Children And Zodiacs: ರಾಶಿ ಪ್ರಕಾರ ನಿಮ್ಮ ಮಗುವಿನ ಅಗತ್ಯಗಳೇನು ತಿಳಿಯಿರಿ
ಮಕ್ಕಳಿಗೆ ತಮ್ಮ ಅವಶ್ಯಕತೆಗಳನ್ನು ಸರಿಯಾಗಿ ಹೇಳಲು ಬರುವುದಿಲ್ಲ. ಆದರೆ, ಹೆತ್ತವರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಅದು ಸುಲಭವಾಗಲು ರಾಶಿ ಆಧಾರದಲ್ಲಿ ಮಕ್ಕಳ ಅವಶ್ಯಕತೆಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಪೇರೆಂಟಿಂಗ್(Parenting) ಎಂಬುದು ಒಬ್ಬೊಬ್ಬರಿಗೆ ಒಂದು ತರದ ಅನುಭವ. ಅದು ಪೋಷಕರಿಂದ ಬಹಳಷ್ಟು ಬದಲಾವಣೆಗಳನ್ನು ಬೇಡುತ್ತದೆ. ಪ್ರತಿ ಮಗುವೂ ವಿಭಿನ್ನ ಹಾಗೂ ವಿಶಿಷ್ಟ. ಅವುಗಳ ಅಗತ್ಯ, ಅವಶ್ಯಕತೆಗಳು ಬೇರೆಯೇ ಇರುತ್ತವೆ. ಹಾಗಾಗಿ, ಮಕ್ಕಳ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಹಾಗಿದ್ದರೂ ಪೋಷಕರಿಗೆ ಸುಲಭವಾಗುವಂತೆ, ರಾಶಿ ಆಧಾರದಲ್ಲಿ ಮಕ್ಕಳ ಅವಶ್ಯಕತೆಗಳು ಏನಿರುತ್ತವೆ ಎಂಬುದನ್ನು ಇಲ್ಲಿ ಕೊಡಲಾಗಿದೆ.
ಮೇಷ(Aries): ಈ ರಾಶಿಯ ಮಕ್ಕಳು ಹೆಚ್ಚು ಧೈರ್ಯವಂತರು(courageous). ಅವರಲ್ಲಿ ಆತ್ಮವಿಶ್ವಾಸ ಹೆಚ್ಚು. ಅವರ ಅತ್ಯುತ್ತಮ ಬೆಳವಣಿಗಾಗಿ ಪೋಷಕರು ಅವರಿಗೆ ಸಾಕಷ್ಟು ಸ್ವಾತಂತ್ರ್ಯ ಕೊಡಬೇಕು. ಈ ಮಕ್ಕಳು ಹೆಚ್ಚು ಸ್ಪರ್ಧಾತ್ಮಕ(competitive) ಮನೋಭಾವದವರಾಗಿದ್ದು, ಪೋಷಕರು ಅವರಿಗೆ ಆರೋಗ್ಯಕರ ಸ್ಪರ್ಧೆಯ ಬಗ್ಗೆ ತಿಳಿಸಬೇಕು. ಅವರ ಪ್ರಯತ್ನದ ಫಲವಷ್ಟೇ ಅಲ್ಲ, ಪ್ರಯತ್ನಗಳನ್ನೂ ಶ್ಲಾಘಿಸುವ ಗುಣ ಪೋಷಕರು ರೂಢಿಸಿಕೊಳ್ಳಬೇಕು.
ವೃಷಭ(Taurus): ಸ್ಥಿರತೆ(stability) ಹಾಗೂ ಕೆಲಸದ ವಿಧಾನ ಈ ಮಕ್ಕಳಿಗೆ ಮುಖ್ಯವಾಗುತ್ತದೆ. ಅವರು ಎಲ್ಲದರಲ್ಲೂ ಸ್ಥಿರತೆ ಬಯಸುತ್ತಾರೆ. ಜೊತೆಗೆ ಕಲಿಸಿದ ವಿಧಾನದಲ್ಲೇ ಮುಂದುವರಿಯಲು ಇಷ್ಟ ಪಡುತ್ತಾರೆ. ಹಾಗಾಗಿ, ಈ ಮಕ್ಕಳಿಗೆ ಯಾವುದೇ ಸಾಧನೆಗೆ, ಕೆಲಸಕ್ಕೆ, ಕಲಿಕೆಗೆ ಹೆಚ್ಚಿನ ಸಮಯ ನೀಡುವುದು ಪೋಷಕರ ಕರ್ತವ್ಯವಾಗಿದೆ.
ಮಿಥುನ(Gemini): ಈ ರಾಶಿಯ ಮಕ್ಕಳು ಮಾತಿನಲ್ಲಿ, ಹೊಸತನ್ನು ಕಂಡುಕೊಳ್ಳುವಲ್ಲಿ ಮುಂದು. ಇವರಿಗೆ ತಮ್ಮ ಭಾವನೆಗಳು, ಯೋಚನೆಗಳು ಹಾಗೂ ಚಿಂತನೆಗಳನ್ನು ಹೇಳಿಕೊಳ್ಳಲು ಸಂಪೂರ್ಣ ಅವಕಾಶ ನೀಡಬೇಕು. ಇವರು ತಪ್ಪು ನಿರ್ಧಾರ(decision) ಕೈಗೊಂಡಾಗ ಬೈಯ್ಯುವ ಬದಲು, ಅದರಲ್ಲಿ ಏನೆಲ್ಲ ತಪ್ಪಿದೆ ಎಂಬುದನ್ನು ವಿವರಿಸಿ, ಅವರಿಗೇ ಹೊಸ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಬೇಕು.
ಕಟಕ(Cancer): ಈ ರಾಶಿಯ ಮಕ್ಕಳು ತುಂಬಾ ಸೂಕ್ಷ್ಮ ಸ್ವಭಾವದವರು. ಇವರಿಗೆ ಸುರಕ್ಷತೆಯ ಭಾವ ನೀಡಲು, ಪೋಷಕರು ಸದಾ ಇವರೊಂದಿಗಿರುವುದು ಮುಖ್ಯವಾಗುತ್ತದೆ. ಅವರೆಲ್ಲ ಅಗತ್ಯದ ಸಮಯದಲ್ಲಿ ಪಕ್ಕದಲ್ಲಿ ಪೋಷಕರಿರಬೇಕು. ಅವರ ಅಭದ್ರತೆಗಳನ್ನು(insecurities) ಗುರುತಿಸಿ, ಅದನ್ನು ಮೆಟ್ಟಿ ನಿಂತು ಮುನ್ನಡೆಯಲು ಸಾಕಷ್ಟು ಪ್ರೋತ್ಸಾಹ ನೀಡಬೇಕು.
ಸಿಂಹ(Leo): ಈ ಮಕ್ಕಳಿಗೆ ತುಂಬಾ ಗಮನ ನೀಡಬೇಕು. ಪೋಷಕರ ಗಮನ ಹಾಗೂ ಮೆಚ್ಚುಗೆ ಇವರಲ್ಲಿ ಬಲ ತುಂಬುತ್ತದೆ. ಇದರಿಂದ ಇವರ ಸೃಜನಶೀಲತೆ ಹೆಚ್ಚುತ್ತದೆ.
ಕನ್ಯಾ(Virgo): ಇವರು ತುಂಬಾ ಲಾಜಿಕಲಿ ಯೋಚನೆ ಮಾಡಬಲ್ಲ ಮಕ್ಕಳು. ಜೊತೆಗೆ ಶ್ರಮ ಹಾಕುವವರು. ಅವರಿಗೆ ತಾವು ಮಾಡುವ ಕೆಲಸ ಉಪಯೋಗವಾಗುತ್ತಿದೆ ಎಂಬ ಭಾವನೆ ಪಡೆಯುವುದು ತುಂಬಾ ಮುಖ್ಯ. ಹಾಗಾಗಿ, ಈ ಮಕ್ಕಳನ್ನು ನಿಮ್ಮ ದೈನಂದಿನ ಕೆಲಸಗಳಲ್ಲಿ ಜೊತೆಗೆ ಸೇರಿಸಿಕೊಳ್ಳಿ. ಇವರ ಅಂತರ್ಮುಖಿ ಸ್ವಭಾವ ಅರಿತು ಒಪ್ಪಿಕೊಳ್ಳಿ. ಅದನ್ನು ವಿರೋಧಿಸಲು ಹೋಗಬೇಡಿ.
Empathetic Zodiacs: ಈ ನಾಲ್ಕು ರಾಶಿಯ ಸ್ನೇಹಿತರಿದ್ದರೆ ನೀವೇ ಅದೃಷ್ಟವಂತರು!
ತುಲಾ(Libra): ಈ ರಾಶಿಯ ಮಕ್ಕಳಿಗೆ ತಮ್ಮ ಮಾತುಗಳನ್ನು ಪೋಷಕರು ಕೇಳಿದರೆ ಸಂತೋಷ. ಅವರಿಗೆ ದೊಡ್ಡ ಸಂಘ, ಸಂಸ್ಥೆಗಳ ಭಾಗವಾಗುವ ಶಕ್ತಿಯಿದೆ. ಅದನ್ನರಿತು ಪ್ರೋತ್ಸಾಹಿಸುವುದು ಮುಖ್ಯ.
ವೃಶ್ಚಿಕ(Scorpio): ಇವರಿಗೆ ತಮ್ಮ ಮನ್ನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸಲು ಆಗಾಗ ಪ್ರೋತ್ಸಾಹ ಬೇಕೇ ಬೇಕು. ಅನುಭವಗಳ ಆಳ ಅರ್ಥ ಹುಡುಕುವವರು ಇವರು. ಏಕಾಂತದ ಸಮಯ ಬಯಸುವವರು. ಇವರ ಮಾತುಗಳನ್ನು ಯಾವುದೇ ಜಡ್ಜ್‌ಮೆಂಟ್ ಇಲ್ಲದೆ ಕೇಳುವ ಗುಣ ಪೋಷಕರು ಬೆಳೆಸಿಕೊಳ್ಳಬೇಕು.
ಧನುಸ್ಸು(Sagittarius): ಈ ರಾಶಿಯ ಮಕ್ಕಳಲ್ಲಿ ಕುತೂಹಲ ಹೆಚ್ಚು. ಅವರ ಆಸೆಗಳನ್ನು ಸಣ್ಣ ವಯಸ್ಸಿನಲ್ಲೇ ಚಾನೆಲೈಸ್ ಮಾಡುವುದು ಮುಖ್ಯ. ಈ ಮಕ್ಕಳಲ್ಲಿ ತಾಳ್ಮೆ ಕಡಿಮೆ, ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು.
love rejection: ಪ್ರೀತಿಯ ತಿರಸ್ಕಾರವನ್ನು ಯಾವ ರಾಶಿಯವರು ಹೇಗೆ ಎದುರಿಸುತ್ತಾರೆ?
ಮಕರ(Capricorn): ಹೊಣೆ ಹೊತ್ತುಕೊಳ್ಳುವುದು ಈ ಮಕ್ಕಳಿಗಿಷ್ಟ. ಇವರು ಮಹತ್ವಾಕಾಂಕ್ಷಿಗಳು. ಇವರ ಕನಸುಗಳನ್ನು ಪ್ರೋತ್ಸಾಹಿಸಿ, ಅದನ್ನು ನೆರವೇರಿಸಲು ಬೇಕಾದ ಸಣ್ಣಸಣ್ಣ ಹೊಣೆಗಳನ್ನು ನೀಡಿ.
ಕುಂಭ(Aquarius): ಆ ಮಕ್ಕಳು ಬಹಳ ವಿಭಿನ್ನ. ಬಹಳ ಸ್ವಂತಿಕೆ ಉಳ್ಳವರು, ಸೃಜನಶೀಲರು. ಹಾಗಾಗಿ, ಇವರ ಬುದ್ಧಿವಂತಿಕೆ ಮತ್ತು ಕಲ್ಪನೆಯನ್ನು ಹೆಚ್ಚು ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮಾಡಬೇಕು. ಸ್ವಲ್ಪ ಮೂಡಿ ಇರಬಹುದು. ಅದನ್ನು ನಿಭಾಯಿಸಲು ಯೋಗ, ಧ್ಯಾನ(meditation)ದ ಅಭ್ಯಾಸದಲ್ಲಿ ತೊಡಗಿಸಿ.
ಮೀನ(Pisces): ಈ ಮಕ್ಕಳು ಕಲ್ಪನಾಶೀಲರು. ಇತರರನ್ನು ಅತಿಯಾಗಿ ನಂಬುವವರು. ಹೊರ ಜಗತ್ತಿನ ಜಂಜಡದಿಂದ ಕಳಚಿಕೊಳ್ಳಲು ಕಲ್ಪನೆಯಲ್ಲಿ ಮುಳುಗಬಹುದು. ಆದಷ್ಟು ಹೊರಾಂಗಣದಲ್ಲಿ ಬೆರೆಯಲು ಬಿಡಿ.