New Year 2023: ಹೊಸ ವರ್ಷ ಹೆಚ್ಚಿರಲಿದೆ ಸಂಖ್ಯೆ 7ರ ಪ್ರಭಾವ
ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳ ಬಾಕಿಯಿದೆ. ಈಗಿನ ಕಷ್ಟವೆಲ್ಲ ಕಳೆದು ಹೊಸ ವರ್ಷ ನೆಮ್ಮದಿ ನೀಡಲಿ ಎಂದು ಜನರು ಬಯಸ್ತಿದ್ದಾರೆ. ಅದಕ್ಕೆ ಈಗಿನಿಂದಲೇ ಪ್ಲಾನ್ ಮಾಡ್ತಿದ್ದಾರೆ. ಸಂಖ್ಯಾಶಾಸ್ತ್ರಜ್ಞರು ಕೂಡ ಹೊಸ ವರ್ಷ ಹೇಗಿರಲಿದೆ ಎಂಬುದನ್ನು ವಿವರವಾಗಿ ಹೇಳಿದ್ದಾರೆ.
ಹೊಸ ವರ್ಷ 2023 ಹತ್ತಿರ ಬರ್ತಿದೆ. ನೂತನ ವರ್ಷವನ್ನು ಸ್ವಾಗತಿಸಲು ಜನರು ಉತ್ಸಾಹ ತೋರಿಸ್ತಿದ್ದಾರೆ. 2023 ಹೇಗರಿರಲಿದೆ ಎನ್ನುವ ಕುತೂಹಲ ಕೂಡ ಜನರಿಗಿದೆ. ಹೊಸ ವರ್ಷ 2023 ಹೇಗಿರಲಿದೆ ಎಂಬುದನ್ನು ಸಂಖ್ಯಾಶಾಸ್ತ್ರಜ್ಞರು ಅಂಕಿಗಳ ಆಧಾರದ ಮೇಲೆ ಹೇಳ್ತಾರೆ. ನಾವು ಅಂಕಿಗಳ ಆಧಾರ ಮೇಲೆ ನೋಡಿದಾಗ 2023ರ ಒಟ್ಟು ಮೊತ್ತ 7 ಆಗಿರುತ್ತದೆ. ಅಂದರೆ 2+0+2+3=7. ಹಾಗಾಗಿ 2023ರ ಮೇಲೆ 7ರ ಪ್ರಭಾವವನ್ನು ನಾವು ನೋಡಬಹುದಾಗಿದೆ. ನಾವಿಂದು ಹೊಸ ವರ್ಷದ 7ರ ಪ್ರಭಾವದಿಂದ ಏನಾಗಲಿದೆ ಹಾಗೆ ಬೇರೆ ಯಾವ ಅಂಕೆಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ನಿಮಗೆ ಹೇಳ್ತೆವೆ.
ನಮ್ಮ ಜೀವನ (Life) ದ ಮೇಲೆ 7 ರ ಪ್ರಭಾವ : ಸಂಖ್ಯಾಶಾಸ್ತ್ರಜ್ಞರ ಪ್ರಕಾರ, 2023 ಕೇತು (Ketu) ವಿನ ವರ್ಷವಾಗಿರುತ್ತದೆ. ಕೇತುವಿಗೆ ಸಂಬಂಧಿಸಿದ ಸಂಖ್ಯೆ 7. ಕೇತುವನ್ನು ಜನರು ನೆರಳು ಗ್ರಹ (Planet) ಎಂದೂ ಕರೆಯುತ್ತಾರೆ. ಅತ್ಯಂತ ನಿಗೂಢ ಗ್ರಹ ಕೇತು ಗ್ರಹವಾಗಿದೆ. ಕೇತುವಿನ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಕೇತು ಒಮ್ಮೆ ಅನುಕೂಲ ಪ್ರಭಾವ ಬೀರಿದ್ರೆ ಮತ್ತೊಮ್ಮೆ ಪ್ರತಿಕೂಲ ಪ್ರಭಾವ ಬರುತ್ತದೆ.
2023ರ ಒಟ್ಟೂ ಮೊತ್ತ 7 ಹೌದು. ಆದ್ರೆ ಇದ್ರ ಜೊತೆಗೆ 2ರ ಪ್ರಭಾವವೂ ಇರುತ್ತದೆ. 2 ಎರಡು ಬಾರಿ ಬರುವ ಕಾರಣ ಸಂಖ್ಯಾಶಾಸ್ತ್ರಜ್ಞರು ಅದರ ಪ್ರಭಾವವನ್ನು ಕೂಡ ಪರಿಗಣಿಸುತ್ತಾರೆ. ಸಂಖ್ಯೆ ಎರಡು ಚಂದ್ರ (Moon) ನಿಗೆ ಸಂಬಂಧಿಸಿದೆ. ಹಾಗೆ ಮೂರರ ಸಂಖ್ಯೆ ಕೂಡ ಇಲ್ಲಿ ಬರುತ್ತದೆ. ಮೂರಕ್ಕೆ ಗುರು ಅಧಿಪತಿ. ಗುರು ಮತ್ತು ಚಂದ್ರ ಸಂಯೋಗದಿಂದ ಗಜಕೇಸರಿ ಯೋಗ ಈ ವರ್ಷ ರೂಪುಗೊಳ್ಳುತ್ತದೆ. ಹಾಗಾಗಿ ಕೇತು ಪ್ರಭಾವವಿದ್ದರೂ ಗುರು – ಚಂದ್ರನಿಂದಾಗಿ ಮುಂದಿನ ವರ್ಷ ಮಂಗಳಕರ ಘಟನೆಗಳು ಕೂಡ ಸಾಕಷ್ಟು ನಡೆಯಲಿವೆ.
Yearly Horoscope 2023: ಕರ್ಕಾಟಕ ರಾಶಿಯ ಜನರಿಗೆ ಹೆಚ್ಚು ಏರಿಳಿತಗಳಿಲ್ಲದ ವರ್ಷ 2023
ಗಜಕೇಸರಿ ಯೋಗ ಎಂದರೇನು ? ಯಾರಿಗೆ ಲಾಭ ? : ಗಜಕೇಸರಿ ಯೋಗದಿಂದ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ. ಈ ಯೋಗವು ಆನೆ ಮತ್ತು ಸಿಂಹದ ಸಂಯೋಜನೆಯಿಂದ ರೂಪುಗೊಳ್ಳುತ್ತದೆ. 2023ರ ವರ್ಷದಲ್ಲಿ ಸಂಪತ್ತು, ಜ್ಞಾನ ಮತ್ತು ಶಕ್ತಿಯಲ್ಲಿ ಅಗಾಧ ಬೆಳವಣಿಗೆಯಾಗಲಿದೆ. ಈ ಯೋಗದಿಂದ ದೊಡ್ಡ ಕಾರ್ಯಗಳು ನೆರವೇರಲಿವೆ. ಕನ್ಯಾ ರಾಶಿ ಮತ್ತು ಮಿಥುನ ರಾಶಿಯವರಿಗೆ ಈ ಯೋಗದಿಂದ ಹೆಚ್ಚಿನ ಫಲ ಸಿಗಲಿದೆ ಎನ್ನುತ್ತಾರೆ ಸಂಖ್ಯಾಶಾಸ್ತ್ರಜ್ಞರು.
2023ರಲ್ಲಿ ಕೇತುವಿನ ಪ್ರಭಾವ ಹೇಗಿರುತ್ತದೆ?: ಮೊದಲೇ ಹೇಳಿದಂತೆ ಕೇತು ಒಳ್ಳೆಯದು ಮತ್ತು ಕೆಟದು ಎರಡನ್ನೂ ಮಾಡುವ ಗ್ರಹವಾಗಿದೆ. ಈ ಗ್ರಹ ನಮ್ಮನ್ನು ಆಧ್ಯಾತ್ಮಿಕರನ್ನಾಗಿ ಮಾಡುತ್ತದೆ. ಆದರೆ ಕೇತು ಗ್ರಹದಿಂದಾಗಿ ಜೀವನದಲ್ಲಿ ಅನೇಕ ಅಡೆತಡೆಗಳನ್ನು ನಾವು ಎದುರಿಸಬೇಕಾಗಬಹುದು. ನಮ್ಮ ಭಾವನಾತ್ಮಕ ಅಂಶದ ಮೇಲೆ ಕೇತು ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ.
Yearly Horoscope: ಮಿಥುನ ರಾಶಿಗೆ ಶುಭ ಫಲಗಳ ಗುಚ್ಛ 2023..
ವ್ಯಾಪಾರದ ದೃಷ್ಟಿಯಿಂದ ಹೊಸ ವರ್ಷ ತುಂಬಾ ಅನುಕೂಲಕರವೆಂದು ಪರಿಗಣಿಸಲಾಗಿದೆ. ವೃತ್ತಿ ಜೀವನದಲ್ಲಿ ಸಾಕಷ್ಟು ಶಕ್ತಿ ಬರಲಿದೆ. ಸಹೋದ್ಯೋಗಿಗಳ ಜೊತೆ ಒಟ್ಟಿಗೆ ಕೆಲಸ ಮಾಡುವ ಅವಕಾಶ ಸಿಗಲಿದೆ. ಈ ವರ್ಷ ಒಗ್ಗಟ್ಟಿಗೆ ಮಹತ್ವವಿದೆ. ಒಗ್ಗಟ್ಟಿನಿಂದ ಕೆಲಸ ಮಾಡಿದವರು ಹೆಚ್ಚು ಲಾಭ ಪಡೆಯೋದ್ರಲ್ಲಿ ಎರಡು ಮಾತಿಲ್ಲ.
ಇನ್ನು ಆರೋಗ್ಯದ ವಿಷ್ಯಕ್ಕೆ ಬಂದ್ರೆ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹೊಸ ವರ್ಷದಲ್ಲಿ ಹೊಸ ರೋಗಗಳು ಹರಡುವ ಅಪಾಯವಿರುತ್ತದೆ. ಆದರೆ ಅದು ಮಾರಣಾಂತಿಕವಾಗಿರುವುದಿಲ್ಲ ಎನ್ನುತ್ತಾರೆ ಸಂಖ್ಯಾಶಾಸ್ತ್ರಜ್ಞರು. ಒಂಟಿಯಾಗಿರುವ ಜನರಿಗೆ ಹೊಸ ವರ್ಷ ಹೊಸದನ್ನು ನೀಡಲಿದೆ. ಅಂದ್ರೆ ಜಂಟಿಯಾಗುವ ಭಾಗ್ಯ ಕೂಡಿ ಬರಲಿದೆ. ಮದುವೆಗೆ ಪ್ಲಾನ್ ಮಾಡ್ತಿರುವವರಿಗೆ ಜೀವನ ಪೂರ್ತಿ ಜೊತೆಗಿರುವ ಸಂಗಾತಿ ಸಿಗಲಿದ್ದಾರೆ.