮಿ 2022: ಉಪವಾಸ ಆಚರಿಸುವಾಗ ಈ ನಿಯಮ ಮರೀಬೇಡಿ..

ಹೌದು, ಬಾಬಾ ವಾಂಗಾ ಅವರ 2022ರ 6 ಭವಿಷ್ಯವಾಣಿಗಳಲ್ಲಿ 2 ನಿಜವಾಗಿದೆ. ಅವರ ಈ ವರ್ಷದ ಭವಿಷ್ಯಗಳ್ಯಾವುವು ಬಾಕಿ ಉಳಿದಿವೆ ನೋಡೋಣ. 

2022ರಲ್ಲಿ ಆಸ್ಟ್ರೇಲಿಯಾವು 'ತೀವ್ರವಾದ ಪ್ರವಾಹದ' ಹೊಡೆತಕ್ಕೆ ಒಳಗಾಗುತ್ತದೆ ಎಂದು ಬಾಬಾ ವಾಂಗಾ ಹೇಳಿದ್ದರು. ಅಂತೆಯೇ ಆಸ್ಟ್ರೇಲಿಯಾದಲ್ಲಿ ಭಾರೀ ಮಳೆ ಮತ್ತು ಚಂಡಮಾರುತಗಳು ಈ ವರ್ಷ ಭಾರಿ ಪ್ರವಾಹಕ್ಕೆ ಕಾರಣವಾಯಿತು.

Baba Vangas 2 out of 6 predictions for 2022 come true skr

2022 ರ ಬಾಬಾ ವಂಗಾ ಅವರ ಎರಡನೇ ಭವಿಷ್ಯವಾಣಿಯು ಹಲವಾರು ದೇಶಗಳು ತೀವ್ರ ನೀರಿನ ಕೊರತೆಯನ್ನು ಎದುರಿಸಲಿವೆ ಎಂಬುದಾಗಿತ್ತು. ಈ ವರ್ಷ, ಯುನೈಟೆಡ್ ಕಿಂಗ್‌ಡಮ್‌ನ ಹಲವಾರು ಭಾಗಗಳಲ್ಲಿ ಮತ್ತು ಹಲವಾರು ಯುರೋಪಿಯನ್ ನಗರಗಳಲ್ಲಿ ಬರಗಾಲವನ್ನು ಅಧಿಕೃತವಾಗಿ ಘೋಷಿಸಲಾಯಿತು. ತೀವ್ರ ಕೊರತೆಯಿಂದಾಗಿ ಪೋರ್ಚುಗಲ್ ಮತ್ತು ಇಟಲಿಗೆ ತಮ್ಮ ನೀರಿನ ಬಳಕೆಯನ್ನು ನಿಯಂತ್ರಿಸಲು ತಿಳಿಸಲಾಗಿದೆ.

ಬಾಕಿ ಉಳಿದ ಭಯಾನಕ ಭವಿಷ್ಯಗಳು
ಮಾಧ್ಯಮ ವರದಿಗಳ ಪ್ರಕಾರ, ರಷ್ಯಾದ ಸೈಬೀರಿಯಾದಲ್ಲಿ ಹೊಸ ವೈರಸ್ ಪತ್ತೆಯಾಗುತ್ತದೆ ಮತ್ತು ಅಂತಿಮವಾಗಿ ಪ್ರಪಂಚದಾದ್ಯಂತ ಹರಡುತ್ತದೆ ಮತ್ತು ಲಕ್ಷಾಂತರ ಸಾವುಗಳಿಗೆ ಕಾರಣವಾಗುತ್ತದೆ ಎಂದು ಬಾಬಾ ವಾಂಗಾ ಭವಿಷ್ಯ ನುಡಿದಿದ್ದಾರೆ. ಈ ಮುನ್ಸೂಚನೆಯು ಮತ್ತೊಂದು ಸಾಂಕ್ರಾಮಿಕದ ಭೀತಿಯನ್ನು ಹುಟ್ಟು ಹಾಕಿದೆ. ಇದಲ್ಲದೆ, ಕ್ಷುದ್ರಗ್ರಹದ ಮೂಲಕ ಅನ್ಯಲೋಕದ ಜೀವಿಗಳ ಆಗಮನ ಮತ್ತು ವರ್ಚುವಲ್ ರಿಯಾಲಿಟಿಯಿಂದ ಬದುಕಿನ ಸ್ವಾಧೀನ ಬಾಬಾ ವಾಂಗಾ ನುಡಿದ ಈ ವರ್ಷದ ಭವಿಷ್ಯಗಳಾಗಿವೆ.

Baba Vangas 2 out of 6 predictions for 2022 come true skr

ಭಾರತದ ಭವಿಷ್ಯ(India's future)
ಏತನ್ಮಧ್ಯೆ, ಬಾಬಾ ವಾಂಗಾ ಈ ವರ್ಷ ಭಾರತಕ್ಕೆ ಕೆಲವು ಭಯಾನಕ ಮತ್ತು ಸಂಬಂಧಿತ ಮುನ್ಸೂಚನೆಗಳನ್ನು ನೀಡಿದ್ದಾರೆ. ಈ ವರ್ಷ ಜಾಗತಿಕ ತಾಪಮಾನ ಕುಸಿತವಾಗಲಿದೆ. ಇದರಿಂದಾಗಿ ಮಿಡತೆಗಳ ಹಿಂಡುಗಳು ಭಾರತದ ಸಸ್ಯಗಳು ಮತ್ತು ಬೆಳೆಗಳ ಮೇಲೆ ದಾಳಿ ಮಾಡುತ್ತವೆ, ಇದು ದೇಶದಲ್ಲಿ ತೀವ್ರ ಆಹಾರದ ಕೊರತೆಗೆ ಕಾರಣವಾಗುತ್ತದೆ ಎಂದು ಬಾಬಾ ವಾಂಗಾ ಹೇಳಿದ್ದಾರೆ. ಈ ಭವಿಷ್ಯವಾಣಿ ಭಾರತೀಯರಲ್ಲಿ ದಿಗಿಲು ಹುಟ್ಟಿಸಿದೆ. 

Baba Vangas 2 out of 6 predictions for 2022 come true skr

ಸಿಂಹ ರಾಶಿಯಲ್ಲಿ ಸೂರ್ಯ ಸಂಕ್ರಮಣ; ಈ ರಾಶಿಗೆ ಜೇಬು ತುಂಬ ಹಣ!

ಮುಂದಿನ ವರ್ಷಗಳ ಭವಿಷ್ಯಗಳು(Baba Vanga predictions for future)
2023ರಲ್ಲಿ ಭೂಮಿಯ ಕಕ್ಷೆ ಬದಲಾಗುತ್ತದೆ ಮತ್ತು 2028ರಲ್ಲಿ ಶುಕ್ರಕ್ಕೆ ಗಗನಯಾತ್ರಿಗಳು ಪ್ರಯಾಣಿಸುತ್ತಾರೆ.
2046ರಲ್ಲಿ ಅಂಗಾಂಗ ಕಸಿ ತಂತ್ರಜ್ಞಾನದಿಂದಾಗಿ ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ.
2100 ರಿಂದ, ರಾತ್ರಿಯು ಕಣ್ಮರೆಯಾಗುತ್ತದೆ ಮತ್ತು ಕೃತಕ ಸೂರ್ಯನ ಬೆಳಕು ಭೂಮಿಯ ಇನ್ನೊಂದು ಭಾಗವನ್ನು ಬೆಳಗಿಸುತ್ತದೆ.
5079ರಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಬಾಬಾ ವಾಂಗಾ ನುಡಿದಿದ್ದಾರೆ. 

Latest Videos
Follow Us:
Download App:
  • android
  • ios