ಮೂದೇವಿ ಎಂದು ಬೈಯ್ಯೋದು ಕೇಳಿರ್ತೀರಿ, ಇಷ್ಟಕ್ಕೂ ಈಕೆ ಯಾರು ಗೊತ್ತಾ?

ಹಳೆಯ ಕಾಲದ ಮೂವಿಗಳನ್ನು ನೋಡಿದಾಗ ಅತ್ತೆ ಸೊಸೆಗೆ ಮೂದೇವಿ ಎನ್ನುತ್ತಾ ತಲೆಗೆ ಕುಕ್ಕುವುದನ್ನು ನೋಡಿರಬಹುದು. ಈ ಮೂದೇವಿ ಅಂದ್ರೆ ಯಾರು? ಈ ಬೈಗುಳದ ಅರ್ಥವೇನು ಯೋಚಿಸಿದ್ದೀರಾ?

Who is Moodevi why she is regarded as goddess of negative vibes skr

'ಅಯ್ಯೋ ಮೂದೇವಿ' ಅಂತ ಮಾತಿಗೊಮ್ಮೆ ಬೈಯ್ಯೋದು ಕೇಳಿರ್ತೀರಿ. ಹಳೆಯ ಚಿತ್ರಗಳಲ್ಲಂತೂ ಅತ್ತೆ ಸೊಸೆಯ ತಲೆಗೆ ಪದೇ ಪದೇ ಮೊಟಕಿ ಮೂದೇವಿ ಎಂದು ಬಯ್ಯೋದು ಕೂಡಾ ನೋಡಿರ್ತೀರಿ. ಆದ್ರೆ ಯಾವತ್ತಾದ್ರೂ ಈ ಮೂದೇವಿ ಯಾರು? ಮೂದೇವಿ ಅನ್ನೋದೇಕೆ ಕೆಟ್ಟ ಪದ ಅಂತ ಯೋಚ್ಸಿದ್ದೀರಾ?

ಈ ಮೂದೇವಿ ಅಂದ್ರೆ ಅದು ದೇವತೆಯೊಬ್ಬಳ ಹೆಸರು ಎಂದ್ರೆ ನಿಮಗೆ ಅಚ್ಚರಿಯಾಗ್ಬಹುದು. ಹೌದು, ಮೂದೇವಿ(Goddess Moodevi) ಅಂದ್ರೆ ಸೋಮಾರಿತನ ಮತ್ತು ದುರದೃಷ್ಣಕ್ಕೆ ಹೆಸರಾದ ಜೇಷ್ಟಾ ದೇವಿ ಅನ್ನೊ ಒಬ್ಬ ದೇವತೆ. ಆಕೆ ಎಲ್ಲ ದೇವತೆಗಳಿಗಿಂತ ದೊಡ್ಡವಳಾದ ಕಾರಣಕ್ಕೆ ಜೇಷ್ಠಾ ಎಂಬ ಹೆಸರಿದೆ. ಮೊದಲ ದೇವಿಯಾದ್ದರಿಂದ ಕನ್ನಡದಲ್ಲಿ ಮೂದೇವಿಯಾದಳು. ಈಕೆಗೆ ಇನ್ನೊಂದು ಹೆಸರಿದೆ. ಅದನ್ನು ಹೇಳಿದಾಗ, ಬಹುತೇಕರಿಗೆ ಈಕೆಯ ಗುರುತು ಸಿಕ್ಕಬಹುದು. ಆ ಹೆಸರೇ ಅಲಕ್ಷ್ಮೀ. 

ಮೂದೇವಿಯ ಹುಟ್ಟು(Birth of Moodevi)
ವಿಶೇಷವಾಗಿ ಪುರಾಣದಲ್ಲಿ ಜ್ಯೇಷ್ಠಾದೇವಿಯ ಬಗ್ಗೆ ಅನೇಕ ಸ್ಪಷ್ಟವಾದ ಉಲ್ಲೇಖಗಳಿವೆ. ವಾಸ್ತವವಾಗಿ ಭಾಗವತ ಪುರಾಣದ ಪ್ರಕಾರ, ವಿಷ್ಣು ಪುರಾಣ ಮತ್ತು ಮಹಾಭಾರತದಲ್ಲಿನ ಕೆಲವು ಸನ್ನಿವೇಶವು ಸಮುದ್ರ ಮಂಥನ ಸಮಯದಲ್ಲಿ ಹೊರಹೊಮ್ಮಿದ ವಿಷದ ಮೂಲಕ ಆಕೆ ಜನ್ಮ ತಳೆದಳೆಂದು ಹೇಳುತ್ತವೆ. ಇದೇ ಮಂಥನದಲ್ಲಿ ಅಮೃತದಿಂದ ಹೊಮ್ಮಿದವಳು ಲಕ್ಷ್ಮೀ- ಆಕೆ ಅದೃಷ್ಟದ ದೇವತೆ. 

ಈ ನಾಲ್ಕು ರಾಶಿಯವರು ಓದು, ಕೆಲಸಕ್ಕಾಗಿ ಪ್ರೀತಿಯನ್ನೇ ತ್ಯಾಗ ಮಾಡಬಲ್ಲರು!

ಜೇಷ್ಠಾ(Jyesta Devi) ನೋಟದಲ್ಲಿ ಕುರೂಪಿಯಾಗಿದ್ದಳು, ಅವಳು ಲಕ್ಷ್ಮಿಗೆ ನಿಖರವಾಗಿ ವಿರುದ್ಧವಾಗಿದ್ದಳು. ಜೇಷ್ಠಾ ಅಶುಭ(inauspecious) ವಸ್ತುಗಳ ದೇವತೆ, ಬಡತನ, ದುಃಖ ಮತ್ತು ದುರದೃಷ್ಟದ ಅಧಿದೇವತೆ. ಆಕೆಯ ಕೊಳಕು ನೋಟವು ಎಲ್ಲರನ್ನೂ ಹಿಮ್ಮೆಟ್ಟಿಸುತ್ತದೆ ಯಾರೂ ಅವಳೊಂದಿಗೆ ಒಂದಾಗಲು ಬಯಸಲಿಲ್ಲ. ಇದನ್ನು ನೋಡಿದ ನಂತರವೂ ಋಷಿ ದುಸ್ಸಾಹನು ಮುಂದೆ ಬಂದು ಅವಳನ್ನು ಮದುವೆಯಾದನು. ಆದರೆ ಹೊಸದಾಗಿ ಮದುವೆಯಾದ ಹೆಂಡತಿಯನ್ನು ತನ್ನ ಹಳ್ಳಿಗೆ ಕರೆದುಕೊಂಡು ಹೋಗುವಾಗ ಅವನು ಜ್ಯೇಷ್ಠಾದೇವಿಯ ಕೆಲವು ವಿಚಿತ್ರ ಅಭ್ಯಾಸವನ್ನು ಗಮನಿಸಿದನು. ಆಕೆ ಪ್ರಶಂಸೆ ಮತ್ತು ಪ್ರಾರ್ಥನೆಗಳು ಬಂದಾಗ, ಭಗವಾನ್ ಶಿವ(Lord Shiva) ಅಥವಾ ವಿಷ್ಣುವಿನ ನಾಮ ಬಂದಾಗ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುತ್ತಿದ್ದಳು. ಏಕೆಂದರೆ ಅವಳು ಮಂಗಳಕರ ಸಂಗತಿಗಳನ್ನು ತಡೆದುಕೊಳ್ಳುವುದಿಲ್ಲ.

ಇದನ್ನು ತಿಳಿದ ಋಷಿ ದುಸ್ಸಾಹನು ಅವಳನ್ನು ತೊರೆದನು, ಇದು ಜೇಷ್ಠಳನ್ನು ಬಹಳ ಖಿನ್ನಳನ್ನಾಗಿ ಮಾಡಿತು. ತನ್ನನ್ನು ಎಲ್ಲರೂ ಕಡೆಗಣಿಸುತ್ತಾರೆಂಬ ಅಳಲನ್ನು ತೋಡಿಕೊಂಡು ಆಕೆ ವಿಷ್ಣು(Lord Vishnu)ವಿನ ಬಳಿಗೆ ಹೋದಳು. ಆಗ ವಿಷ್ಣುವು ಆಕೆಯನ್ನು ಸಮಾಧಾನ ಮಾಡುತ್ತಾ, ಯಾರೂ ಬಡತನ, ದುಃಖ, ಅಶುಭಗಳನ್ನು ಬಯಸುವುದಿಲ್ಲವಾದ್ದರಿಂದ ಮೂದೇವಿಯನ್ನು ಮನೆಯಿಂದ ದೂರವಿಡುವ ಸಲುವಾಗಿಯೇ ಮನೆಯ ಮಹಿಳೆಯರು ಅವಳನ್ನು ಪೂಜಿಸುತ್ತಾರೆ. ಈ ಮೂಲಕ ಆಕೆಯನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ ಎಂದು ಭಗವಾನ್ ವಿಷ್ಣುವು ಅವಳಿಗೆ ಭರವಸೆ ನೀಡಿದನು.

ಧನಲಾಭಕ್ಕಾಗಿ ಈ ರೀತಿಯ ರುದ್ರಾಕ್ಷಿ ಧರಿಸಿ

ಮತ್ತೊಂದು ಕತೆಯಂತೆ, ವಿಷ್ಣುವು ಆಕೆಯನ್ನು ಕೆಟ್ಟದ್ದನ್ನು ಮಾಡಿದರ ಫಲವೇನಿರುತ್ತದೆ ಎಂಬುದನ್ನು ಲೋಕಕ್ಕೆ ತೋರಿಸುವ ಸಲುವಾಗಿ ಸೃಷ್ಟಿಸಿದನು ಎನ್ನಲಾಗುತ್ತದೆ. 10ನೇ ಶತಮಾನದವರೆಗೂ ಉತ್ತರ ಭಾರತದಲ್ಲಿ ಜೇಷ್ಠಾ ದೇವಿಯೆಂದೂ, ದಕ್ಷಿಣದಲ್ಲಿ ಮೂದೇವಿಯೆಂದೂ ಬಹಳ ಗೌರವದಿಂದಲೇ ಆಕೆಯನ್ನು ಪೂಜಿಸಲಾಗುತ್ತಿತ್ತು. ಪೂಜೆಯಲ್ಲಿ ದೂರವಿರಲು ಆಕೆಯಲ್ಲಿ ಕೋರಲಾಗುತ್ತಿತ್ತು. ತಮಿಳುನಾಡಿನ ತಿರುಚಿ ಜಿಲ್ಲೆಯಲ್ಲಿರುವ ತಿರುವನೈಕ್ಕೊವಿಲ್ ದೇವಾಲಯದಲ್ಲಿ ಜೇಷ್ಠಾ ದೇವಿಗಾಗಿ ಇರುವ ದೇವಾಲಯವು ಪ್ರಸಿದ್ಧವಾಗಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios