Asianet Suvarna News Asianet Suvarna News

ನಿಮ್ಮ ರಾಶಿಗೆ ತಕ್ಕ ಸಿನಿಮಾ- ವೆಬ್‌ ಸೀರೀಸ್ ಯಾವುದು? ಇಲ್ಲಿದೆ ನೋಡಿ

ನಮ್ಮ ರಾಶಿ ಚಕ್ರದ ಆಧಾರದ ಮೇಲೆ ನಮ್ಮ ಇಷ್ಟಗಳು ಬದಲಾಗುತ್ತವೆ. ಹಾಗಾದರೆ ಯಾವ ರಾಶಿಯವರಿಗೆ ಯಾವ ರೀತಿಯ ಸಿನಿಮಾ ಮತ್ತು ವೆಬ್‌ ಸೀರೀಸ್‌ಗಳು ಇಷ್ಟವಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ.

which type of cinema- web series will be liked by you as per your zodiac sign
Author
First Published Aug 21, 2024, 9:36 AM IST | Last Updated Aug 21, 2024, 9:36 AM IST

ಮೇಷ ರಾಶಿ 

ತುಂಬ ಸರಳವಾದ, ಆ ಕ್ಷಣದ ವ್ಯಕ್ತಿ ನೀವು. ತಕ್ಷಣದ ಸ್ಪಂದನೆ, ಯಾವುದೇ ಅನುಭವಕ್ಕೆ ನುಗ್ಗಿ ಎದುರಾಗಬೇಕು ಎಂಬ ರೀತಿ ನಿಮ್ಮದು. ದೊಡ್ಡ ಯಶಸ್ಸು ಪಡೆಯೋದು ನಿಮ್ಮ ಮೊದಲ ಪ್ರೀತಿ. ಕುಜ ನಿಮ್ಮ ಅಧಿಪತಿ. ಹೀಗಾಗಿ ನಿಮಗೆ ಅಡ್ವೆಂಚರ್‌ ಫಿಲಂಗಳು, ಸರ್ವೈವಲ್‌ ವೆಬ್‌ ಸೀರೀಸ್‌ಗಳು ಹೆಚ್ಚಾಗಿ ಇಷ್ಟವಾಗುತ್ತವೆ. ಕೊನೆಯಲ್ಲಿ ಹೀರೋ/ಹೀರೋಯಿನ್ ಗೆಲ್ಲಬೇಕು.

ವೃಷಭ ರಾಶಿ

ಜೀವನದ ಸಣ್ಣ-ಪುಟ್ಟ ಸಂಗತಿಗಳೂ ಬಹಳ ಮುಖ್ಯ ಎಂಬ ನಂಬಿಕೆ ನಿಮ್ಮದು. ಚೆಂದದ ಮನೆ, ಒಳ್ಳೆ ಊಟ ಮತ್ತು ಒಂದಿಷ್ಟು ಒಳ್ಳೆಯ ಫ್ರೆಂಡ್ಸ್ ಇಷ್ಟು ನಿಮ್ಮ ಆದ್ಯತೆ. ನಿಮ್ಮ ರಾಶಿ ಅಧಿಪತಿ ಶುಕ್ರ. ನೀವು ಪ್ರೇಮ ಕಥನಗಳನ್ನು ಇಷ್ಟಪಡುವವರು. ಹೀಗಾಗಿ ರೊಮ್ಯಾಂಟಿಕ್‌ ಸಿನಿಮಾ, ವೆಬ್‌ ಸೀರೀಸ್‌ಗಳನ್ನು ಇಷ್ಟಪಡುವಿರಿ. 

ಮಿಥುನ ರಾಶಿ

ನಿಮಗೆ ಮನರಂಜನೆ, ಮಾಹಿತಿ ಎರಡೂ ಬಹಳ ಮುಖ್ಯ. ನಿಮ್ಮ ಮೆದುಳು ಸದಾ ಚಟುವಟಿಕೆಯಾಗಿರುತ್ತದೆ. ಅದಕ್ಕೆ ಮನರಂಜನೆ ಬೇಕೇಬೇಕು. ಒಂದೇ ಸಲಕ್ಕೆ ಹತ್ತಾರು ಕೆಲಸ ಮಾಡುವ ಮೆದುಳು ನಿಮ್ಮದು. ಇಬ್ಬರು ಒಟ್ಟು ಹಾಕಿಕೊಳ್ಳೋ ವಿಷಯ ನೀವೊಬ್ಬರೇ ಗ್ರಹಿಸ್ತೀರಿ. ಬುಧ ನಿಮ್ಮ ಅಧಿಪತಿ. ನೀವು ಪತ್ತೇದಾರಿ ಸಿನಿಮಾ, ಥ್ರಿಲ್ಲರ್‌ಗಳು, ಸ್ಪೇಸ್‌ ಟ್ರಾವೆಲ್‌ ಮುಂತಾದವನ್ನು ಇಷ್ಟಪಡಬಹುದು.

ಕರ್ಕಾಟಕ ರಾಶಿ 

ಮಕ್ಕಳ ಹಾಗೆ ನಿಮ್ಮ ಕಲ್ಪನಾ ಶಕ್ತಿ. ರೋಮ್ಯಾಂಟಿಕ್ ಆಗಿ ಯೋಚನೆ ಮಾಡ್ತೀರಿ. ನೀವೊಂಥರಾ ತಾಯಿ-ಮಗು ಎರಡೂ ಗುಣದ ಕಾಂಬೋ ಆಫರ್. ಚಂದ್ರ ನಿಮ್ಮ ಅಧಿಪತಿ. ರೊಮ್ಯಾಂಟಿಕ್‌ ಸಿನಿಮಾಗಳು ನಿಮ್ಮ ಜಾನರ್.‌ ಹಾಗೇ ಸ್ವಲ್ಪ ಟ್ರಾಜಿಡಿಯನ್ನೂ ಇಷ್ಟಪಡುವಿರಿ. ಕೊರಿಯನ್‌ ವೆಬ್‌ ಸೀರೀಸ್‌ಗಳು ಇಷ್ಟವಾಗುತ್ತವೆ. 

ಸಿಂಹ ರಾಶಿ 

ಬದುಕನ್ನು ಪೂರ್ತಿಯಾಗಿ ಅನುಭವಿಸುವವರು ನೀವು. ಒಂದು ಲೋಟ ಕಾಫಿ ಇರಲಿ, ಒಂದು ಹೋಳಿನ ಉಪ್ಪಿನಕಾಯಿ ಇರಲಿ ಅದರ ಸ್ವಾದ ನಿಮ್ಮ ಅನುಭೂತಿಗೆ ಬರಲೇಬೇಕು. ಸಾಧ್ಯವಾದಷ್ಟು ಒಳ್ಳೆ ಮೂಡ್ ನಲ್ಲಿರಬೇಕು ಅನ್ನೋದೇ ನಿಮ್ಮ ಆದ್ಯತೆ. ನಿಮ್ಮ ಅಧಿಪತಿ ರವಿ. ನಿಮಗೆ ಫೀಲ್‌ ಗುಡ್‌ ವೆಬ್‌ ಸೀರೀಸ್‌ಗಳು, ಮೂವಿಗಳು ಇರಬೇಕು. ಟ್ರಾಜಿಡಿ ಇಷ್ಟವಾಗಲ್ಲ. 

ಕನ್ಯಾ ರಾಶಿ 

ಎಲ್ಲವನ್ನೂ ವಾಸ್ತವದ ತಕ್ಕಡಿಯಲ್ಲೇ ತೂಗ್ತೀರಿ. ನಿಮ್ಮ ಭಾವನೆಗಳು ತುಂಬ ಜೋರಾಗಿ ವ್ಯಕ್ತವಾಗಲ್ಲ. ಪರ್ಫೆಕ್ಷನಿಸ್ಟ್ ಅನ್ನೋ ಮಾತಿಗೆ ಮತ್ತೊಂದು ಹೆಸರು. ನಿಮ್ಮ ಬಗ್ಗೆಯೇ ನಿಮ್ಮ ವಿಮರ್ಶೆ, ಟೀಕೆ ಭಯಾನಕವಾಗಿರುತ್ತದೆ. ನಿಮ್ಮ ಅಧಿಪತಿ ಬುಧ. ಹೆಚ್ಚಾಗ ಡಾಕ್ಯುಮೆಂಟರಿಗಳು ನಿಮಗೆ ಇಷ್ಟವಾಗಬಹುದು. ಸಿನಿಮಾಗಳಿಗಿಂತ ಮಾಹಿತಿಪೂರ್ಣ ಡಾಕ್ಯುಮೆಂಟರಿಗಳು ನಿಮಗೆ ಇಷ್ಟ. ಅದರಲ್ಲೂ ವರ್ಲ್ಡ್‌ ವಾರ್‌ ಬಗ್ಗೆ, ಇಕಾನಮಿ ಬಗ್ಗೆ. 

ತುಲಾ ರಾಶಿ 

ಸೊಗಸಾದ ಮಾತುಗಾರರು ನೀವು. ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವ ಬಹುತೇಕ ಹೆಸರುವಾಸಿ ಅಸಾಮಿಗಳು ಇವರೇ. ವಾದ ಮಾಡುವಾಗ ನಾಲ್ಕು ಮೂಲೆಗೂ ತಗುಲುವ ಹಾಗೆ ಮಾಡೋ ಪೈಕಿ. ಎಂಥ ಪರಿಸ್ಥಿತಿಗೂ ಛಕ್ಕಂತ ಹೊಂದಿಕೊಳ್ಳುವ ಸಾಮರ್ಥ್ಯ. ನಿಮ್ಮ ಅಧಿಪತಿ ಶುಕ್ರ. ಕೋರ್ಟ್‌ ರೂಂ ಡ್ರಾಮಾಗಳು, ಜೈಲ್‌ ಬ್ರೇಕ್‌ ಸಿನಿಮಾಗಳು, ಸ್ಪೇಸ್‌ ಟ್ರಾವೆಲ್‌ ಇವರಿಗೆ ಇಷ್ಟ. 

ವೃಶ್ಚಿಕ ರಾಶಿ 

ಇವರು ನೂರರಷ್ಟು ಯಾರನ್ನಾದರೂ ಯಾವುದನ್ನಾದರೂ ನಂಬುವವರೆಗೆ ಚಡಪಡಿಸುತ್ತಲೇ ಇರ್ತಾರೆ. ರಹಸ್ಯಗಳನ್ನು ಸುಲಭಕ್ಕೆ ಹೊರ ಹಾಕುವವರಲ್ಲ. ನಿಮ್ಮ ಮನಸ್ಸಿಗೆ ಮುಂದೆ ನಡೆಯುವುದನ್ನು ತಿಳಿಸುವ ಶಕ್ತಿಯೊಂದಿದೆ. ನಿಮ್ಮ ಅಧಿಪತಿ ಕುಜ. ಡಿಟೆಕ್ಟಿವ್‌ ನಾವೆಲ್‌ಗಳು, ಡಿಟೆಕ್ಟಿವ್‌ ಸಿನಿಮಾ- ವೆಬ್‌ ಸೀರೀಸ್‌ಗಳು, ಶೆರ್ಲಾಕ್‌ ಹೋಮ್ಸ್‌ ಸಿನಿಮಾಗಳು ಇಷ್ಟವಾಗಬಹುದು. 

ಧನು ರಾಶಿ 

ಹೊಸ ಬಗೆ ಊಟ, ಊರು, ಜನ ಒಟ್ಟಿನಲ್ಲಿ ಎಲ್ಲ ಹೊಸತು ನಿಮ್ಮನ್ನ ಸೆಳೆಯುತ್ತಲೇ ಇರುತ್ತವೆ. ಮುಂದಿನ ಗುರಿ ಏನು ಎಂದು ಸದಾ ಹಂಬಲಿಸ್ತೀರಿ. ಆ ಕಾರಣಕ್ಕೆ ಜೀವನದ ಭಾವನಾತ್ಮಕ ಕ್ಷಣಗಳನ್ನು ಕಳೆದುಕೊಳ್ತೀರಿ. ನಿಮ್ಮ ರಾಶಿಯ ಅಧಿಪತಿ ಗುರು. ಪ್ರಾಯೋಗಿಕ ಫಿಲಂಗಳು, ಇರಾನೀ ಮೂವೀಸ್‌, ಇಟಾಲಿಯನ್‌ ಮೂವೀಸ್‌ ನಿಮಗೆ ಹೆಚ್ಚು ಇಷ್ಟವಾಗಬಹುದು. 

ಶೀಘ್ರದಲ್ಲೇ ಭದ್ರ ರಾಜಯೋಗ, ಈ ರಾಶಿಗೆ ಆಸ್ತಿ ಚಿನ್ನ ಖರೀದಿಗೆ ಉತ್ತಮ ಸಮಯ ಜತೆ ಉದ್ಯಮಿಗಳಿಗೆ ಫುಲ್ ಲಾಭ
 

ಮಕರ ರಾಶಿ 

ನೀವು ಪ್ರಬುದ್ಧರು, ನಂಬಿಕಸ್ತರು. ನಿಮ್ಮ ಅಧಿಪತಿ ಶನಿ. ಜೀವನದಲ್ಲಿ ತೀರಾ ಗಂಭೀರ ವಿಚಾರ ಚಿಂತೆ ಮಾಡುತ್ತೀರಿ. ಕಷ್ಟ ಪಡ್ತೀರಿ. ಆದರೆ ಜೀವನದ ತುಂಬ ಸಂತೋಷದ ಕ್ಷಣಗಳನ್ನು ಅನುಭವಿಸಲಾರದೆ ತಪ್ಪಿಸಿಕೊಳ್ತೀರಿ. ಹೀಗಾಗಿ ಸಿನಿಮಾ ಎಂಜಾಯ್‌ ಮಾಡುವುದು ಕಷ್ಟ. ಆದರೆ ವೆಸ್ಟರ್ನ್‌ ಅಡ್ವೆಂಚರ್‌ ಮೂವಿಗಳು, ಹಳೆಯ ಅಮೆರಿಕನ್‌ ರೊಮ್ಯಾಂಟಿಕ್‌ ವೆಬ್‌ ಸೀರೀಸ್‌ಗಳು ಇಷ್ಟವಾಗುತ್ತವೆ. 

ಕುಂಭ ರಾಶಿ

ನೀವು ರೆಬೆಲ್ ಸ್ಟಾರ್. ನಿಯಮಗಳನ್ನು ಮೀರಿ ಯೋಚಿಸುವುದು ಬಹಳ ಇಷ್ಟಪಡ್ತೀರಿ. ಬುದ್ಧಿವಂತಿಕೆ ಇರುತ್ತದೆ. ನೀವೇನೂ ತುಂಬ ಭಾವುಕರಲ್ಲ. ಸಮಸ್ಯೆಗಳನ್ನು ಬುದ್ಧಿಯಿಂದ ಪರಿಹರಿಸಬೇಕು ಎಂದು ನಂಬುತ್ತೀರಿ. ಸಿನಿಮಾಗಳಲ್ಲೂ ವೆಸ್ಟರ್ನ್‌, ರಿವೆಂಜ್‌ ಫಿಲಂಗಳು, ಆಕ್ಷನ್‌ ಫಿಲಂ, ಸ್ನೈಪರ್‌ ಮೂವಿಗಳು ಹಾಗೂ ವೆಬ್‌ ಸೀರೀಸ್‌ ಇಷ್ಟವಾಗಬಹುದು.  ನಿಮ್ಮ ರಾಶಿ ಅಧಿಪತಿ ಶನಿ. 

ಮೀನ ರಾಶಿ

ನಿಮ್ಮ ಸುತ್ತ ಯಾರು ಇದ್ದಾರೆ ಎಂಬುದರ ಆಧಾರದಲ್ಲಿ ನಿಮ್ಮ ಮೂಡ್ ಬದಲಾಗುತ್ತದೆ. ಆ ಕಾರಣಕ್ಕೆ ಶಾಪಿಂಗ್, ಕುಡಿತ, ಕೆಲವು ಬಾರಿ ಮಾದಕ ವ್ಯಸನಿಗಳಾಗುವ ಸಾಧ್ಯತೆ ಇರುತ್ತದೆ. ಯಾವುದೇ ಭಾವನೆಯ ತಾಕಲಾಟಕ್ಕೆ ತಕ್ಷಣ ಸ್ಪಂದಿಸುಔ ಗುಣ. ನಿಮ್ಮ ರಾಶಿ ಅಧಿಪತಿ ಗುರು. ಮೋಟಿವೇಶನಲ್‌ ಮೂವಿಗಳು, ಫಾರೆಸ್ಟ್‌ ಗಂಪ್‌, ತಾರೇ ಜಮೀನ್‌ ಪರ್‌ ಮುಂತಾದ ಸಿನಿಮಾಗಳು ಇಷ್ಟವಾಗುತ್ತವೆ. 


ಈ 5 ರಾಶಿಯವರು ಶ್ರೀಮಂತರಾಗಲು ಹೆಚ್ಚು ಸಮಯ ಬೇಕಾಗಿಲ್ಲ, ಗುರು ಮತ್ತು ಶನಿಯಿಂದ ಶೀಘ್ರದಲ್ಲೇ ಹಣದ ಮಳೆ ಪಕ್ಕಾ
 

Latest Videos
Follow Us:
Download App:
  • android
  • ios