Asianet Suvarna News Asianet Suvarna News

Chanakya Niti : ಎಂಥ ಜಾಗದಲ್ಲಿ ವಾಸಿಸಿದರೆ ಒಲಿಯುತ್ತೆ ಅದೃಷ್ಟ?

ಆಚಾರ್ಯ ಚಾಣಕ್ಯ ಮನುಷ್ಯನ ಉನ್ನತಿಗೆ ಬೇಕಾದ ಅನೇಕ ಸಂಗತಿಗಳನ್ನು ಹೇಳಿದ್ದಾರೆ. ಈಗ್ಲೂ ಅದು ಪ್ರಸ್ತುತವಾಗಿದೆ. ಚಾಣಕ್ಯರ ನೀತಿ ಪಾಲನೆ ಮಾಡಿದ್ರೆ ಯಶಸ್ಸು ಸಿಗುತ್ತದೆ. ಚಾಣಕ್ಯ, ಕೆಲ ಪ್ರದೇಶಗಳಲ್ಲಿ ಎಂದಿಗೂ ಉಳಿಯಬಾರದು ಎಂದಿದ್ದಾರೆ. ಅದು ಯಾವ್ದು ಗೊತ್ತಾ?
 

According To Chanakya Niti Never Should Stop Stay At These Places
Author
Bangalore, First Published Jun 28, 2022, 3:41 PM IST | Last Updated Jun 28, 2022, 3:41 PM IST

ವಾಸಕ್ಕೊಂದು ಸ್ವಂತ ಮನೆ (Home) ಯಿರಲಿ ಅಂತಾ ಅನೇಕರು ಪ್ರಯತ್ನ ನಡೆಸ್ತಾರೆ. ಮತ್ತೆ ಕೆಲವರು ಮನೆ ಯಾವುದೇ ಇರಲಿ ಸುರಕ್ಷಿತ ವಾಸವನ್ನು ಇಷ್ಟಪಡ್ತಾರೆ. ಇನ್ನು ಕೆಲವರು ಒಂಟಿಯಾಗಿ ವಾಸಿಸೋದನ್ನು ಬಯಸ್ತಾರೆ. ಮತ್ತೆ ಕೆಲವರು ಕುಟುಂಬದ ಜೊತೆ ವಾಸಿಸಲು ಇಷ್ಟಪಡ್ತಾರೆ. ಇನ್ನೂ ಕೆಲವರಿಗೆ ನೆಂಟರ ಮನೆ ಪ್ರಿಯವಾಗಿರುತ್ತದೆ. ಮತ್ತೊಂದಿಷ್ಟು ಜನ ಹೊಟೇಲ್, ಪ್ರವಾಸಿ ತಾಣಗಳಲ್ಲಿ ಇರಲು ಬಯಸ್ತಾರೆ. ಆದ್ರೆ ಚೀನ ಭಾರತದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಆಚಾರ್ಯ ಚಾಣಕ್ಯ (Acharya Chanakya) ರ ನೀತಿಶಾಸ್ತ್ರದ ಪ್ರಕಾರ, ನಿಮಗೆ ಇಷ್ಟ ಬಂದಲ್ಲಿ ಉಳಿಯೋದು ಸರಿಯಲ್ಲ. ಕೆಲವು ಸ್ಥಳಗಳಲ್ಲಿ ಉಳಿಯುವುದ್ರಿಂದ ನಿಮ್ಮ ಜೀವನದ ಪ್ರಗತಿಗೆ ಅಡ್ಡಿಯಾಗುತ್ತದೆ. ಹಾಗಾಗಿ ಎಲ್ಲೆಂದರಲ್ಲಿ ವಾಸಿಸುವ ಮೊದಲು ಚಾಣಕ್ಯ ನೀತಿಯಲ್ಲಿ ಏನು ಹೇಳಲಾಗಿದೆ ಎಂಬುದನ್ನು ತಿಳಿದುಕೊಳ್ಳಿ.  

ಚಾಣಕ್ಯ ನೀತಿ ಪ್ರಕಾರ ಈ ಪ್ರದೇಶದಲ್ಲಿ ಉಳಿಬಾರದು : 

ದುರ್ಗುಣ : ಚಾಣಕ್ಯ ನೀತಿಯ ಪ್ರಕಾರ, ಜೀವನದಲ್ಲಿ ಸದ್ಗುಣಗಳನ್ನು ಹೊಂದಿರುವುದು ಬಹಳ ಮುಖ್ಯ. ಸದ್ಗುಣಗಳಿಗೆ ಗೌರವ ಇಲ್ಲದ ಜಾಗದಲ್ಲಿ ಉಳಿಯುವುದು ಒಳಿತಲ್ಲ. ಅಂತಹ ಸ್ಥಳಗಳಲ್ಲಿ ದೀರ್ಘಕಾಲ ಉಳಿಯುವುದು ಬುದ್ಧಿಯ ಬೆಳವಣಿಗೆಯನ್ನು ನಿಲ್ಲಿಸುತ್ತದೆ ಮತ್ತು ದುರ್ಗುಣದಿಂದಾಗಿ ಜೀವನದ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. 

ಉದ್ಯೋಗದ ಸಾಧನ : ಜೀವನೋಪಾಯಕ್ಕೆ ಹಣ ಗಳಿಸುವುದು ಬಹಳ ಮುಖ್ಯ. ಚಾಣಕ್ಯ ನೀತಿಯ ಪ್ರಕಾರ, ಹಣ ಸಂಪಾದಿಸುವ ಅಥವಾ ಉದ್ಯೋಗ ಮಾಡಲು ಬೇಕಾಗುವ ಸಾಧನಗಳು ಲಭ್ಯವಿಲ್ಲದ ಸ್ಥಳದಲ್ಲಿ ಉಳಿಯುವುದು ನಿಷ್ಪ್ರಯೋಜಕವಾಗಿದೆ. ಜೀವನ ಉತ್ತಮವಾಗಿರಬೇಕೆಂದು ಬಯಸುವ ಜನರು ಆ ಸ್ಥಳಗಳಿಂದ ದೂರವಿರುವುದು ಒಳ್ಳೆಯದು.

ಶಿಕ್ಷಣ (Education) : ಜೀವನ ಸುಧಾರಣೆಯಲ್ಲಿ ಶಿಕ್ಷಣವೂ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಶಿಕ್ಷಣವನ್ನು ಗೌರವಿಸದ ಸ್ಥಳಗಳಲ್ಲಿ ಉಳಿಯುವುದು ವ್ಯರ್ಥ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಅಲ್ಲದೆ, ಶಿಕ್ಷಣದ ಸಂಪನ್ಮೂಲಗಳ ಕೊರತೆಯಿರುವ ಸ್ಥಳಗಳಲ್ಲಿ ಎಂದಿಗೂ ವಾಸಿಸಬಾರದು ಎಂದು ಚಾಣಕ್ಯ ಹೇಳುತ್ತಾರೆ.

ದೇವರಿಗೇಕೆ ಈರುಳ್ಳಿ, ಬೆಳ್ಳುಳ್ಳಿ ಹಾಕಿರೋ ಪ್ರಸಾದ ಮಾಡೋಲ್ಲ?

ಸಂಬಂಧಿಕರು ಮತ್ತು ಸ್ನೇಹಿತರು (Relatives and Friends) : ಆಚಾರ್ಯ ಚಾಣಕ್ಯರ ಪ್ರಕಾರ,  ಕೆಟ್ಟ ಸಮಯದಲ್ಲಿ ಯಾವಾಗ್ಲೂ ನಮ್ಮವರೇ ನಮಗೆ ಬೆಂಬಲ ನೀಡ್ತಾರೆ ನಿಜ. ಹಾಗಂತ ಸಂಬಂಧಿಕರು ಅಥವಾ ಸ್ನೇಹಿತರ ಮನೆಯಲ್ಲಿ ಬಹುಕಾಲ ವಾಸಿಸುವುದು ಸೂಕ್ತವಲ್ಲ. ಯಾವುದೇ ಕಾರಣಕ್ಕೂ ಸ್ನೇಹಿತರು ಅಥವಾ ಸಂಬಂಧಿಕರ ಮನೆಯಲ್ಲಿ ಅನೇಕ ದಿನಗಳ ಕಾಲ ವಾಸ ಮಾಡಬಾರದು ಎನ್ನುತ್ತಾರೆ ಚಾಣಕ್ಯ. 

ಇಲ್ಲೂ ಬೇಡ ವಾಸ : ಯಾವ ನಗರದಲ್ಲಿ ಶ್ರೀಮಂತರಿಲ್ಲವೋ (Rich People) ಆ ನಗರದಲ್ಲಿ ವಾಸ ಮಾಡ್ಬೇಡಿ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಅಗತ್ಯವೆನ್ನಿಸಿದಾಗ ಹಣ ನೀಡಲು ಶ್ರೀಮಂತರು ಬೇಕು ಎನ್ನುತ್ತಾರೆ ಅವರು. ಅಷ್ಟೇ ಅಲ್ಲ, ವೇದವನ್ನು ಬಲ್ಲ ಪಂಡಿತರಿಲ್ಲದ ದೇಶ ವಿನಾಶವಾಗುತ್ತದೆ. ಹಾಗಾಗಿ ಅಂತ ಪ್ರದೇಶದಲ್ಲಿ ವಾಸ ಬೇಡ ಎನ್ನುತ್ತಾರೆ. ರಾಜ ಅಥವಾ ಸರ್ಕಾರವಿಲ್ಲದ ದೇಶ ಉನ್ನತಿ, ಪ್ರಗತಿ ಹೊಂದಲು ಸಾಧ್ಯವಿಲ್ಲ. ಹಾಗಾಗಿ ಅಲ್ಲಿಯೂ ಉಳಿಯಬೇಡಿ ಎಂಬುದು ಚಾಣಕ್ಯನ ಸಲಹೆ. ರೋಗ ಬಂದಾಗ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲವೆಂದ್ರೆ ಕಷ್ಟವಾಗುತ್ತದೆ. ಹಾಗಾಗಿ ವೈದ್ಯರಿಲ್ಲದ ನಗರ, ಗ್ರಾಮಗಳಲ್ಲಿ ಎಂದಿಗೂ ವಾಸವಾಗಬಾರದು ಎನ್ನುತ್ತಾರೆ ಚಾಣಕ್ಯ.

ಮುಟ್ಟಾದ ಮಹಿಳೆಯರೇಕೆ ಮೂಲೆಯಲ್ಲಿ ಕೂರಬೇಕು?

ನದಿ ಹರಿಯುವ ಜಾಗ : ಸಾಮಾನ್ಯವಾಗಿ ನದಿ ಪಕ್ಕದಲ್ಲಿ ಮನೆ ಕಟ್ಟಿಕೊಂಡ್ರೆ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು ಎಂದುಕೊಳ್ತಾರೆ ಜನರು. ನದಿ ಹರಿಯುವಲ್ಲಿ ಬೆಳೆ ಚೆನ್ನಾಗಿ ಬರುತ್ತದೆ. ಇದನ್ನೇ ಚಾಣಕ್ಯ ಕೂಡ ಹೇಳ್ತಾರೆ. ಮನುಷ್ಯನು ಯಾವುದೇ ನದಿ ಹರಿಯದ ಸ್ಥಳದಲ್ಲಿ ವಾಸಿಸುವ ಬಗ್ಗೆ ಯೋಚಿಸಬಾರದು ಎನ್ನುತ್ತಾರೆ ಚಾಣಕ್ಯ. 

ಚಾಣಕ್ಯನ ಈ ಹೇಳಿಕೆ ಹಿಂದೇ ಏನೇ ಕಾರಣವಿರಬಹುದು. ಆದ್ರೆ ಇದನ್ನು ಸರಿಯಾಗಿ ಪಾಲನೆ ಮಾಡಿದ್ರೆ ನಿಮ್ಮ ಯಶಸ್ಸು ನಿಶ್ಚಿತ. 
 

Latest Videos
Follow Us:
Download App:
  • android
  • ios