ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ ಮೂರ್ತಿಯೇ ಇಲ್ಲದ ಕಾಮಾಕ್ಯ ದೇವಾಲಯದ ವಿಶೇಷತೆ ಏನು?

 ಭಾರತದ ಅತ್ಯಂತ ಪುರಾತನ ಶಕ್ತಿಪೀಠಗಳಲ್ಲಿ ಒಂದಾದ ಕಾಮಾಕ್ಯ ದೇವಿ ದೇವಾಲಯಕ್ಕೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ದೇವಾಲಯ ಭಾರತೀಯ ಚಿತ್ರರಂಗದ ಹಲವು ತಾರೆಯರು ಮತ್ತು ರಾಜಕಾರಣಿಗಳ ನೆಚ್ಚಿನ ದೇವಾಲಯವಾಗಿದೆ.

vijayalakshmi darshan visit kamakhya temple why celebrities and politicians believe this powerful place  gow

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಗಂಡನಿಗಾಗಿ ಇನ್ನಿಲ್ಲದ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ದರ್ಶನ್‌ ಕೊಲೆ ಕೇಸ್‌ ನಲ್ಲಿ ಸಿಲುಕಿ ಹಾಕಿಕೊಂಡಾಗಿನಿಂದ ಟೆಂಪಲ್‌ ರನ್ ಮಾಡುತ್ತಿದ್ದಾರೆ. ಇದೀಗ ಚಾರ್ಚ್ ಶೀಟ್ ಸಲ್ಲಿಕೆಯಾಗಿದ್ದು, ಡಿ ಗ್ಯಾಂಗ್ ಎಷ್ಟು ಕ್ರೌರ್ಯ ಮೆರೆದಿದೆ ಎಂಬುದು ಬಹಿರಂಗವಾಗಿದೆ.

ದರ್ಶನ್‌ ಗಾಗಿ ಒಂದು ಕಡೆ ಕಾನೂನು ಹೋರಾಟ ಮಾಡುತ್ತಿರುವ ಪತ್ನಿ ಮತ್ತೊಂದು ಕಡೆ ದೇವರ ಮೊರೆ ಹೋಗುತ್ತಿದ್ದು, ಸದ್ಯ ಭಾರತದ ಅತ್ಯಂತ ಪುರಾತನ ಶಕ್ತಿಪೀಠ ಕಾಮಾಕ್ಯ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಇತ್ತೀಚೆಗೆ ವಿಜಯಲಕ್ಷ್ಮಿ ಕೊಲ್ಲೂರಿನ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ನವಚಂಡಿಕಾ ಹೋಮ ಹಾಗೂ ಯಾಗ ನಡೆಸಿದ್ದರು. ಶತ್ರುನಾಶ ಸೇರಿ ನಕರಾತ್ಮಕ ಶಕ್ತಿಗಳನ್ನು ತೊಡೆದು ಹಾಕಲು ಈ ಯಾಗ ಮಾಡಲಾಗುತ್ತದೆ. ಇದರ ನಂತರ ಭೀಮನ ಅಮಾವಾಸ್ಯೆ ದಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ ವಿಶೇಷ ಪೂಜೆ ಸಲ್ಲಿಸಿ ದರ್ಶನ್‌ಗಾಗಿ ಪ್ರಾರ್ಥಿಸಿದ್ದರು.

ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ, ಶಕ್ತಿಪೀಠ ಆಶೀರ್ವಾದದಿಂದ ಸಿಗುತ್ತಾ ಮುಕ್ತಿ?

ಇದೀಗ ಅಸ್ಸಾಂನ ಗುವಾಹಟಿಯಲ್ಲಿರುವ ಶಕ್ತಿಪೀಠ ಕಾಮಾಕ್ಯ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ದೇಗುಲ ಭಾರತೀಯ ಚಿತ್ರರಂಗದ ಹಲವು ತಾರೆಯರು ಮತ್ತು ರಾಜಕಾರಣಿಗಳ ನೆಚ್ಚಿನ ದೇವಾಲಯವಾಗಿದೆ.  ಈ ದೇವಾಲಯದಲ್ಲಿ ಅಂತದ್ದೇನಿದೆ? ಇದರ ವಿಶೇಷತೆ ಎನು? ಕನ್ನಡದ ಯಾವ ತಾರೆಯರು ಮತ್ತು ರಾಜ್ಯದ ಯಾವ ರಾಜಕಾರಣಿಗಳು ಭೇಟಿ ನೀಡಿದ್ದಾರೆ  ಮುಂದೆ ನೋಡೋಣ.

ಇದು ಭಾರತದ ಪುರಾತನ ಶಕ್ತಿಪೀಠ. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗ, ರಾಜಕಾರಣಿಗಳು ಸೇರಿ ಅನೇಕ ಗಣ್ಯ ವ್ಯಕ್ತಿಗಳು ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. 

ಐಟಿ, ಸಿಬಿಐ, ಇಡಿ ಸಂಸ್ಥೆಗಳ ತನಿಖೆಯಿಂದ ಬೇಸತ್ತಿದ್ದ  ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕುಟುಂಬ ಸಮೇತ 2020ರಲ್ಲಿ ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಶಕ್ತಿ ದೇವತೆಯ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದರು.  2016ರಲ್ಲೂ ಭೇಟಿ ಕೊಟ್ಟು ದೇವಿಯ ದರ್ಶನ ಪಡೆದು ಬಂದಿದ್ದರು.

ಸ್ಯಾಂಡಲ್‌ವುಡ್‌ ನಟ ಜಗ್ಗೇಶ್ , ನಟಿಯರಾದ ಕಾವ್ಯಶಾಸ್ತ್ರಿ, ಕಾವ್ಯಾ ಶೆಟ್ಟಿ, ರಾಗಿಣಿ ದ್ವಿವೇದಿ ಮತ್ತು ಇತ್ತೀಚೆಗೆ ನಿಶ್ವಿಕಾ ನಾಯ್ಡು ಕೂಡ ಭೇಟಿ ನೀಡಿದ್ದರು.  ಮಾತ್ರವಲ್ಲ  ಬಾಲಿವುಡ್‌ನ  ಸಾರಾ ಅಲಿ ಖಾನ್‌  , ನಟಿ ರಾಜಕಾರಣಿ ಕಂಗನಾ ರಣಾವತ್‌, ಪ್ರೀತಿ ಝಿಂಟಾ, ಶಿಲ್ಪಾ ಶೆಟ್ಟಿ, ಊರ್ವಶಿ ರೌಟೇಲಾ , ಮಿಲ್ಕಿ ಬ್ಯೂಟಿ ತಮನ್ನಾ, ಮಲಯಾಳಂ ನಟಿ ಸಂಯುಕ್ತಾ ಮೆನನ್ ಸೇರಿ ಅನೇಕ ತಾರೆಯರು ಇಲ್ಲಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.

ಮೂರ್ತಿಯೇ ಇಲ್ಲವಂತೆ ಈ ದೇವಸ್ಥಾನದಲ್ಲಿ, ಆದರೂ ಸಿನಿಮಾ ಸ್ಟಾರ್‌ಗಳ ಫೇವರಿಟ್‌ ಪ್ಲೇಸ್‌ ಅಂತೆ!

ಭಾರತದ ಹಲವು ಉದ್ಯಮಿ ಕುಟುಂಬಗಳಿಗೆ ಕೂಡ ಇದು ನೆಚ್ಚಿನ ದೇವಾಲಯವಾಗಿದೆ. ಇತ್ತೀಚಗೆ ವಿವಾಹವಾದ ಅಂಬಾನಿ ಕುಟುಂಬದ ಕುಡಿ ಅನಂತ್ ಅಂಬಾನಿ ಮದುವೆಗೂ ಮುನ್ನ ಕಳೆದ ಎಪ್ರಿಲ್‌ ನಲ್ಲಿ ದೇವಾಲಯಕ್ಕೆ ಭೇಟಿ ನೀಡಿ   2.51 ಕೋಟಿ ರೂಪಾಯಿ  ದಾನ ಮಾಡಿದ್ದರು.

ದೇಶದ 51 ಶಕ್ತಿಪೀಠಗಳಲ್ಲಿ ಗುವಾಹಟಿ ಕಾಮಾಕ್ಯಾ ದೇವಾಲವೇ ಈ  ಕಾರ್ಣಿಕದ ಕ್ಷೇತ್ರ. ಪವರ್ ಫುಲ್' ಶಕ್ತಿ ದೇವತೆ ಎನ್ನಿಸಿಕೊಂಡಿರುವ ಕಾಮಾಕ್ಷಿ ಮಾತೆಯನ್ನು ಪೂಜಿಸುವ ಭಕ್ತಾಧಿಗಳ ಸಂಖ್ಯೆ ಅಗಣಿತ. ಗುವಾಹಟಿ ನಗರದ ಪಶ್ಚಿಮ ಭಾಗದ ನಿಲಚಲ್ ಬೆಟ್ಟದ ಮೇಲೆ ಕಾಮಾಕ್ಷಿ ದೇವಿ ನೆಲಸಿದ್ದಾಳೆ. ಇಲ್ಲಿ ದೇವಿಯ ವಿಗ್ರಹವಿಲ್ಲ. ಬದಲಾಗಿ ಯೋನಿಯನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ ಜೂನ್ ತಿಂಗಳು ಬಂದರೆ ಈ ತಾಯಿ ಮುಟ್ಟಾಗುತ್ತಾಳೆ. ಅದೇ ಕಾರಣಕ್ಕೆ ಹತ್ತಿರದಲ್ಲಿ ಹರಿವ ಬ್ರಹ್ಮಪುತ್ರ ನೀರು ಕೆಂಪಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಮುಟ್ಟಾದ ಮೂರು ದಿನಗಳ ಕಾಲ ಈ ದೇವಾಲಯವನ್ನು ಬಂದ್ ಮಾಡಲಾಗುತ್ತದೆ.   

ಇಲ್ಲಿ ಭಕ್ತರಿಗೆ ಕೆಂಪು ಬಣ್ಣದ ಬಟ್ಟೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಈ ಕೆಂಪು ಬಟ್ಟೆಯ ಬಗ್ಗೆ ಹೇಳುವುದಾದರೆ, ದೇವಿ  ಮುಟ್ಟಾದಾಗ ದೇವಾಲಯದಲ್ಲಿ ಬಿಳಿ ಬಟ್ಟೆಗಳನ್ನು ಹರಡಿ ದೇವಾಲಯವನ್ನು ಮೂರು ದಿನಗಳವರೆಗೆ ಮುಚ್ಚಲಾಗುತ್ತದೆ. ಮೂರು ದಿನಗಳ ನಂತರ ದೇವಾಲಯದ ಬಾಗಿಲು ತೆರೆದಾಗ, ಬಿಳಿ ಬಟ್ಟೆಯು ದೇವಿಯ ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಬಟ್ಟೆಯನ್ನು ಅಂಬುವಾಚಿ ಬಟ್ಟೆ ಎಂದು ಕರೆಯಲಾಗುತ್ತದೆ ಮತ್ತು ಇದನ್ನೇ ಭಕ್ತರಿಗೆ ಪ್ರಸಾದವಾಗಿ ಕೊಡಲಾಗುತ್ತದೆ. 

ಗುವಾಹಟಿ ನಗರದ ಪಶ್ಚಿಮದಲ್ಲಿರುವ ಬಹಳ ಶಕ್ತಿಯುತವಾದ ಕ್ಷೇತ್ರದ ಗರ್ಭಗುಡಿಯಲ್ಲಿರುವುದು ಶಕ್ತಿ ದೇವತೆಯ ಯೋನಿ ಹೊರತು ಮೂರ್ತಿಯಲ್ಲ. ಸತಿಯ ದೇಹ 51 ಭಾಗಗಳಾಗಿ ದೇಶದ ಉದ್ದಗಲದಲ್ಲೂ ಬಿದ್ದು ವಿವಿಧ ಶಕ್ತಿಪೀಠಗಳಾಗಿ ಹೊಮ್ಮಿದಾಗ, ಇಲ್ಲಿ ಆಕೆಯ ಗರ್ಭ ಬಿದ್ದಿತು ನಂಬಿಕೆ ಇದೆ.

ಮಕ್ಕಳಾಗದವರಿಗೆ ಸಂತಾನಭಾಗ್ಯ ಸೇರಿದಂತೆ ಬೇಡಿದ ವರಗಳನ್ನೆಲ್ಲ ಕರುಣಿಸುವ ಶಕ್ತಿ ದೇವತೆಯಾಗಿ ಗುರುತಿಸಿಕೊಂಡಿರುವ ಕಾಮಾಕ್ಯ ದೇವಿಯ ವಿಶೇಷವೆಂದರೆ ಕಲ್ಲಿನಿಂದ ತಯಾರಿಸುವ ಇಲ್ಲಿನ ಕುಂಕುಮ. ಕಾಮಾಕ್ಯ ಸಿಂಧೂರ್ ಎಂದೇ ಪ್ರಸಿದ್ಧವಾಗಿರುವ ಕುಂಕುಮವನ್ನು  ಮಹಿಳೆಯರು  ಪೂಜ್ಯನೀಯ ಭಾವದಿಂದ ಹಣೆಗಿಟ್ಟುಕೊಳ್ಳುತ್ತಾರೆ. 

ಈ ದೇವಾಲಯ ತಂತ್ರಮಂತ್ರಗಳಿಗೂ ಜನಪ್ರಿಯವಾಗಿದೆ. ಇಲ್ಲಿ ನೂರಾರು ಸಾಧುಗಳು, ಅಗೋರಿಗಳು ಮಾಟಮಂತ್ರ ಹೋಗಲಾಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಭೂತದೆವ್ವ ಬಿಡಿಸುವುದು, ನೆಗೆಟಿವ್ ಎನರ್ಜಿ ತೊಡೆದು ಹಾಕುವುದು ಮುಂತಾದ ಹಲವು ಕೆಟ್ಟ ಶಕ್ತಿಗಳನ್ನು ತೆಗೆದುಹಾಕುವುದನ್ನು ಇಲ್ಲಿ ಅಘೋರಿಗಳು ಮಾಡುತ್ತಾರೆ. ಹಾಗಾಗಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಅಪಾರ. ಇಲ್ಲಿ ಪ್ರಾಣಿ ಬಲಿ ಸಾಮಾನ್ಯವಾಗಿದೆ. ಆದರೆ ಇಲ್ಲಿ ಹೆಣ್ಣು ಪ್ರಾಣಿಯನ್ನು ಬಲಿ ಕೊಡುವುದು ನಿಷೇಧ. ಹೆಣ್ಣಿಗೆ ಅಷ್ಟು ಪ್ರಾಮುಖ್ಯತೆಯನ್ನು ಈ ದೇವಾಲಯದಲ್ಲಿ ಕೊಡಲಾಗುತ್ತದೆ. 

ಒಟ್ಟಿನಲ್ಲಿ ಹೆಣ್ಣಿನ ನೈಸರ್ಗಿಕ ಪ್ರಕ್ರಿಯೆ  "ಮುಟ್ಟ"ನ್ನೂ ಮಾನ್ಯವಾಗಿಸುವ, ಸಾಮಾನ್ಯವಾಗಿ ನಾವು ‘ಅಪವಿತ್ರ’ ಎಂದು ಭಾವಿಸುವ ಋುತುಸ್ರಾವವನ್ನೂ ‘ಪವಿತ್ರ’ ವಾಗಿಸುವ ದೇವಿಯ ಶಕ್ತಿ ಬೆರಗು ಮೂಡಿಸುತ್ತವೆ.

Latest Videos
Follow Us:
Download App:
  • android
  • ios