Asianet Suvarna News

ನಿಮ್ಮ ಜನ್ಮರಾಶಿಯ ಪ್ರಕಾರ ನೀವು ಯಾವ ಪೌರಾಣಿಕ ಪ್ರಾಣಿ ಗೊತ್ತೆ?

ಜನ್ಮರಾಶಿಯ ಪ್ರಕಾರ ಪ್ರತಿಯೊಬ್ಬ/ಳು ವ್ಯಕ್ತಿಯೂ ಪೌರಾಣಿಕ ಪ್ರಾಣಿಗಳ ಒಂದಲ್ಲ ಒಂದು ಚಹರೆಯನ್ನು ಹೊತ್ತೇ ಇರುತ್ತಾರೆ. ಹಾಗಿದ್ದರೆ ಬನ್ನಿ, ನೀವು ಯಾವ ಪ್ರಾಣಿ? ತಿಳಿಯೋಣ.

 

Which mythical animal you are according to Zodiac
Author
Bengaluru, First Published Jun 29, 2021, 4:10 PM IST
  • Facebook
  • Twitter
  • Whatsapp

ಪುರಾಣಗಳಲ್ಲಿ ಬಹಳ ಪ್ರಾಣಿಗಳು, ದೇವರ ವಾಹನಗಳು ಬರುತ್ತವೆ. ಹಲವು ಮೃಗಗಳಿಗೆ ಅವುಗಳದೇ ಆದ ವ್ಯಕ್ತಿತ್ವಗಳೂ ಇರುತ್ತವೆ. ಹಾಗೇ ಜನ್ಮರಾಶಿಯ ಪ್ರಕಾರ ಪ್ರತಿಯೊಬ್ಬ/ಳು ವ್ಯಕ್ತಿಯೂ ಪೌರಾಣಿಕ ಪ್ರಾಣಿಗಳ ಒಂದಲ್ಲ ಒಂದು ಚಹರೆಯನ್ನು ಹೊತ್ತೇ ಇರುತ್ತಾರೆ. ಹಾಗಿದ್ದರೆ ಬನ್ನಿ, ನೀವು ಯಾವ ಪ್ರಾಣಿ? ತಿಳಿಯೋಣ.

ಮೇಷ

ನಿಮ್ಮ ಪೌರಾಣಿಕ ಮೃಗದ ಚಹರೆ ಐರಾವತದ್ದು. ಇದು ಇಂದ್ರನ ವಾಹನ. ಅತ್ಯಂತ ಬಲಶಾಲಿಯಾದ ಈ ಆನೆ, ಭೂಮಿಯನ್ನು ಹೊತ್ತುಕೊಂಡಿರುವ ಎಂಟು ದಿಗ್ಗಜಗಳಲ್ಲಿ ಒಂದು ಎಂದು ಕತೆ. ನೀವು ಕೂಡ ಕಷ್ಟಸಹಿಷ್ನು. ಎಷ್ಟೇ ಕೆಲಸ ಹೊರಿಸಿದರೂ ಮಾಡುವ ಸ್ವಭಾವ ನಿಮ್ಮದು.

ವೃಷಭ

ನಿಮ್ಮ ಮೃಗ ಪರಮೇಶ್ವರನ ವಾಹನವಾದ ನಂದಿ. ನಿಮಗೆ ಕೃಷಿ ಎಂದರೆ ಇಷ್ಟ. ಕೃಷಿಗೆ ಮೂಲವೇ ಗೋವು, ನಂದಿ ಅಥವಾ ಬಸವ. ನೀವು ಕೂಡ ಕಷ್ಟಸಹಿಷ್ಣು ಮತ್ತು ಪರರಿಗಾಗಿ ಸ್ವಾರ್ಥವಿಲ್ಲದೆ ಸೇವೆ ಮಾಡುವ ಸ್ವಭಾವವನ್ನು ಹೊಂದಿದ್ದೀರಿ. ನೀವು ಸುಮ್ಮನೇ ಗುಮ್ಮುವವರಲ್ಲ.

ಮಿಥುನ

ನೀವು ಗಣಪತಿಯ ವಾಹನವಾದ ಇಲಿಯನ್ನು ನಿಮ್ಮ ಪೌರಾಣಿಕ ಚೆಹರೆಯಾಗಿ ಹೊಂದಿದ್ದೀರಿ. ಇಲಿ ಸಂದಿಗೊಂದಿಗಳಲ್ಲಿ ನುಸಳುವಂತೆ ನೀವು ಕೂಡ, ಕಷ್ಟಕರವಾದ ಕೆಲಸಗಳನ್ನು ಎಲ್ಲೆಲ್ಲೋ ಓಡಾಡಿ ಸಾಧಿಸಿಕೊಳ್ಳುವಿರಿ. ಗಣಾಧಿಪನ ಆಶಿರ್ವಾದ ಸದಾ ನಿಮ್ಮ ಮೇಲಿರುವುದು.

ಕಟಕ

ಷಣ್ಮುಖನ ವಾಹನ ಮಯೂರ ನಿಮ್ಮ ಪೌರಾಣಿಕ ಸಂಕೇತ. ನಿಮ್ಮನ್ನು ಕಂಡರೆ ಕ್ಷುದ್ರ ವ್ಯಕ್ತಿಗಳು ದೂರವೇ ಇರುವರು. ನಿಮ್ಮ ನಿಲುಮೆ ಧೀರಗಂಭೀರ ಹಾಗೂ ನಿಮ್ಮ ನಡೆ ನುಡಿ ಉದಾತ್ತವಾದುದು. ನೀವು ಸಭೆಯ ಮಧ್ಯದಲ್ಲಿದ್ದರೂ ನಿಮ್ಮ ಸೌಂದರ್ಯದಿಂದ ಎಲ್ಲರ ಗಮನ ಸೆಳೆಯುವಿರಿ.

ಸಿಂಹ

ದುರ್ಗೆಯನ್ನು ಸಿಂಹವಾಹನೆ ಎನ್ನುತ್ತಾರೆ. ನಿಮ್ಮ ಪೌರಾಣಿಕ ಪ್ರಾಣಿಯೂ ಈ ಸಿಂಹವೇ. ಇದನ್ನೇ ಶಾರ್ದೂಲ ಎಂದೂ ಹೇಳುತ್ತಾರೆ. ನೀವು ವ್ಯಗ್ರರಾದರೆ ಕಷ್ಟ ಎಂದು ಯಾರೂ ನಿಮ್ಮನ್ನು ಎದುರು ಹಾಕಿಕೊಳ್ಳುವುದಿಲ್ಲ. ನೀವೊಂಥರಾ ರಾಜನಂತೆ. ದೇವಿಯ ಆಶೀರ್ವಾದ ನಿಮಗೆ ಸದಾ ಇರುತ್ತದೆ.

ಗಂಡ- ಹೆಂಡತಿ ನಡುವೆ ರೊಮ್ಯಾನ್ಸ್ ಹೆಚ್ಚಾಗೋಕೆ ಈ ರತ್ನ ಧರಿಸಿ! ...

ಕನ್ಯಾ

ಸರಸ್ವತೀ ದೇವಿಯನ್ನು ಕಳಹಂಸಾಸಲಯಾನೆ ಎಂದು ಗುರುತಿಸುತ್ತಾರೆ. ಎಂದರೆ ಹಂಸದ ಮೇಲೆ ಪ್ರಯಾಣ ಮಾಡುವವಳು.ಹಂಸ ಧವಳ ಚಾರಿತ್ರ್ಯಕ್ಕೆ ಸಂಕೇತ. ನೀವು ಶ್ರೀರಾಮನಂತೆ, ಒಂದು ಚೂರು ಅಪಕೀರ್ತಿ ಬಂದರೂ ಸಹಿಸುವವರಲ್ಲ. ಬಿಳಿ ಬಣ್ಣವನ್ನು ನೀವು ಇಷ್ಟಪಡುತ್ತೀರಿ.

ತುಲಾ

ಜಾಂಬವ ನಿಮ್ಮ ಇಷ್ಟದ ಪ್ರಾಣಿ. ಜಾಂಬವ ಎಂದರೆ ಕರಡಿಗಳ ರಾಜ. ಇವನು ಶ್ರೀರಾಮನ ಸೈನ್ಯದಲ್ಲಿ ಇದ್ದವನು. ಹಾಗೇ ಶಿವ- ಪಾರ್ವತಿಯರ ಮದುವೆಯನ್ನೂ ನೋಡಿದವನು. ನೀವು ತುಂಬ ಹಳೆಯ ಸಂಗತಿಗಳ ಮೇಲೆ ಹೆಚ್ಚಿನ ವ್ಯಾಮೋಹವನ್ನು ಹೊಂದಿರುವಿರಿ. ಗೆಳೆಯರು ನಿಮಗೆ ಹೆಚ್ಚು.

ವೃಶ್ಚಿಕ

ನಿಮ್ಮ ಇಷ್ಟದ ಮೃಗವೆಂದರೆ ಪುರುಷಾಮೃಗ. ಇದೊಂದು ವಿಚಿತ್ರ ಪ್ರಾಣಿ. ಮಹಾಭಾರತದಲ್ಲಿ ಬರುತ್ತದೆ. ಭೀಮಸೇನ ಇದನ್ನು ರಾಜಸೂಯ ಯಾಗದ ಸಂದರ್ಭದಲ್ಲಿ ಕೈಲಾಸದಿಂದ ತರುತ್ತಾನೆ. ಇದು ಶುದ್ಧೀಕರಣದ ಮೃಗ. ನೀವು ಹೋದಲ್ಲೆಲ್ಲಾ ಶುಚಿತ್ವವನ್ನು ಬಯಸುವ ವ್ಯಕ್ತಿತ್ವದವರು.

ಧನು

ನಿಮಗೆ ಮಹಾವಿಷ್ಣುವಿನ ಅವತಾರವಾದ ನರಸಿಂಹ ಒಪ್ಪುವ ಮೃಗ. ನರಸಿಂಹ ಮೃಗವೂ ಹೌದು, ಅರೆ ಮಾನವನೂ ಹೌದು. ಅಂದರೆ ನಿಮ್ಮಲ್ಲಿ ಮೃಗತ್ವವೂ ಸ್ವಲ್ಪ ಇದೆ. ಮಾನವತ್ವವೂ ಸಾಕಷ್ಟಿದೆ. ದೇವರನ್ನು ಪ್ರಶ್ನಿಸುವವರನ್ನು ನೀವು ಸಹಿಸುವುದಿಲ್ಲ. ಏರಿ ಬಂದವರನ್ನು ಬಿಡುವುದೂ ಇಲ್ಲ.

ಈ ರಾಶಿಯವರ ಕೈಯಲ್ಲಿ ಹಣ ನಿಲ್ಲುವುದಿಲ್ಲ, ಕಾಸು ಉಳಿಸಲು ಏನು ಮಾಡಬೇಕು? ...

ಮಕರ

ಮಹಾವಿಷ್ಣುವಿನ ಇನ್ನೊಂದು ಅವತಾರವಾದ ವರಾಹ ನಿಮಗೆ ಇಷ್ಟದ ಪ್ರಾಣಿ. ಇದು ಶ್ವೇತವರಾಹ. ಅಂದರೆ ಬಿಳಿ ಬಣ್ಣದ ವರಾಹ. ನೀವು ಕೊಳೆಯನ್ನು ಸ್ವಚ್ಛ ಮಾಡಲು ಬಯಸುತ್ತೀರಿ; ಆದರೆ ನೀವು ಸ್ವತಃ ಕೊಳೆಯಾಗುವವರಲ್ಲ. ನಿಮಗೆ ಬಗೆಬಗೆಯ ಆಹಾರಗಳು ಇಷ್ಟ.

ಕುಂಭ

ಮಹಾವಿಷ್ಣುವಿನ ವಾಹನವಾದ ಗರುಡ ನಿಮ್ಮ ಚೆಹರೆಯ ಪೌರಾಣಿಕ ಪಕ್ಷಿ. ಗರುಡನನ್ನು ಕಂಡರೆ ಹಾವುಗಳು ಹೆದರುತ್ತವೆ. ಹೀಗಾಗಿ ನಿಮಗೆ ಹಾವುಗಳಿಂದಲೂ ವಿಷಪ್ರಾಶನದಿಂದಲೂ ಭಯವಿಲ್ಲ. ಪಕ್ಷಿಗಳಿಗೆ ನಿಮ್ಮನ್ನು ಕಂಡರೆ ಇಷ್ಟವಿರಬಹುದು. ಅವುಗಳನ್ನು ಸಾಕಬಹುದು.

ಈ ಜನ್ಮರಾಶಿಯವರಿಗೆ ವಿಪರೀತ ಕಾಟ ಕೊಡುತ್ತೆ ಭೂತ ಪ್ರೇತ ...

ಮೀನ

ಮೀನ ಎಂದರೆ ಮೀನು. ಮಹಾವಿಷ್ಣುವಿನ ಮೊದಲ ಅವತಾರವಾದ ಮತ್ಸ್ಯಾವತಾರ ನಿಮ್ಮ ಪೌರಾಣಿಕ ಚಹರೆ. ಮತ್ಸ್ಯನು, ಪ್ರಳಯದಲ್ಲಿ ಮುಳುಗಿ ಹೋದ ಭೂಮಿಯನ್ನು ಮೇಲೆ ಎತ್ತಿ, ಮಹಾನೌಕೆಯನ್ನು ಎಳೆದೊಯ್ದು ದಡ ಮುಟ್ಟಿಸಿದಂತೆ ನೀವು ಕೂಡ ಮುಳುಗಲಿರುವ ಕೆಲಸಗಳನ್ನು ದಡ ಸೇರಿಸುವಿರಿ.

Follow Us:
Download App:
  • android
  • ios