Asianet Suvarna News Asianet Suvarna News

Ashada Masam 2022: ನವ ವಧು ವರರು ಆಷಾಢದಲ್ಲಿ ಒಟ್ಟಿಗಿರುವಂತಿಲ್ಲ ಯಾಕೆ?

ಆಷಾಢ ಮಾಸದಲ್ಲಿ ಹೊಸತಾಗಿ ವಿವಾಹವಾದ ಪತಿ ಪತ್ನಿ ಒಟ್ಟಿಗಿರುವಂತಿಲ್ಲ ಎಂದು ಪತ್ನಿಯನ್ನು ತವರಿಗೆ ಕಳುಹಿಸಲಾಗುತ್ತದೆ. ಇದರ ಹಿಂದಿನ ಕಾರಣವೇನು?

Why Newly Married Couples Are Separated During Ashada skr
Author
Bangalore, First Published Jun 28, 2022, 4:58 PM IST | Last Updated Jun 28, 2022, 4:58 PM IST

ಆಷಾಢ(Ashada)ವು ಹಿಂದೂ ವರ್ಷದಲ್ಲಿ ಮೂರನೇ ತಿಂಗಳು. ಆದರೆ ಸಾಕಷ್ಟು ಅಶುಭ ಮಾಸವೆಂದು ಪರಿಗಣಿಸಲಾಗಿದೆ. ಹಿಂದೂ(Hindu)ಗಳು ಈ ತಿಂಗಳು ಯಾವುದೇ ಶುಭ ಸಮಾರಂಭವನ್ನು ಆಯೋಜಿಸಲು ಅಥವಾ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಸೂಕ್ತವಲ್ಲ ಎಂದು ಪರಿಗಣಿಸುತ್ತಾರೆ. ಆಷಾಢ ಮಾಸವು ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲಿ ಬರುತ್ತದೆ. ಈ ವರ್ಷ ಆಷಾಢ ಮಾಸವು 30 ಜೂನ್ 2022ರಂದು ಪ್ರಾರಂಭವಾಗಿದೆ ಮತ್ತು 28 ಜುಲೈ 2022ರವರೆಗೆ ಇರುತ್ತದೆ. ಈ ಸಂಪೂರ್ಣ ಅವಧಿಯಲ್ಲಿ ಜನರು ಮದುವೆ, ಗೃಹಪ್ರವೇಶ, ಮುಂಡನ ಅಥವಾ ಉಪನಯನ ಸಮಾರಂಭಗಳನ್ನು ಆಯೋಜಿಸುವುದಿಲ್ಲ. ಯಾವುದೇ ಹೊಸ ವಸ್ತುಗಳಾದ ಕಾರು ಮತ್ತಿತರೆ ವಾಹನ, ಮನೆ ಖರೀದಿ ನಡೆಸುವುದಿಲ್ಲ. 

ಆಷಾಢದಲ್ಲಿ ದಂಪತಿ ಏಕೆ ಬೇರೆಯಾಗುತ್ತಾರೆ?
ಇದಲ್ಲದೆ, ಹೊಸದಾಗಿ ಮದುವೆಯಾದ ಹಿಂದೂ ದಂಪತಿ(Husband and wife) ಪರಸ್ಪರ ದೂರ ಉಳಿಯಬೇಕಾಗುತ್ತದೆ! ಹೌದು, ಕೆಲವು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಹೊಸದಾಗಿ ಮದುವೆಯಾದ ದಂಪತಿಗಳು ಈ ತಿಂಗಳಲ್ಲಿ ಒಟ್ಟಿಗೆ ಇರಬಾರದು. ಹಾಗೊಂದು ವೇಳೆ ಒಟ್ಟಿಗಿದ್ದರೆ ಅತ್ತೆ ಸೊಸೆ ಜಗಳವಾಡುತ್ತಾರೆ ಎಂಬ ನಂಬಿಕೆ ಇದೆ. 

ಈ ತಿಂಗಳಲ್ಲಿ ಗಂಡ ಹೆಂಡತಿ ಬೇರೆಯಾಗಿರುತ್ತಾರೆ
ನವವಿವಾಹಿತರು ಈ ತಿಂಗಳಲ್ಲಿ ಹೆಚ್ಚಾಗಿ ಬೇರ್ಪಡುತ್ತಾರೆ ಏಕೆಂದರೆ ಅವರ ಮದುವೆಯ ಆರಂಭಿಕ ವರ್ಷಗಳಲ್ಲಿ, ಆಷಾಢ ಮಾಸದಲ್ಲಿ ದಂಪತಿ ಒಟ್ಟಿಗೆ ಇರಬಾರದು ಎಂದು ನಂಬಲಾಗಿದೆ. ಇದರ ಹಿಂದೆ ಕೆಲವು ಅಸ್ಪಷ್ಟ ಕಾರಣಗಳನ್ನು ನಾವು ಗುರುತಿಸಬಹುದು. ಅದರಲ್ಲೊಂದೆಂದರೆ ಆಷಾಢ ಮಾಸದಲ್ಲಿ ನವವಿವಾಹಿತರು ಒಟ್ಟಿಗೆ ಇದ್ದರೆ ಮತ್ತು ವಧುವು ಗರ್ಭವತಿಯಾದರೆ, ಚೈತ್ರ ಮಾಸದಲ್ಲಿ ಮಗುವಿಗೆ ಜನ್ಮ ನೀಡಬಹುದು. ಚೈತ್ರವು ಹಿಂದೂ ವರ್ಷದ ತಿಂಗಳು ಮತ್ತು ಇದು ಬೇಸಿಗೆಯ ಆಗಮನವನ್ನು ಸೂಚಿಸುತ್ತದೆ. ಬೇಸಿಗೆಯ ಬಿಸಿ ದಿನಗಳಲ್ಲಿ ನವಜಾತ ಶಿಶು ಮತ್ತು ತಾಯಿ ಕೆಲವು ತೊಂದರೆಗಳನ್ನು ಎದುರಿಸಬಹುದು ಎಂಬ ಕಾರಣ ಇದರ ಹಿಂದಿದೆ. ಆಷಾಢ ಮಾಸದಲ್ಲಾಗುವ ವಾತಾವರಣ ಬದಲಾವಣೆಯನ್ನು ಎದುರಿಸಲು ಹಿಂದೆ ಬಹುತೇಕ ಜನರು ಈ ತಿಂಗಳಲ್ಲಿ ಮೆಹಂದಿ ಹಾಕಿಕೊಳ್ಳುವ ಸಂಪ್ರದಾಯವಿತ್ತು. 

Chanakya Niti : ಎಂಥ ಜಾಗದಲ್ಲಿ ವಾಸಿಸಿದರೆ ಒಲಿಯುತ್ತೆ ಅದೃಷ್ಟ?

ಇದಲ್ಲದೆ, ಆಷಾಢ ಎಂದರೆ ರೈತಾಪಿ ವರ್ಗಕ್ಕೆ ಕೆಲಸ ಹೆಚ್ಚು. ಹೊಸತಾಗಿ ಮದುವೆಯಾದ ವರ ಪತ್ನಿಯನ್ನು ಬಿಟ್ಟಿರಲಾದರೆ ಕೆಲಸ ಮರೆಯುತ್ತಾನೆಂಬುದು ಮತ್ತೊಂದು ಕಾರಣ. ಆದ್ದರಿಂದ ನವವಿವಾಹಿತರು ಸಂಪೂರ್ಣ ಆಷಾಢ ಮಾಸದಲ್ಲಿ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ.

ಇನ್ನೂ ಒಂದು ನಂಬಿಕೆಯಂತೆ ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದ ಮಹಿಳೆ ತನ್ನ ಅತ್ತೆ(MIL)ಯೊಂದಿಗೆ ಇರಬಾರದು. ಹಾಗೊಂದು ವೇಳೆ ಇದ್ದರೆ ಅವರಿಬ್ಬರ ನಡುವೆ ಜಗಳ ಉಂಟಾಗುತ್ತದೆ. ಆದ್ದರಿಂದ, ಹೊಸದಾಗಿ ಮದುವೆಯಾದ ಮಹಿಳೆಯನ್ನು ಆಷಾಢದಲ್ಲಿ ಒಂದು ತಿಂಗಳ ಕಾಲ ತಾಯಿಯ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಹೀಗೆ ಒಂದು ತಿಂಗಳು ಬೇರೆ ಇದ್ದಾಗ ಇಬ್ಬರೂ ಮಹಿಳೆಯರು ಪರಸ್ಪರರ ಕಡೆಗೆ ತಮ್ಮ ಮನೋಭಾವವನ್ನು ಮರುಪರಿಶೀಲಿಸಲು ಮತ್ತು ಆರೋಗ್ಯಕರ ತಾಯಿ-ಮಗಳ ಸಂಬಂಧವನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ.

ಅಬ್ಬಬ್ಬಾ! ಜಗನ್ನಾಥನಿಗೆ ಪ್ರತಿದಿನ 56 ಬಗೆಯ ಭೋಗ! ಇಲ್ಲಿನ ಒಲೆಯ ಬೆಂಕಿ ಆರುವುದೇ ಇಲ್ಲ!

ದಕ್ಷಿಣಾಯಣ ಕಾಲ ಆರಂಭ
ಆಷಾಢ ಮಾಸವು ಮಳೆಗಾಲದ ಆರಂಭವಾಗಿರುವುದರಿಂದ ಇದನ್ನು ಮನೆಯ ಶುಭ ಕಾರ್ಯಗಳಿಗೆ ಒಳಿತಲ್ಲ ಎನ್ನಲಾಗುತ್ತದೆ. ಆದರೆ ಇದು ಪೂಜೆ, ವ್ರತಗಳಿಗೆ ಉತ್ತಮ ಮಾಸವಾಗಿದೆ. ಏಕೆಂದರೆ ಈಗಲೇ. ಆಷಾಢವು ದಕ್ಷಿಣಾಯಣದ ಆರಂಭ ಕಾಲವಾಗಿದೆ. ಅಂದರೆ ದೇವತೆಗಳಿಗೆ ಸಂಧ್ಯಾ ಕಾಲ. ಹಾಗಾಗಿಯೇ ಈ ಮಾಸದಲ್ಲಿ ಪುರಿ ಜಗನ್ನಾಥನ ರಥಯಾತ್ರೆ ನಡೆಯುತ್ತದೆ. ಪಂಡರಾಪುರದಲ್ಲಿ ಪಲ್ಕ ಯಾತ್ರೆ ನಡೆಯುತ್ತದೆ. ಚತುರ್ಮಾಸ ಆರಂಭವಾಗುವುದು ಕೂಡಾ ಈಗಲೇ. ಆಷಾಢ ನವರಾತ್ರಿ ಆಚರಣೆಯೂ ನಡೆಯುತ್ತದೆ. 
 

Latest Videos
Follow Us:
Download App:
  • android
  • ios