Wind Chimeನಿಂದ ದಾಂಪತ್ಯ ಸುಖ ಹೆಚ್ಚಿಸುವುದು ಹೇಗೆ?
ಮನೆ ಅಲಂಕರಿಸಲು ಹೆಂಗಳೆಯರು ಮುಂದಿರ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಅಲಂಕಾರಿಕ ವಸ್ತುಗಳು ಮನೆ ಸೇರುತ್ವೆ. ಅದ್ರಲ್ಲಿ ವಿಂಡ್ ಚೈಮ್ ಕೂಡ ಒಂದು. ಅನೇಕ ಬಾರಿ ಚೆನ್ನಾಗಿದೆ ಅಂತ ತಂದ ಈ ವಸ್ತುಗಳು ಗೊತ್ತಿಲ್ಲದೆ ಅನಾಹುತ ಸೃಷ್ಟಿಸುತ್ತವೆ. ಸರಿಯಾದ ಜಾಗದಲ್ಲಿ ಅವುಗಳನ್ನು ಹಾಕಿದಾಗ ಮಾತ್ರ ಮನೆ ಸುಂದರವಾಗಿ ಕಾಣುವ ಜೊತೆಗೆ ಸದಾ ಸಂತೋಷವಿರುತ್ತದೆ.
ಮನೆ (Home)ಯಲ್ಲಿ ಸದಾ ಸುಖ (Happy )-ಶಾಂತಿ ನೆಲೆಸಿರಬೇಕೆಂದು ಎಲ್ಲರೂ ಬಯಸ್ತಾರೆ. ಮನೆ,ಕುಟುಂಬ (Family )ದ ಸದಸ್ಯರು ಖುಷಿಯಾಗಿದ್ದರೆ, ಆರೋಗ್ಯವಾಗಿದ್ದರೆ ಮನಸ್ಸು ರಿಲ್ಯಾಕ್ಸ್ ಆಗಿರುತ್ತದೆ. ಕೆಲಸ ಮಾಡುವ ಹುಮ್ಮಸ್ಸು ಸದಾ ಇರುತ್ತದೆ. ಕುಟುಂಬಸ್ಥರ ಜೊತೆ ಮುನಿಸು ಅಥವಾ ಆರ್ಥಿಕ ಸಮಸ್ಯೆ, ಅನಾರೋಗ್ಯ (Illness)ದ ಸಮಸ್ಯೆ ಎಲ್ಲವೂ ನಮ್ಮ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಜೀವನದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಕೆಲಸ ಮಾಡುವ ಉತ್ಸಾಹ ಇರುವುದಿಲ್ಲ.
ಮನೆ, ಮನಸ್ಸು ಚೆನ್ನಾಗಿರಬೇಕೆಂದ್ರೆ ವಾಸ್ತುಶಾಸ್ತ್ರ ನಿಮಗೆ ನೆರವಾಗುತ್ತದೆ. ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ ವಾಸ್ತುಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಚೈನೀಸ್ ವಾಸ್ತು ಶಾಸ್ತ್ರ ಫೆಂಗ್ ಶೂಯಿಯಲ್ಲಿ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಓಡಿಸುವ ಮೂಲಕ ಧನಾತ್ಮಕ ಶಕ್ತಿಯ ಹರಿವನ್ನು ಕಾಪಾಡಿಕೊಳ್ಳಲು ಹಲವು ಮಾರ್ಗ ಹೇಳಲಾಗಿದೆ.
ಫೆಂಗ್ ಶೂಯಿ(Feng shui) ಪ್ರಕಾರ, ಮನೆಯಲ್ಲಿರುವ ವಿವಿಧ ವಸ್ತುಗಳು ಧನಾತ್ಮಕ ಶಕ್ತಿ(positive energy)ಯನ್ನು ಆಕರ್ಷಿಸುತ್ತವೆ. ಅವುಗಳಲ್ಲಿ ವಿಂಡ್ ಚೈಮ್ (Wind chime) ಕೂಡ ಒಂದು. ಫೆಂಗ್ ಶೂಯಿಯಲ್ಲಿ ಇದು ವಿಶೇಷ ಪ್ರಾಮುಖ್ಯತೆ ಪಡೆದಿದೆ.
ಮನೆಯ ಪ್ರವೇಶದ್ವಾರ ಮತ್ತು ಬಾಲ್ಕನಿಯಲ್ಲಿ ವಿಂಡ್ ಚೈಮ್ ಹಾಕುವುದರಿಂದ ನಕಾರಾತ್ಮಕ ಶಕ್ತಿಯ ನಾಶವಾಗುತ್ತದೆ. ಫೆಂಗ್ ಶೂಯಿಯಲ್ಲಿ ವಿಂಡ್ ಚೈಮ್ ಮಂಗಳಕರ ಮತ್ತು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಫೆಂಗ್ ಶೂಯಿಯಲ್ಲಿ, ವಿಂಡ್ ಚೈಮ್ ಹಾಕಲು ಕೆಲವು ನಿಯಮಗಳಿವೆ. ಈ ನಿಯಮಗಳಂತೆ ವಿಂಡ್ ಚೈಮ್ ಹಾಕಿದ್ರೆ ಮನೆಯಲ್ಲಿ ನೀವು ಬಯಸಿದಂತೆ ಶಾಂತಿ, ಸಮೃದ್ಧಿ,ಸಂಪತ್ತು ಸದಾ ನೆಲೆಸುತ್ತದೆ.
ಮನೆಗೆ ವಿಂಡ್ ಚೈಮ್ ಹಾಕುವ ಮೊದಲು :
- ಚೀನೀ ವಾಸ್ತು ಶಾಸ್ತ್ರದ ಪ್ರಕಾರ, ವಿಂಡ್ ಚೈಮ್ ನಲ್ಲಿ ಸಾಕಷ್ಟು ವಿಧವಿದೆ. ಮರ, ಲೋಹ, ಜೇಡಿಮಣ್ಣು ಮುಂತಾದವುಗಳಿಂದ ಇದನ್ನು ತಯಾರಿಸಲಾಗುತ್ತದೆ. ಈ ವಿಂಡ್ ಚೈಮ್ ಗಳನ್ನು ದಿಕ್ಕಿನ ಪ್ರಕಾರ ಮನೆಯಲ್ಲಿ ಹಾಕಬೇಕಾಗುತ್ತದೆ.
- ಪೂರ್ವ, ಆಗ್ನೇಯ ಮತ್ತು ದಕ್ಷಿಣ ದಿಕ್ಕು ಮರದ ಗುಣವನ್ನು ಹೊಂದಿದೆ. ಆದ್ದರಿಂದ ಈ ದಿಕ್ಕುಗಳಲ್ಲಿ ಸಕಾರಾತ್ಮಕ ಶಕ್ತಿಯನ್ನು ಸಕ್ರಿಯಗೊಳಿಸಲು ಮರದ ವಿಂಡ್ ಚೈಮ್ ಹಾಕಬೇಕಾಗುತ್ತದೆ. ಇದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
- ಮನೆಯ ಪಶ್ಚಿಮ, ವಾಯುವ್ಯ ಮತ್ತು ಉತ್ತರ ದಿಕ್ಕಿನಲ್ಲಿ ಲೋಹದ ವಿಂಡ್ ಚೈಮ್ ಹಾಕುವುದು ಅತ್ಯುತ್ತಮ. ಮನೆಯಲ್ಲಿನ ಎಲ್ಲ ಬಿರುಕು ಕಡಿಮೆಯಾಗಿದೆ,ಶಾಂತಿ ನೆಲೆಸುತ್ತದೆ. ಮನೆಯವರ ಮಧ್ಯೆ ಸಾಮರಸ್ಯ ಕಾಣಿಸಿಕೊಳ್ಳುತ್ತದೆ.
- ಈಶಾನ್ಯ ಹಾಗೂ ಮನೆಯ ಮಧ್ಯ ಭಾಗಕ್ಕೆ ಜೇಡಿಮಣ್ಣು, ಸ್ಫಟಿಕ ಅಥವಾ ಪಿಂಗಾಣಿಯಿಂದ ಮಾಡಿದ ವಿಂಡ್ ಚೈಮ್ ಹಾಕುವುದು ಒಳ್ಳೆಯದು. ಕುಟುಂಬದ ಸದಸ್ಯರು ಯಶಸ್ಸು ಸಾಧಿಸಲು ಇದು ಸಹಾಯ ಮಾಡುತ್ತದೆ.
- ಮನೆಯ ನೈಋತ್ಯ ಪ್ರದೇಶದಲ್ಲಿ ಅವುಗಳನ್ನು ತೂಗಿಹಾಕಿದರೆ ಸಂಬಂಧ ಗಟ್ಟಿಯಾಗುತ್ತದೆ. ನೈಋತ್ಯ ದಿಕ್ಕಿನಲ್ಲಿ, ನೀವು ಮರ, ಜೇಡಿಮಣ್ಣು ಅಥವಾ ಲೋಹದಿಂದ ಮಾಡಿದ ಗಾಳಿ ಗಂಟೆಯನ್ನು ಹಾಕಬಹುದು.
- ಮನೆಯ ದ್ವಾರದ ಬಳಿ ವಾಸ್ತು ದೋಷವಿದ್ದರೆ, ಮುಖ್ಯ ದ್ವಾರಕ್ಕೆ ನಾಲ್ಕು ಕಡ್ಡಿಯ ವಿಂಡ್ ಚೈಮ್ ಹಾಕಬೇಕು.
Vaastu Tips: ಮನೆಯಲ್ಲಿ ನವಿಲುಗರಿ ಇಟ್ಟರೆ ಧನಲಾಭ ಗ್ಯಾರಂಟಿ
- ಮನೆಯ ಅಧ್ಯಯನ ಕೊಠಡಿಯ ವಾಸ್ತು ದೋಷವಿದ್ದರೆ,ಅದನ್ನು ಹೋಗಲಾಡಿಸಲು ಐದು ರಾಡ್ ವಿಂಡ್‌ಚೈಮ್ ಅಳವಡಿಸಬೇಕು. ಅದು ಯಶಸ್ವಿಗೆ ಕಾರಣವಾಗುತ್ತದೆ.
- ಅತಿಥಿಗಳು ಪ್ರವೇಶಿಸುವ ಸ್ಥಳದಲ್ಲಿ ಆರು ರಾಡ್ ವಿಂಡ್ ಚೈಮ್ ಅನ್ನು ಅಳವಡಿಸಬೇಕು. ಇದರಿಂದ ಮನೆಗೆ ಬರುವ ಅತಿಥಿಗಳೊಂದಿಗೆ ಸೌಹಾರ್ದ ಸಂಬಂಧ ಉಳಿಯುತ್ತದೆ.
aastu Tips: ನಿದ್ದೆನೇ ಬರ್ತಿಲ್ಲ ಅಂದ್ರೆ ಹೀಗ್ ಮಾಡಿ ನೋಡಿ..
- ಪತಿ-ಪತ್ನಿ ಮತ್ತು ಇತರ ಕುಟುಂಬದ ಸದಸ್ಯರ ನಡುವೆ ಪ್ರೀತಿ ಮತ್ತು ವಾತ್ಸಲ್ಯವನ್ನು ಹೆಚ್ಚಿಸಲು, ಒಂಬತ್ತು ರಾಡ್ ಗಳಿರುವ ವಿಂಡ್ ಚೈಮ್ ಬಳಸಬೇಕು. ಇದು ಮನೆಯ ಸದಸ್ಯರ ಮಧ್ಯೆ ಪ್ರೀತಿ ಹೆಚ್ಚಿಸುತ್ತದೆ. ದಂಪತಿ ಮಧ್ಯೆ ವಿರಸ ಕಡಿಮೆಯಾಗಿ ಸರಸ ಹೆಚ್ಚಾಗುತ್ತದೆ.
ಮನೆಯ ಸೌಂದರ್ಯವನ್ನು ವಿಂಡ್ ಚೈಮ್ ಹೆಚ್ಚಿಸುತ್ತದೆ. ಆದ್ರೆ ಮನಸ್ಸಿಗೆ ಬಂದ ಜಾಗದಲ್ಲಿ ಅದನ್ನು ಹಾಕಿದರೆ ವಾಸ್ತುದೋಷ ಕಾಣಿಸಿಕೊಳ್ಳುತ್ತದೆ.