ಮಂಗಳಮುಖಿಯರು ನೀಡಿದ ಹಣ ಏನು ಮಾಡಬೇಕು? ನಾಣ್ಯ ಬಾಯಲ್ಲಿ ಕಚ್ಚಿ ಕೊಡೋದ್ಯಾಕೆ?

Transgenders And Believes: ಮಂಗಳಮುಖಿಯರು ನೀಡುವ ನಾಣ್ಯವನ್ನು ಏನು ಮಾಡಬೇಕು, ಅವರು ನಾಣ್ಯವನ್ನು ಬಾಯಲ್ಲಿ ಕಚ್ಚಿ ಏಕೆ ಕೊಡುತ್ತಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 

What to do with money given by transgender Why do they bite coins

Why do transgender bite coins? ನೀವು ಎಲ್ಲಾದರೂ ಹೋಗುತ್ತಿದ್ದರೆ ಎದುರಿಗೆ ಸಿಗುವ ಮಂಗಳಮುಖಿಯರು ಹಣ ನೀಡುವಂತೆ ಕೇಳುತ್ತಾರೆ. ನಂತರ ಅವರು ನಮ್ಮ ದೃಷ್ಟಿ ತೆಗೆದು ಒಂದು ನಾಣ್ಯವನ್ನು ನೀಡುತ್ತಾರೆ. ಜನರಿಗೆ ಕೊಡುವ ನಾಣ್ಯವನ್ನು ತಮ್ಮ ಕೈಬಳೆಗಳಿಗೆ ತಾಗಿಸಿ ಹಲ್ಲಿನಿಂದ ಕಚ್ಚಿ ಕೊಡುತ್ತಾರೆ. ಹೀಗೆ ಮಂಗಳಮುಖಿಯರು ನೀಡುವ ಹಣವನ್ನು ಏನು ಮಾಡಬೇಕೆಂದು ಬಹುತೇಕರಿಗೆ ತಿಳಿದಿರಲ್ಲ. ಈ ಹಣ ಏನು ಮಾಡಬೇಕು? ನಾಣ್ಯ ಬಾಯಲ್ಲಿ ಕಚ್ಚಿ ಕೊಡೋದ್ಯಾಕೆ? ಎಂಬಿತ್ಯಾದಿ ಪ್ರಶ್ನೆಗಳಿಗೆ  ಶ್ರೀ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿಗಳು ಉತ್ತರ ನೀಡಿದ್ದಾರೆ. 

ಮಂಗಳಮುಖಿಯರ ಬಗ್ಗೆ ಪುರಾಣಗಳಲ್ಲಿಯೂ ಉಲ್ಲೇಖವಿದೆ ಎಂದು  ಶ್ರೀ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ ಹೇಳುತ್ತಾರೆ. ದೇಹ ಪುರುಷನದ್ದಾಗಿದ್ದು, ಹಾವ-ಭಾವ ಮಹಿಳೆಯದ್ದು ಆಗಿರುತ್ತದೆ.  ಮಂಗಳಮುಖಿಯರನ್ನು ಕಿನ್ನರ್ ಅಥವಾ ಕಿನ್ನರಿ ಎಂಬ ಪದಗಳಿಂದಲೂ ಸಹ ಕರೆಯಲಾಗುತ್ತದೆ. ದೇವಲೋಕದಲ್ಲಿ ಮಂಗಳಮುಖಿಯರನ್ನು ಹಾಡು ಹೇಳಲು, ನೃತ್ಯ, ನಾಟಕ ಮಾಡಲು ಬಳಸಿಕೊಳ್ಳಲಾಗುತ್ತಿತ್ತು. ಗಂಧರ್ವರ ಅಡಿಯಲ್ಲಿಯೇ ಇವರು ಕೆಲಸ ಮಾಡುತ್ತಿದ್ದರು. ಮಂಗಳವಾದ ಮುಖ ಹೊಂದಿರುವ ಕಾರಣ ಇವರನ್ನು ಮಂಗಳಮುಖಿ ಎಂದು ಕರೆಯಲಾಗುತ್ತದೆ. 

ಯಾವುದಾದ್ರೂ ಕೆಲಸಕ್ಕೆ ತೆರಳುತ್ತಿರುವಾಗ ಮಂಗಳಮುಖಿಯುರು ಎದುರಾದ್ರೆ ಅದೃಷ್ಟ ಸೂಚಕ ಎಂದು ನಂಬಲಾಗುತ್ತದೆ. ಮಕ್ಕಳಿಗೆ ದೃಷ್ಟಿ ಆಗಿದ್ರೂ ಮಂಗಳಮುಖಿಯರ ಬಳಿ ಹೋಗುತ್ತಾರೆ. ಅಂಗಡಿಗಳಿಗೆ ತೆರಳುವ ಮಂಗಳಮುಖಿಯರು ನಿಂಬೆಹಣ್ಣು ನಿವಾಳಿಸಿ ಒಡೆಯುತ್ತಾರೆ. ಕೆಲ ಅಂಗಡಿ ಮಾಲೀಕರು ವಿಶೇಷ ಸಂದರ್ಭದಲ್ಲಿ ಮಂಗಳಮುಖಿಯರು ಬರೋದನ್ನು ಕಾಯುತ್ತಿರುತ್ತಾರೆ. ಹೀಗೆ ಹಲವು ಕಾರಣಗಳಿಂದ ಮಂಗಳಮುಖಿಯರನ್ನು ಅದೃಷ್ಟ ಎಂದು ಕರೆಯಲಾಗುತ್ತದೆ. ಅರ್ಧನಾರೀಶ್ವರ ತತ್ವದಡಿಯಲ್ಲಿ ಮಂಗಳಮುಖಿಯರು ಬರುತ್ತಾರೆ. ಸಮಾಜದಲ್ಲಿ ಮಂಗಳಮುಖಿಯರಿಗೆ ಅಗ್ರಸ್ಥಾನವಿದೆ. ಆಧ್ಯಾತ್ಮ ಲೋಕದಲ್ಲಿ ಸಾಧನೆ ಮಾಡಲು ಸಹ ಮಂಗಳಮುಖಿಯರಿಗೆ ಹೆಚ್ಚು ಅವಕಾಶಗಳಿವೆ ಎಂದು  ಶ್ರೀ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ ಹೇಳಿದ್ದಾರೆ. 

ಇವರ ದೇಹ ಶಿವನಾಗಿದ್ರೆ ಇವರ ಕೈಯಲ್ಲಿ ಅಪಾರ ದೈವಿಕ ಶಕ್ತಿಯನ್ನು ಹೊಂದಿರುತ್ತಾರೆ. ಹಾಗಾಗಿ ಮಂಗಳಮುಖಿಯರಿಗೆ ಅರ್ಧ ನಾರೀಶ್ವರ ತತ್ವ ತುಂಬಾ ಜಾಗೃತಿಯಾಗಿರುತ್ತದೆ. ಹಾಗಾಗಿ ಮಂಗಳಮುಖಿಯರು ಇಷ್ಟಪಟ್ಟು  ನಿಮ್ಮ ಬಳಿಗೆ ಬಂದು ಕಾಸು/ನಾಣ್ಯ ನೀಡಿದ್ರೆ ಪಡೆದುಕೊಳ್ಳಬೇಕು. ದೃಷ್ಟಿ ಇಳೆ ತೆಗೆಯಲು ಬಂದ್ರೆ ಬೇಡ ಅಂತ ಹೇಳಬಾರದು. ಮದುವೆ ಸಂದರ್ಭದಲ್ಲಿ ಕೆಲವಡೆ ಮಂಗಳಮುಖಿಯರನ್ನು ಆಹ್ವಾನಿಸಿ, ನವಜೋಡಿಗೆ ಆಶೀರ್ವಾದ ಮಾಡುತ್ತಾರೆ. 

ಇದನ್ನೂ ಓದಿ: ಪೋಷಕರು ಮಾಡೋ ಈ ತಪ್ಪಿನಿಂದ ಮಕ್ಕಳು ಮಂಗಳಮುಖಿರಾಗ್ತಾರಾ?

ಮಂಗಳಮುಖಿಯರು ನೀಡಿದ ಹಣ ಏನು ಮಾಡಬೇಕು? 
ಮಂಗಳಮುಖಿಯರು ನೀಡಿದ ಹಣವನ್ನು ಖರ್ಚು ಮಾಡಬಾರದು. ಪಾಕೆಟ್‌ನಲ್ಲಿಯೇ ಇರಿಸಿಕೊಳ್ಳಬೇಕು. ನಾಣ್ಯಗಳನ್ನು ಮನೆಯಲ್ಲಿ ಪ್ರತ್ಯೇಕವಾಗಿ ಒಂದೆಡೆ ಸಂಗ್ರಹಿಸುತ್ತಾ ಹೋಗಬೇಕು. ಹೀಗೆ ಮಾಡೋದರಿಂದ ಆರ್ಥಿಕವಾಗಿ ಸಬಲರಾಗುತ್ತೀರಿ ಎಂಬ ನಂಬಿಕೆ ಇದೆ. ನಾಣ್ಯವನ್ನು ಬಾಯಲ್ಲಿ ಕಚ್ಚಿ ಕೊಡೋದರಿಂದ ಲಕ್ಷ್ಮೀ ದೇವಿ ಕಾಲು ಮುರಿದುಕೊಂಡು ನಿಮ್ಮ ಬಳಿಯಲ್ಲಿಯೇ ಇರಲಿ ಎಂದು ಮಂಗಳಮುಖಿಯರು ನಿಸ್ವಾರ್ಥದಿಂದ ಹಾರೈಸುತ್ತಾರೆ. ಲಕ್ಷ್ಮೀದೇವಿಗೆ ನೋವಾದ್ರೂ ಪರವಾಗಿಲ್ಲ, ತನ್ನ ಮಕ್ಕಳ ಮನೆಯಲ್ಲಿಯೇ ಇರಲಿ ಎಂಬ ಉದ್ದೇಶದಿಂದ ಹಣವನ್ನು ಶಕ್ತಿ ತುಂಬಿದ ಕೈ ಮತ್ತು ಬಳೆಗೆ ತಾಗಿಸಿ, ಬಾಯಲ್ಲಿ ಕಚ್ಚಿ ನೀಡುತ್ತಾರೆ. ಈ ಹಣ ನೀಡುವಾಗ ಮಂಗಳಮುಖಿಯರಲ್ಲಿ ತಾಯಿ ಪ್ರೀತಿ ಇರುತ್ತದೆ.

ಇದನ್ನೂ ಓದಿ: ಮನೆಯಲ್ಲಿರುವ ರಾಹುದೋಷ ನಿವಾರಣೆಗೆ ಸರಳ ಪರಿಹಾರ ಕೊಟ್ರು ಶ್ರೀ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ

Latest Videos
Follow Us:
Download App:
  • android
  • ios