Predictions 2023: ಈ ವರ್ಷ ಆಗುತ್ತಾ ಪ್ರಳಯ? ಭಯ ಹುಟ್ಟಿಸುವ ಭವಿಷ್ಯವಾಣಿಗಳು!
2023ರ ಎರಡು ತಿಂಗಳು ಕಳೆದಿವೆ. ಈ ವರ್ಷಕ್ಕೆ ಸಂಬಂಧಿಸಿದಂತೆ ಹೆಸರಾಂತ ಭವಿಷ್ಯಕಾರರು ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಇವುಗಳಲ್ಲಿ ಕೆಲವು ಭವಿಷ್ಯವಾಣಿಗಳು ಭರವಸೆ ನೀಡಿದರೆ ಮತ್ತು ಕೆಲವು ತುಂಬಾ ಭಯಾನಕವಾಗಿವೆ.
ಪ್ರತಿ ವರ್ಷದ ಭವಿಷ್ಯವಾಣಿಗಳನ್ನು ನೋಡುವಾಗ ಬಾಬಾ ವಾಂಗಾ, ನಾಸ್ಟ್ರಡಾಮಸ್, ಸಂತ ಅಚ್ಯುತಾನಂದ, ಮಹಂತ್ ಕರ್ಸಂದಾಸ್ ಅವರ ಭವಿಷ್ಯವಾಣಿಗಳು ಹೆಚ್ಚು ಚರ್ಚಿಸಲ್ಪಡುತ್ತವೆ. ಈ ಪ್ರಸಿದ್ಧ ಭವಿಷ್ಯಕಾರರು 2023ರ ವರ್ಷಕ್ಕಾಗಿ ಏನೆಲ್ಲ ಭವಿಷ್ಯ ನುಡಿದಿದ್ದಾರೆ? ಈ ವರ್ಷದ ಬಗ್ಗೆ ಈ ಅತೀಂದ್ರಿಯ ಶಕ್ತಿ ಹೊಂದಿದ ಮಹನೀಯರು ಹೇಳಿದ್ದೇನು ಎಂದು ನೋಡಿದರೆ ಕೆಲವು ಭವಿಷ್ಯವಾಣಿಗಳು ಭರವಸೆ ನೀಡುತ್ತವೆ ಮತ್ತು ಕೆಲವು ತುಂಬಾ ಭಯಾನಕವಾಗಿವೆ.
ಯಾವ ಜ್ಯೋತಿಷಿ 2023ರ ಬಗ್ಗೆ ಏನು ಹೇಳಿದ್ದಾರೆ?
ಮೊದಲನೆಯದಾಗಿ, ಬಾಬಾ ವಾಂಗಾ ಅವರ ಭವಿಷ್ಯವಾಣಿಯನ್ನು ನೋಡಿದರೆ, ಮುಂಬರುವ ಸಮಯ ಅಪಾಯಕಾರಿ ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. ಅವರು ಈ ಹಿಂದೆ ಪ್ರಪಂಚದ ಬಗ್ಗೆ ಅನೇಕ ಭವಿಷ್ಯವಾಣಿಗಳನ್ನು ಮಾಡಿದ್ದರು, ಅವುಗಳಲ್ಲಿ ಅನೇಕವು ನಿಜವಾಗಿವೆ. 2023ಕ್ಕೆ ಭೂಮಿಯ ಕಕ್ಷೆಯಲ್ಲಿ ಬದಲಾವಣೆಯಾಗಲಿದ್ದು, ಇದು ಭೂಮಿಯ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಬಾಬಾ ವಾಂಗಾ ಹೇಳಿದ್ದಾರೆ.
ಅವರ ಪ್ರಕಾರ, ದೇಶಗಳ ನಡುವೆ ಯುದ್ಧಗಳು ಪ್ರಾರಂಭವಾಗುತ್ತವೆ ಮತ್ತು ಅನೇಕ ಸ್ಥಳಗಳಲ್ಲಿ ಪ್ರವಾಹಗಳು ಉಂಟಾಗುತ್ತವೆ. ಇಂದಿನ ಪರಿಸ್ಥಿತಿಯಲ್ಲಿ ನಾವು ಈ ಭವಿಷ್ಯವಾಣಿಗಳನ್ನು ನೋಡಿದರೆ, ಇಂದಿಗೂ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಒಂದು ವರ್ಷ ಪೂರ್ಣಗೊಂಡರೂ ಅದು ಮುಗಿಯುವ ನಿರೀಕ್ಷೆಯಿಲ್ಲ. ಅಲ್ಲದೆ, ಜಗತ್ತು ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆ. ಟರ್ಕಿಯಲ್ಲೂ ಭೀಕರ ಭೂಕಂಪ ಸಂಭವಿಸಿದೆ.
Unusual Temples: ವೀಸಾ ಸಿಗ್ತಿಲ್ವಾ? ದೇವ್ರಿದ್ದಾನೆ, ಹೆದರ್ಬೇಡಿ; ಇಲ್ಲಿಗೊಮ್ಮೆ ಭೇಟಿ ಕೊಡಿ!
ಸಂತ ಅಚ್ಯುತಾನಂದರ ಭವಿಷ್ಯ
ಒರಿಯಾ ಸಂತ ಅಚ್ಯುತಾನಂದರು 2023ರ ವರ್ಷವು ಪ್ರಳಯದ ವರ್ಷವಾಗಲಿದೆ ಎಂದು ಹೇಳಿದ್ದಾರೆ. ಈ ವರ್ಷ ಭೂಮಿಯ ಅಕ್ಷವು ಬದಲಾಗುತ್ತದೆ. ಜನವರಿ 17ರಂದು ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದಾಗಿನಿಂದ, ಪ್ರಪಂಚದಾದ್ಯಂತ ಮಹಾಯುದ್ಧದ ಪರಿಸ್ಥಿತಿಗಳು ರೂಪುಗೊಳ್ಳಲು ಪ್ರಾರಂಭಿಸಿವೆ. ಆದಾಗ್ಯೂ, ಯುದ್ಧವು ಸಂಪೂರ್ಣವಾಗಿ ಪ್ರಾರಂಭವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಜಗತ್ತಿನಲ್ಲಿ ಹಸಿವಿನ ಪರಿಸ್ಥಿತಿ ಇರುತ್ತದೆ, ಹೆಚ್ಚಿನ ಸಾಮರ್ಥ್ಯದ ಭೂಕಂಪವು ಅನೇಕ ದೇಶಗಳಲ್ಲಿ ಸಂಭವಿಸಬಹುದು ಎಂದವರು ಹೇಳಿದ್ದಾರೆ.
ಮಹಂತ್ ಕರ್ಸಂದಾಸ್ ಭವಿಷ್ಯ
ಗುಜರಾತಿನ ಪ್ರಸಿದ್ಧ ಸಂತ ಮತ್ತು ಕರೋನದ ಮುಂಚಿನ ಮುನ್ಸೂಚಕ ಸಂತ ಕರ್ಸಂದಾಸ್ ಕೂಡ ಈ ವರ್ಷ 2023ರ ಬಗ್ಗೆ ಭಯಾನಕ ವಿಷಯವನ್ನು ಹೇಳಿದ್ದಾರೆ. 2023ರಲ್ಲಿ ಪ್ರಪಂಚದ ಜನರು ಕ್ಷಾಮ ಮತ್ತು ಹಸಿವಿನಿಂದ ಬಹಳವಾಗಿ ನರಳುತ್ತಾರೆ ಎಂದು ಅವರು ಹೇಳಿದ್ದಾರೆ. ಜನರು ಹಸಿವಿನಿಂದ ಸಾಯುತ್ತಾರೆ. ಇದನ್ನು ತಪ್ಪಿಸಲು ಹೆಚ್ಚು ಹೆಚ್ಚು ರಾಗಿ, ಜೋಳ ಬಿತ್ತನೆ ಮಾಡುವಂತೆ ಸಲಹೆ ನೀಡಿದ್ದಾರೆ.
ನಾಸ್ಟ್ರಾಡಾಮಸ್ ಕೂಡ ಎಚ್ಚರಿಕೆ ನೀಡಿದ್ದಾರೆ..
ಪ್ರಸಿದ್ಧ ಪ್ರವಾದಿ ನಾಸ್ಟ್ರಾಡಾಮಸ್ ಕೂಡ ಪ್ರಪಂಚದ ಭವಿಷ್ಯದ ಬಗ್ಗೆ ಭಯಾನಕವಾದದ್ದನ್ನು ಹೇಳಿದ್ದಾರೆ. ಅವರು ತಮ್ಮ 2023 ರ ಭವಿಷ್ಯವಾಣಿಗಳಲ್ಲಿ ಮಾನವರು ಮಂಗಳವನ್ನು ತಲುಪುತ್ತಾರೆ, ಆದರೆ ಭೂಮಿಯು ವಾಸಯೋಗ್ಯವಾಗಿರುವುದಿಲ್ಲ ಎಂದು ಹೇಳಿದ್ದಾರೆ. ದೇಶಗಳ ನಡುವೆ ಯುದ್ಧಗಳು ನಡೆಯುತ್ತವೆ ಮತ್ತು ಎಲ್ಲವೂ ನಾಶವಾಗುವುದು ಖಚಿತ. ಆಕಾಶದಿಂದ ಯಾವುದೇ ದೊಡ್ಡ ಉಲ್ಕಾಶಿಲೆ ಭೂಮಿಯ ಮೇಲೆ ಬಂದು ವಿನಾಶವನ್ನು ಉಂಟು ಮಾಡಬಹುದು ಎಂದಿದ್ದಾರೆ.
Venus Transit: 3 ದಿನದಲ್ಲಿ ಶುಕ್ರನಿಂದ ಈ ಮೂರು ರಾಶಿಗಳ ಲಕ್ ತಿರುಗಲಿದೆ..
ಇಲ್ಲಿ ಯಾವೊಂದು ಭವಿಷ್ಯವೂ ಭರವಸೆಯನ್ನು ನೀಡುವಂತೆ ಕಾಣುವುದಿಲ್ಲ. ಎಲ್ಲರ ಭವಿಷ್ಯವಾಣಿಗಳೂ ಭಯ ಹುಟ್ಟಿಸುತ್ತವೆ. ವರ್ಷದಿಂದ ವರ್ಷಕ್ಕೆ ಭೂಮಿ ವಿನಾಶದಂಚಿಗೆ ತಲುಪುತ್ತಿರುವುದನ್ನು ಸೂಚಿಸುತ್ತವೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.