Asianet Suvarna News Asianet Suvarna News

Hindu Wedding: ಗೋಧೂಳಿ ಮದ್ವೆ ಮಹೂರ್ತ ಯಾಕಿಡ್ತಾರೆ ಗೊತ್ತಾ?

ಹಿಂದೂ ಧರ್ಮ ಶಾಸ್ತ್ರದಲ್ಲಿ ಮನುಷ್ಯನ ಜೀವನಕ್ಕೆ ಬೇಕಾದ ಅನೇಕ ಸಂಗತಿಗಳನ್ನು ವಿವರಿಸಲಾಗಿದೆ. ಮದುವೆ ಬಗ್ಗೆಯೂ ಇಲ್ಲಿ ಮಾನ್ಯತೆ ನೀಡಲಾಗಿದೆ. ಒಬ್ಬ ವ್ಯಕ್ತಿ ಯಾವ ಸಮಯದಲ್ಲಿ ಮದುವೆಯಾದ್ರೆ ಸುಖ ಜೀವನ ನಡೆಸಲು ಸಾಧ್ಯ ಎಂಬುದನ್ನೂ ಹೇಳಲಾಗಿದೆ. ಹಾಗೆ ಯಾಕೆ ರಾತ್ರಿ ಮದುವೆಯಾಗ್ಬೇಕು ಎಂಬುದನ್ನು ಕೂಡ ವಿವರಿಸಲಾಗಿದೆ. 
 

Why Do Hindu Marriages Happen At Night
Author
First Published Dec 6, 2022, 4:18 PM IST

ಮದುವೆ ಋತು ಶುರುವಾಗಿದೆ. ಒಂದಾದ್ಮೇಲೆ ಒಂದರಂತೆ ಮದುವೆ ಸಮಾರಂಭ ನಡೆಯುತ್ತಿದೆ. ಹಿಂದೂ ಧರ್ಮ ಗ್ರಂಥಗಳಲ್ಲಿ ಮದುವೆಗೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಈಗ್ಲೂ ಮದುವೆ ಮಾಡುವ ಸಂದರ್ಭದಲ್ಲಿ ಹಿಂದೂ ಗ್ರಂಥದಲ್ಲಿ ಹೇಳಲಾದ ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ.  ಮದುವೆ ಸ್ವರ್ಗದಲ್ಲಿ ನಿಶ್ಚಯಿಸಲಾಗುತ್ತದೆ ಎಂದು ನಾವೆಲ್ಲ ನಂಬಿದ್ದೇವೆ. ಇದನ್ನು ಜನ್ಮ ಜನ್ಮಗಳ ಸಂಬಂಧ ಎನ್ನಲಾಗುತ್ತದೆ. ಹಾಗಾಗಿ ಈ ಮದುವೆ ಬರೀ ಇಬ್ಬರನ್ನು ಒಂದು ಮಾಡುವುದಿಲ್ಲ. ಎರಡು ಕುಟುಂಬಗಳನ್ನು ಒಂದು ಮಾಡುತ್ತದೆ. ಮದುವೆ ನಂತ್ರ ಎರಡು ಕುಟುಂಬಗಳು ಸಂತೋಷವಾಗಿರಬೇಕೆಂದ್ರೆ ಜಾತಕ ಹೊಂದಿಸಿ, ಸರಿಯಾದ ಮುಹೂರ್ತದಲ್ಲಿ ಮದುವೆ ಮಾಡ್ಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.

ಹಿಂದಿನ ಕಾಲದಲ್ಲಿ ಮಾತ್ರವಲ್ಲ ಈಗ್ಲೂ ಭಾರತದಲ್ಲಿ ಅನೇಕ ಮದುವೆಗಳು ರಾತ್ರಿ ನಡೆಯುತ್ತವೆ. ಹಿಂದು ಧರ್ಮದಲ್ಲಿ ಎಲ್ಲಾ ಶುಭ ಕಾರ್ಯಗಳನ್ನು ಹಗಲಿನಲ್ಲಿ ಮಾಡಲಾಗುತ್ತದೆ. ಸೂರ್ಯನ ಬೆಳಕಿನಲ್ಲಿ ಮಂಗಳಕರ ಕೆಲಸ ಮಾಡಬೇಕೆಂಬ ನಂಬಿಕೆಯಿದೆ. ಆದರೆ ಬಹುತೇಕ ಹಿಂದೂ ವಿವಾಹಗಳು ರಾತ್ರಿ ನಡೆಯೋದು ಏಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ನಾವಿಂದು ರಾತ್ರಿ ಮದುವೆ ಮಾಡಲು ಕಾರಣವೇನು ಎಂಬುದನ್ನು ನಿಮಗೆ ಹೇಳ್ತೆವೆ. 

ಮದುವೆ (Marriage) ಗಳು ರಾತ್ರಿ (Night) ನಡೆಯಲು ಕಾರಣವೇನು? : 
1. ಮದುವೆ ಸಂಪೂರ್ಣಗೊಳ್ಳುವುದು ಸಪ್ತಪದಿ ತುಳಿದ ಮೇಲೆ. ಧ್ರುವ ನಕ್ಷತ್ರವನ್ನು ಸಾಕ್ಷಿಯಾಗಿ ಪರಿಗಣಿಸಿ ಸಪ್ತಪದಿ ತುಳಿಯಲಾಗುತ್ತದೆ. ಹೀಗೆ ಮಾಡಿದ್ರೆ ಎಲ್ಲ ಜನ್ಮದಲ್ಲೂ ಜೋಡಿ ಒಂದಾಗಿರುತ್ತಾರೆ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ಮದುವೆಯನ್ನು ರಾತ್ರಿ ಮಾಡುವಂತೆ ಶಾಸ್ತ್ರಗಳಲ್ಲಿ ಸಲಹೆ ನೀಡಲಾಗಿದೆ. ಯಾಕೆಂದ್ರೆ ರಾತ್ರಿ ಸಮಯದಲ್ಲಿ ಧ್ರುವ ನಕ್ಷತ್ರ (Pole Star) ವು ಗೋಚರಿಸುತ್ತದೆ.  

2. ರಾತ್ರಿಯಲ್ಲಿ ಮದುವೆಯಾಗಲು ಇನ್ನೊಂದು ಮುಖ್ಯ ಕಾರಣ ಚಂದ್ರ. ಹಿಂದೂ ಧರ್ಮದಲ್ಲಿ ಸೂರ್ಯ (Sun) ಮತ್ತು ಚಂದ್ರ (Moon)ರನ್ನು ಕಣ್ಣಿಗೆ ಕಾಣುವ ದೇವರೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಅವರ ಸಾಕ್ಷಿಯಾಗಿ ಎಲ್ಲ ಕೆಲಸಗಳನ್ನು ಮಾಡಲಾಗುತ್ತದೆ. ಸೂರ್ಯ ಶಕ್ತಿಯ ಸಂಕೇತ. ಅಂದರೆ ಬೆಂಕಿ (Fire). ಚಂದ್ರ ತಂಪಾದ ಮತ್ತು ಶಾಂತಿಯ (Peace) ಸಂಕೇತ. ಚಂದ್ರನನ್ನು ಮನಸ್ಸಿನ ಅಂಶವೆಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಹಗಲಿನ ಮದುವೆಗಿಂತ ರಾತ್ರಿ ಮದುವೆ ಮಾಡಲು ಶಾಸ್ತ್ರದಲ್ಲಿ ಸಲಹೆ ನೀಡಲಾಗುತ್ತದೆ. ಚಂದ್ರನ ಸಾಕ್ಷಿಯಾಗಿ ಜೋಡಿ ದಾಂಪತ್ಯ ಜೀವನಕ್ಕೆ (Wedding Life) ಕಾಲಿಟ್ಟರೆ  ದಂಪತಿ ನಡುವೆ ಶಾಂತಿ ನೆಲೆಸಿರುತ್ತದೆ. ಇಬ್ಬರ ಮಧ್ಯೆ ಭಾವನಾತ್ಮಕ ಸಂಬಂಧ (Emotional Bonding) ಬಲಗೊಳ್ಳುತ್ತದೆ ಎಂಬ ನಂಬಿಕೆಯಿದೆ. 

New Year 2023: ಹೊಸ ವರ್ಷ ಹೆಚ್ಚಿರಲಿದೆ ಸಂಖ್ಯೆ 7ರ ಪ್ರಭಾವ

3. ಹಿಂದೂ ಧರ್ಮದಲ್ಲಿ ಅರುಂಧತಿ ನಕ್ಷತ್ರವನ್ನು ದಂಪತಿಗೆ ತೋರಿಸಲಾಗುತ್ತದೆ. ಗಂಡ ಮತ್ತು ಹೆಂಡತಿಯ ನಡುವಿನ ಮಧುರ ಸಂಬಂಧದ ಸಂಕೇತ ಇದಾಗಿದೆ. ದಂಪತಿ ಮಧ್ಯೆ ಪ್ರೀತಿ, ಆದರ್ಶ, ಧರ್ಮ ಪಾಲನೆ, ದಯೆ ಎಲ್ಲವೂ ಇರಲಿ ಎನ್ನುವ ಕಾರಣಕ್ಕೆ ಅರುಂಧತಿ ನಕ್ಷತ್ರ ತೋರಿಸಲಾಗುತ್ತದೆ. ರಾತ್ರಿ ಈ ನಕ್ಷತ್ರ ಸುಲಭವಾಗಿ ಕಾಣುವುದ್ರಿಂದ ರಾತ್ರಿ ಮದುವೆಗೆ ಮಾನ್ಯತೆ ನೀಡಲಾಗುತ್ತದೆ.  

NEW YEAR 2023: ಹೊಸ ವರ್ಷದಲ್ಲಿ ಈ 5 ರಾಶಿಗಳಿಗೆ ಆಸ್ತಿ ಮಾಡುವ ಅದೃಷ್ಟ

ಹಗಲಿನಲ್ಲಿ ಮದುವೆ ಮಾಡೋದು ತಪ್ಪಾ?: ಹಿಂಧೂ ಧರ್ಮದಲ್ಲಿ ರಾತ್ರಿ ಮದುವೆಗೆ ಕಾರಣವೇನು ಎಂಬುದನ್ನು ನೀವು ತಿಳಿದ್ರಿ. ಹಾಗಂತ ಎಲ್ಲ ಮದುವೆಯನ್ನು ರಾತ್ರಿಯೇ ಮಾಡಬೇಕೆಂದೇನೂ ಇಲ್ಲ. ಶಾಸ್ತ್ರಗಳ ಪ್ರಕಾರ, ಹಗಲಿನಲ್ಲಿ ಎಲ್ಲಾ ಶುಭ ಕಾರ್ಯಗಳನ್ನು ಮಾಡುವುದು ಸೂಕ್ತವೆಂದು ನಂಬಲಾಗಿದೆ. ಆದ್ದರಿಂದ ಮದುವೆಗಳನ್ನು ರಾತ್ರಿಯ ಬದಲು ಹಗಲಿನಲ್ಲಿ ಕೂಡ ಮಾಡಬಹುದು. ಪುರಾಣ ಕಥೆಗಳಲ್ಲಿ ಕೂಡ ಹಗಲಿನಲ್ಲಿ ಮದುವೆ ನಡೆವಿದೆ. ಸೀತೆ ಮತ್ತು ದ್ರೌಪದಿಯ ಸ್ವಯಂವರವೂ ಹಗಲಿನಲ್ಲಿಯೇ ನಡೆಯಿತು. ಹಾಗಾಗಿ ಹಗಲಿನಲ್ಲಿ ನಡೆಯುವ ವಿವಾಹವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮದುವೆಗೆ ಮೊದಲು ವಧು – ವರರ ಜಾತಕ ನೋಡಲಾಗುತ್ತದೆ. ಇಬ್ಬರಿಗೆ ಯಾವ ಸಮಯದಲ್ಲಿ ಮದುವೆಯಾದ್ರೆ ಶುಭ ಎಂಬುದನ್ನು ಗಮನಿಸಿ ನಂತ್ರ ಮುಹೂರ್ತ ನಿಗದಿಪಡಿಸಲಾಗುತ್ತದೆ.

Follow Us:
Download App:
  • android
  • ios