ಸುಹಾಸನೆಯುಳ್ಳ, ಸುಂದರವಾದ ಈ ಹೂವು ದೇವರಿಗೇಕೆ ಮೈಲಿಗೆ?
ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಹೆಚ್ಚು ಮಹತ್ವವಿದೆ. ಹಾಗೆಯೇ ದೇವರ ಆರಾಧನೆಗೆ ಹೂಗಳನ್ನು ಅರ್ಪಿಸಲಾಗುತ್ತದೆ. ಆದ್ರೆ ಕೇತಕಿ ಹೂ ಬಳಕೆ ಮಾತ್ರ ಮಾಡೋದಿಲ್ಲ. ಇದಕ್ಕೆ ಮಹತ್ವದ ಕಾರಣವಿದೆ.
ಚೆಲುವಿಗೆ ಇನ್ನೊಂದು ಹೆಸರು ಹೂ. ಪ್ರಕೃತಿಯಲ್ಲಿರುವ ಪ್ರತಿಯೊಂದು ಹೂ ಕೂಡ ಎಲ್ಲರನ್ನು ಸೆಳೆಯುತ್ತದೆ. ಅದ್ರಲ್ಲಿ ಕೆಲ ಹೂಗಳು ಸೌಂದರ್ಯದ ವಿಷ್ಯದಲ್ಲಿ ಮೊದಲ ಸ್ಥಾನದಲ್ಲಿವೆ. ಹೂಗಳನ್ನು ದೇವರ ಪೂಜೆಯಿಂದ ಹಿಡಿದು ಅಲಂಕಾರದವರೆಗೆ ಬಳಕೆ ಮಾಡಲಾಗುತ್ತದೆ. ಯಾವುದೇ ಶುಭ ಸಮಾರಂಭವಿರಲಿ ಇಲ್ಲ ಅಂತ್ಯ ಸಂಸ್ಕಾರವಿರಲಿ ಹೂವನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಹೂಗಳಿಗೆ ಮಹತ್ವದ ಸ್ಥಾನವಿದೆ. ಹೂಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ಹೂಗಳನ್ನು ದೇವರಿಗೆ ಅರ್ಪಿಸಿದ್ರೆ ದೇವರು ಸಂತೋಷಗೊಳ್ತಾನೆ, ಭಕ್ತರು ಬೇಡಿದ ವರವನ್ನು ನೀಡ್ತಾನೆ ಎನ್ನುವ ನಂಬಿಕೆಯಿದೆ. ಪ್ರತಿಯೊಂದು ದೇವರಿಗೆ ಪ್ರಿಯವಾದ ಕೆಲ ಹೂಗಳಿವೆ. ಅವುಗಳನ್ನು ಆಯಾ ದೇವರಿಗೆ ಅರ್ಪಿಸಿದ್ರೆ ಫಲ ಜಾಸ್ತಿ ಎಂದು ಜನರು ನಂಬಿದ್ದಾರೆ. ಗುಲಾಬಿ, ತಾವರೆ, ಮಲ್ಲಿಗೆ, ದಾಸವಾಳ, ಸೇವಂತಿಗೆ ಹೀಗೆ ಅನೇಕ ಹೂಗಳನ್ನು ದೇವರ ಪಾದಕ್ಕೆ ಭಕ್ತರು ಅರ್ಪಿಸಿ, ಆಶೀರ್ವಾದ ಪಡೆಯುತ್ತಾರೆ.
ಆದ್ರೆ ಭಕ್ತರು (Devotees) ಪ್ರಕೃತಿಯಲ್ಲಿರುವ ಒಂದು ಹೂ (Flower) ವನ್ನು ದೇವರಿ (God) ಗೆ ಅರ್ಪಿಸುವುದಿಲ್ಲ. ಇದ್ರಿಂದ ಅಶುಭ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ದೇವರಿಗೆ ಅರ್ಪಿಲಾಗದ ಹೂ ಅಂದ್ರೆ ಕೇತಕಿ (Ketaki) ಅಥವಾ ಕೇದಗಿ ಹೂ. ಕೇತಕಿ ಹೂವನ್ನು ಯಾವುದೇ ಶುಭ ಕಾರ್ಯಕ್ಕೆ ಬಳಸುವುದಿಲ್ಲ. ಶಿವರಾತ್ರಿ (Shivratri ) ಹೊರತುಪಡಿಸಿ ಬೇರೆ ಯಾವುದೇ ಸಂದರ್ಭದಲ್ಲಿ ಶಿವನಿಗೆ ಅರ್ಪಿಸಲಾಗುವುದಿಲ್ಲ ಎಂಬುವುದು ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ ಅದರ ಹಿಂದಿನ ಕಾರಣ ಏನು ಎಂಬುದು ಅನೇಕರಿಗೆ ತಿಳಿದಿಲ್ಲ.
ಕೇತಕಿ ಹೂವನ್ನು ಈಶ್ವರ (Ishwar)ನಿಗೆ ಅರ್ಪಿಸದಿರಲು ಇದು ಕಾರಣ :
ವಿಷ್ಣು (Vishnu) ಮತ್ತು ಬ್ರಹ್ಮ (Brahma) ನ ನಡುವಿನ ವಿವಾದ : ಬ್ರಹ್ಮ ದೇವನು ತಾನು ಸರ್ವಶ್ರೇಷ್ಠನೆಂಬ ಅಹಂಕಾರಕ್ಕೆ ಒಳಗಾಗಿದ್ದ. ಇದೇ ಗುಂಗಿನಲ್ಲಿ ಬ್ರಹ್ಮ, ವಿಷ್ಣುವಿನ ಬಳಿ ಇದ್ರ ಬಗ್ಗೆ ಚರ್ಚೆ ಶುರು ಮಾಡ್ತಾರೆ. ಈ ವೇಳೆ ಕಂಭದ ರೂಪದಲ್ಲಿ ಪ್ರಕಟವಾಗುವ ಶಿವ, ತನ್ನ ಎರಡೂ ತುದಿಗಳನ್ನು ಹುಡುಕುವಂತೆ ಹೇಳ್ತಾರೆ. ವಿಷ್ಣು ಮತ್ತು ಬ್ರಹ್ಮ, ಎರಡು ತುದಿಗಳನ್ನು ಹುಡುಕಲು ಶುರು ಮಾಡ್ತಾರೆ. ಕೊನೆಯ ತುದಿಯನ್ನು ಯಾರು ಮೊದಲು ಕಂಡುಕೊಳ್ಳುತ್ತಾರೋ ಅವರು ಅತ್ಯುತ್ತಮವೆಂದು ಪರಿಗಣಿಸಲ್ಪಡುತ್ತಾರೆ ಎಂದು ಶಿವ ಹೇಳ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮ ಒಂದೊಂದು ತುದಿಯನ್ನು ಹುಡುಕಲು ಹೊರಡುತ್ತಾರೆ. ಸ್ವಲ್ಪ ದೂರ ಹೋದ ವಿಷ್ಣು ಸೋಲೊಪ್ಪಿಕೊಂಡು ಶಿವನ ಬಳಿ ಬರ್ತಾರೆ. ಆದ್ರೆ ಬ್ರಹ್ಮ ದೇವನಿಗೆ ಕೇತಕಿ ಹೂ ಸಿಗುತ್ತದೆ. ಅದು ಕಂಬದ ತುದಿಯಿಂದ ಬಿದ್ದಿರುವುದಾಗಿ ಹೇಳುತ್ತದೆ. ಅದನ್ನೇ ಸಾಕ್ಷಿಯಾಗಿ ಬ್ರಹ್ಮ ಕರೆದುಕೊಂಡು ಬರ್ತಾರೆ. ಕೇತಕಿ ಹೂವಿನ ಸಾಕ್ಷ್ಯ ಹೇಳ್ತಾ ನಾನು ತುದಿ ತಲುಪಿದ್ದೇನೆ ಎನ್ನುತ್ತಾರೆ. ಆದ್ರೆ ಈಶ್ವರನಿಗೆ ಸತ್ಯ ತಿಳಿಯುತ್ತದೆ.
ಈ ZODIAC SIGN ರೀತಿ ಎಲ್ರಿಗೂ ಸ್ಫೂರ್ತಿ ತುಂಬೋದು ಸಾಧ್ಯವೇ ಇಲ್ಲ
ಬ್ರಹ್ಮನ ಸುಳ್ಳಿಗೆ ಕೋಪಗೊಂಡ ಈಶ್ವರ ಬ್ರಹ್ಮನನ್ನು ಯಾರೂ ಪೂಜೆ ಮಾಡಬಾರದೆಂದು ಶಾಪ ಹಾಕ್ತಾರೆ. ಹಾಗೆಯೇ ಕೇತಕಿ ಹೂ, ಬ್ರಹ್ಮನ ಸುಳ್ಳಿಗೆ ಸಾಕ್ಷ್ಯವಾದ ಕಾರಣ ಅದಕ್ಕೂ ಶಾಪ ನೀಡ್ತಾರೆ. ಕೇತಕಿಯನ್ನು ಯಾವುದೇ ಶುಭ ಕಾರ್ಯದಲ್ಲಿ ಬಳಸಬಾರದು ಎಂದು ಶಾಪ ನೀಡ್ತಾರೆ. ದೇವರ ಪೂಜೆಗೆ ಬಳಸಬಾರದು ಎನ್ನುತ್ತಾರೆ. ಇದ್ರಿಂದ ಕೇತಕಿ ಕಂಗಾಲಾಗುತ್ತದೆ. ವಿಧವಿಧವಾಗಿ ಈಶ್ವರನಲ್ಲಿ ಬೇಡಿಕೊಳ್ಳುತ್ತದೆ. ಕೇತಕಿ ಮೇಲೆ ಸ್ವಲ್ಪ ಕರುಣೆ ತೋರಿಸುವ ಈಶ್ವರನು ಶಿವರಾತ್ರಿಯಲ್ಲಿ ಮಾತ್ರ ತನ್ನ ಪೂಜೆಗೆ ಕೇದಗಿ ಬಳಸಬಹುದು ಎನ್ನುತ್ತಾರೆ.
ಮಂಗಳವಾರ ಈ ಕೆಲಸ ಮಾಡೋದು ಅಮಂಗಳ! ತಪ್ಪಿಯೂ ಈ 5 ಕೆಲಸ ಮಾಡ್ಬೇಡಿ..
ಅಲ್ಲಿಂದ ಕೇತಕಿ ಹೂವನ್ನು ಯಾವುದೇ ಶುಭ ಕಾರ್ಯದಲ್ಲಿ ಬಳಕೆ ಮಾಡುವುದಿಲ್ಲ. ಸಾಮಾನ್ಯ ದಿನಗಳಲ್ಲಿ ಯಾವುದೇ ದೇವರಿಗೆ ಈ ಹೂವನ್ನು ಅರ್ಪಣೆ ಮಾಡುವುದಿಲ್ಲ. ಒಂದು ಸುಳ್ಳಿನಿಂದಾಗಿ ಕೇತಕಿ ದೇವರ ಮುಡಿ ಸೇರುವುದರಿಂದ ವಂಚಿತವಾಗಿದೆ.