Asianet Suvarna News Asianet Suvarna News

Maker Sankranti : ರಾಶಿಗನುಗುಣವಾಗಿ ಈ ವಸ್ತು ದಾನ ಮಾಡಿ

ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡುವ ಹಬ್ಬ ಸಂಕ್ರಾಂತಿ. ಈ ಹಬ್ಬದಲ್ಲಿ ದಾನಕ್ಕೂ ಮಹತ್ವವಿದೆ. ವರ್ಷ ಪೂರ್ತಿ ಸಂತೋಷ, ಸಮೃದ್ಧಿ ನೆಲೆಸಬೇಕು ಎನ್ನುವವರು ಅಗತ್ಯವಿರುವವರಿಗೆ ದಾನ ಮಾಡ್ಬೇಕು. ಶಾಸ್ತ್ರದಲ್ಲಿ ಹೇಳಿದಂತೆ ದಾನ ಮಾಡಿದ್ರೆ ಫಲ ಶೀಘ್ರ ಪ್ರಾಪ್ತಿಯಾಗುತ್ತದೆ. 
 

What To Donate According To Zodiac Signs
Author
First Published Jan 6, 2023, 2:42 PM IST

ಸೂರ್ಯ, ಮಕರ ರಾಶಿಯನ್ನು ಪ್ರವೇಶಿಸಿದ ದಿನವನ್ನು ಮರಕ  ಸಂಕ್ರಮಣ ಎನ್ನಲಾಗುತ್ತದೆ. ಆ ದಿನ ದೇಶದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ದೇಶದ ವಿವಿದೆಡೆ ಈ ಹಬ್ಬವನ್ನು ವಿವಿಧ ಹೆಸರಿನಿಂದ ಕರೆಯುತ್ತಾರೆ. ಹಾಗೆಯೇ ಹಬ್ಬ ಆಚರಣೆ ಪದ್ಧತಿ ಕೂಡ ಬೇರೆಯಾಗಿರುತ್ತದೆ.  

ಮಕರ ಸಂಕ್ರಾಂತಿ (Sankranti) ಯನ್ನು ಉತ್ತರಾಯಣ, ಪೊಂಗಲ್, ಖಿಚಡಿ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಈ ವರ್ಷ ಮಕರ ಸಂಕ್ರಾಂತಿ ಹಬ್ಬ (Festival) ವನ್ನು ಜನವರಿ 15, 2023 ರಂದು ಆಚರಿಸಲಾಗುತ್ತಿದೆ. ಈ ದಿನ ಪವಿತ್ರ ನದಿ (River) ಯಲ್ಲಿ ಸ್ನಾನ ಮಾಡಿ, ಬಡವರಿಗೆ ದಾನ ಮಾಡಿ, ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದ್ರಿಂದ ವಿಶೇಷ ಲಾಭ ಸಿಗುತ್ತದೆ ಎಂದು ನಂಬಲಾಗಿದೆ. ರಾಶಿಗೆ ಅನುಗುಣವಾಗಿ ವಸ್ತುಗಳನ್ನು ದಾನ ಮಾಡಿದ್ರೆ ಅದ್ರಿಂದ ಸಿಗುವ ಫಲ ಹೆಚ್ಚು ಎನ್ನುತ್ತದೆ ಶಾಸ್ತ್ರ. 

ಯಾವ ರಾಶಿಯವರು ಮಕರ ಸಂಕ್ರಾಂತಿ ದಿನ ಯಾವ ವಸ್ತುವನ್ನು ದಾನ ಮಾಡ್ಬೇಕು ಗೊತ್ತಾ? : 

ಮೇಷ (Aries) ರಾಶಿ : ಮಕರ ಸಂಕ್ರಮಣದ ದಿನ ಮೇಷ ರಾಶಿಯವರು ಬೆಲ್ಲವನ್ನು ದಾನ ಮಾಡಬೇಕು. ಅಲ್ಲದೆ ಕನಿಷ್ಠ ಒಂದು ಕೆಜಿ ಕಡಲೆಕಾಯಿ ದಾನ ಮಾಡಿದರೆ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ. ಮೇಷ ರಾಶಿಯವರು ಕಪ್ಪು ಎಳ್ಳನ್ನು ಕೂಡ ದಾನ ಮಾಡಬಹುದು. ಎಳ್ಳು – ಬೆಲ್ಲದ ದಾನ ಒಳ್ಳೆಯದು. 

ವೃಷಭ ರಾಶಿ (Taurus) :  ಈ ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು ಬಿಳಿ ವಸ್ತುಗಳನ್ನು ದಾನ ಮಾಡಬೇಕು. ಅಕ್ಕಿ ಅಥವಾ ಸಕ್ಕರೆ ದಾನ ಮಾಡಿದರೆ ಜೀವನದಲ್ಲಿ ಸಮೃದ್ಧಿ ಪ್ರಾಪ್ತಿಯಾಗುತ್ತದೆ. 

ಮಿಥುನ (Taurus) ರಾಶಿ : ಮಕರ ಸಂಕ್ರಾಂತಿಯ ದಿನದಂದು ಮಿಥುನ ರಾಶಿಯ ಜನರು ಕಪ್ಪು ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ದಾನ ಮಾಡಿ. ಇದ್ರಿಂದ ಜೀವನದ ಎಲ್ಲಾ ತೊಂದರೆಗೆ ಪರಿಹಾರ ಸಿಗುತ್ತದೆ.  ಬಡವರಿಗೆ ಹೊದಿಕೆ ದಾನ ಮಾಡಬಹುದು.  

ವಿಷ್ಣುವಿನ ಪಾದವನ್ನು ಲಕ್ಷ್ಮಿ ಸದಾ ಒತ್ತುತ್ತಿರುವುದೇಕೆ?

ಕರ್ಕ (Cancer) ರಾಶಿ : ಕರ್ಕ ರಾಶಿಯ ಜನರು, ಮಕರ ಸಂಕ್ರಾಂತಿಯ ದಿನದಂದು ಬಿಳಿ ಧಾನ್ಯಗಳನ್ನು ದಾನ ಮಾಡಿ. ಬಿಳಿ ಲೋಹವನ್ನು ದಾನ ಮಾಡಬಹುದು. ಬೆಳ್ಳಿಯ ವಸ್ತು ಮತ್ತು ಬಿಳಿ ಎಳ್ಳನ್ನು ಅಗತ್ಯವಿರುವವರಿಗೆ ದಾನ ಮಾಡಬಹುದು. ಹಾಲನ್ನು ದಾನ ಮಾಡಿದ್ರೆ ಕೂಡ ನಿಮಗೆ ಯಶಸ್ಸು ಸಿಗುತ್ತದೆ. 

ಸಿಂಹ (Leo)  ರಾಶಿ : ಈ ರಾಶಿಯವರು ಬಡವರಿಗೆ ಕಪ್ಪು ಹೊದಿಕೆಯನ್ನು ದಾನ ಮಾಡಬೇಕು. ಹಳದಿ ವಸ್ತ್ರವನ್ನು ಕೂಡ ನೀವು ದಾನ ಮಾಡಬಹುದು.  

ಕನ್ಯಾ (Virgo) ರಾಶಿ :  ಕಪ್ಪು ಧಾನ್ಯವನ್ನು ನೀವು ದಾನ ಮಾಡಿದ್ರೆ ಒಳ್ಳೆಯದು.  ಕರಿಬೇವಿನ ಜೊತೆಗೆ ಒಂದು ಕಾಲು ಕೆಜಿ ಅಕ್ಕಿಯನ್ನು ದಾನ ಮಾಡಿ.  ದೇವಸ್ಥಾನಕ್ಕೆ ಹಾಗೂ ಬಡವರಿಗೆ ಖಿಚಡಿಯನ್ನು ನೀಡಿ. 

ತುಲಾ (Libra) ರಾಶಿ : ಮಕರ ಸಂಕ್ರಾಂತಿಯ ದಿನದಂದು ತುಲಾ ರಾಶಿಯವರು ಬಿಳಿ ವಸ್ತುವನ್ನು ದಾನ ಮಾಡಿದ್ರೆ ಒಳ್ಳೆಯದು. ಬಿಳಿ ಬಟ್ಟೆ, ಸಕ್ಕರೆ, ಹಾಲು, ಮೊಸರನ್ನು ದಾನ ಮಾಡಬೇಕು.

ವೃಶ್ಚಿಕ (Scorpio) ರಾಶಿ : ವೃಶ್ಚಿಕ ರಾಶಿಯವರು ನೀವಾಗಿದ್ದರೆ ಸಂಕ್ರಾಂತಿಯ ದಿನ  ಬೆಲ್ಲದಿಂದ ಮಾಡಿದ ಖಿಚಡಿಯನ್ನು ದಾನ ಮಾಡಿ. ಬಡವರಿಗೆ ಆಹಾರ ನೀಡುವ ಜೊತೆಗೆ ಸಂಜೆ ಒಂದು ಕಾಲು ಕೆಜಿ ಬೆಲ್ಲವನ್ನು ದಾನ ಮಾಡಿ.  

ಧನು (Sagittarius) ರಾಶಿ :  ಹಳದಿ ಕಾಳುಗಳನ್ನು ನೀವು ಮಕರ ಸಂಕ್ರಾಂತಿ ದಿನ ದಾನವಾಗಿ ನೀಡಬೇಕು. ಸಾಧ್ಯವಾದವರು ಐದು ಕೆಜಿ ಬೇಳೆಕಾಳುಗಳನ್ನು ದಾನ ಮಾಡಿದರೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ. 

ಮಕರ (Capricorn) ರಾಶಿ : ಈ ರಾಶಿಯವರು  ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಕಪ್ಪು ವಸ್ತುಗಳನ್ನು ದಾನ ಮಾಡಬೇಕು. ಕಪ್ಪು ಬಟ್ಟೆಗಳನ್ನು ಸಹ ದಾನ ಮಾಡಬೇಕು. ಹೊದಿಕೆ, ಕಪ್ಪು ಎಳ್ಳು, ಸಾಸಿವೆ ಎಣ್ಣೆಯನ್ನು ಕೂಡ ನೀವು ದಾನ ಮಾಡಬಹುದು.  

ಕುಂಭ (Aquarius) ರಾಶಿ :  ಕುಂಭ ರಾಶಿಯವರು ಮಕರ ಸಂಕ್ರಾಂತಿಯ ದಿನದಂದು ಕಪ್ಪು ಉಂಡೆಯನ್ನು ದಾನ ಮಾಡಬೇಕು. ಕಪ್ಪು ಬಟ್ಟೆ ಮತ್ತು ಕಪ್ಪು ಎಳ್ಳನ್ನು ಕೂಡ ದಾನ ಮಾಡಿ ಆಶೀರ್ವಾದ ಪಡೆಯಿರಿ. 

Astrology Tips: ಸಾಮಾನ್ಯ ವ್ಯಕ್ತಿ ಮೇಲೂ ಹಣದ ಮಳೆ ಹರಿಸುತ್ತೆ ಜಾತಕದ ಈ ಯೋಗ

ಮೀನ (Pisces) ರಾಶಿ : ಈ ರಾಶಿಯವರು ಸಂಕ್ರಾಂತಿ ದಿನ ಕಾಳುಗಳನ್ನು ದಾನ ಮಾಡಿದ್ರೆ ಒಳ್ಳೆಯದು. ಅಗತ್ಯವಿರುವವರಿಗೆ ಕಾಳುಗಳನ್ನು ದಾನ ಮಾಡಿದ್ರೆ ಧನಲಾಭವಾಗುತ್ತದೆ. 
 

Follow Us:
Download App:
  • android
  • ios