Asianet Suvarna News Asianet Suvarna News

Hindu Religion : ಪತಿಯ ಯಾವ ಭಾಗದಲ್ಲಿ ಪತ್ನಿ ಮಲಗ್ಬೇಕು ಗೊತ್ತಾ?

ಬೆಡ್, ಬೆಡ್ ರೂಮಿಗೆ ಮಾತ್ರ ನಾವು ಮಹತ್ವ ನೀಡ್ತೇವೆ. ಎಲ್ಲಿ ಮಲಗಬೇಕು, ಹೇಗೆ ಮಲಗಬೇಕು ಎಂಬುದಕ್ಕೆ ಆದ್ಯತೆ ನೀಡೋದಿಲ್ಲ. ಆದ್ರೆ ಸಂಸಾರ ಚೆನ್ನಾಗಿರಬೇಕೆಂದ್ರೆ ಇದ್ರ ಬಗ್ಗೆಯೂ ಜ್ಞಾನ ಇರಬೇಕು. 
 

Why Should Wife Sleep On The Left Side Of The Husband
Author
First Published Apr 27, 2023, 2:39 PM IST | Last Updated Apr 27, 2023, 2:39 PM IST

ಪತಿ – ಪತ್ನಿ ಸಂಬಂಧದಲ್ಲಿ ಯಾವುದೇ ಸಮಸ್ಯೆಯಾಗ್ಬಾರದು ಎಂದು ಎಲ್ಲ ದಂಪತಿ ಬಯಸ್ತಾರೆ. ಸಂಬಂಧವನ್ನು ಗಟ್ಟಿಗೊಳಿಸಲು ಕೈಲಾದಷ್ಟು ಪ್ರಯತ್ನವನ್ನು ನಡೆಸುತ್ತಾರೆ. ಕೆಲ ಬಾರಿ ಎಷ್ಟೇ ಪ್ರಯತ್ನಿಸಿದ್ರೂ, ಹೊಂದಿಕೊಂಡು ಹೋಗುವ ನಿರ್ಧಾರ ಕೈಗೊಂಡ್ರೂ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗೋದಿಲ್ಲ. ಸಣ್ಣಪುಟ್ಟ ಸಮಸ್ಯೆ, ಗಲಾಟೆ ನಂತ್ರ ದೊಡ್ಡದಾಗಿ ವಿಚ್ಛೇದನಕ್ಕೆ ಬಂದು ನಿಲ್ಲುತ್ತದೆ. ದಾಂಪತ್ಯದಲ್ಲಿ ಸುಖ ಸಿಗಬೇಕೆಂದ್ರೆ ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ತಿಳಿದಿರಬೇಕು. 

ಅನೇಕ ಬಾರಿ ವಾಸ್ತು ದೋಷವಾದ್ರೆ ಅಥವಾ ಧರ್ಮ (Religion) ಗ್ರಂಥಗಳಲ್ಲಿ ಹೇಳಿದ ನಿಯಮದಂತೆ ನಾವು ನಡೆದುಕೊಳ್ಳದೆ ಹೋದ್ರೆ, ಎಷ್ಟೇ ಪ್ರಯತ್ನಿಸಿದ್ರೂ ದಾಂಪತ್ಯ ಉಳಿಸಿಕೊಳ್ಳಲು ಸಾಧ್ಯವಾಗೋದಿಲ್ಲ. ದಾಂಪತ್ಯ ಸುಖ ಮಾತ್ರವಲ್ಲ ಪತಿಯ ಆರೋಗ್ಯ, ಪತಿಯ ಆಯಸ್ಸು ಕೂಡ ಮಹಿಳೆ ಮಾಡುವ ಕೆಲ ಕೆಲಸವನ್ನು ಅವಲಂಭಿಸಿದೆ. ಶಾಸ್ತ್ರದಲ್ಲಿ ಪತಿ – ಪತ್ನಿ ಬೆಡ್ ರೂಮ್ (Bedroom) ಹೇಗಿರಬೇಕು, ಬೆಡ್ ರೂಮಿನಲ್ಲಿ ಯಾವೆಲ್ಲ ವಸ್ತು ಇರಬಾರದು ಎಂಬುದು ಮಾತ್ರವಲ್ಲದೆ ಪತಿ – ಪತ್ನಿ ಹೇಗೆ ಮಲಗಬೇಕು ಎಂಬುದನ್ನು ಕೂಡ ಹೇಳಲಾಗಿದೆ. ಮಲಗುವ ಕೋಣೆಯಲ್ಲಿ ಇಲೆಕ್ಟ್ರಿಕ್ ವಸ್ತು ಇರಬಾರದು, ಎರಡು ಬೆಡ್ ಸೇರಿಸಿ, ಅದರಲ್ಲಿ ದಂಪತಿ ಮಲಗಬಾರದು, ಹರಿದ ಬೆಡ್ ಶೀಟ್ ಬಳಸಬಾರದು ಎಂದೆಲ್ಲ ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೆಯೇ  ಯಾವ ದಿಕ್ಕಿನಲ್ಲಿ ಇಬ್ಬರು ಮಲಗಿದ್ರೆ ಒಳ್ಳೆಯದು ಎಂಬುದನ್ನು ಕೂಡ ಶಾಸ್ತ್ರದಲ್ಲಿ ಹೇಳಲಾಗಿದೆ.

Chanakya Niti : ಜೀವನದ ಅತಿದೊಡ್ಡ ಪಾಠ ತಿಳಿದ್ರೆ, ನೀವು ಸೋಲೋದಿಲ್ಲ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗಂಡನ ಎಡಭಾಗದಲ್ಲಿ ಪತ್ನಿ ಮಲಗಬೇಕು. ಇದಕ್ಕೆ ಶಾಸ್ತ್ರದಲ್ಲಿ ನಾನಾ ಕಾರಣವನ್ನು ಹೇಳಲಾಗಿದೆ. 
• ಶಿವ (Shiva) ನು ಅರ್ಧನಾರೇಶ್ವರನ ರೂಪವನ್ನು ತಾಳಿದಾಗ ಸ್ತ್ರೀ ಅಂಶ ಅಂದರೆ ಮಾತೆ ಪಾರ್ವತಿ ಅವನ ಎಡ ಅಂಗದಿಂದ ಪ್ರಕಟವಾಗಿತ್ತು. ಹಾಗಾಗಿಯೇ ಶಿವನ ಎಡಭಾಗ ಪಾರ್ವತಿ (Parvati) ಗೆ ಮೀಸಲು.
• ಹಿಂದೂ ಧರ್ಮದಲ್ಲಿ ಹೆಂಡತಿಯನ್ನು ವಾಮಾಂಗಿ (Wamangi) ಎಂದು ಕರೆಯಲಾಗುತ್ತದೆ. ವಾಮಾಂಗಿ ಎಂದರೆ ಎಡ ಅಂಗ ಎಂದರ್ಥ. ಪುರುಷನ ಎಡಭಾಗವನ್ನು ಮಹಿಳೆಯ ಭಾಗವೆಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಶುಭ ಕಾರ್ಯದಲ್ಲಿ ಪತ್ನಿ,  ಪತಿಯ ಎಡಭಾಗದಲ್ಲಿ ಕುಳಿತುಕೊಳ್ಳುವಂತೆ ಹೇಳಲಾಗುತ್ತದೆ. ಹಾಗೆಯೇ ಮಲಗುವಾಗ ಕೂಡ ಪತ್ನಿ, ಪತಿಯ ಎಡ ಭಾಗದಲ್ಲಿ ಮಲಗಬೇಕು. 

Astrology Tips : ಸಂಬಳ ಬಂದ ತಕ್ಷಣ ಈ ಕೆಲಸ ಮಾಡಿದ್ರೆ ಯಶಸ್ಸು ಗ್ಯಾರಂಟಿ

ಪತಿಯ ಎಡ ಭಾಗದಲ್ಲಿ ಮಲಗೋದ್ರಿಂದ ಆಗುವ ಲಾಭವೇನು? : 
ಪತ್ನಿಯಾದವಳು, ಪತಿಯ ಎಡ ಭಾಗದಲ್ಲಿ ಮಲಗುವುದ್ರಿಂದ ಶುಭ ಫಲಗಳು ಪ್ರಾಪ್ತಿಯಾಗುತ್ತವೆ.  ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಲಭಿಸುತ್ತದೆ. 
ಪತ್ನಿಯಾದವಳು, ಪತಿಯ ಎಡ ಭಾಗದಲ್ಲಿ ಮಲಗುವುದು ಪತಿಗೂ ಮಂಗಳ. ಪತಿಯ ರಕ್ಷಣೆಯಾಗುತ್ತದೆ. ಯಮರಾಜ ಸತ್ಯವಾನನನ್ನು ಕೊಲ್ಲಲು ಎಡಭಾಗದಿಂದ ಬಂದಿದ್ದನಂತೆ. ಈ ವೇಳೆ ಸಾವಿತ್ರಿ ತನ್ನ ಗಂಡನನ್ನು ರಕ್ಷಿಸಿದ್ದಳು. ಸತ್ಯವಾನನ ಪ್ರಾಣ ಕಾಪಾಡಿದ್ದಳು. ಹಾಗಾಗಿಯೇ ಎಡ ಭಾಗಕ್ಕೆ ಮತ್ತಷ್ಟು ಮಹತ್ವವಿದೆ. ಹೆಂಡತಿ ಎಡಭಾಗದಲ್ಲಿ ಮಲಗುವುದು ಗಂಡನನ್ನು ಯಮರಾಜನಿಂದ ರಕ್ಷಿಸಿದಂತೆ ಎಂದು ನಂಬಲಾಗಿದೆ.
ಇಷ್ಟೇ ಅಲ್ಲದೆ ಕನ್ಯಾದಾನ, ವಿವಾಹ, ಯಜ್ಞಕರ್ಮ, ಜಾತಕರ್ಮ, ನಾಮಕರಣ ಮತ್ತು ಅನ್ನ ಪ್ರಾಶನದ ಸಮಯದಲ್ಲಿ ಹೆಂಡತಿಯು ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಲೌಕಿಕ ಕೆಲಸದಲ್ಲಿ ಪತ್ನಿ, ಪತಿಯ ಎಡಭಾಗದಲ್ಲಿರಬೇಕೆಂದು ಹೇಳಲಾಗಿದೆ. ಏಕೆಂದರೆ ಈ ಲೌಕಿಕ ಕೆಲಸಗಳಲ್ಲಿ ಹೆಣ್ಣನ್ನು ಪ್ರಧಾನವಾಗಿ ಪರಿಗಣಿಸಲಾಗಿದೆ ಮತ್ತು ಸ್ತ್ರೀ ಅಂಶವೇ ಶ್ರೇಷ್ಠವೆಂದು ಹೇಳಲಾಗಿದೆ
ಯಜ್ಞ, ಕನ್ಯಾದಾನ, ಮದುವೆ, ಈ ಎಲ್ಲಾ ಕೆಲಸಗಳನ್ನು ಅತೀಂದ್ರಿಯವೆಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಪುರುಷನಿಗೆ ಪ್ರಧಾನತೆ ನೀಡಲಾಗಿದೆ. ಹಾಗಾಗಿಯೇ ಈ ಸಂದರ್ಭದಲ್ಲಿ ಪತ್ನಿ, ಪತಿಯ ಬಲ ಭಾಗದಲ್ಲಿ ಕುಳಿತುಕೊಳ್ಳಬೇಕು. ಇದು ಮಂಗಳಕರವೆಂದು ಹೇಳಲಾಗುತ್ತದೆ. 
 

Latest Videos
Follow Us:
Download App:
  • android
  • ios