Asianet Suvarna News Asianet Suvarna News

Astrology Tips: ಸಾಮಾನ್ಯ ವ್ಯಕ್ತಿ ಮೇಲೂ ಹಣದ ಮಳೆ ಹರಿಸುತ್ತೆ ಜಾತಕದ ಈ ಯೋಗ

ಶ್ರೀಮಂತರಾಗ್ಬೇಕೆಂದು ಎಲ್ಲರೂ ಕನಸು ಕಾಣ್ತಾರೆ. ಅದ್ರಲ್ಲಿ ಕೆಲವೇ ಕೆಲವು ಮಂದಿ ಕನಸು ನನಸಾಗುತ್ತದೆ. ಇದಕ್ಕೆ ಪರಿಶ್ರಮದ ಜೊತೆ ಯೋಗ ಬೇಕು. ಯಸ್, ಜ್ಯೋತಿಷ್ಯದಲ್ಲಿ ಹೇಳುವ ಈ ಯೋಗ ನಿಮ್ಮಲ್ಲಿದ್ರೆ ನೀವು ಬಯಸದೆ ಶ್ರೀಮಂತರಾಗೋದು ಗ್ಯಾರಂಟಿ.
 

Gajalakshmi Yoga And Its Benefits
Author
First Published Jan 4, 2023, 4:47 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಯೋಗಗಳ ಬಗ್ಗೆ ಹೇಳೋದನ್ನು ನೀವು ಕೇಳಿರಬಹುದು. ಗಜಕೇಸರಿ ಯೋಗ, ಗಜಲಕ್ಷ್ಮಿ ಯೋಗ, ಲಕ್ಷ್ಮಿ ಯೋಗ, ಭಾಗ್ಯ ಯೋಗ ಹೀಗೆ ಅನೇಕ ಯೋಗಗಳ ಬಗ್ಗೆ ಹೇಳಲಾಗುತ್ತದೆ. ವ್ಯಕ್ತಿಗೆ ಈ ಯೋಗ ಬಂದಾಗ ಆತ ಸಂತೋಷ ಮತ್ತು ಸಮೃದ್ಧಿ ಜೀವನ ಪಡೆಯುತ್ತಾನೆ ಎನ್ನುವ ನಂಬಿಕೆಯಿದೆ. ಮನೆಗೆ ಸಂಪತ್ತು ಬರುತ್ತದೆ ಎಂದು ಹೇಳಲಾಗುತ್ತದೆ. ನಾವಿಂದು ಗಜಲಕ್ಷ್ಮಿ ಯೋಗ ಅಂದ್ರೇನು ಎಂಬುದನ್ನು ನಿಮಗೆ ಹೇಳ್ತೆವೆ.

ಗಜಲಕ್ಷ್ಮಿ (Gajalakshmi) ಯೋಗ ಎಂದರೇನು? : ಒಬ್ಬ ಸಾಧಾರಣ ವ್ಯಕ್ತಿಯನ್ನು ಶ್ರೀಮಂತ (Rich) ನನ್ನಾಗಿ ಮಾಡುವ ಶಕ್ತಿ ಹೊಂದಿರುವ ಯೋಗ (Yoga) ವೇ ಗಜಲಕ್ಷ್ಮಿ ಯೋಗವಾಗಿದೆ. ಗಜಲಕ್ಷ್ಮಿ ಯೋಗವಿದೆಯೇ ಎಂಬುದನ್ನು ನಿಮ್ಮ ಜಾತಕ ನೋಡಿ, ಹಸ್ತನೋಡಿ ಹೇಳಬಹುದಾಗಿದೆ. ಎರಡೂ ಕೈಗಳ ಅದೃಷ್ಟ ರೇಖೆಯು ಮಣಿಬಂಧನ ಸ್ಥಳದಿಂದ ಪ್ರಾರಂಭವಾಗಿ ಶನಿಯ ಪರ್ವತದವರೆಗೆ ಹೋದರೆ ಮತ್ತು ಸೂರ್ಯನ ರೇಖೆಯು ಸ್ಪಷ್ಟವಾಗಿದ್ದರೆ, ಕೆಂಪು ಬಣ್ಣವನ್ನು ಹೊಂದಿದ್ದರೆ  ಅದು ಗಜಲಕ್ಷ್ಮಿ ಯೋಗವನ್ನು ಸೃಷ್ಟಿಸುತ್ತದೆ. ಹಾಗೆಯೇ ಇಲ್ಲಿ ಗುರುವಿನ ಪಾತ್ರವೂ ಮುಖ್ಯವಾಗುತ್ತದೆ. ಉದಾಹರಣೆಗೆ ಮೇಷ ರಾಶಿಯಲ್ಲಿ ರಾಹು ಇದ್ದಾಗ ಮತ್ತು ಗುರು ಗ್ರಹವು ಮೇಷ ರಾಶಿಗೆ ಪ್ರವೇಶಿಸಿದಾಗ ಗಜಲಕ್ಷ್ಮಿ ಯೋಗ  ರೂಪುಗೊಳ್ಳುತ್ತದೆ. ಈ ಯೋಗದ ಪ್ರಭಾವದಿಂದ ಮನೆಯಲ್ಲಿ ಸುಖ, ಶಾಂತಿ, ಐಶ್ವರ್ಯ, ವೈಭವ ನಿಮ್ಮದಾಗುತ್ತದೆ. 

ಗಜಲಕ್ಷ್ಮಿ ಯೋಗದ ಲಾಭಗಳು : 
ಜೀವನದಲ್ಲಿ ಉನ್ನತಿ :
ಯಾವ ವ್ಯಕ್ತಿಗೆ ಗಜಲಕ್ಷ್ಮಿ ಯೋಗ ಕೂಡಿ ಬರುತ್ತದೆಯೋ ಆ ವ್ಯಕ್ತಿ ಸಾಧಾರಣ ಕುಟುಂಬದಲ್ಲಿ ಜನಿಸಿದ್ದರೂ ಗಜಲಕ್ಷ್ಮಿ ಯೋಗದ ಕಾರಣ ಜೀವನದಲ್ಲಿ ಉನ್ನತಿ ಕಾಣುತ್ತಾನೆ.  

ಸಂತೋಷ ಪ್ರಾಪ್ತಿ : ಗಜಲಕ್ಷ್ಮಿ ಯೋಗ ಬಂದಾಗ ವ್ಯಕ್ತಿ ಜೀವನದಲ್ಲಿ ಯಾವುದೇ ಕಷ್ಟವನ್ನು ಎದುರಾಗುವುದಿಲ್ಲ. ಜೀವನದಲ್ಲಿ ಯಾವುದೇ ವಸ್ತುವಿನ ಕೊರತೆ ಕಾಡುವುದಿಲ್ಲ. ಸದಾ ಇವರು ಸಂತೋಷದ ಜೀವನ ನಡೆಸುತ್ತಾರೆ.

ಉದ್ಯೋಗದಲ್ಲಿ ಪ್ರಗತಿ : ಗಜಲಕ್ಷ್ಮಿ ಯೋಗವನ್ನು ಹೊಂದಿರುವ ವ್ಯಕ್ತಿಗಳು ವಿದೇಶದಕ್ಕೆ ಹೋಗಿ ಕೆಲಸ ಮಾಡುವ ಅವಕಾಶ ಪಡೆಯುತ್ತಾರೆ. ಸ್ವಂತ ಉದ್ಯೋಗ ಮಾಡಲು ಆಸಕ್ತಿ ಹೊಂದಿದ್ದರೆ ಅದ್ರಲ್ಲೂ ಯಶಸ್ಸು ಇವರದ್ದಾಗುತ್ತದೆ. ವ್ಯಾಪಾರದಲ್ಲಿ ಕ್ಷಿಪ್ರ ಆರ್ಥಿಕ ಲಾಭವಿರುತ್ತದೆ.

ಅಧಿಕ ಮಾಸದಿಂದ ಹಿಡಿದು ಗ್ರಹಣದವರೆಗೆ..2023ರ 10 ASTROLOGICAL EVENTS

ಸುಖಕರ ಜೀವನ : ಗಜಲಕ್ಷ್ಮಿ ಯೋಗ ಹೊಂದಿರುವವರು ಯಾವಾಗ್ಲೂ ಸುಖಕರ ಜೀವನ ನಡೆಸುತ್ತಾರೆ. ಸೌಲಭ್ಯಗಳು ಅವರಿಗೆ ಅಗತ್ಯಕ್ಕೆ ತಕ್ಕಂತೆ ಲಭಿಸುತ್ತಿರುತ್ತವೆ. ನಕಾರಾತ್ಮಕ ಆಲೋಚನೆ ದೂರವಾಗಿ, ಸಕಾರಾತ್ಮಕ ಆಲೋಚನೆಗೆ ಇದು ದಾರಿ ಮಾಡಿಕೊಡುತ್ತದೆ.

ಹೆಸರು – ಗೌರವ : ಹಸ್ತದಲ್ಲಿ ಗಜಲಕ್ಷ್ಮಿ ಯೋಗ ಹೊಂದಿರುವ ವ್ಯಕ್ತಿ ಎಲ್ಲಿ ಹೋದ್ರೂ ಗೌರವಕ್ಕೆ ಧಕ್ಕೆಯಾಗುವುದಿಲ್ಲ. ಆತ ಯಾವುದೇ ಕೆಲಸ ಮಾಡ್ತಿರಲಿ, ಯಾವುದೇ ಕ್ಷೇತ್ರದಲ್ಲಿರಲಿ ಆ ಕ್ಷೇತ್ರದಲ್ಲಿ ಹೆಸರು ಮಾಡ್ತಾನೆ. 

ಕೈಹಿಡಿಯುವ ಅದೃಷ್ಟ : ಗಜಲಕ್ಷ್ಮಿ ಯೋಗ ಬರ್ತಿದ್ದಂತೆ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಅದೃಷ್ಟದ ಬೆಂಬಲದಿಂದಾಗಿ ನಿಮ್ಮ ಸಮಸ್ಯೆ ದೂರವಾಗುತ್ತದೆ.

Relationship ಅಂದ್ರೆ ದೂರ ಹೋಗೋ ಈ ರಾಶಿಯವರಿಗೆ ಒಂಟಿತನವೂ ಆಗೋಲ್ಲ!

ಹೂಡಿಕೆಗೆ ಅತ್ಯುತ್ತಮ : ಗಜಲಕ್ಷ್ಮಿ ರೇಖೆ ಕೈನಲ್ಲಿ ಇದ್ರೆ ಆಗಲಿಲ್ಲ, ಗಜಲಕ್ಷ್ಮಿ ಯೋಗ ಕೂಡಿ ಬರಲು ಒಂದು ಸಮಯವಿರುತ್ತದೆ. ಆ ಸಮಯದಲ್ಲಿ ನೀವು ಹೂಡಿಕೆ ಮಾಡಿದರೆ ಉತ್ತಮ ಲಾಭವನ್ನು ನೀವು ಪಡೆಯುತ್ತೀರಿ. ಉದ್ಯೋಗಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯೂ ತಾನಾಗಿಯೇ ದೂರವಾಗಲು ಪ್ರಾರಂಭಿಸುತ್ತದೆ.

ಲಭಿಸುವ ಪ್ರೀತಿ : ಗಜಲಕ್ಷ್ಮಿ ಯೋಗ ಕೂಡ ಬರ್ತಿದ್ದಂತೆ ನಿಮ್ಮ ಪ್ರೀತಿ ಜೀವನದಲ್ಲಿ ಸುಖವನ್ನು ಕಾಣಬಹುದು. ಪ್ರೇಮ ವಿವಾಹದಲ್ಲಿ ಅಡೆತಡೆಯಾಗ್ತಿದ್ದರೆ ಅದು ಕೂಡ ದೂರವಾಗುತ್ತದೆ. ದಂಪತಿ ಮಧ್ಯೆ ಸಾಮರಸ್ಯದ ಜೀವನ ಶುರುವಾಗುತ್ತದೆ. 

ಆರೋಗ್ಯದಲ್ಲಿ ಸುಧಾರಣೆ : ಗಜಲಕ್ಷ್ಮಿ ಯೋಗ ಬರ್ತಿದ್ದಂತೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ದೀರ್ಘಕಾಲದ ಕಾಯಿಲೆಗಳು ಬಹಳ ಬೇಗನೆ ಗುಣವಾಗುತ್ತವೆ. 

Follow Us:
Download App:
  • android
  • ios