ಯಾವ ದಿಕ್ಕಿನ ಗೋಡೆಗೆ ಯಾವ ಬಣ್ಣ ಬಳಿದರೆ ಅದೃಷ್ಟ ಬರುತ್ತೆ…!
ಜೀವನದಲ್ಲಿ ಬಣ್ಣಕ್ಕೆ ಅದರದ್ದೇ ಆದ ಮಹತ್ವವಿದೆ. ಅದೃಷ್ಟ ತರುವ ಬಣ್ಣವೊಂದಾದರೆ, ಇಷ್ಟವಿಲ್ಲದ ಬಣ್ಣ ಇನ್ನೊಂದು ಹಾಗಾಗಿ ಪ್ರತಿ ಹಂತದಲ್ಲೂ ಬಣ್ಣಗಳೊಂದಿಗೆ ಬದುಕುತ್ತಿರುತ್ತೇವೆ. ವಾಸ್ತು ಶಾಸ್ತ್ರದಲ್ಲೂ ಬಣ್ಣಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದ್ದು, ಸಕಾರಾತ್ಮಕ ಶಕ್ತಿಯನ್ನು ಹಿಡಿದಿಟ್ಟುಕೊಂಡು, ನಕಾರಾತ್ಮಕ ಶಕ್ತಿಯ ಪ್ರವೇಶವಾಗದಂತೆ ತಡೆಯುವ ಶಕ್ತಿ ಬಣ್ಣಕ್ಕಿದೆ. ಕೆಲವರಿಗೆ ಕೆಲ ಬಣ್ಣ ಆಗಿಬರುವುದಿಲ್ಲ, ಹಾಗಾಗಿ ದಿಕ್ಕಿಗೆ ತಕ್ಕುದಾದ ಬಣ್ಣವೇ ಆದರೂ ಆ ಬಣ್ಣ ನಿಮಗೂ ಆಗಿಬರುವಂತಿದ್ದರೆ ಮಾತ್ರ ಅಂತಹ ಬಣ್ಣವನ್ನು ಬಳಸುವುದು ಉತ್ತಮ. ವಾಸ್ತು ಶಾಸ್ತ್ರದಲ್ಲಿ ತಿಳಿಸಿದ ಹಾಗೆ ಯಾವ ದಿಕ್ಕಿನ ಗೋಡೆಗೆ ಯಾವ ಬಣ್ಣ ಸೂಕ್ತ ಎಂಬ ಬಗ್ಗೆ ತಿಳಿಯೋಣ.
ಮನೆ ಎಂದರೆ ಅದೊಂದು ಭದ್ರತೆ. ಯಾರಿಗೇ ಆಗಲಿ ಅದೊಂದು ಆಸರೆ. ಅದಕ್ಕೇ ಅಲ್ಲವೇ ಎಲ್ಲರೂ ತಮ್ಮದೊಂದು ಸ್ವಂತ ಸೂರು ಇರಬೇಕು ಎಂದು ಇಷ್ಟಪಡುವುದು. ಹೀಗಾಗಿ ಮನೆ ಕಟ್ಟುವವರಲ್ಲಿ ಬಹುತೇಕರು ವಾಸ್ತು ಶಾಸ್ತ್ರದ ಪ್ರಕಾರ ನಿಯಮಗಳನ್ನು ಅನುಸರಿಸುತ್ತಾರೆ. ಆದರೆ, ಹೀಗೆ ಮಾಡುವವರು ಮನೆಯೊಳಗಿನ ಬಣ್ಣಬಳಿಯುವಾಗ ಮಾತ್ರ ಯೋಚಿಸುವುದಿಲ್ಲ. ಬಣ್ಣಕ್ಕೂ ಇದೆ ವಾಸ್ತು ಶಾಸ್ತ್ರ ಎಂಬುದು ಹಲವರಿಗೆ ಗೊತ್ತೇ ಇರುವುದಿಲ್ಲ.
ಬಣ್ಣಕ್ಕೆ ಅದರದ್ದೇ ಆದ ಮಹತ್ವವಿದೆ. ಬಣ್ಣಗಳು ಇಲ್ಲದ ಜೀವನವನ್ನು ಕಲ್ಪನೆ ಮಾಡಿಕೊಳ್ಳುವುದು ಅಸಾಧ್ಯ. ವಾಸ್ತು ಶಾಸ್ತ್ರದಲ್ಲಿಯೂ ಸಹ ಬಣ್ಣಕ್ಕೆ ಅದರದ್ದೇ ಆದ ಮಹತ್ವವಿದೆ. ಒಂದು ಖುಷಿಯಾದ ಜೀವನಕ್ಕೆ ಮನೆಯ ವಾಸ್ತು ಸರಿಯಾಗಿರುವುದು ತುಂಬಾ ಅವಶ್ಯಕ. ಮನೆಯ ಗೋಡೆಗಳಿಗೆ ಬಣ್ಣವನ್ನು ಬಳಿಸುವಾಗ ವಾಸ್ತುವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಅಂದರೆ ಯಾವ ದಿಕ್ಕಿನಲ್ಲಿರುವ ಗೋಡೆಗೆ ಯಾವ ಬಣ್ಣ ಬಳಿಯಬೇಕು ಎಂಬ ಬಗ್ಗೆ ನೋಡೋಣ.
ಇದನ್ನು ಓದಿ: ವಾರಕ್ಕನುಸಾರ ಹೀಗೆ ಮಾಡಿ, ಸಂಕಷ್ಟಗಳಿಂದ ಮುಕ್ತಿ ಪಡೆಯಿರಿ..
ಬಣ್ಣಕ್ಕೆ ಹಲವು ಶಕ್ತಿಗಳಿದ್ದು, ಇದು ನಿಮ್ಮ ಮನಸ್ಥಿತಿಯ ಮೇಲೂ ಪ್ರಭಾವ ಬೀರುತ್ತದೆ. ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳು ಉಂಟಾಗಲು ಬಣ್ಣಗಳೂ ಕಾರಣ ಎಂದು ಹೇಳಲಾಗುತ್ತದೆ. ಹೀಗೆ ವಾಸ್ತುಪ್ರಕಾರ ಬಣ್ಣವನ್ನು ಬಳಿದಾಗ ನಕಾರಾತ್ಮಕ ಅಂಶಗಳನ್ನು ತಡೆಯುವುದಲ್ಲದೆ, ಗೋಡೆಗಳ ಬಣ್ಣಗಳಿಂದ ಉಂಟಾಗುವ ಶಕ್ತಿಗಳು ಮನೆಯಲ್ಲಿ ಶಾಂತತೆಯನ್ನು ನೆಲೆಸುವಂತೆ ಮಾಡುತ್ತದೆ.
ಪೂರ್ವ ದಿಕ್ಕಿನ ಗೋಡೆಗೆ
ಪೂರ್ವ ದಿಕ್ಕಿನಲ್ಲಿ ಇರುವ ಗೋಡೆಗೆ ಯಾವಾಗಲೂ ಬಿಳಿ ಇಲ್ಲವೇ ತಿಳಿ ನೀಲಿಬಣ್ಣವನ್ನು ಬಳಿಯಬೇಕು. ಇದರಿಂದ ಮನೆಯಲ್ಲಿ ಶಾಂತಿ ನೆಲೆಸಲು ಸಹಾಯಕವಾಗುತ್ತದೆ. ಹೀಗೆ ತಿಳಿಯಾದ ಬಣ್ಣವನ್ನು ಬಳಸುವುದರಿಂದ ಮನೆಗೆ ಉತ್ತಮವಾಗುತ್ತದೆ, ಹಾಗೆ ಸಾಮರ್ಥ್ಯದ ಮಟ್ಟವನ್ನು ಸರಿದೂಗಿಸುತ್ತದೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!
ಪಶ್ಚಿಮ ದಿಕ್ಕಿನ ಗೋಡೆಗೆ
ಈ ದಿಕ್ಕಿಗೆ ಗೋಡೆ ಇಲ್ಲವೇ ಕೋಣೆ ಇದ್ದರೆ, ಇದಕ್ಕೆ ಯಾವಾಗಲೂ ನೀಲಿ ಬಣ್ಣವನ್ನು ಬಳಿಯಬೇಕಾಗುತ್ತದೆ. ಆದರೆ, ಯಾವುದೇ ಕಾರಣಕ್ಕೂ ಬಹಳ ಕಪ್ಪು, ಡಾರ್ಕ್ ಆಗಿರುವ ಬಣ್ಣಗಳನ್ನು ಬಳಸುವುದು ಉತ್ತಮವಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಉತ್ತರ ದಿಕ್ಕಿನ ಗೋಡೆಗೆ
ಉತ್ತರ ದಿಕ್ಕಿಗೆ ಗೋಡೆ ಇದ್ದರೆ ತಿಳಿಹಸಿರು ಇಲ್ಲವೇ ಪಿಸ್ತಾ ಹಸಿರಿನ ಬಣ್ಣವನ್ನೂ ಬಳಸಬಹುದಾಗಿದೆ. ಇನ್ನು ಆಕಾಶ ನೀಲಿ ಬಣ್ಣವನ್ನು ಬಳಸಲೂ ಅವಕಾಶವಿದೆ ಎಂದು ಹೇಳಲಾಗಿದೆ. ಹಸಿರು ಬಣ್ಣವು ಆರ್ಥಿಕ ಸಂಪನ್ನತೆಯ ಪ್ರತೀಕವಾಗಿದೆ. ಇದರ ಮೂಲಕ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.
ದಕ್ಷಿಣ ದಿಕ್ಕಿನ ಗೋಡೆಗೆ
ಈ ದಿಕ್ಕಿನಲ್ಲಿ ಇರುವ ಗೋಡೆಗೆ ಕೆಂಪು ಬಣ್ಣವನ್ನು ಲೇಪಿಸಬೇಕು. ದಕ್ಷಿಣ ದಿಕ್ಕಿನ ಪ್ರತಿನಿಧಿ ಗ್ರಹ ಮಂಗಳವಾಗಿರುವ ಕಾರಣ ಕೆಂಪು ಬಣ್ಣ ಬಳಿದರೆ ಉತ್ತಮ.
ಆಗ್ನೇಯದಿಕ್ಕಿನ ಗೋಡೆಗೆ
ಆಗ್ನೇಯ ದಿಕ್ಕಿನಲ್ಲಿರುವ ಗೋಡೆಗೆ ಕೇಸರಿ, ಹಳದಿ ಅಥವಾ ಬಿಳಿ ಬಣ್ಣವನ್ನೂ ಬಳಿಯಬಹುದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಹಳದಿಗೆ ವಿಶೇಷ ಗೌರವ ಇದ್ದು, ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ಹೀಗಾಗಿ ಬಣ್ಣ ಉತ್ತಮವಾಗಿದೆ.
ನೈರುತ್ಯ ದಿಕ್ಕಿನ ಗೋಡೆಗೆ
ನೈರುತ್ಯ ದಿಕ್ಕಿನಲ್ಲಿ ಗೋಡೆ ಇದ್ದರೆ ಬೂದುಬಣ್ಣವನ್ನು ಬಳಿಯಬೇಕು. ಇಲ್ಲವೇ ಹಸಿರು ಬಣ್ಣವನ್ನು ಬಳಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಈ ರಾಶಿಯವರಿಗೆ ಬ್ರೇಕ್‌ಅಪ್ ಆದ್ರೆ ಒಪ್ಪಿಕೊಳ್ಳೋದು ತುಂಬಾ ಕಷ್ಟ; ನಿಮ್ಮದು ಯಾವ ರಾಶಿ..?
ವಾಯವ್ಯ ದಿಕ್ಕಿನ ಗೋಡೆಗೆ
ವಾಯವ್ಯ ದಿಕ್ಕಿನಲ್ಲಿ ಗೋಡೆಯನ್ನು ಕಟ್ಟಲಾಗಿದ್ದರೆ ಇಲ್ಲವೇ ಕೊಠಡಿ ಇದ್ದರೆ ಕ್ರೀಂ ಬಣ್ಣ, ಬಿಳಿ ಬಣ್ಣವನ್ನು ಬಳಸಬಹುದು ಎಂದು ವಾಸ್ತು ಪ್ರಕಾರ ಹೇಳಲಾಗಿದೆ.
ಈಶಾನ್ಯ ದಿಕ್ಕಿನ ಗೋಡೆಗೆ
ಈಶಾನ್ಯ ದಿಕ್ಕಿನಲ್ಲಿ ಗಾಳಿ ಬರುವಂತೆ ಜಾಗವನ್ನು ಬಿಟ್ಟಿದ್ದರೆ ಬಹಳ ಉತ್ತಮ. ಇಲ್ಲದಿದ್ದರೆ ಗೋಡೆಗೆ ಬಿಳಿ ಅಥವಾ ಆಕಾಶ ನೀಲಿ ಇಲ್ಲವೇ ನೇರಳೆ ಬಣ್ಣವನ್ನು ಬಳಿಯಬೇಕು. ಇದರಿಂದ ಮನೆಯಲ್ಲಿ ಸುಖ-ಶಾಂತಿಗಳು ಉಂಟಾಗುತ್ತದೆ.