ರಾತ್ರಿ ಗುಡಿಸಬಾರದು ಅಂತಾರೆ, ಇನ್ನು ದೇವರ ಮನೆ ಕ್ಲೀನ್ ಮಾಡಿದ್ರೆ ಓಕೇನಾ?

ಅನೇಕರು ಸಮಯ ಉಳಿಸಲು ನೋಡ್ತಾರೆ. ಇದೇ ಕಾರಣಕ್ಕೆ ರಾತ್ರಿಯೇ ಎಲ್ಲ ಕೆಲಸ ಮಾಡಲು ಬಯಸ್ತಾರೆ. ದೇವರ ಮನೆಯನ್ನು ಕೂಡ ತಡರಾತ್ರಿ ಕ್ಲೀನ್ ಮಾಡೋರಿದ್ದಾರೆ. ನಿಮಗೂ ಈ ಅಭ್ಯಾಸವಿದ್ರೆ ಇಂದೇ ಬಿಡಿ.
 

When Should We Lean Temple

ದೇವಸ್ಥಾನ ಯಾವಾಗ್ಲೂ ಶುದ್ಧವಾಗಿರಬೇಕು. ಸ್ವಚ್ಛವಾದ ಸ್ಥಳದಲ್ಲಿ ಮಾತ್ರ ದೇವರು ನೆಲೆಸಲು ಸಾಧ್ಯ. ಪ್ರತಿಯೊಬ್ಬರ ಮನೆಯಲ್ಲೂ ಪ್ರತ್ಯೇಕ ದೇವರ ಕೋಣೆಯಿರುತ್ತದೆ. ಪ್ರತಿ ದಿನ ಈ ದೇವರ ಮನೆಯನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕುವ ಪದ್ಧತಿ ಹಿಂದೂ ಧರ್ಮದಲ್ಲಿ ರೂಢಿಯಲ್ಲಿದೆ. ದೇವರ ಮನೆ ಕೊಳಕಾಗಿದ್ದರೆ ಅಲ್ಲಿ ದೇವರು ವಾಸ ಮಾಡುವುದಿಲ್ಲ. ಮನೆಗೆ ದೇವರ ಕೃಪೆ ಇಲ್ಲವೆಂದ್ರೆ ಅನೇಕ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜನರು ಕಾಲದ ಜೊತೆ ಓಡ್ತಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣ ದೇವರ ಮನೆ ಸ್ವಚ್ಛಗೊಳಿಸಿ, ಪೂಜೆ ಮಾಡಲು ಅನೇಕರಿಗೆ ಸಮಯವಿರುವುದಿಲ್ಲ. ಹಾಗಾಗಿ ರಾತ್ರಿಯೇ ದೇವರ ಮನೆ ಸ್ವಚ್ಛಗೊಳಿಸಿ, ರಂಗೋಲಿ ಹಾಕಿಡುವವರಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾತ್ರಿ ದೇವರ ಮನೆ ಕ್ಲೀನ್ ಮಾಡೋದು ಎಷ್ಟು ಸರಿ ಎಂಬುದನ್ನು ನಾವಿಂದು ಹೇಳ್ತೇವೆ.

ರಾತ್ರಿ (Night) ದೇವರ ಮನೆ ಕ್ಲೀನ್ (Clean) ಮಾಡೋದು ಸರಿಯೇ? ತಪ್ಪೇ? : ಅನಾದಿ ಕಾಲದಿಂದಲೂ ರಾತ್ರಿ ವೇಳೆ ಮನೆ ಅಥವಾ ದೇವರ ಸ್ಥಾನವನ್ನು ಸ್ವಚ್ಛಗೊಳಿಸಬಾರದು ಎಂಬ ನಂಬಿಕೆ ಇದೆ. ರಾತ್ರಿ ದೇವರ ಮನೆ ಕ್ಲೀನ್ ಮಾಡೋದ್ರಿಂದ ಲಕ್ಷ್ಮಿ ಮುನಿಸಿಕೊಳ್ತಾಳೆ. ಲಕ್ಷ್ಮಿ ಮನೆಗೆ ಬರುವುದಿಲ್ಲವೆಂದು ನಂಬಲಾಗಿದೆ. ರಾತ್ರಿ ದೇವರ ಮನೆ ಅಥವಾ ದೇವಸ್ಥಾನ ಸ್ವಚ್ಛಗೊಳಿಸಿದರೆ ಧನ ಹಾನಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಸ್ಥಾನ ಹಾಗೂ ದೇವ ಮನೆಯಲ್ಲಿ  ಕೆಲವು ಬೆಲೆಬಾಳುವ ವಸ್ತುಗಳನ್ನು ಇಡಲಾಗುತ್ತದೆ. ಹಿಂದಿನ ಕಾಲದಲ್ಲಿ ಸರಿಯಾದ ದೀಪದ ವ್ಯವಸ್ಥೆ ಇರಲಿಲ್ಲ. ಮಂದ ಬೆಳಕಿನಲ್ಲಿ ದೇವರ ಮನೆಯನ್ನು ಸ್ವಚ್ಛಗೊಳಿಸಿದ್ರೆ ಅಮೂಲ್ಯ ವಸ್ತುಗಳು ಕಸಕ್ಕೆ ಸೇರುವ ಸಾಧ್ಯತೆಯಿತ್ತು. ಕತ್ತಲೆಯಲ್ಲಿ ದೇವರ ಮನೆ ಕ್ಲೀನ್ ಮಾಡುವಾಗ ದೇವರ ಮೂರ್ತಿಯೇ ಕಳೆದು ಹೋದ ಉದಾಹರಣೆಯಿತ್ತು. ಹಾಗಾಗಿ ಆಗ ರಾತ್ರಿ ದೇವರ ಮನೆಯನ್ನು ಸ್ವಚ್ಛಗೊಳಿಸಬಾರದೆಂದು ಹಿರಿಯರು ಹೇಳ್ತಿದ್ದರು. ಆ ಪದ್ಧತಿ ಈಗ್ಲೂ ಜಾರಿಯಲ್ಲಿದೆ.  

NAVRATRI: ದುರ್ಗೆ ಪೂಜೆ ವೇಳೆ ಈ ತಪ್ಪು ಮಾಡಿದ್ರೆ ಕೋಪಗೊಳ್ತಾಳೆ ತಾಯಿ

ಬರೀ ಇಷ್ಟೇ ಕಾರಣವಲ್ಲ, ರಾತ್ರಿ (Night) ದೇವರು ನಿದ್ರೆ ಮಾಡುತ್ತಾನೆ ಎಂಬ ನಂಬಿಕೆಯೂ ಇದೆ. ಸೂರ್ಯಾಸ್ತದ (Sun set) ನಂತ್ರ ಮನೆಯನ್ನು ಸ್ವಚ್ಛಗೊಳಿಸಲು ಒಪ್ಪಿಗೆ ಇಲ್ಲ. ಹಾಗೆಯೇ ಸಂಧ್ಯಾವಂದನೆ, ಆರತಿ ನಂತರ ದೇವರು ವಿಶ್ರಾಂತಿ ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ದೇವರು ಮಲಗಿದ್ದ ಸಮಯದಲ್ಲಿ ದೇವರ ಮನೆ ಅಥವಾ ದೇವಸ್ಥಾನಕ್ಕೆ ಹೋಗಿ ಅಲ್ಲಿ ಸ್ವಚ್ಛತೆ (Cleanliness) ಕೈಗೊಂಡರೆ ದೇವರ ನಿದ್ರೆ ಭಂಗವಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿಯೇ ಮುಸ್ಸಂಜೆಯ ನಂತರ ದೇವರ ಮನೆಯನ್ನು ಸ್ವಚ್ಛಗೊಳಿಸಬಾರದು ಎಂದು ಹೇಳಲಾಗುತ್ತದೆ.  ರಾತ್ರಿ ಭಗವಂತನನ್ನು ನಿದ್ರೆಯಿಂದ ಎಬ್ಬಿಸಿದರೆ ಅದು ಅವರಿಗೆ ಅಪಮಾನ  ಮಾಡಿದಂತೆ. ಇದ್ರಿಂದ ಮನೆಯ ಸಮೃದ್ಧಿ ನಾಶವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.  

ಅನೇಕರು ಸಂಜ ದೀಪ ಹಚ್ಚಿ ಆರತಿ ಬೆಳಗುತ್ತಾರೆ. ದೀಪ ಅನೇಕ ಸಮಯ ಹಾಗೆ ಇರುತ್ತದೆ. ಇಂಥ ಸಂದರ್ಭದಲ್ಲಿ ನೀವು ದೇವರ ಮನೆ ಸ್ವಚ್ಛಗೊಳಿಸಲು ಹೋದ್ರೆ ದೀಪಕ್ಕೆ ಅಡ್ಡಿಯಾಗುತ್ತದೆ. ಮನೆಗೆ ಬರುವ ಸಮೃದ್ಧಿಯನ್ನು ಇದು ತಡೆಯುತ್ತದೆ. ಹಾಗೆಯೇ ಮನೆ ಸಮಸ್ಯೆಗೆ ಕಾರಣವಾಗುತ್ತದೆ.  

ದೇವರ ಮನೆಯನ್ನು ಸ್ವಚ್ಛಗೊಳಿಸುವ ವೇಳೆ ಶುದ್ಧತೆ ಬಗ್ಗೆ ಗಮನ ನೀಡಬೇಕು. ರಾತ್ರಿ ವ್ಯಕ್ತಿ ಅಶುದ್ಧವಾಗ್ತಾನೆ.  ಸ್ನಾನ ಮಾಡಿರುವುದಿಲ್ಲ. ಶೌಚಾಲಯಕ್ಕೆ ಹೋಗಿರ್ತಾನೆ. ಅಶುದ್ಧವಾಗಿ ದೇವರ ಮನೆ ಕ್ಲೀನ್ ಮಾಡಿದ್ರೆ ಅದು ದೇವರಿಗೆ ಅವಮಾನ ಮಾಡಿದಂತೆ. ಅಶುದ್ಧ ಬಟ್ಟೆಯಲ್ಲಿ ದೇವರ ಮನೆ ಸ್ವಚ್ಛಗೊಳಿಸಿದ್ರೆ ಮನೆಯ ಶಾಂತಿ ಕದಡುತ್ತದೆ. ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.

ನವರಾತ್ರಿಯಲ್ಲಿ ಸಮೃದ್ಧಿಗಾಗಿ ಈ Vastu Tips ಪಾಲಿಸಿ

ಮನೆಯಲ್ಲಿ ಸದಾ ಸಂತೋಷ, ಸಮೃದ್ಧಿ, ಸುಖ ಇರಬೇಕೆಂದ್ರೆ ರಾತ್ರಿ ದೇವರ ಮನೆಯನ್ನು ಸ್ವಚ್ಛಗೊಳಿಸಬೇಡಿ. ಶುದ್ಧ ಮನಸ್ಸಿನಿಂದ ಹಾಗೂ ಶುದ್ಧ ಬಟ್ಟೆ ಧರಿಸಿ ದೇವರ ಮನೆ ಕ್ಲೀನ್ ಮಾಡಬೇಕು. 
 

Latest Videos
Follow Us:
Download App:
  • android
  • ios