Hindu Tradition: ಉಡುಗೊರೆ ಹಣದೊಂದಿಗೆ ಹೆಚ್ಚುವರಿ 1 ರುಪಾಯಿ ನೀಡುವುದೇಕೆ?
ಸಾಮಾನ್ಯವಾಗಿ ಮದುವೆ ಮುಂಜಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ಮುಯ್ಯಿ ಕೊಡುವಾಗ, ದೇವರಿಗೆ ಕಾಣಿಕೆ ಕೊಡುವಾಗ 1 ರೂ.ವನ್ನು ಸೇರಿಸಿ ಕೊಡಲಾಗುತ್ತದೆ. ಉದಾಹರಣೆಗೆ 51, 101, 501, 1001 ಹೀಗೆ.. ಈ 1 ರೂಪಾಯಿಯ ಮಹತ್ವವೇನು?
ಮದುವೆ, ಮುಂಡನ ಮುಂತಾದ ಯಾವುದೇ ಶುಭ ಕಾರ್ಯಕ್ರಮಗಳಿಗೆ ಹೋದಾಗಲೂ ನಾವು ಉಡುಗೊರೆಯಾಗಿ ಹಣ ನೀಡುತ್ತೇವೆ. ಇಂಥ ಸಂದರ್ಭದಲ್ಲಿ ರೌಂಡ್ ಫಿಗರ್ ಹಣ ನೀಡದೆ, 1 ರುಪಾಯಿ ಸೇರಿಸಿ ಕೊಡಲಾಗುತ್ತದೆ. ಉದಾಹರಣೆಗೆ 51, 101, 501, 1001 ಹೀಗೆ.. ಕಾಣಿಕೆಯಾಗಿ ನೀಡುವಾಗಲೂ ಹೀಗೆ 1 ರುಪಾಯಿ ಸೇರಿಸಿ ಕೊಡುತ್ತೇವೆ. ಹೀಗೆ ಮುಯ್ಯಿ ನೀಡಿದ, ದೇಣಿಗೆ ನೀಡಿದ ಹಣದಲ್ಲಿ ಒಂದು ರೂಪಾಯಿಯನ್ನು ಏಕೆ ಹೆಚ್ಚುವರಿ ಇರಿಸಲಾಗುತ್ತದೆ ಎಂಬುದರ ಹಿಂದೆ ನಮ್ಮ ಪೂರ್ವಜರ ಆಳವಾದ ಚಿಂತನೆಯು ಅಡಗಿದೆ. ಈ ಸಂಪ್ರದಾಯದ ಹಿಂದಿನ ಗುಪ್ತ ಕಾರಣವನ್ನು ತಿಳಿಯೋಣ.
50 ಅಥವಾ 100 ಅನ್ನು ಮುಯ್ಯಿಯಾಗಿ ನೀಡಿದಾಗ, ಈ ಸಂಖ್ಯೆಗಳನ್ನು ಹಲವಾರು ಅಂಕೆಗಳಿಂದ ಭಾಗಿಸಲಾಗುತ್ತದೆ. ಅಂದರೆ ಅವುಗಳನ್ನು ಭಾಗಿಸಬಹುದು. ಮತ್ತು 51 ಅಥವಾ 101 ರಂತೆ 1 ರೂಪಾಯಿಯನ್ನು ಹೆಚ್ಚುವರಿಯಾಗಿ ಇರಿಸಿದಾಗ ಈ ಸಂಖ್ಯೆಯು ಅವಿಭಜಿತವಾಗುತ್ತದೆ. ಅಂದರೆ ಅದನ್ನು ಯಾವುದೇ ಅಂಕೆಯಿಂದ ಭಾಗಿಸಲಾಗುವುದಿಲ್ಲ. ಇದರ ಮಾನಸಿಕ ಅಂಶವೆಂದರೆ ಮುಯ್ಯಿಯಲ್ಲಿ ನೀಡಿದ ಹಣದಂತೆ, ನಮ್ಮ ಸಂಬಂಧವು ಶಾಶ್ವತವಾಗಿ ಉಳಿಯುತ್ತದೆ, ಅದು ವಿಭಜನೆಯಾಗಬಾರದು.
ಮತ್ತೊಂದು ಕಾರಣವೂ ಉಂಟು..
51 ಅಥವಾ 101 ರೂಪಾಯಿಗಳನ್ನು ಉಡುಗೊರೆ ಎಂದು ನೀಡುವುದರ ಹಿಂದೆ ಇನ್ನೊಂದು ಮಾನಸಿಕ ಕಾರಣವೂ ಇದೆ. ಇದರ ಪ್ರಕಾರ, 50 ಅಥವಾ 100 ರೂಪಾಯಿಗಳ ಕೊನೆಯ ಅಂಕಿಯು ಶೂನ್ಯವಾಗಿರುತ್ತದೆ, ಇದು ಮುಕ್ತಾಯದ ಸೂಚಕವಾಗಿದೆ. ಆದರೆ ಇದಕ್ಕೆ 1 ರೂಪಾಯಿಯನ್ನು ಸೇರಿಸಿದರೆ, ಅದು 51 ಮತ್ತು 101 ಆಗುತ್ತದೆ, ಅದರ ಕೊನೆಯ ಅಂಕೆ 1 ಇದು ಒಗ್ಗಟ್ಟಿನ ಸಂಕೇತವಾಗಿದೆ. ಸಂಬಂಧಗಳಲ್ಲಿ ಸದಾ ಏಕತೆ ಇರಬೇಕು, ಅದರಲ್ಲಿ ಶೂನ್ಯತೆ ಇರಬಾರದು ಎಂಬುದು ಮಾನಸಿಕ ಚಿಂತನೆ.
ಸರಳವಾಗಿ ಹೇಳುವುದಾದರೆ 0 ಎಂಬುದು ಮುಕ್ತಾಯ ಸೂಚಕವಾದರೆ, 1 ಆರಂಭ ಸೂಚಕವಾಗಿದೆ. ನಿರಂತರತೆಯ ಸೂಚಕವಾಗಿದೆ.
Astrological Remedies: ಸುರಕ್ಷಿತ ಹೆರಿಗೆಗಾಗಿ ಈ ಜ್ಯೋತಿಷ್ಯ ಕ್ರಮಗಳನ್ನು ಅನುಸರಿಸಿ..
ಒಂದು ರೀತಿಯ ಹೂಡಿಕೆ
ಶುಭ ಸಮಾರಂಭಗಳಲ್ಲಿ ಉಡುಗೊರೆ ಎಂದು ನೀಡಿದ ಹಣವು ಒಂದು ರೀತಿಯ ಹೂಡಿಕೆಯಾಗಿದೆ. ನಮ್ಮ ಪರಿಚಯಸ್ಥರಿಗೆ ಅಥವಾ ಸಂಬಂಧಿಕರಿಗೆ ಯಾವುದೇ ಶುಭ ಸಂದರ್ಭ ಬಂದಾಗ, ನಮ್ಮ ಶಕ್ತಿಗೆ ಅನುಗುಣವಾಗಿ, ನಾವು ಅವರಿಗೆ ಉಡುಗೊರೆಗಳನ್ನು ಅಥವಾ ನಗದು ಹಣವನ್ನು ನೀಡುತ್ತೇವೆ. ನಮ್ಮ ಕುಟುಂಬದಲ್ಲಿ ಮಂಗಳಕರ ಸಂದರ್ಭ ಬಂದಾಗ, ಈ ಉಡುಗೊರೆಗಳು ಮತ್ತು ಹಣವನ್ನು ಸ್ವಲ್ಪ ಹೆಚ್ಚಳದೊಂದಿಗೆ ನಮಗೆ ಹಿಂತಿರುಗಿಸಲಾಗುತ್ತದೆ, ಅದು ಆ ಸಮಯದಲ್ಲಿ ನಮಗೆ ತುಂಬಾ ಉಪಯುಕ್ತವಾಗಿರುತ್ತದೆ. ಈ ರೀತಿಯಾಗಿ ನೋಡಿದಾಗ ಉಡುಗೊರೆ ನೀಡುವುದು ಕೂಡಾ ಒಂದು ರೀತಿಯ ಹೂಡಿಕೆಯಾಗಿದೆ.
ನಾಣ್ಯದ ಮಹತ್ವ
ಸಾಮಾನ್ಯವಾಗಿ ಹಣವನ್ನು ನೋಟುಗಳಲ್ಲಿ ನೀಡಲಾಗುತ್ತದೆ. ಆದರೆ ನಾಣ್ಯವು ಭೂಮಿಯೊಡಲಿಂದ ಬಂದ ಲೋಹವಾಗಿದ್ದು, ಇದು ಲಕ್ಷ್ಮಿ ದೇವಿಯ ರೂಪಕವಾಗಿದೆ. ಹಾಗಾಗಿ, ನಾಣ್ಯವನ್ನು ನೋಟಿನ ಜೊತೆಗೆ ನೀಡಲಾಗುತ್ತದೆ.
Shukra Gochar: ಶುಕ್ರನಿಂದ ಈ ರಾಶಿಗಳ ಬಾಳಾಗಲಿದೆ ಬಂಗಾರ..
ಶೂನ್ಯವಾಗದಂತೆ ತಡೆ
ಇನ್ನು ಯಾವುದೇ ಕಾರಣಕ್ಕಾಗಿ ದಿನಸಿ ಮತ್ತೊಂದಕ್ಕೆ ಹಣ ತೆಗೆದಿಡುವಾಗ, 100, 500 ಹೀಗೆ ತೆಗೆದಿಡುತ್ತೇವೆ. ಆಗ ಉಳಿವ 1 ರುಪಾಯಿ ಮತ್ತಷ್ಟು ಕೂಡಿಡಲು, ಬೆಳವಣಿಗೆಗೆ ಬೀಜದಂತೆ ಕೆಲಸ ಮಾಡುತ್ತದೆ. ಎಂದಿಗೂ ಬೊಕ್ಕಸ ಸಂಪೂರ್ಣ ಬರಿದಾಗದಂತೆ ಸಂದೇಶ ಸಾರುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.