ಇಷ್ಟು ಶುಕ್ರವಾರ Vaibhav Laxmi Vrat ಆಚರಿಸಿದ್ರೆ ಹಣದ ಕೊರತೆ ಇರದು!
ಸಂಪತ್ತಿನ ಅಧಿದೇವತೆಯನ್ನು ಮೆಚ್ಚಿಸಲು, ವೈಭವ ಲಕ್ಷ್ಮೀ ವ್ರತ ಆಚರಿಸುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಈ ಉಪವಾಸವನ್ನು ಯಾವಾಗ ಮತ್ತು ಹೇಗೆ ಆಚರಿಸಬೇಕು? ಉಪವಾಸದ ನಿಯಮಗಳೇನು?
ತಾಯಿ ಲಕ್ಷ್ಮಿಯು ಸಂಪತ್ತು ಮತ್ತು ಸಮೃದ್ಧಿಯ ದೇವತೆ. ಲಕ್ಷ್ಮಿ ದೇವಿಯ ಹಲವು ರೂಪಗಳಿವೆ. ಕೆಲವರು ತಾಯಿ ಲಕ್ಷ್ಮಿಯನ್ನು ಧನಲಕ್ಷ್ಮಿ ಎಂದು ಪೂಜಿಸುತ್ತಾರೆ, ಕೆಲವರು ವೈಭವ ಲಕ್ಷ್ಮಿ ಎಂದೂ, ಕೆಲವರು ಗಜಲಕ್ಷ್ಮಿ ಮತ್ತು ಕೆಲವರು ಭಾಗ್ಯ ಲಕ್ಷ್ಮಿ ಎಂದು ಪೂಜಿಸುತ್ತಾರೆ. ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು, ಒಬ್ಬ ವ್ಯಕ್ತಿಯು ತನ್ನ ಇಚ್ಛೆಯ ಪ್ರಕಾರ ದೇವಿಯನ್ನು ಪೂಜಿಸುತ್ತಾನೆ.
ಮನೆಯಲ್ಲಿ ಸದಾ ಕಷ್ಟಕೋಟಲೆಗಳು ತುಂಬಿದ್ದರೆ, ಸಮಸ್ಯೆಗಳು ಒಂದಾದ ಮೇಲೊಂದರಂತೆ ಬರುತ್ತಲೇ ಇದ್ದರೆ, ಹಣದ ಅಡಚಣೆ ತಪ್ಪುತ್ತಲೇ ಇಲ್ಲವೆಂದರೆ ಮಹಿಳೆಯರು ವೈಭವ ಲಕ್ಷ್ಮೀ ವ್ರತ(Vaibhav Laxmi Vrat) ಆಚರಿಸಬೇಕು. ಇದರಿಂದ ಈ ವಿಷಯದಲ್ಲಾಗುವ ಅಡೆತಡೆಗಳು ಪರಿಹಾರವಾಗುತ್ತವೆ.
ಸಂಪತ್ತಿನ ಅಧಿದೇವತೆಯನ್ನು ಮೆಚ್ಚಿಸಲು, ವೈಭವ ಲಕ್ಷ್ಮಿಯ ಉಪವಾಸವನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ವೈಭವ ಲಕ್ಷ್ಮೀಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಂಪತ್ತು ನೆಲೆಸುತ್ತದೆ. ಈ ವ್ರತವನ್ನು ಯಾವಾಗ ಮತ್ತು ಹೇಗೆ ಆಚರಿಸಬೇಕು ಎಂದು ನಾವು ತಿಳಿಸುತ್ತೇವೆ.
ವೈಭವ ಲಕ್ಷ್ಮೀ ವ್ರತವನ್ನು ಯಾವಾಗ ಮಾಡಬೇಕು?
ಯಾವುದೇ ಶುಕ್ರವಾರ(Friday)ದಿಂದ ವೈಭವ ಲಕ್ಷ್ಮೀ ವ್ರತ ಆರಂಭಿಸಬಹುದು. ನೀವು ಉಪವಾಸವನ್ನು ಪ್ರಾರಂಭಿಸಿದ ಶುಕ್ರವಾರದ ದಿನದಿಂದ 11 ಶುಕ್ರವಾರಗಳು ಅಥವಾ 21 ಶುಕ್ರವಾರಗಳು ಉಪವಾಸ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ. 21ನೇ ಶುಕ್ರವಾರದ ಬಳಿಕ ಉದ್ಯರ್ಪಣೆ ಮಾಡಿ ವ್ರತ ಮುಕ್ತಾಯಗೊಳಿಸಬಹುದು.
Ashwini Nakshatraದಲ್ಲಿ ಜನಿಸಿದವರಿಗೆ ಈ ವೃತ್ತಿಯೇ ಬೆಸ್ಟ್.. ಇವರಿಗೆ ಯಾವಾಗ ವಿವಾಹವಾಗುತ್ತೆ?
ವೈಭವ ಲಕ್ಷ್ಮೀ ವ್ರತವನ್ನು ಹೇಗೆ ಮಾಡಬೇಕು?(Puja method)
ಶುಕ್ರವಾರ ಬೆಳಗ್ಗೆ ಸ್ನಾನ ಮಾಡಿ ಶುಭ್ರ, ತೊಳೆದ ಬಟ್ಟೆ ಧರಿಸಿ ಉಪವಾಸ ವ್ರತ ಕೈಗೊಳ್ಳಬೇಕು. ಕೆಂಪು ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಉಪವಾಸದ ದಿನದಲ್ಲಿ ಇಡೀ ದಿನ ನೀವು ಶಕ್ತಿಗಾಗಿ ಹಣ್ಣುಗಳನ್ನು ಸೇವಿಸಬಹುದು.
ಶುಕ್ರವಾರ ಸಂಜೆ ಮತ್ತೆ ಸ್ನಾನ ಮಾಡಿದ ನಂತರ, ಪೂರ್ವ ದಿಕ್ಕಿನಲ್ಲಿ ಮಣೆಯಿಟ್ಟು ಅದರ ಮೇಲೆ ಕೆಂಪು ಬಟ್ಟೆಯನ್ನು ಹರಡಿ. ಅದರ ಮೇಲೆ ಮಾ ಲಕ್ಷ್ಮಿ ಮತ್ತು ಶ್ರೀಯಂತ್ರದ ಪ್ರತಿಮೆ ಅಥವಾ ವಿಗ್ರಹವನ್ನು ಸ್ಥಾಪಿಸಿ.
ವೈಭವ ಲಕ್ಷ್ಮಿಯ ಚಿತ್ರದ ಮುಂದೆ ಒಂದು ಹಿಡಿ ಅಕ್ಕಿಯನ್ನು ಹಾಕಿ. ಅದರ ಮೇಲೆ ನೀರು ತುಂಬಿದ ತಾಮ್ರದ ಕಲಶವನ್ನು ಇಡಿ. ಕಲಶದ ಮೇಲಿರುವ ಬಟ್ಟಲಿನಲ್ಲಿ ಬೆಳ್ಳಿಯ ನಾಣ್ಯಗಳನ್ನು ಅಥವಾ ಯಾವುದೇ ಚಿನ್ನ-ಬೆಳ್ಳಿಯ ಆಭರಣಗಳನ್ನು ಇರಿಸಿ.
ಮಾ ಲಕ್ಷ್ಮಿಗೆ ಕುಂಕುಮ, ಅರಿಶಿನ, ಹೂವುಗಳು, ಅಕ್ಕಿ ಕಡುಬು ಇತ್ಯಾದಿಗಳನ್ನು ಅರ್ಪಿಸಿ. ಪೂಜೆಯ ನಂತರ ವೈಭವ ಲಕ್ಷ್ಮಿ ಕಥಾ ಪಠಿಸಿ. ನಿಮಗೆ ಸಾಧ್ಯವಾದಷ್ಟು ವೈಭವ ಲಕ್ಷ್ಮಿ ಮಂತ್ರವನ್ನು ಪಠಿಸಿ ಮತ್ತು ಕೊನೆಯಲ್ಲಿ ಲಕ್ಷ್ಮಿ ದೇವಿಯ ಆರತಿಯನ್ನು ಮಾಡಿ. ಸಂಜೆ ಪೂಜೆಯ ನಂತರ ನೀವು ಆಹಾರವನ್ನು ತೆಗೆದುಕೊಳ್ಳಬಹುದು.
ವೈಭವ ಲಕ್ಷ್ಮಿ ಮಂತ್ರ(Mantra)
ಯಾ ರಕ್ತಾಂಬುಜವಾಸಿನೀ ವಿಲಾಸಿನೀ ಚನ್ದಾಂಶು ತೇಜಸ್ವಿನೀ । ಯಾ ರಕ್ತಾ ರುಧಿರಾಮ್ಬರಾ ಹರಿಶಾಖೀ ಅಥವಾ ಶ್ರೀ ಮನೋಲಹಾದಿನೀ ॥
ಯಾ ರತ್ನಾಕರಮನ್ತನಾತ್ಪ್ರಗತಿತಾ ವಿಷ್ಣೋಸ್ವಯ ಗೇಹಿನೀ । ಸಾ ಮಾಂ ಪಾತು ಮನೋರಮಾ ಭಗವತೀ ಲಕ್ಷ್ಮೀಶ್ಚ ಪದ್ಮಾವತಿ ॥
Weekly Love Horoscope: ಅಹಂ ಬದಿಗಿಡದಿದ್ದರೆ ಈ ವಾರ ನಿಮ್ಮ ಪ್ರೇಮ ಜೀವನದಲ್ಲಿ ದೊಡ್ಡ ಬಿರುಕು!
ವೈಭವ ಲಕ್ಷ್ಮಿ ವ್ರತ ನಿಯಮಗಳು(Vaibhav Lakshmi Vrat rules)
ಲಕ್ಷ್ಮಿ ದೇವಿಗೆ ಅರ್ಪಿಸಿದ ಖೀರ್‌ನೊಂದಿಗೆ ಉಪವಾಸವನ್ನು ಮುರಿಯಿರಿ.
ಈ ದಿನ ಹುಳಿ ಪದಾರ್ಥಗಳನ್ನು ತಿನ್ನಬಾರದು.
ವೈಭವ ಲಕ್ಷ್ಮಿ ವ್ರತದ ಸಮಯದಲ್ಲಿ ಶ್ರೀಯಂತ್ರವನ್ನು ಪೂಜಿಸುವುದನ್ನು ಖಚಿತಪಡಿಸಿಕೊಳ್ಳಿ.
ಪೂಜೆಯ ಸಮಯದಲ್ಲಿ ಭಕ್ತಿ ಇರಲಿ, ದುರಾಸೆ, ಕಲ್ಮಶ ಮನಸ್ಸು, ಮತ್ತೊಬ್ಬರಿಗೆ ಕೆಡುಕು ಬಯಸುವುದು ಬೇಡ.