ಮನೆಯಲ್ಲಿರುವ ರಾಹುದೋಷ ನಿವಾರಣೆಗೆ ಸರಳ ಪರಿಹಾರ ಕೊಟ್ರು ಶ್ರೀ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ

ಮನೆಯಲ್ಲಿ ನಿರಂತರ ಜಗಳಗಳಿದ್ದರೆ, ಅದು ರಾಹು ದೋಷದ ಸೂಚನೆಯಾಗಿರಬಹುದು. ಶ್ರೀ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ ಪ್ರಕಾರ, ಈ ವಿಶೇಷ ಧೂಪ ಹಾಕುವುದರಿಂದ ಈ ದೋಷ ನಿವಾರಣೆಯಾಗುತ್ತದೆ.

Simple solution to remove Rahu Dosha in the house mrq

ಕೆಲವು ಮನೆಗಳಲ್ಲಿ ಶಾಂತಿ ಅನ್ನೋದೇ ಇರಲ್ಲ. ಸದಸ್ಯರ ನಡುವೆ ಸದಾ ಜಗಳ ಇರುತ್ತದೆ. ಇನ್ನು ಒಂದಿಷ್ಟು ಜನರ ಮನೆಯಲ್ಲಿ ಬೆಳಗ್ಗೆ ಸಂತಸದಿಂದ ಆರಂಭವಾಗುತ್ತದೆ. ಯಾವುದೇ ಜಗಳ ತಂಟೆಗಳಿಲ್ಲದೇ ಇಡೀ ದಿನ ಸಾಗಿರುತ್ತದೆ. ಸಂಜೆ ಯಾವುದೋ ಒಂದು ಸಣ್ಣ ಮಾತಿನ ಕಿಡಿಯಿಂದ ಇಡೀ ಮನೆಯಲ್ಲಿ ಅಲ್ಲೋಲ-ಕಲ್ಲೋಲದ ವಾತಾವರಣ ನಿರ್ಮಾಣವಾಗುತ್ತದೆ. ಇದು ಒಂದು ದಿನ ಮಾತ್ರವಲ್ಲ. ಇಂತಹ ಘಟನೆಗಳು ಪ್ರತಿದಿನವೂ ನಡೆಯುತ್ತಿರುತ್ತವೆ.

ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿದ್ರೆ, ಆ ಮನೆಯಲ್ಲಿ ರಾಹುವಿನ ಅಂಶವಿದೆ ಎಂದರ್ಥ. ಇಡೀ ಮನೆಯಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾಗಿರುವ ಕಾರಣ ಅಲ್ಲಿ ವಾಸಿಸುವ ಸದಸ್ಯರ ನಡುವೆ ಹೊಂದಾಣಿಕೆ ಇರಲ್ಲ. ಈ ರಾಹು ದೋಷ ಅಥವಾ ನಕಾರಾತ್ಮಕ ಅಂಶವನ್ನು ಮನೆಯಿಂದ ಹೊರಗೆ ಹಾಕಲು ಸುಲಭವಾದ ಪರಿಹಾರವನ್ನು  ಶ್ರೀ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ ನೀಡಿದ್ದಾರೆ. 

 ಶ್ರೀ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ ಪ್ರಕಾರ, ಸಕಾರಾತ್ಮಕ ಅಂಶಗಳಿರುವ ಮನೆಗಳು ಅತಿಥಿಗಳನ್ನು ಸೆಳೆಯುತ್ತೇವೆ. ಅಂತಹ ಮನೆಯಲ್ಲಿ ಸಮಯ ಕಳೆಯೋದು ಗೊತ್ತಾಗಲ್ಲ. ಆದ್ರೆ ನೆಗೆಟಿವಿಟಿ ಇರೋ ಮನೆಗಳಲ್ಲಿ ಹೆಚ್ಚು ಸಮಯ ಇರಲು ಆಗಲ್ಲ. ಇಂತಹ ಪರಿಸ್ಥಿತಿಯನ್ನು ರಾಹು ದೋಷ ಎಂದು ಕರೆಯಲಾಗುತ್ತದೆ. 

ಇದನ್ನೂ ಓದಿ: ರಾಹು,ಕೇತು, ಶನಿ ಮತ್ತು ಗುರು ನಿಂದ 3 ರಾಶಿಗೆ ಅದೃಷ್ಟ, 2025 ರಲ್ಲಿ ಮುಟ್ಟಿದ್ದೆಲ್ಲ ಚಿನ್ನ

ರಾಹ ದೋಷ ನಿವಾರಣೆ ಮಾಡುವ ಪರಿಹಾರ
ಪ್ರತಿನಿತ್ಯ ಸಂಜೆ ಸಮಯ ಹೊಸ್ತಿಲ ಪೂಜೆಯನ್ನು ಮಾಡಬೇಕು. ಹಾಗೆ ಹೊಸ್ತಿಲಿಗೆ ಎರಡು ದೀಪಗಳನ್ನು ಇರಿಸಬೇಕು.  ಹೊಸ್ತಿಲ ಪೂಜೆ ಬಳಿಕ ಮನೆಯಲ್ಲಿ ವಿಶೇಷವಾದ ಧೂಪವನ್ನು ಹಾಕಬೇಕು.

ಧೂಪ ಹೇಗಿರಬೇಕು? ಹಾಲುಮಡ್ಡಿ ಸಾಂಬ್ರಾಣಿ, ಗುಗ್ಗಳ, ಏಲಕ್ಕಿ ಮತ್ತು ಹಸಿಬೇವಿನ ಸೊಪ್ಪನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಕೆಂಡದ ಮೇಲೆ ಹಾಕುತ್ತಾ ಇಡೀ ಮನೆಯ ತುಂಬಾ ಧೂಪ ಹಾಕಬೇಕು. ಈ ರೀತಿ ಮಾಡೋದರಿಂದ ಮನೆಯಲ್ಲಿರುವ ರಾಹು ಮತ್ತು ಕೆಡಕಿನ ವಾತಾವರಣ, ದೃಷ್ಟಿ ದೋಷ ಇನ್ನಿತರ ಯಾವುದೇ ದೋಷಗಳಿದ್ರೂ ನಿವಾರಣೆಯಾಗುತ್ತದೆ. ನಕರಾತ್ಮಕ ಶಕ್ತಿ ನಿವಾರಣೆಯಾಗಿ ಸಕಾರಾತ್ಮಕತೆ ಸೃಷ್ಟಿಯಾಗುತ್ತದೆ .

ಇದನ್ನೂ ಓದಿ: ಹೊಸ ವರ್ಷದಲ್ಲಿ ಕೇತು ಸಿಂಹ ರಾಶಿಯಲ್ಲಿ ಸಂಕ್ರಮಿಸಿದಾಗ ಈ 5 ರಾಶಿಯವರಿಗೆ ಭಾರೀ ಲಾಭ

Latest Videos
Follow Us:
Download App:
  • android
  • ios