Asianet Suvarna News Asianet Suvarna News

ನೀವು ಯಾವ ದೇವತೆಯ ವಾಹನ? ನಿಮ್ಮ ಜನ್ಮರಾಶಿಯಲ್ಲಿದೆ ಇದರ ರಹಸ್ಯ!

ಪ್ರತಿಯೊಬ್ಬ ದೇವತೆಯೂ ಒಂದಲ್ಲ ಒಂದು ಪಶು ಅಥವಾ ಪಕ್ಷಿಯನ್ನು ವಾಹನವಾಗಿ ಹೊಂದಿರುತ್ತಾರೆ. ನಿಮ್ಮ ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ದೇವತೆಗಳಲ್ಲಿ ಯಾರೋ ಒಬ್ಬರ ವಾಹನದ ಗುಣವನ್ನೂ ಹೊತ್ತಿರುತ್ತೀರಿ ಎಂಬುದು ನಿಮಗೆ ಗೊತ್ತೆ? ಹೌದು. ಆ ವಿಸ್ಮಯಕಾರಿ ವಿಚಾರ ತಿಳಿಯೋಣ.
 

Which gods vehicle are you your zodiac tells the secret bni
Author
First Published Sep 12, 2024, 11:11 AM IST | Last Updated Sep 12, 2024, 11:26 AM IST

ಜ್ಯೋತಿಷ್ಯ ರಾಶಿ ಚಿಹ್ನೆಗಳು ನಿಜಕ್ಕೂ ಒಂದು ವಿಸ್ಮಯಕಾರಿ ವಿದ್ಯಮಾನ. ರಾಶಿಚಕ್ರದ ಚಿಹ್ನೆಗಳು ನಮ್ಮ ವ್ಯಕ್ತಿತ್ವದ ವಿಶೇಷತೆಗಳನ್ನು ಬಹಳ ಸುಲಭವಾಗಿ ಸೂಚಿಸುತ್ತವೆ. ನಿಮ್ಮ ಜನ್ಮರಾಶಿಗೆ ತಕ್ಕಂತೆ ನಿಮ್ಮ ದೇವತೆ, ಹಾಗೇ ನೀವು ಯಾವ ದೇವತೆಯ ವಾಹನ ಎಂಬುದು ಕೂಡ ನಿರ್ಣಯವಾಗುತ್ತದೆ. ವಾಹನ ಎಂದರೆ ಸಜೀವವಾದ, ದೇವತಾ ಗುಣಗಳನ್ನು ಹೊಂದಿದ ಪಶು ಅಥವಾ ಪಕ್ಷಿ. ದೇವತೆಗಳ ವಾಹನಗಳು ಸುಮ್ಮನೇ ಬಂದಿರುವುದಿಲ್ಲ. ಅದರ ಹಿಂದೆ ಯಾವುದೋ ತತ್ವ ಅಡಗಿರುತ್ತದೆ. ನೀವು ಯಾವ ವಾಹನ ಎಂದು ಇಲ್ಲಿ ತಿಳಿಯಿರಿ.  

ಮೇಷ- ಟಗರು

ನೀವು ಅಗ್ನಿಯ ವಾಹನ ಟಗರು. ಮೇಷ ರಾಶಿಗೆ ಅಗ್ನಿಯು ದೇವತೆ. ಅಗ್ನಿಯ ವಾಹನವೂ ಮೇಷವೇ. ಟಗರು ಅದ್ಭುತವಾದ ಚೈತನ್ಯವನ್ನು ಹೊಂದಿದೆ ಮತ್ತು ಸಾಕಷ್ಟು ಪ್ರಬಲವಾಗಿದೆ. ಯಾರೇ ಆಗಲಿ ಅವರ ಸಂಪರ್ಕಕ್ಕೆ ಬಂದರೆ, ಅವರ ಪ್ರಭಾವದಿಂದ ಪಾರಾಗುವಂತಿಲ್ಲ. ಸ್ವಾಭಾವಿಕವಾಗಿ ಹೆಚ್ಚು ಆತ್ಮವಿಶ್ವಾಸ ಉಳ್ಳವರು. ಸಂತೋಷವಾಗಿರುವಾಗ ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ತೋರಿಸುತ್ತಾರೆ. ಇಲ್ಲದಿದ್ದಾಗ ಮೊಂಡುತನದಿಂದ ಮತ್ತು ನೇರವಾಗಿ, ನೋಯಿಸುವ ರೀತಿಯಲ್ಲಿ ಮಾತಾಡಬಹುದು.

ವೃಷಭ- ನಂದಿ

ವೃಷಭ ಎಂದರೆ ನಂದಿ, ನಂದಿ ಶಿವನ ವಾಹನ. ಇವರು ಬಲಿಷ್ಠ ವ್ಯಕ್ತಿತ್ವದವರು. ಎಷ್ಟು ಹೇಳಿದರೂ, ಏನು ಕೊಟ್ಟರೂ ದುಡಿಯುತ್ತಾರೆ. ವಿಧೇಯತೆ ಮತ್ತು ಪ್ರೀತಿ ಇವರ ಗುಣ. ಲೈಂಗಿಕವಾಗಿಯೂ ದೃಢವಾದವರು. ಪ್ರಕೃತಿ ಸೌಂದರ್ಯವನ್ನು ಮೆಚ್ಚುವಂಥದು ಮತ್ತು ಅದಕ್ಕಾಗಿಯೇ ಭೂಮಿಯ ಕಂಪನ್ನು ಆಸ್ವಾದಿಸುತ್ತದೆ. ಅದ್ಧೂರಿ ಜೀವನಶೈಲಿ ಇಷ್ಟಪಡುತ್ತಾರೆ. ಪ್ರಕೃತಿಯಂತೆಯೇ, ಅವರು ಬಣ್ಣಗಳು ಮತ್ತು ಜೀವನದ ಫಲಗಳನ್ನು ನಂಬುತ್ತಾರೆ.

ಮಿಥುನ- ಮಯೂರ

ನೀವು ಕಾರ್ತಿಕೇಯನ ವಾಹನ ನವಿಲು ಅಥವಾ ಮಯೂರ. ಮಿಥುನ ರಾಶಿಯವರು ಎಂದಿಗೂ ಸ್ಥಿರವಾಗಿ ಇರಲಾರರು ಮತ್ತು ಯಾವಾಗಲೂ ಚಲನೆಯಲ್ಲಿರುತ್ತಾರೆ. ಅವರು ಸರಳವಾಗಿ ತಮಗೆ ಸರಿಹೊಂದುವ ದಿಕ್ಕಿನಲ್ಲಿ ಹರಿಯುತ್ತಾರೆ. ಕೆಲವೊಮ್ಮೆ ಗಾಳಿ ಬೀಸಿದಂತೆ ಹೋಗುವವರು, ಆದರೆ ಇವರ ಆಪ್ತರೊಂದಿಗೆ ಉತ್ತಮ ಸ್ನೇಹಿತರು ಮತ್ತು ನಿಜವಾಗಿಯೂ ಪಾರದರ್ಶಕವಾಗಿರುತ್ತಾರೆ. ಗಾಳಿಯತೆಯೇ ಮನ ಬಂದತ್ತ ಬೀಸುವವರು, ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ನಿಖರವಾಗಿರದು. ಚಂಚಲ ಮನಸ್ಸಿನವರಾಗಿರುತ್ತಾರೆ.

ಕಟಕ- ಹಂಸ

ಇವರು ಸರಸ್ವತಿಯ ವಾಹನವಾದ ರಾಜಹಂಸ. ಕಟಕ ರಾಶಿಯವರು ಆತ್ಮದ ಅಂಶ ಮತ್ತು ಹೃದಯದಿಂದ ಶುದ್ಧರಾಗಿದ್ದಾರೆ ಮತ್ತು ತಮ್ಮ ಪ್ರೀತಿಪಾತ್ರರಿಗೆ ತುಂಬಾ ಸಾಂತ್ವನ ನೀಡುತ್ತಾರೆ. ಇವರು ಯಾವಾಗಲೂ ಹೃದಯದಲ್ಲಿ ಉತ್ತಮ ಉದ್ದೇಶಗಳನ್ನು ಹೊಂದಿರುತ್ತಾರೆ. ಇವರ ಸ್ಪರ್ಶ ಭಾವನಾತ್ಮಕವಾಗಿರುತ್ತದೆ. ನೀರಿನಂತೆಯೇ, ಅವರು ತಮ್ಮ ತಂಪನ್ನು ಬಹಳ ಸುಲಭವಾಗಿ ನಿಮಗೆ ದಾಟಿಸುತ್ತಾರೆ.

ಸಿಂಹ- ಸಿಂಹ

ನಿಮ್ಮ ರಾಶಿಯ ಹೆಸರೇ ನೀವು. ಅಂದರೆ ದುರ್ಗೆಯ ವಾಹನ ಸಿಂಹ. ಸಿಂಹ ರಾಶಿಯವರು ಗರ್ಜಿಸುವ ವ್ಯಕ್ತಿತ್ವದವರು. ಯಾರಿಂದಲೂ ಇವರ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ. ಇವರು ಉತ್ತಮ ಶಕ್ತಿಯ ಮಟ್ಟವನ್ನು ಹೊಂದಿದ್ದಾರೆ. ಉತ್ಸಾಹದಿಂದ ಸೃಜನಶೀಲರು ಮತ್ತು ಬಲವಾದ ಚಿಂತನಶಕ್ತಿ ಉಳ್ಳವರು. ಈ ಶಕ್ತಿಯ ಪ್ರವಾಹವನ್ನು ಸಮತೋಲನಗೊಳಿಸಲು, ಇವರು ನೀರಿನ ರಾಶಿಚಿಹ್ನೆ ಉಳ್ಳವರನ್ನು ಸುತ್ತಮುತ್ತ ಹೊಂದಿರಬೇಕು.

ಕನ್ಯಾ- ಗರುಡ

ಇವರು ಮಹಾವಿಷ್ಣುವಿನ ವಾಹನ ಗರುಡ. ಕನ್ಯಾ ರಾಶಿಯವರು ನಂಬಲರ್ಹ, ಆಧರಿಸುವ ಮತ್ತು ಅತ್ಯಂತ ವೃತ್ತಿಪರ ಸ್ವಭಾವದವರು. ಇವರು ತಮ್ಮದೇ ಆದ ಅತ್ಯುತ್ತಮ ಆವೃತ್ತಿಯಾಗಲು ಬಯಸುತ್ತಾರೆ. ಏಕೆಂದರೆ ಅವರಿಗೆ ಹೆಚ್ಚಿನ ಗುರಿಗಳು ಮತ್ತು ಅದನ್ನು ಹೊಂದುವ ಆಕಾಂಕ್ಷೆಗಳಿವೆ. ವೃಷಭ ರಾಶಿಯಂತೆಯೇ ಇವರು ಸಹ ಶಾಂತ, ನೆಮ್ಮದಿಯ ಜೀವನ ನಡೆಸಲು ಬಯಸುತ್ತಾರೆ. ಅವರು ಕಡಿಮೆ ಗೊಂದಲಕ್ಕೊಳಗಾಗುವವರು ಮತ್ತು ವಾಸ್ತವದ ಬಗ್ಗೆ ಚೆನ್ನಾಗಿ ತಿಳಿದಿದವರು.

ತುಲಾ- ಕಾಗೆ

ಇವರು ಶನಿಯ ವಾಹನ ಕಾಗೆ. ತುಲಾ ರಾಶಿಯವರು ಸೃಜನಶೀಲ, ಐಷಾರಾಮಿ, ಭ್ರಮೆ ಅಥವಾ ಕಲಾತ್ಮಕತೆಯ ಜಗತ್ತಿನಲ್ಲಿ ವಾಸಿಸುತ್ತಿರುತ್ತಾರೆ. ಇವು ಗಾಳಿಯ ಅಂಶದ ಪ್ರತಿರೂಪವಾಗಿವೆ. ಗಾಳಿಯ ಅಂಶ ಇರುವುದರ ನಡುವೆಯೂ ಇವರು ತಮ್ಮ ಜೀವನವನ್ನು ಸಮತೋಲನಗೊಳಿಸಬಹುದು. ಇದರಿಂದ ಅವರು ತಮ್ಮ ಕಲ್ಪನೆ ಮತ್ತು ವಾಸ್ತವದೊಂದಿಗೆ ನಿಯಂತ್ರಣದಲ್ಲಿರುತ್ತಾರೆ. ಇವರು ಯಶಸ್ವಿಯಾಗಿದ್ದರೂ, ತಮ್ಮ ಜೀವನದ ಬಗ್ಗೆ ಹೆಮ್ಮೆ ಪಡುವುದಿಲ್ಲ.

ವೃಶ್ಚಿಕ- ಗೂಬೆ

ಇವರು ಲಕ್ಷ್ಮಿಯ ವಾಹನ ಗೂಬೆ. ವೃಶ್ಚಿಕ ರಾಶಿಯವರು ಪ್ರತಿಯೊಂದು ವಿಷಯದ ಬಗ್ಗೆ ತುಂಬಾ ನಿಗೂಢತೆ ಕಾಪಾಡಿಕೊಳ್ಳುತ್ತಾರೆ ಮತ್ತು ಕುತೂಹಲದಿಂದ ಕೂಡಿರುತ್ತಾರೆ. ಇವರು ತಮ್ಮ ಜೀವನದ ಅಂಶಗಳನ್ನು ಅರ್ಥಮಾಡಿಕೊಳ್ಳಲು ಆಕಾಶ ಗ್ರಹಗಳ ಸ್ಥಾನಗಳನ್ನು ನಂಬುತ್ತಾರೆ. ಆಧ್ಯಾತ್ಮದ ಬಗ್ಗೆ ಅವರಿಗೆ ಹೆಚ್ಚು ತಿಳಿದಿರುತ್ತದೆ. ಇವರು ನೀರಿನ ಚಿಹ್ನೆಗಳ ವಿಶ್ವಾಸಾರ್ಹ ಅಂಶವನ್ನು ಚೆನ್ನಾಗಿ ಸೂಚಿಸುತ್ತಾರೆ. 

ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ ಮೂರ್ತಿಯೇ ಇಲ್ಲದ ಕಾಮಾಕ್ಯ ದೇವಾಲಯದ ವಿಶೇಷತೆ ಏನು?

ಧನು- ಮಹಿಷ

ಇವರು ಯಮನ ವಾಹನ ಮಹಿಷ ಅಥವಾ ಕೋಣ. ಧನು ರಾಶಿಯವರು ಕೆಲವೊಮ್ಮೆ ಉರಿಉರಿ ಬೆಂಕಿಯಂತಿರುತ್ತಾರೆ. ಇವರ ಬಳಿ ಹೋಗುವುದು ಕಷ್ಟ. ಆದರೆ ಕೆಲವು ಸಂದರ್ಭಗಳಲ್ಲಿ ಶಾಂತವಾಗಿರಬಹುದು. ಅವರು ಪ್ರತಿ ಯೋಜನೆ ಮತ್ತು ಸನ್ನಿವೇಶವನ್ನು ಬಹಳ ಉತ್ಸಾಹದಿಂದ ತೆಗೆದುಕೊಳ್ಳುತ್ತಾರೆ ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ. ಅದು ಅವರ ಕೆಲಸ ಮತ್ತು ಸಂಬಂಧಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಸಾಮರ್ಥ್ಯ ನೀಡುತ್ತದೆ.

ಮಕರ- ಆನೆ

ಇವರು ಇಂದ್ರನ ವಾಹನ ಐರಾವತ ಅಥವಾ ಆನೆ. ಮಕರ ರಾಶಿಯವರು ಸಾಕಷ್ಟು ನಿಗೂಢವಾಗಿರಬಹುದು, ಆದರೆ ಇವರು ಉತ್ತಮ ದೃಢ ಮನಸ್ಸಿನ ಅಭಿಪ್ರಾಯವನ್ನು ಹೊಂದಿದ್ದಾರೆ. ಅದರೊಂದಿಗೆ ಇವರು ಪ್ರತಿಕೂಲತೆಗಳು ಮತ್ತು ಸಮಸ್ಯೆಗಳನ್ನು ಚೆನ್ನಾಗಿ ಅರಿತು ಹೋರಾಡಬಹುದು. ಇವರು ವಾದಿಸುವವರಲ್ಲ, ಆದರೆ ಇತರರ ಬೇಡಿಕೆಗಳಿಗೆ ಸಮಂಜಸ ಉತ್ತರ ಕೊಡುತ್ತಾರೆ.

ಕುಂಭ- ಮೂಷಿಕ

ಇವರು ಗಣಪತಿಯ ವಾಹನ ಮೂಷಿಕ. ಕುಂಭ ರಾಶಿಯವರು ತುಂಬಾ ಉತ್ಸಾಹಿಗಳು; ಹೊಸ ಉದ್ಯಮಗಳ ಬಗ್ಗೆ ಉತ್ಸುಕರಾಗಿರುತ್ತಾರೆ. ಗಾಳಿಯಂತೆಯೇ ಅವರು ಹರಿಯಲು ಮತ್ತು ಹೊಸ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಇವರು ಕೆಲವೊಮ್ಮೆ ಅನಿಯಂತ್ರಿತರು ಆಗಿರಬಹುದು. ಇವರು ಬೆಂಕಿಯ ಚಿಹ್ನೆಯವರೊಂದಿಗೆ ಬೆರೆಯುತ್ತಿದ್ದರೆ ಅದು ಅವರನ್ನು ಬಹಳ ಪ್ರಭಾವಶಾಲಿಯಾಗಿಸುತ್ತದೆ.

ಮೀನ- ಕುದುರೆ

ಇವರು ಸೂರ್ಯನ ವಾಹನ ಕುದುರೆ ಅಥವಾ ಸಪ್ತಾಶ್ವ. ಮೀನ ರಾಶಿಯವರು ಅತಿ ವೇಗದ ಚಲನೆ ಮತ್ತು ಜ್ಞಾನ ಹೊಂದಿರುತ್ತಾರೆ. ಎಲ್ಲಿ ಬೇಕಾದರೂ ಹೊಂದಿಕೊಳ್ಳುತ್ತಾರೆ. ಇವರು ಮಾಡುವ ಪ್ರತಿಯೊಂದು ಕೆಲಸಕ್ಕೂ ಸಂಬಂಧಿಸಿದ ಜ್ಞಾನವನ್ನು ಪಡೆಯಲು ಇಷ್ಟಪಡುತ್ತಾರೆ. ಇವರು ನಿಗೂಢವಾಗಿರುತ್ತಾರೆ. ಆದರೆ ಇವರು ಎಂದಿಗೂ ಅಸಮಂಜಸವಾಗಿರುವುದಿಲ್ಲ.

ಚಾಣಕ್ಯ ನೀತಿ: ಪತಿಯಿಂದ ಪತ್ನಿಗೆ ಸಿಗಬೇಕಾದ 5 ಸುಖಗಳು
 

Latest Videos
Follow Us:
Download App:
  • android
  • ios