Navaratri 2023: ದುರ್ಗಾ ಮಾತೆ ಮಹಿಷಾಸುರನನ್ನು ವಧೆ ಮಾಡಿದ ಸ್ಥಳ ಎಲ್ಲಿದೆ ಗೊತ್ತಾ?
ದುರ್ಗಾ ದೇವಿ ಮಹಿಷಾಸುರನನ್ನು ಸಂಹಾರ ಮಾಡಿದ ಕತೆಯನ್ನು ಕೇಳಿದ್ದೇವೆ. ಈ ಸ್ಥಳ ಛತ್ತೀಸ್ ಗಢದ ಕೋಂಡಾಗಾಂವ್ ಜಿಲ್ಲಾ ಕೇಂದ್ರದಿಂದ 50 ಕಿಲೋಮೀಟರ್ ದೂರದಲ್ಲಿರುವ ಬಡೇ ಡೋಂಗರ್ ಎಂಬಲ್ಲಿದೆ. ಎತ್ತರದ ಕಲ್ಲಿನ ಬೆಟ್ಟದ ಮೇಲೆ ಮಹಿಷಾಸುರನನ್ನು ಸಂಹಾರ ಮಾಡಿದ ದಂತೇಶ್ವರಿ ವಿರಾಜಮಾನಳಾಗಿದ್ದಾಳೆ.

ಶಕ್ತಿ ದೇವತೆಯನ್ನು ವಿಧ ವಿಧ ಸ್ವರೂಪಗಳಲ್ಲಿ ಆರಾಧಿಸುವುದು ನವರಾತ್ರಿಯ ವೈಶಿಷ್ಟ್ಯ. ನವರಾತ್ರಿಯ ಆಚರಣೆಯ ಕತೆ ರೋಚಕವಾಗಿದೆ. ಮಹಿಷಾಸುರನನ್ನು ಸಂಹಾರ ಮಾಡಿದ ಮಾತೆ ದುರ್ಗಾದೇವಿಯನ್ನು ಮಹಿಷಾಸುರ ಮರ್ದಿನಿ ಎಂದೇ ಸ್ತುತಿಸಲಾಗಿದೆ. ಆಕೆ 9 ದಿನಗಳ ಕಾಲ ರಾಕ್ಷಸನೊಂದಿಗೆ ಹೋರಾಡಿ, ಹತ್ತನೆಯ ದಿನ ವಿಜಯ ಗಳಿಸಿದಳು ಎನ್ನಲಾಗುತ್ತದೆ. ಇದರ ಸಂಕೇತವಾಗಿಯೇ ನವರಾತ್ರಿಗಳಲ್ಲಿ ದೇವತಾರಾಧನೆ ಹಾಗೂ ವಿಜಯದಶಮಿಯಂದು ವಿಜಯದ ಆಚರಣೆ ಮಾಡಲಾಗುತ್ತದೆ. ಈ ಮಹಿಷ, ಎಮ್ಮೆಯ ರೂಪದಲ್ಲಿದ್ದ ರಾಕ್ಷಸನಾಗಿದ್ದ. ಈತ ವಿದ್ಯುನ್ಮಾಲಿ ಮತ್ತು ಮಾಲಿನಿ ರಾಕ್ಷಸ ದಂಪತಿಯ ಪುತ್ರ. ಋಷಿಯ ಶಾಪದಿಂದ ಕೋಣದ ರೂಪದಲ್ಲಿ ಜನಿಸಿರುತ್ತಾನೆ. ಒಮ್ಮೆ ಈತನ ತಂದೆ ವಿದ್ಮುನ್ಮಾಲಿ ದೇವೇಂದ್ರನ ಮೇಲೆ ಯುದ್ಧ ಸಾರಿ ಅಸುನೀಗುತ್ತಾನೆ. ಆಗ ಬಾಲಕ ಮಹಿಷ ದೇವೇಂದ್ರನ ವಿರುದ್ಧ ಹೋರಾಡಲು ಹೊರಟಾಗ ಆತನ ತಾಯಿ ಮಾಲಿನಿ ತಪಸ್ಸನ್ನು ಆಚರಿಸಿ ಶಕ್ತಿ ಸಂಪಾದನೆ ಮಾಡಿಕೊಳ್ಳುವಂತೆ ಸೂಚನೆ ನೀಡುತ್ತಾಳೆ. ಅದರಂತೆ ನಡೆದುಕೊಂಡ ಮಹಿಷ, ಸಿಂಹವನ್ನು ಪಳಗಿಸಬಲ್ಲ ಹೆಣ್ಣೊಬ್ಬಳಿಂದಲ್ಲದೇ ಬೇರೆ ಯಾರಿಂದಲೂ ಮರಣ ಉಂಟಾಗದು ಎನ್ನುವ ವರ ಗಳಿಸುತ್ತಾನೆ.
ಹೀಗೆ ವರ ಪಡೆದ ಮಹಿಷ ಮುಂದೆ ದೇವೇಂದ್ರನನ್ನು ಸೋಲಿಸಿ ತಾನೇ ಇಂದ್ರನ ಸ್ಥಾನ ಹೊಂದುತ್ತಾನೆ. ದೇವತೆಗಳನ್ನು ದೇವಲೋಕದಿಂದ ದಬ್ಬುತ್ತಾನೆ. ಜನರಿಗೂ ತೊಂದರೆ ನೀಡುತ್ತಾನೆ. ಆಗ ದೇವತೆಗಳು ತ್ರಿಮೂರ್ತಿಗಳ ಮೊರೆ ಹೋದಾಗ ಅವರು ಆದಿಮಾಯೆಯನ್ನು ಸ್ತುತಿಸಲು ತಿಳಿಸುತ್ತಾರೆ. ಆದಿಮಾಯೆಯ ಸಂಕಲ್ಪದ ಫಲವಾಗಿ ದುರ್ಗಾದೇವಿ ಅವತಾರವೆತ್ತುತ್ತಾಳೆ. ಎಲ್ಲ ದೇವರುಗಳು ಆಕೆಗೆ ವಿವಿಧ ಶಕ್ತಿಗಳನ್ನು ನೀಡುತ್ತಾರೆ. ಹೀಗಾಗಿಯೇ ದುರ್ಗಾ ದೇವಿ ಅತಿ ಶಕ್ತಿಶಾಲಿ ಎಂದು ಪರಿಗಣಿಸಲ್ಪಟ್ಟಿದ್ದಾಳೆ. ಕೊನೆಗೆ, ಸಿಂಹವಾಹಿನಿಯಾಗಿ ಪ್ರಕಟಗೊಳ್ಳುವ ದುರ್ಗಾ ದೇವಿ ಮಹಿಷಾಸುರನನ್ನು ಸಂಹರಿಸಿ ಎಲ್ಲರನ್ನೂ ರಕ್ಷಿಸುತ್ತಾಳೆ. ಅಂದಿನಿಂದ ದುರ್ಗಾ ದೇವಿಯ ಆರಾಧನೆ ಆರಂಭವಾಯಿತು ಎನ್ನುತ್ತವೆ ಪುರಾಣ ಕತೆಗಳು.
Navratri 2023 : ನವರಾತ್ರಿ ಮುಗಿಯುವ ಒಳಗೆ ಈ ವಸ್ತು ದಾನ ಮಾಡಿದ್ರೆ ಧನಲಾಭ!
ಮಹಿಷಾಸುರನ (Mahishasura) ಕೊಂದ ಸ್ಥಳ
ಹೀಗೆ ದುರ್ಗಾ ದೇವಿ (Durga Devi) ಮಹಿಷಾಸುರನನ್ನು ಕೊಂದ ಸ್ಥಳ ಯಾವುದು ಗೊತ್ತೇ? ಛತ್ತೀಸ್ ಗಢದ (Chhattisgarh) ಕೋಂಡಾಗಾಂವ್ (Kondagaon) ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ದುರ್ಗಾ ದೇವಿ ಮಹಿಷಾಸುರನನ್ನು ಸಂಹಾರ ಮಾಡಿದ್ದಾಳೆ ಎನ್ನಲಾಗುತ್ತದೆ. ಇಲ್ಲಿ ವಿಸ್ತಾರವಾದ ಶಿಲೆಗಳ (Rock) ಪ್ರದೇಶವಿದೆ, ಅನೇಕ ಗುಹೆಗಳಿವೆ. ಇಲ್ಲಿ ಶತಮಾನಗಳಷ್ಟು (Old) ಹಳೆಯ ದಂತೇಶ್ವರಿ ಮಂದಿರವಿದೆ. ಕೋಂಡಾಗಾಂವ್ ನ ಬಡೆ ಡೋಂಗರ್ ಎನ್ನುವಲ್ಲಿರುವ ಈ ಮಂದಿರ (Temple) ಎತ್ತರದ ಬೆಟ್ಟದ ಮೇಲಿದೆ. ನವರಾತ್ರಿಯ ಸಮಯದಲ್ಲಿ ಅಪಾರ ಸಂಖ್ಯೆಯ ಭಕ್ತರು ನೆರೆಯುತ್ತಾರೆ. ಮಾತೆಯ ದರ್ಶನ ಪಡೆದು ಪುನೀತರಾಗುತ್ತಾರೆ.
ದಂತೇಶ್ವರಿ ಮಂದಿರದ ವಿಶೇಷತೆಯೆಂದರೆ, ಮಾತೆ ದುರ್ಗೆಯ ಪಾದಗಳು (Foot) ಮತ್ತು ಸಿಂಹದ ಪಂಜದ ಗುರುತುಗಳು ಇಂದಿಗೂ ಇಲ್ಲಿವೆ. ಇಲ್ಲಿನ ಸ್ಥಳೀಯರ ಪ್ರಕಾರ, ಮಹಿಷಾಸುರನ ಸಂಹಾರಕ್ಕೆಂದು ದುರ್ಗಾ ಮಾತೆ ಪ್ರಕಟವಾದಾಗ ಆತ ದೇವಿಯಿಂದ ತಪ್ಪಿಕೊಳ್ಳಲು ಕಲ್ಲುಗಳಿಂದ ಆವೃತವಾಗಿರುವ ಈ ಎತ್ತರ ಬೆಟ್ಟವೇರಿ ಅಡಗಿಕೊಂಡ. ಮಾತೆ ದುರ್ಗಾ ದೇವಿ ನಾಲ್ಕೂ ಕಡೆಗಳಿಂದ ಆತನನ್ನು ಆವರಿಸಿ ನಿಂತು ಅವನನ್ನು ಸಂಹಾರ ಮಾಡಿದಳು. ಅದರ ಪ್ರತೀಕವಾಗಿ ವಿಶಾಲವಾದ ಕಲ್ಲಿನ ಮೇಲೆ ಮಾತೆ ದುರ್ಗೆ ಮತ್ತು ಸಿಂಹದ ಪಾದದ ಗುರುತುಗಳಿವೆ.
ನವರಾತ್ರಿ ಉಪವಾಸ ಮಾಡ್ತೀರಿ ಅಂತಾದ್ರೆ ಇವನ್ನು ಫಾಲೋ ಮಾಡಿ, ಆರಾಮಾಗಿರಿ
ಧ್ವನಿ (Voice) ಹೊಮ್ಮಿಸುವ ಶಿಲೆ: ಬಡೇ ಡೋಂಗರ್ ನ ಈ ಸ್ಥಳವೇ ಮಹಿಷಾಸುರನನ್ನು ಮರ್ದನ ಮಾಡಿದ ಕ್ಷೇತ್ರವಾಗಿದೆ. ಬಳಿಕ, ರಾಜರುಗಳ ಕಾಲದಲ್ಲಿ ದಂತೇಶ್ವರಿ (Danteshwari) ಮಂದಿರ ನಿರ್ಮಿಸಲಾಗಿದೆ. ಇಲ್ಲಿನ ಕಲ್ಲುಗಳ ಸಮೂಹದಲ್ಲಿ ಗುಹೆಗಳಿವೆ. ಇದನ್ನು ಭೈಂಸಾ ಅಂದರೆ ಎಮ್ಮೆಯ ಗುಡ್ಡ ಎಂದೇ ಕರೆಯಲಾಗುತ್ತದೆ. ಸ್ಥಳೀಯರ ಪ್ರಕಾರ, ಇಲ್ಲಿ ಹಲವು ನಿಗೂಢಗಳಿವೆ. ಇಲ್ಲಿ ಧ್ವನಿ ತರಂಗಗಳನ್ನು ಹೊಮ್ಮಿಸುವ ಶಿಲೆಯೂ ಇದೆ. ಇಲ್ಲಿರುವ ಬೇರೆ ಎಲ್ಲ ಕಲ್ಲುಗಳಿಗಿಂತ ಇದು ವಿಶೇಷವಾಗಿದೆ. ಮತ್ತೊಂದು ಕಲ್ಲನ್ನು ತೆಗೆದುಕೊಂಡು ಉಜ್ಜಿದರೆ ತರಂಗಗಳು ಹೊಮ್ಮುತ್ತವೆ.