Asianet Suvarna News Asianet Suvarna News

Astrology Tips: ಗಳಿಸಿದ್ದನ್ನು ಉಳಿಸಿಕೊಳ್ಳಲು ಬೆತ್ತಲೆಯಾಗಿ ಸ್ನಾನ ಮಾಡ್ಬೇಡಿ!

ಸ್ನಾನ ಮಾಡುವಾಗ್ಲೂ ನಿಯಮಗಳನ್ನು ಪಾಲಿಸಬೇಕು. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡೋದು ಎಷ್ಟು ಒಳ್ಳೆಯದೋ ಹಾಗೆಯೇ ಬಟ್ಟೆ ಧರಿಸಿ ಸ್ನಾನ ಮಾಡೋದು ಲಾಭಕರ. ಬಟ್ಟೆಯಿಲ್ಲದೆ ಸ್ನಾನ ಮಾಡೋರು ನೀವಾಗಿದ್ರೆ ಅದ್ರಿಂದಾಗುವ ನಷ್ಟದ ಬಗ್ಗೆ ತಿಳಿದ್ಕೊಳ್ಳಿ.
 

Why We Should Never Bath Naked According To Shastra
Author
First Published May 18, 2023, 1:09 PM IST

ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಅನೇಕಾನೇಕ ಸಂಗತಿಯನ್ನು ಹೇಳಲಾಗಿದೆ. ಸ್ನಾನದ ಬಗ್ಗೆಯೂ ಗ್ರಂಥದಲ್ಲಿ ವಿವರಿಸಲಾಗಿದೆ. ಮನುಷ್ಯ ಯಾವ ಸಮಯದಲ್ಲಿ ಸ್ನಾನ ಮಾಡಬೇಕು, ದಿನಕ್ಕೆ ಎಷ್ಟು ಬಾರಿ ಸ್ನಾನ ಮಾಡಬೇಕು ಎಂಬುದು ಸೇರಿದಂತೆ ಹೇಗೆ ಸ್ನಾನ ಮಾಡಬೇಕು ಎನ್ನುವುದನ್ನು ಕೂಡ ಹೇಳಲಾಗಿದೆ.

ಶಾಸ್ತ್ರದ ಪ್ರಕಾರ, ಬೆತ್ತಲೆ (Naked) ಯಾಗಿ ಸ್ನಾನ ಮಾಡೋದನ್ನು ನಿಷೇಧಿಸಲಾಗಿದೆ. ಬಟ್ಟೆ ಇಲ್ಲದೆ, ಬೆತ್ತಲೆಯಾಗಿ ಸ್ನಾನ (Bath) ಮಾಡಬಾರದು ಎಂದು ಹಿರಿಯರು ಹೇಳೋದನ್ನು ನಾವು ಕೇಳಿರ್ತೇವೆ. ಬಟ್ಟೆ (Clothes) ಹಾಕಿ ಸ್ನಾನ ಮಾಡಿದ್ರೆ ಮೈ ಸ್ವಚ್ಛವಾಗೋದಿಲ್ಲ ಎನ್ನುವವರಿದ್ದಾರೆ. ಆದ್ರೆ ಬಟ್ಟೆ ಹಾಕಿ ಸ್ನಾನ ಮಾಡಿದ್ರೆ ಅನೇಕ ಸಮಸ್ಯೆ ಎದುರಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಬಟ್ಟೆ ಇಲ್ಲದೆ ಯಾಕೆ ಸ್ನಾನ ಮಾಡಬಾರದು ಎಂಬುದಕ್ಕೆ ಅನೇಕ ಕಾರಣಗಳನ್ನು ಗ್ರಂಥದಲ್ಲಿ ಹೇಳಲಾಗಿದೆ. ನಾವಿಂದು ಪುರಾಣದಲ್ಲಿ ಇದ್ರ ಬಗ್ಗೆ ಇರುವ ಉಲ್ಲೇಖವನ್ನು ನಿಮಗೆ ಹೇಳ್ತೇವೆ.

Vastu Tips: ರಾಶಿ ಪ್ರಕಾರ ಮನೆಯಲ್ಲಿ ಈ ವಸ್ತು ಇರಿಸಿ, ಹಣದ ಕೊರತೆ ಎಂದಿಗೂ ಇರೋಲ್ಲ!

ಬೆತ್ತಲೆಯಾಗಿ ಯಾಕೆ ಸ್ನಾನ ಮಾಡಬಾರದು ಗೊತ್ತಾ? : 

ಶ್ರೀಕೃಷ್ಣ ಹೇಳಿದ್ದೇನು?  : ಬೆತ್ತಲೆ ಸ್ನಾನದ ನಿಷೇಧಕ್ಕೆ ಒಂದು ದೊಡ್ಡ ಕಾರಣ  ಶ್ರೀಕೃಷ್ಣನ ಕಾಲಕ್ಕೆ ಸಂಬಂಧಿಸಿದೆ. ಪುರಾಣಗಳ ಪ್ರಕಾರ, ಒಮ್ಮೆ ಗೋಪಿಕೆಯರು ಸರೋವರದಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಅವರು ಬಟ್ಟೆ ಧರಿಸಿರಲಿಲ್ಲ. ಬಾಲ ಕೃಷ್ಣನು ಗೋಪಿಯರ ಎಲ್ಲಾ ಬಟ್ಟೆಗಳನ್ನು ಮರೆಮಾಚಿದ್ದನು. ಕೃಷ್ಣನ ಬಳಿ ಬಟ್ಟೆಯನ್ನು ವಾಪಸ್ ನೀಡುವಂತೆ ಗೋಪಿಯರು ಪ್ರಾರ್ಥಿಸಿದರು. ಆಗ ಕೃಷ್ಣನು ಬಟ್ಟೆ ಧರಿಸದೆ ಎಲ್ಲಿಯೂ ಸ್ನಾನ ಮಾಡಬಾರದು ಎಂದು ವಿವರಿಸಿದರು. 

ಕೋಣೆಯಲ್ಲಿ ಸ್ನಾನ ಮಾಡಿದ್ರೂ ನಿಮ್ಮನ್ನು ನೋಡೋರಿರ್ತಾರೆ : ನೀವು ಕೋಣೆಯಲ್ಲಿ ಸ್ನಾನ ಮಾಡ್ತೀರಿ. ಯಾರೂ ನಿಮ್ಮನ್ನು ನೋಡೋದಿಲ್ಲ ಎಂದು ನೀವು ಭಾವಿಸ್ತೀರಿ. ಆದ್ರೆ ದೇವರು ಎಲ್ಲ ಕಡೆ ಇರುತ್ತಾನೆ. ಆತ ನಿಮ್ಮನ್ನು ನೋಡ್ತಿರುತ್ತಾನೆ. ಇದು ಜಲದೇವನಾದ ವರುಣನನ್ನು ಅವಮಾನಿಸಿದಂತೆ. ಅದಕ್ಕಾಗಿಯೇ ನೀವು ಬೆತ್ತಲೆಯಾಗಿ ಸ್ನಾನ ಮಾಡಬಾರದು. ಬೆತ್ತಲೆಯಾಗಿ ಸ್ನಾನ ಮಾಡುವುದು  ಪಾಪವನ್ನು ಉಂಟುಮಾಡುತ್ತದೆ. ಆರ್ಥಿಕ ಮತ್ತು ದೈಹಿಕ ಹಾನಿಯನ್ನು ಉಂಟು ಮಾಡುತ್ತದೆ. 

ಶುಕ್ರ-ಮಂಗಳ ಯುತಿಯಿಂದ ಈ ರಾಶಿಗಳಿಗೆ ಸಿಗಲಿದೆ ಸರ್ಕಾರಿ ನೌಕರಿ ಭಾಗ್ಯ!

ನಕಾರಾತ್ಮಕ ಶಕ್ತಿ ಪ್ರವೇಶ : ಬೆತ್ತಲೆಯಾಗಿ ಸ್ನಾನ ಮಾಡಿದರೆ ನಕಾರಾತ್ಮಕ ಶಕ್ತಿ ನಿಮ್ಮ ದೇಹವನ್ನು ಪ್ರವೇಶಿಸುತ್ತದೆ. ಮನಸ್ಥಿತಿ  ನಕಾರಾತ್ಮಕವಾಗಿರುತ್ತದೆ. ಸ್ನಾನ ಮಾಡುವಾಗ ನೀವು ಸಣ್ಣ ಬಟ್ಟೆಯನ್ನು ಮೈಮೇಲೆ ಹಾಕಿಕೊಂಡ್ರೂ ಸಾಕು, ಬಟ್ಟೆ ಇಲ್ಲದೆ ಸ್ನಾನ ಮಾಡಲು ಹೋಗಬೇಡಿ. ಬೆತ್ತಲೆ ಸ್ನಾನ ಮಾಡಿದ್ರೆ ದೇಹದಲ್ಲಿರುವ ಸಕಾರಾತ್ಮಕ ಶಕ್ತಿ ದೇಹದಿಂದ ಹೊರಬರುತ್ತದೆ. ಅದು ನಿಮ್ಮ ದೇಹದ ಮೇಲೆ ಮತ್ತು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ತಾಯಿ ಲಕ್ಷ್ಮಿಯ ಕೋಪಕ್ಕೆ ಗುರಿಯಾಗ್ತೀರಿ : ಬೆತ್ತಲೆಯಾಗಿ ಸ್ನಾನ ಮಾಡೋದ್ರಿಂದ ಲಕ್ಷ್ಮಿಯ ಮುನಿಸು ಹೆಚ್ಚಾಗುತ್ತದೆ. ಆಕೆಯ ಕೋಪದಿಂದ ಹಣದ ನಷ್ಟದ ಸಾಧ್ಯತೆ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಹದಗೆಡಲು ಇದು ಕಾರಣವಾಗುತ್ತದೆ.

ಪಿತೃ ದೋಷ : ಗರುಡ ಪುರಾಣದ ಪ್ರಕಾರ, ಸ್ನಾನ ಮಾಡುವಾಗ ಪಿತೃಗಳು ನಿಮ್ಮ ಸುತ್ತಲೂ ಇರುತ್ತಾರೆ. ನೀವು ಬೆತ್ತಲೆ ಸ್ನಾನವನ್ನು ಮಾಡಿದರೆ ಪಿತೃ ದೋಷವನ್ನು ಎದುರಿಸಬೇಕಾಗುತ್ತದೆ. ಇಂತಹ ಸ್ನಾನ ಮಾಡುವುದರಿಂದ ನಿಮ್ಮ ಪೂರ್ವಜರಿಗೆ ಸಂತೃಪ್ತಿ ಸಿಗುವುದಿಲ್ಲ. ಮನೆಯಲ್ಲಿ ಪಿತೃ ದೋಷ ಉಂಟಾಗುತ್ತದೆ. ಬಟ್ಟೆಯಿಂದ ಬೀಳುವ ನೀರನ್ನು ಅವರು ಸ್ವೀಕರಿಸುತ್ತಾರೆ. ಅದು ಅವರಿಗೆ ತೃಪ್ತಿ ನೀಡುತ್ತದೆ.  ನೀವು ಬೆತ್ತಲೆ ಸ್ನಾನ ಮಾಡಿದಾಗ ಅವರಿಗೆ ಬಟ್ಟೆಯಿಂದ ಸಿಗುವ ನೀರು ಸಿಗುವುದಿಲ್ಲ. ಇದ್ರಿಂದ ಅವರು ಕೋಪಗೊಳ್ತಾರೆ. ಪಿತೃದೋಷದಿಂದ ಅನೇಕ ಸಮಸ್ಯೆ ಎದುರಾಗುತ್ತದೆ. ವ್ಯಕ್ತಿಯ ತೇಜಸ್ಸು, ಶಕ್ತಿ, ಸಂಪತ್ತು ಮತ್ತು ಸಂತೋಷ ನಾಶವಾಗುತ್ತದೆ.
 

Follow Us:
Download App:
  • android
  • ios