Asianet Suvarna News Asianet Suvarna News

Shani dev ವಿಗ್ರಹ ಮನೆಗಳಲ್ಲಿಡುವುದಿಲ್ಲ ಏಕೆ?

ಶನಿಯನ್ನು ಬಹುತೇಕ ಎಲ್ಲ ಹಿಂದೂಗಳು ಆರಾಧಿಸುತ್ತಾರೆ. ಆದರೆ, ಯಾರು ಕೂಡಾ ಮನೆಯಲ್ಲಿ ಶನಿಯ ವಿಗ್ರಹವಿಟ್ಟು ಪೂಜಿಸುವುದಿಲ್ಲ. ಇದಕ್ಕೇನು ಕಾರಣ? 

Why cannot you keep Shani Devs idol or picture at home skr
Author
First Published Dec 18, 2022, 2:49 PM IST

ಹಿಂದೂ ಧರ್ಮದಲ್ಲಿ ಪೂಜೆಗೆ ಸಂಬಂಧಿಸಿದ ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳಿವೆ. ಈ ಸಂಪ್ರದಾಯಗಳ ಹಿಂದೆ ಕೆಲವು ಧಾರ್ಮಿಕ, ವೈಜ್ಞಾನಿಕ ಮತ್ತು ಮಾನಸಿಕ ಕಾರಣಗಳು ಅಡಗಿವೆ. ಆದರೆ ಈ ಕಾರಣಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ.

ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಮಾನವ ಜೀವನದ ಮೇಲೆ ವ್ಯಾಪಕವಾದ ಪ್ರಭಾವವನ್ನು ಬೀರುತ್ತವೆ. ಅದಕ್ಕಾಗಿಯೇ ಗ್ರಹಗಳನ್ನು ದೇವತೆಗಳಾಗಿ ಪೂಜಿಸಲಾಗುತ್ತದೆ. ಪ್ರತಿಯೊಂದು ಗ್ರಹವು ನಮ್ಮ ಜೀವನದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಿದ್ದರೂ, ಶನಿಯು(SHani Dev) ಹೆಚ್ಚು ಪ್ರಭಾವ ಬೀರುತ್ತದೆ. ಶನಿಯನ್ನು ನ್ಯಾಯಾಧೀಶ ಎಂದೂ ಕರೆಯುತ್ತಾರೆ. ಅಂದರೆ ಶನಿದೇವನು ಮನುಷ್ಯರಿಗೆ ಅವರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಫಲವನ್ನು ನೀಡುತ್ತಾನೆ. ಸೂರ್ಯದೇವ, ದೇವಗುರು ಬೃಹಸ್ಪತಿ ಮುಂತಾದ ಗ್ರಹಗಳ ಚಿತ್ರಗಳು ಅಥವಾ ಪ್ರತಿಮೆಗಳು ಮನೆಗಳಲ್ಲಿ ಕಂಡುಬರುತ್ತವೆ, ಆದರೆ ಯಾರೂ ಶನಿದೇವನ ಪ್ರತಿಮೆ ಅಥವಾ ಚಿತ್ರವನ್ನು ಮನೆಯಲ್ಲಿ ಇಡುವುದಿಲ್ಲ. 

ಶನಿ ದೇವರನ್ನು ಸೂರ್ಯ(Sun) ಮತ್ತು ಛಾಯಾ ದೇವಿಯ ಮಗ ಎಂದು ಪರಿಗಣಿಸಲಾಗಿದೆ. ಅವರನ್ನೂ ಪೂಜಿಸಲಾಗುತ್ತದೆ, ಆದರೆ ಶನಿದೇವನ ವಿಗ್ರಹವನ್ನು ಯಾವಾಗಲೂ ದೇವಾಲಯಗಳಲ್ಲಿ ಮಾತ್ರ ಪೂಜಿಸಲಾಗುತ್ತದೆ ಎಂಬುದನ್ನು ನೀವು ಗಮನಿಸಿದ್ದೀರಾ? ಯಾರೂ ತಮ್ಮ ಮನೆಯಲ್ಲಿ ಶನಿದೇವನ ವಿಗ್ರಹವನ್ನು ತರುವುದಿಲ್ಲ ಮತ್ತು ಪೂಜೆ ಮಾಡುವಾಗ ಜನರು ಅವನ ಕಣ್ಣುಗಳನ್ನು ನೋಡುವುದಿಲ್ಲ. ಇದರ ಹಿಂದೆ ಹಲವು ಕಾರಣಗಳಿವೆ. ಈ ಕಾರಣಗಳ ಬಗ್ಗೆ ತಿಳಿಯೋಣ. 

Ramayana story: ವಾಲಿ ಸುಗ್ರೀವರ ನಡುವೆ ವೈರತ್ವ ಶುರುವಾಗಿದ್ದು ಏಕೆ?

ಧಾರ್ಮಿಕ ಕಾರಣ(relegious reason)
ಜನಪ್ರಿಯ ದಂತಕಥೆಯ ಪ್ರಕಾರ, ಶನಿ ದೇವನು ಚಿತ್ರರಥ ಗಂಧರ್ವನ ಮಗಳನ್ನು ಮದುವೆಯಾಗಿದ್ದಾನೆ, ಅವಳು ಸ್ವಭಾವತಃ ತುಂಬಾ ಕೋಪಿಷ್ಠಳು. ಒಮ್ಮೆ ಶನಿದೇವನ ಹೆಂಡತಿಯು ತನ್ನ ಋತುಮಾನದ ಸ್ನಾನದ ನಂತರ ಭೇಟಿಯಾಗುವ ಬಯಕೆಯಿಂದ ಅವನ ಬಳಿಗೆ ಹೋದಳು, ಆದರೆ ಆ ಸಮಯದಲ್ಲಿ ಶನಿದೇವನು ತಪಸ್ಸು ಮಾಡುತ್ತಿದ್ದನು. ಶನಿ ದೇವ ಕಣ್ಣು ತೆರೆಯುವ ಹೊತ್ತಿಗೆ ಅವನ ಪತ್ನಿಯ ತಾಳ್ಮೆ ಮುಗಿದಿತ್ತು. ಇದರಿಂದ ಕುಪಿತಗೊಂಡ ಶನಿದೇವನ ಪತ್ನಿ ಈತ ಏನೇ ನೋಡಿದರೂ ಅದಕ್ಕೆ ಏನಾದರೂ ಹಾನಿಯಾಗಲಿ ಎಂದು ಶಾಪ ನೀಡಿದಳು. ಇದೇ ಕಾರಣಕ್ಕೆ ಶನಿದೇವನ ಮೂರ್ತಿಯನ್ನು ಯಾರೂ ಮನೆಯಲ್ಲಿ ಇಡುವುದಿಲ್ಲ. ಮನೆಯಲ್ಲಿ ಶನಿದೇವನ ಚಿತ್ರವನ್ನು ಇಟ್ಟುಕೊಳ್ಳುವುದರಿಂದ, ಅವನ ಕಣ್ಣುಗಳು ಮನೆಯ ಸದಸ್ಯರ ಮೇಲೆ ಪದೇ ಪದೇ ಬೀಳುತ್ತವೆ, ಇದು ಅಶುಭವೆಂದು ಪರಿಗಣಿಸಲಾಗಿದೆ.
ಶನಿದೇವನನ್ನು ಮನೆಯಲ್ಲಿ ಇರಿಸುವುದರಿಂದ ಶನಿಯ ದೃಷ್ಟಿ ನೇರವಾಗಿ ಮನೆಮಂದಿಯ ಮೇಲೆ ಬೀಳುತ್ತದೆ. ಇದು ಅಶುಭ. ಆದ್ದರಿಂದ ಶನಿದೇವನ ವಿಗ್ರಹವನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ.

ವಾರ ಭವಿಷ್ಯ: ಈ ರಾಶಿಯ ಜೀವನದಲ್ಲಿ ಹೊಸ ಪ್ರೇಮಕತೆ ಆರಂಭ, ನಿಮಗೆ ಈ ವಾರ ಹೇಗಿರಲಿದೆ?

ಇದು ಜ್ಯೋತಿಷ್ಯ ಕಾರಣ(Astrological reason)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಕ್ರೂರ ಗ್ರಹ. ಮನೆಯಲ್ಲಿ ಶನಿದೇವನ ವಿಗ್ರಹ ಅಥವಾ ಚಿತ್ರವನ್ನು ಇಡುವುದರಿಂದ ನಕಾರಾತ್ಮಕತೆ ಹೆಚ್ಚಾಗುವ ಅಪಾಯವಿದೆ. ಮನೆಯಲ್ಲಿ ಹೆಚ್ಚು ನಕಾರಾತ್ಮಕತೆ ಇದ್ದರೆ, ಅದು ಅಲ್ಲಿ ವಾಸಿಸುವ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿ, ಜನರು ಮನೆಯಲ್ಲಿ ಶನಿದೇವನ ವಿಗ್ರಹ ಅಥವಾ ಚಿತ್ರವನ್ನು ಇಡುವುದಿಲ್ಲ. ಇದರೊಂದಿಗೆ ಮನೆಯಲ್ಲಿ ಶನಿದೇವನ ಚಿತ್ರವಿದ್ದರೆ ಕೆಲವೊಂದು ನಿಯಮಗಳನ್ನು ವಿಶೇಷವಾಗಿ ಪಾಲಿಸಬೇಕಾಗುತ್ತದೆ. ಇದು ಸಾಮಾನ್ಯರಿಗೆ ಸಾಧ್ಯವಿಲ್ಲ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios