Asianet Suvarna News Asianet Suvarna News

ಜ.10ರಂದು ಅಂಗಾರಕ ಸಂಕಷ್ಟಿ ಚತುರ್ಥಿ, ವ್ರತ ಆಚರಣೆ ಹೇಗೆ, ಪ್ರಯೋಜನವೇನು?

ನಾಳೆ ಅಂದರೆ ಜನವರಿ 10ರಂದು ಅಂಗಾರಕ ಸಂಕಷ್ಟ ಚತುರ್ಥಿ. ಗಣೇಶ ಭಕ್ತರಿಗೆ ವಿಶೇಷ ದಿನ. ಈ ದಿನದ ಮಹತ್ವವೇನು, ಸಂಕಷ್ಟಿ ಆಚರಿಸುವುದು ಹೇಗೆ, ಪ್ರಯೋಜನಗಳೇನು ಎಲ್ಲವನ್ನೂ ತಿಳಿಸುತ್ತೇವೆ.

Angarak Sankashti Chaturthi 2023 Date Importance Mantra How to do Ganesh Fasting on Tuesday skr
Author
First Published Jan 9, 2023, 3:58 PM IST

ಅಂಗಾರಕ ಗಣೇಶ ಚತುರ್ಥಿ ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್‌ನಲ್ಲಿ ಗಣೇಶನಿಗೆ ಸಮರ್ಪಿತವಾದ ಮಂಗಳಕರ ದಿನವಾಗಿದೆ. ಅಂಗಾರಿಕಾ ಗಣೇಶ ಚತುರ್ಥಿ 2023ರ ದಿನಾಂಕ ಜನವರಿ 10. ಮಾಸಿಕ ಸಂಕಷ್ಟಿ ಚತುರ್ಥಿ ಮಂಗಳವಾರದಂದು ಬಂದಾಗ ಅಂಗಾರಿಕಾ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಗಣಪತಿ ಭಕ್ತರಿಗೆ ಅತ್ಯಂತ ಮಂಗಳಕರ ಮತ್ತು ಹೆಚ್ಚಿನ ಪ್ರಾಮುಖ್ಯತೆಯ ದಿನ ಎಂದು ಪರಿಗಣಿಸಲಾಗುತ್ತದೆ. ಸಂಕಷ್ಟಿ ಚತುರ್ಥಿ ವ್ರತವನ್ನು ಕೃಷ್ಣ ಪಕ್ಷದ ನಾಲ್ಕನೇ ದಿನದಂದು ಅಥವಾ ಹುಣ್ಣಿಮೆಯ ನಂತರ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ.

ಅಂಗಾರಕ, ಅಥವಾ ಅಂಗಾರಿಕಾ ಎಂದರೆ ಬೆಂಕಿ ಮತ್ತು ಈ ಹೆಸರು ಏಕೆಂದರೆ ಮಂಗಳವಾರವನ್ನು ಯುದ್ಧ ತಂದಿಡುವಂಥ ಕೆಂಪು ಬಣ್ಣದ ಮಂಗಳ ಗ್ರಹವು ನಿಯಂತ್ರಿಸುತ್ತದೆ. ಅಂಗಾರಕ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ಮಾಡುವ ಉಪವಾಸವು ಪುಣ್ಯದಾಯಕವಾಗಿದೆ. ಇದು ಆಸೆಗಳನ್ನು ಪೂರೈಸಲು ಮತ್ತು ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ದಿನದ ಪ್ರಾರ್ಥನೆಗಳು ಮತ್ತು ಧ್ಯಾನವು ಭಕ್ತನಿಗೆ ಅಜ್ಞಾನವನ್ನು ತೊಡೆದುಹಾಕಲು ಮತ್ತು ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ.
ಉಪವಾಸ ಮುರಿಯುವ ಸಮಯ
ಜನವರಿ 10, 2023 ಚಂದ್ರೋದಯ ಸಮಯ ರಾತ್ರಿ 9:06 ಕ್ಕೆ.

ಅಂಗಾರಕಿ ಸಂಕಷ್ಟ ಚತುರ್ಥಿ ಮಂತ್ರ
'ಓಂ ಚಂದ್ರಚೂಡಮಾನ್ಯೇ ನಮಃ'

Makar Sankranti 2023: ಸೂರ್ಯನಂತೆ ಹೊಳೆವ 4 ರಾಶಿಗಳ ಅದೃಷ್ಟ

ಅಂಗಾರಕ ಚತುರ್ಥಿಯ ಮಹತ್ವ 
ಮತ್ಸ್ಯ ಪುರಾಣ, ನಾರದ ಪುರಾಣ, ಗಣೇಶ ಪುರಾಣ, ನರಸಿಂಹ ಪುರಾಣ ಮತ್ತು ಭವಿಷ್ಯ ಪುರಾಣಗಳಲ್ಲಿ ಅಂಗಾರಕಿ ಸಂಕಷ್ಟಿಯ ಮಹತ್ವವನ್ನು ಹೇಳಲಾಗಿದೆ. ಈ ಸಂಕಷ್ಟಿ ವ್ರತ ಆಚರಣೆಯ ಪ್ರಾಮುಖ್ಯತೆಯನ್ನು ಶ್ರೀಕೃಷ್ಣನು ಪಾಂಡವರಲ್ಲಿ ಹಿರಿಯನಾದ ಯುಧಿಷ್ಟಿರನಿಗೆ ವಿವರಿಸಿದ ಉಲ್ಲೇಖ ಕೂಡಾ ಇದೆ..  ಋಷಿ ವ್ಯಾಸರ ಪ್ರಕಾರ, ಅಂಗಾರಕಿ ಚತುರ್ಥಿಯಂದು ಪೂಜೆ, ಪ್ರಾರ್ಥನೆ, ಜಪ ಮತ್ತು ದಾನ ಮಾಡುವವರು ಶಾಂತಿ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲ್ಪಡುತ್ತಾರೆ. ಅವರು ಎಂದಿಗೂ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಈ ದಿನದಂದು ಮಾಡುವ ಪೂಜೆಯ ಶಕ್ತಿಯು ಸಾಮಾನ್ಯ ದಿನಗಳಲ್ಲಿ ಮಾಡುವ ಪೂಜೆಗಿಂತ 10 ಲಕ್ಷ ಪಟ್ಟು ಬಲವಾಗಿರುತ್ತದೆ. ಹೀಗಾಗಿ ಪ್ರಯೋಜನಗಳೂ ಬಹುವಿಧ. 

ಅಂಗಾರಕ ಚತುರ್ಥಿ ಆಚರಣೆ ಫಲಗಳು
ವ್ರತವನ್ನು ಆಚರಿಸುವುದರಿಂದ ಸಾಂಸಾರಿಕ ಪ್ರಗತಿ, ಸಂತೋಷ ಮತ್ತು ಆಸೆಗಳ ಈಡೇರಿಕೆ ಸಾಧ್ಯ.
ಮಾಂಗಲಿಕ ಯೋಗ(ಕುಜ ದೋಷ)ದಿಂದ ವಿವಾಹ ವಿಳಂಬವಾಗಿರುವವರು ಈ ದಿನದಂದು ಪೂಜೆ ಸಲ್ಲಿಸಿದರೆ ಪರಿಹಾರವನ್ನು ಪಡೆಯುತ್ತಾರೆ.
ತಮ್ಮ ಕುಂಡಲಿಯಲ್ಲಿ ಕುಜ ದೋಷದಿಂದ ಬಳಲುತ್ತಿರುವವರು ಈ ದಿನದಂದು ಪ್ರಾರ್ಥನೆ ಮತ್ತು ದಾನವನ್ನು ಸಲ್ಲಿಸಬೇಕು. ದೋಷ ಪರಿಣಾಮ ತಗ್ಗುತ್ತದೆ.
ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಮತ್ತು ಸಾಲದಿಂದ ಪರಿಹಾರ ಸಿಗುತ್ತದೆ.

ಅಂಗಾರಿಕಾ ಚತುರ್ಥಿಯ ಕಥೆ
ಮಂಗಳ ಗ್ರಹವು ತೀವ್ರವಾದ ತಪಸ್ಸುಗಳನ್ನು ಮಾಡಿ ಗಣೇಶನನ್ನು ಸಂತೋಷಪಡಿಸುತ್ತದೆ. ಇದರಿಂದ ಸಂತುಷ್ಟನಾದ ಗಣಪತಯಪ ಮಂಗಳವಾರ ಚತುರ್ಥಿ ಬಂದಾಗಲೆಲ್ಲಾ ಅದನ್ನು ಅಂಗಾರಕಿ ಚತುರ್ಥಿ ಎಂದು ಕರೆಯಲಾಗುತ್ತದೆ ಎಂದು ವರವನ್ನು ನೀಡಿದನು. ಅಲ್ಲದೆ, ಮಂಗಳವಾರದಂದು ಪೂಜೆ ಸಲ್ಲಿಸುವವರ ಇಷ್ಟಾರ್ಥಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದನು. ಈ ಕಥೆಯನ್ನು ಗಣೇಶ ಪುರಾಣದ ಉಪಾಸನಾ ಖಂಡದ ಏಳನೇ ಅಧ್ಯಾಯದಲ್ಲಿ ಉಲ್ಲೇಖಿಸಲಾಗಿದೆ.

ಕುಂಭ ರಾಶಿಗೆ ಶನಿ; ಈ 3 ರಾಶಿಗೆ ಕಾಡಿಸಿ ಪೀಡಿಸಿ ಹಿಂಡಿ ಹಿಪ್ಪೆ ಮಾಡುವ ಶನೈಶ್ಚರ!

ಅಂಗಾರಕಿ ಸಂಕಷ್ಟಿ ಚತುರ್ಥಿಯನ್ನು ಹೇಗೆ ಆಚರಿಸುವುದು?
ಸೂರ್ಯೋದಯದಿಂದ ಸಂಜೆ ಚಂದ್ರನ ದರ್ಶನದವರೆಗೆ ಉಪವಾಸ ಆಚರಿಸಬೇಕು.
ಆ ದಿನ ಗಣೇಶನಿಗೆ ಷೋಡಶೋಪಚಾರ ಪೂಜೆ ಸಲ್ಲಿಸಬೇಕು.
ಪೂಜೆಗೆ ಕೆಂಪು ಬಣ್ಣದ ಮೂರ್ತಿ ಅಥವಾ ಗಣಪತಿಯ ಪೇಂಟಿಂಗ್ ಬಳಸಬೇಕು.
ಹಸುವಿನ ತುಪ್ಪವನ್ನು ಸಿಂಧೂರದೊಂದಿಗೆ ಬೆರೆಸಿ ದೀಪವನ್ನು ಬೆಳಗಿಸಬೇಕು.
ಸುಗಂಧ ಧೂಪವನ್ನು ಬೆಳಗಿಸಬೇಕು. 
ಮೋದಕ ಅಥವಾ ಬೆಲ್ಲವನ್ನು ಬಳಸಿ ಸಿಹಿತಿಂಡಿಯನ್ನು ದಿನದಲ್ಲಿ ತಯಾರಿಸಬೇಕು. ಕಡಲೆಕಾಯಿಯೊಂದಿಗೆ ಬೆಲ್ಲವನ್ನು ಸರಳವಾಗಿ ಬೆರೆಸುವುದು ದಿನದಂದು ಅತ್ಯಂತ ಮಂಗಳಕರವಾಗಿದೆ. ನಂತರ ಅದನ್ನು ನೈವೇದ್ಯ ಸಲ್ಲಿಸಬೇಕು. 11 ಲಡ್ಡೂವನ್ನು ಗಣಪತಿಗೆ ನೈವೇದ್ಯ ಮಾಡಿ ನಂತರ ಸಂಜೆ ಮಕ್ಕಳಿಗೆ ನೀಡುವುದರಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ.
ಹವಳ ಮಾಲಾ ಅಥವಾ ಕೆಂಪು ಬಣ್ಣದ ಜಪಮಾಲೆಯನ್ನು ಬಳಸಿ ಗಣೇಶ ಮಂತ್ರವನ್ನು 108 ಬಾರಿ ಜಪಿಸಬೇಕು.
ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ಈ ದಿನದಂದು ದಾನ ಮಾಡುವುದು ಹೆಚ್ಚು ಪುಣ್ಯಕರವೆಂದು ನಂಬಲಾಗಿದೆ.

ದಾರಿಯಲ್ಲಿ ಈ ವಸ್ತುಗಳು ಕಂಡರೆ ತಪ್ಪಿಯೂ ಮುಟ್ಟಬೇಡಿ, ಮೆಟ್ಟಬೇಡಿ..

ಬಡವರಿಗೆ ಆಹಾರ ಪದಾರ್ಥಗಳು, ಹಣ ಅಥವಾ ಬಟ್ಟೆಗಳನ್ನು ನೀಡಬಹುದು.
ಆ ದಿನ ಗಣೇಶನಿಗೆ ನಾಲ್ಕು ಬಿಲ್ವ ಬೀಜಗಳನ್ನು ನೈವೇದ್ಯ ಮಾಡಿ ಮನೆಯಲ್ಲಿ ಹಣ ಇಡುವ ಜಾಗದಲ್ಲಿ ಇಟ್ಟರೆ ಸಾಲ ಬಾಧೆ ನಿವಾರಣೆಯಾಗುತ್ತದೆ.
ಉಪವಾಸವನ್ನು ಆಚರಿಸುವವರು ಹಣ್ಣುಗಳು, ಸಾಬುದಾನ ಮತ್ತು ಇತರ ವ್ರತ ಆಹಾರವನ್ನು ಸೇವಿಸಬಹುದು. ಈ ದಿನದಲ್ಲಿ ಉಪ್ಪನ್ನು ಸೇವಿಸಬೇಡಿ. ಸಾಕಷ್ಟು ನೀರು ಕುಡಿಯಿರಿ.  ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿ.

Follow Us:
Download App:
  • android
  • ios