Asianet Suvarna News Asianet Suvarna News

Mythology: ಶ್ರೀಕೃಷ್ಣ ಶಿವನೊಡನೆ ಯುದ್ಧ ಮಾಡಿದ್ದೇಕೆ?

ಶ್ರೀಕೃಷ್ಣನೊಡನೆ ಶಿವನಿಗೆ ಯುದ್ಧ ಮಾಡಬೇಕಾಗಿ ಬಂಧ ಕಥೆ ಸ್ವಾರಸ್ಯಕರವಾಗಿದೆ. ಇದರಲ್ಲಿ ಒಂದು ಚಂದದ ಪ್ರೇಮ ಕತೆಯೂ ಇದೆ.

 

 

Why did Lord Shiva fight with Lord Krishna
Author
Bengaluru, First Published Feb 9, 2022, 2:13 PM IST

ಬಾಣಾಸುರನೆಂಬ (Banasura) ಒಬ್ಬ ರಾಕ್ಷಸನಿದ್ದ. ಅವನಿಗೆ ಹುಟ್ಟುತ್ತಲೇ ಸಾವಿರ ಕೈಗಳು. ಅವನು ಅಮರನಾಗುವ (Immortal) ಆಸೆಯಿಂದ ಪರಮೇಶ್ವರನನ್ನು (Shiva) ಕುರಿತು ತಪಸ್ಸು ಮಾಡಿದ. ಸಹಸ್ರಾರು ವರ್ಷ ತಪಸ್ಸು ಮಾಡಿದ. ಅವನು ಪ್ರತ್ಯಕ್ಷನಾಗದೇ ಹೋದಾಗ ಒಂದೊಂದೇ ತೋಳನ್ನು ಕಡಿದು ಅಗ್ನಿಗೆ ಹಾಕುತ್ತಾ ಬಂದ. ಬಾಣಾಸುರನ ಭಕ್ತಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾದ. ಏನು ವರ ಬೇಕು ಎಂದು ಕೇಳಿದ.

'ನನ್ನನ್ನು ಚಿರಂಜೀವಿಯಾಗಿ ಮಾಡು' ಎಂದ ಬಾಣಾಸುರ.

'ಆಯ್ತು. ನೀನು ಚಿರಂಜೀವಿಯಾಗು.'

'ಅಷ್ಟೇ ಅಲ್ಲ, ನೀನು ನನ್ನ ರಕ್ಷಣೆಗೆ ಕಾವಲಾಗಿರಬೇಕು' ಎಂದ ಬಾಣಾಸುರ.

'ಸರಿ, ಹಾಗೇ ಆಗಲಿ, ನಿನ್ನ ರಕ್ಷಣೆಗೆ ಸದಾ ನಾನಿರುತ್ತೇನೆ. ಕಷ್ಟ ಬಂದಾಗ ಕರೆ' ಎಂದು ಶಿವ ಅಭಯ ನೀಡಿದ.

ನಂತರ ಎಷ್ಟೋ ವರ್ಷಗಳು ಸಂದುಹೋದವು. ಬಾಣಾಸುರ ವರಬಲದಿಂದ ಕೊಬ್ಬಿದ. ಅಹಂಕಾರ ಮೇರೆ ಮೀರಿತು. ದೇವಲೋಕವನ್ನೂ ವಶಪಡಿಸಿಕೊಂಡ. ದೇವತೆಗಳೆಲ್ಲ (Gods) ನೊಂದರು.

ಇದೇ ವೇಳೆಗೆ ಅವನಿಗೊಬ್ಬಳು ಚಂದದ ಚೆಲುವೆ ಮಗಳಿದ್ದಳು. ಅವಳ ಹೆಸರು ಉಷಾ (Usha). ಜಗತ್ತಿನಲ್ಲೇ ಅತ್ಯಂತ ಚೆಲುವೆ. ಅವಳಿಗೆ ಪ್ರತಿದಿನವೂ ಒಂದು ಕನಸು. ಕನಸಿನಲ್ಲಿ ಒಬ್ಬ ರಾಜಕುಮಾರ. ಅತ್ಯಂತ ಚೆಲುವೆ. ಆದರೆ ಅವನನ್ನೇ ಮದುವೆಯಾಗಬೇಕು ಎಂಬ ಆಸೆ ಉಷಾಗೆ.

Best Dads: ಅಪ್ಪ ಅಂದ್ರೆ ಹೀಗಿರಬೇಕು ಅನ್ನಿಸಿಕೊಳ್ಳೋ ರಾಶಿಯವರಿವರು!

ಅವಳು ತನ್ನ ಸಖಿ ಚಿತ್ರಲೇಖೆಗೆ (Chitralekha) ಆ ರಾಜಕುಮಾರನ ಚಿತ್ರ ಬಿಡಿಸಲು ಹೇಳಿದಳು. ಅವಳು ಉಷೆ ನೀಡಿದ ಲಕ್ಷಣಗಳನ್ನು ಅನುಸರಿಸಿ ಚಿತ್ರ ಬಿಡಿಸಿದಳು. ಆಕೆ ಮೊದಲು ಬಿಡಿಸಿದ್ದು ಕೃಷ್ಣನ ಚಿತ್ರ. ಅವನಲ್ಲ, ಆದರೆ ಹಾಗೇ ಇದ್ದಾನೆ ಎಂದಳು ಉಷಾ. ಚಿತ್ರಲೇಖೆ ಈಗ ಕೃಷ್ಣನ ಮಗ ಪ್ರದ್ಯುಮ್ನನ ಚಿತ್ರ ಬಿಡಿಸಿದಳು. ಇವನೂ ಅಲ್ಲ, ಆದರೆ ಇವನ ಹಾಗೇ ಇದ್ದಾನೆ ಎಂದಳು ಉಷೆ. ಈಗ ಪ್ರದ್ಯುಮ್ನನ (Pradyumna) ಮಗ ಅನಿರುದ್ಧನ (Aniruddha) ಚಿತ್ರ ಬಿಡಿಸಿದಳು ಚಿತ್ರಲೇಖೆ. ಹಾಂ ಇವನೇ ಇವನೇ ಎಂದಳು.

ಚಿತ್ರಲೇಖೆ ರಾಕ್ಷಸರ ಸಕಲ ಮಾಯಾವಿದ್ಯೆಗಳನ್ನು ಬಲ್ಲವಳಾಗಿದ್ದಳು. ಉಷೆಯ ಆದೇಶದಂತೆ ಚಿತ್ರಲೇಖೆ ತನ್ನ ಮಾಯಾವಿದ್ಯೆಯನ್ನು ಬಳಸಿ, ಮಾಯವಾಗಿ ಸಾಗಿ, ದ್ವಾರಕೆಗೆ ಹೋಗಿ, ಅನಿರುದ್ಧನ ಅಂತಃಪುರದಿಂದ ಅವನನ್ನು ಮಂಚ ಸಮೇತ ಎತ್ತಿಕೊಂಡು ಬಂದು ಉಷೆಯ ಅಂತಃಪುರದಲ್ಲಿ ಇಳಿಸಿದಳು.

ಅನಿರುದ್ಧ ಎಚ್ಚರವಾಗಿ ನೋಡುತ್ತಾನೆ- ತಾನು ಬೇರೊಂದು ಅಂತಃಪುರದಲ್ಲಿದ್ದೇನೆ. ಪಕ್ಕದಲ್ಲಿ ಸುಂದರಿ ಉಷಾ. ಮೊದಲ ನೋಟದಲ್ಲೇ ಪ್ರೇಮಾಂಕುರವಾಯಿತು. ಇಬ್ಬರೂ ಪರಿಚಯ ಮಾಡಿಕೊಂಡರು. ಇಬ್ಬರೂ ಆನಂದವಾಗಿದ್ದರು.

ಇದು ಹೇಗೋ ಉಷೆಯ ತಂದೆ ಬಾಣಾಸುರನಿಗೆ ಗೊತ್ತಾಯಿತು. ಅವನು ಸಿಟ್ಟಾಗಿ, ಅನಿರುದ್ಧನನ್ನು ಎಳೆದುಕೊಂಡು ಹೋಗಿ ಜೈಲಿಗೆ ಹಾಕಿದ. ಸುತ್ತ ಸಾವಿರಾರು ವಿಷಸರ್ಪಗಳು. ಪಾರಾಗದಂತೆ ದಿಗ್ಬಂಧನ ಹಾಕಿದ.

Mythological Story: ಶಿವನಿಂದ ಪಡೆದ ಪಾಶುಪತಾಸ್ತ್ರವನ್ನು ಅರ್ಜುನ ಬಳಸಿದ್ದು ಯಾರ ಮೇಲೆ?

ಸುದ್ದಿ ದ್ವಾರಕೆಗೆ ಮುಟ್ಟಿತು. ಶ್ರೀಕೃಷ್ಣ (Sri Krishna) ಬಲರಾಮರು ಮೊಮ್ಮಗ ಅನಿರುದ್ಧನನ್ನು ಬಿಡಿಸಲು ಸೈನ್ಯದ ಸಹಿತ ಬಾಣಾಸುರನನ್ನು ಎದುರಿಸಲು ಬಂದರು.

ಯುದ್ಧ ಶುರುವಾಯಿತು. ವರದ ಪ್ರಕಾರ ಬಾಣಾಸುರ ಚಿರಂಜೀವಿ, ಅಜೇಯ, ಕೊಲ್ಲಲು ಸಾಧ್ಯವಿಲ್ಲ. ಆದರೆ ಶ್ರೀಕೃಷ್ಣ ಆತನ ಒಂದೊಂದೇ ಕೈಗಳನ್ನು ಕಡಿದು ಆಹುತಿ ಕೊಡುತ್ತಾ ಬಂದ. ಒಂಬೈನೂರು ತೊಂಬತ್ತೆಂಟು ಕೈಗಳನ್ನೂ ಕಡಿದ. ಇನ್ನೆರಡು ಕೈಗಳನ್ನು ಕಡಿದರೆ ತಾನು ವಿಕಲಾಂಗನಾಗುತ್ತೇನೆ ಎಂದು ಬಾಣಾಸುರನಿಗೆ ಗೊತ್ತಾಯಿತು. ಅವನು ಶಿವನಿಗೆ ಮೊರೆಯಿಟ್ಟ. ಶಿವ ಪ್ರತ್ಯಕ್ಷನಾದ. ರಕ್ಷಿಸುತ್ತೇನೆ ಎಂದು ಅಭಯ ಕೊಟ್ಟಿದ್ದನಲ್ಲವೇ. ಬಾಣಾಸುರನ ಪರವಾಗಿ ಶ್ರೀಕೃಷ್ಣನನ್ನು ಎದುರಿಸಿ ಯುದ್ಧ ಮಾಡಲು ಶುರುಮಾಡಿದ. ಯುದ್ಧ ತಾರಕಕ್ಕೆ ಹೋಯಿತು.

Mythology: ಶ್ರೀಕೃಷ್ಣನಿಗೆ ಎಷ್ಟು ಶಾಪಗಳಿದ್ದವು ನಿಮಗೆ ಗೊತ್ತೆ?

ಇವರಿಬ್ಬರ ಯುದ್ಧದ ಬಿರುಸಿಗೆ ಭೂಮಿಯೇ ನಾಶವಾಗಬೇಕು ಎಂಬ ಹಂತದಲ್ಲಿ ನಾರದಾದಿ ಋಷಿಗಳು, ದೇವತೆಗಳು ಬಂದು ತಡೆದರು.

ಬಾಣಾಸುರನಿಗೆ ತನ್ನ ಮಿತಿ ಅರ್ಥವಾಗಿತ್ತು. ತಾನು ಚಿರಂಜೀವಿಯಾಗಿರುವುದು ದೇವತೆಗಳ ಆಶೀರ್ವಾದದಿಂದ ಹೊರತು ಬೇರೇನಲ್ಲ ಎಂದು ಅರ್ಥ ಮಾಡಿಕೊಂಡ. ಅವನು ಉಷೆಯನ್ನು ಅನಿರುದ್ಧನಿಗೆ ನೀಡಿ ಮದುವೆ ಮಾಡಿದ.


 

Follow Us:
Download App:
  • android
  • ios