ಮೇಷ

ನಿಮ್ಮಲ್ಲಿ ಕನಸುಗಳು ಹಲವಿವೆ. ನಿರೀಕ್ಷೆಯೂ ಹೆಚ್ಚಿದೆ. ಅದೃಷ್ಟದಾಟವನ್ನು ಬಲವಾಗಿ ನಂಬುವವರು ನೀವು. ಈ ಬಾರಿಯ ಯುಗಾದಿ ನಿಮ್ಮ ನಿರೀಕ್ಷೆ ಹುಸಿ ಮಾಡಲ್ಲ. ಹಿನ್ನೆಲೆಗೆ ಬಿದ್ದ ಕೆಲಸ ಕಾರ್ಯಗಳು, ಮುಖ್ಯವಾಗಿ ನೀವು ಮನೆ ಕಟ್ಟುವ ಬಗ್ಗೆ ಯೋಚಿಸುತ್ತಿದ್ದರೆ ಈ ವರ್ಷಾಂತ್ಯದೊಳಗೆ ನಿಮ್ಮ ಕನಸು ಸಾಕಾರಗೊಳ್ಳುತ್ತದೆ. ಅಷ್ಟೇನೂ ಚೆನ್ನಾಗಿದ್ದಿರ, ತುಸು ಹಳಿ ತಪ್ಪಿದಂತಿದ್ದ ವೈವಾಹಿಕ ಜೀವ ರೊಮ್ಯಾಂಟಿಕ್ ಆಗಿ ಬದಲಾಗುತ್ತದೆ. ಆರ್ಥಿಕವಾಗಿ ಅನುಕೂಲಗಳಿವೆ. ಗಣಪತಿ ವಿಘ್ನ ನಿವಾರಕ. ಆತನ ಆಶೀರ್ವಾದ ಇದ್ದರೆ ಅದೃಷ್ಟ ಕೈಗೂಡುವುದರಲ್ಲಿ ಅನುಮಾನವೇ ಇಲ್ಲ. ಸಂಕಷ್ಟಿ ವೇಳೆ ಗಣೇಶನ ದೇವಾಲಯಕ್ಕೆ ಹೋಗಿ. ಒಂದಿಷ್ಟು ಹೊತ್ತು ಶಾಂತ ಚಿತ್ತರಾಗಿ ಭಗವಂತನನ್ನು ಧ್ಯಾನಿಸಿ. ಸಾಧ್ಯವಾದರೆ ಗರಿಕೆ ಸೇವೆ ಮಾಡಿ.

 

ಕನ್ಯಾ

ನಿಮಗೆ ತುಂಬ ಅದೃಷ್ಟ ತರುವ ವರ್ಷವಿದು. ನಿಮ್ಮ ಪ್ರಾಮಾಣಿಕತೆಗೆ ಈ ಬಾರಿ ಖಂಡಿತಾ ಬೆಲೆ ಸಿಗುತ್ತದೆ. ಪ್ರೀತಿ ವಿಷಯಕ್ಕೆ ಬಂದರೆ ಖಂಡಿತಾ ಕನಸು ಕೈಗೂಡುತ್ತದೆ. ಪ್ರಿಯರ ಜೊತೆಗೆ ಖುಷಿಯಿಂದ ಒಡನಾಡುತ್ತೀರಿ. ವಿವಾಹಿತರಾಗಿದ್ದರೆ ನಿಮ್ಮ ವೈವಾಹಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ. ಸಂಗಾತಿ ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ. ಕೆಲಸದ ವಿಷಯಕ್ಕೆ ಬಂದರೆ ವೃತ್ತಿಯಲ್ಲಿ ನೀವಂದುಕೊಡದ್ದಕ್ಕಿಂತ ಹೆಚ್ಚು ಮುಂದೆ ಹೋಗುತ್ತೀರಿ. ಸಾಮಾಜಿಕವಾಗಿ ಹೆಚ್ಚೆಚ್ಚು ಹೆಸರು ಬರುತ್ತವೆ. ಎಲ್ಲೆಲ್ಲೂ ಸಮೃದ್ಧಿಯ ಅನುಭವವಾಗುತ್ತದೆ. ನೀವು ವಾಹನ ಖರೀದಿಸಬೇಕೆಂದಿದ್ದರೆ ಖರೀದಿಯಾಗುತ್ತದೆ. ಹೆಚ್ಚೆಚ್ಚು ಸ್ನೇಹಿತರಾಗುತ್ತಾರೆ. ಅವರು ನಿಮ್ಮ ಜೊತೆಗೆ ಅನುನಯದಿಂದಿರುತ್ತಾರೆ. ಮನೆಯಲ್ಲಿ, ಕುಟುಂಬದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗುವಿರಿ. ತಾಯಿ ದುರ್ಗೆಗೆ ನಮಿಸಿ. ಅವಳು ನಿಮ್ಮನ್ನು ಕಾಯುತ್ತಾಳೆ.

 

ವೃಶ್ಚಿಕ

ನಿಮ್ಮ ಸಾವಧಾನತೆಯೇ ವರವಾಗುವ ಕಾಲವಿದು. ಆರ್ಥಿಕವಾಗಿಯೂ ಲಾಭ ಪಡೆಯುತ್ತೀರಿ. ಈವರೆಗೆ ಉಳಿತಾಯ ಅನ್ನುವುದು ಮರೀಚಿಕೆಯಾಗಿದ್ದ ನಿಮಗೆ ಈ ಕಾಲ ಉಳಿತಾಯಕ್ಕೆ ಸಕಾಲ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬಹುದು. ವೈವಾಹಿಕವಾಗಿ ಬಹಳ ಸಂತೋಷವಿದೆ. ಸಂಗಾತಿಯ ಪ್ರೀತಿ ನಿಮ್ಮ ಜೊತೆಗಿರುತ್ತದೆ. ನೀವು ಮದುವೆಯ ಯೋಚನೆಯಲ್ಲಿದ್ದರೆ ಈ ವರ್ಷ ನಿಮ್ಮ ಸಿಂಗಲ್ ಸ್ಟೇಟಸ್‌ ಗೆ ಗುಡ್ ಬೈ ಹೇಳಬಹುದು. ಹೊಸ ಕೆಲಸ ಶುರು ಮಾಡಲು ಇದು ಕರೆಕ್ಟ್ ಟೈಮ್. ಹಿಂದೆ ಮುರಿದುಕೊಂಡಿದ್ದ ಸಂಬಂಧಗಳು ಮತ್ತೆ ಕೂಡಿಕೊಳ್ಳುವ ಪ್ರಮೇಯ ಬರಬಹುದು. ಶಿವ ನಿಮಗೆ ಸದಾ ಒಳಿತು ಮಾಡುತ್ತಾನೆ. ಅವನ ಆಶೀರ್ವಾದ ಪಡೆಯಲು ನಿಮ್ಮೆಲ್ಲ ಸೋಮಾರಿತನ ಒತ್ತಟ್ಟಿಗಿಟ್ಟು ಶಿವಧ್ಯಾನ ಮಾಡಿ.

 

ಮಕರ

ಹಿಂದಿನಿಂದ ಕಾಡುತ್ತಿದ್ದ ಅನಾರೋಗ್ಯಕ್ಕೆ ಮುಕ್ತಿ ಸಿಗುತ್ತದೆ. ಕೌಟುಂಬಿಕ ಬದುಕು ತುಂಬ ಚೆನ್ನಾಗಿರುತ್ತದೆ. ನೀವು ಸಂಗಾತಿಗೆ ಸರಿಯಾಗಿ ಸಮಯ ಕೊಡುತ್ತಿಲ್ಲ. ಇನ್ನು ಮೇಲಾದರೂ ದಿನದಲ್ಲಿ ಒಂದಿಷ್ಟು ಸಮಯ ಸಂಗಾತಿಯೊಂದಿಗೆ ಕಳೆಯಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಆದರೆ ಆರ್ಥಿಕವಾಗಿ ಕೊಂಚ ಸಮಸ್ಯೆಯಾಗಬಹುದು. ಇದು ತಾತ್ಕಾಲಿಕ. ಹೆಚ್ಚೆಚ್ಚು ಗೌರವ ಸಿಗಲಿದೆ. ಸಮೃದ್ಧ ಬದುಕು ನಿಮ್ಮದಾಗಲಿದೆ. ಗಣೇಶನನ್ನು ನೆನೆಯಲು ಮರೆಯದಿರಿ. ಸಂಕಷ್ಟಿಯ ಸಮಯ ಗಣಪತಿ ದೇವಾಲಯಕ್ಕೆ ಹೋಗಿ ಬನ್ನಿ. ಮಂಗಳವಾಗುವುದು.

 

ಒಂದು ಕಡೆ ಕೊರೋನಾ ಚಿಂತೆಯಾದ್ರೆ ಇನ್ನೊಂದು ಕಡೆ ಒಬ್ಬಟ್ಟಿನ ಚಿಂತೆ! 

 

ಮೀನ

ವೃತ್ತಿಯಲ್ಲಿ ನೀವಂದುಕೊಂಡದ್ದಕ್ಕಿಂತ ಹೆಚ್ಚಿನ ಯಶಸ್ಸು. ಕೆಲಸ ಕಾರ್ಯಗಳು ಸಕಾಲಕ್ಕೆ ಈಡೇರುತ್ತವೆ. ಈವರೆಗಿನ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಇದೀಗ ಈ ವರ್ಷದುದ್ದಕ್ಕೂ ಸಿಗಲಿದೆ. ನಿಮ್ಮ ಮನೆಗೊಬ್ಬ ಹೊಸ ಅತಿಥಿಯ ಆಗಮನವಾಗಬಹುದು. ಆ ಮಗುವಿನಿಂದ ನಿಮ್ಮ ಕಷ್ಟದ ದಿನಗಳೆಲ್ಲ ಕರಗಿ ಖುಷಿ, ಸಂಭ್ರಮ ಮನೆ ಮಾಡಬಹುದು. ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಇದೆ. ವ್ಯಾಪಾರ ಕ್ಷೇತ್ರದಲ್ಲಂತೂ ಬಹಳ ಮುಂದಕ್ಕೆ ಹೋಗುತ್ತೀರಿ. ದೇವಿಯನ್ನು ಭಜಿಸಿ. ಮುಖ್ಯವಾಗಿ ಶುಕ್ರವಾರ ದೇವಿಯ ಆರಾಧನೆ ಮಾಡಿ. ಆಕೆ ನಿಮ್ಮನ್ನು ಎಂಥಾ ಸಂಕಷ್ಟದಿಂದಲೂ ಪಾರು ಮಾಡಿ ನೆಮ್ಮದಿ ನೀಡುತ್ತಾಳೆ.

 

ಹೊಸ ವರ್ಷದಾರಂಭ: ಹೇಗಿದೆ ನಿಮ್ಮ ಭವಿಷ್ಯ? ಯಾರಿಗೆ ಸಿಹಿ, ಯಾರಿಗೆ ಕಹಿ?