Asianet Suvarna News Asianet Suvarna News

Solar eclipse: ಗ್ರಹಣ ಕಾಲದಲ್ಲಿ ಗರ್ಭಿಣಿಯರು ಹೇಗಿರಬೇಕು...?

ಹಿಂದೂ ಸಂಪ್ರದಾಯಲ್ಲಿ ಗ್ರಹಣ ಆಚರಣೆಗೆ ವಿಶೇಷ ಮಹತ್ವವಿದೆ. ಗ್ರಹಣದ ಸಮಯದಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳನ್ನು ಶಾಸ್ತ್ರ ಹೇಳುತ್ತದೆ. ಅದರಲ್ಲೂ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ವಿಶೇಷ ಕಾಳಜಿಯನ್ನು ವಹಿಸಿಕೊಳ್ಳಬೇಕು. ಅದರ ಬಗ್ಗೆ ಶಾಸ್ತ್ರ ಹೇಳುವ ನಿಯಮಗಳ ಬಗ್ಗೆ ತಿಳಿಯೋಣ...

What precautions should take a pregnant during solar eclipse
Author
Bangalore, First Published Apr 23, 2022, 3:55 PM IST

ವರ್ಷದ ಮೊದಲ ಸೂರ್ಯ ಗ್ರಹಣ (Solar eclipse) ಇದೇ ಏಪ್ರಿಲ್ 30ರಂದು ಸಂಭವಿಸಲಿದೆ. ಈ ಬಾರಿ ಶನಿವಾರದ (Saturday) ಅಮಾವಾಸ್ಯೆಯಂದು ಗ್ರಹಣ ಸಂಭವಿಸಲಿದ್ದು, ಇದನ್ನು ಶನಿ ಅಮಾವಾಸ್ಯೆ ಎಂದು ಸಹ ಕರೆಯುತ್ತಾರೆ. ಗ್ರಹಣಕ್ಕೆ ಧಾರ್ಮಿಕವಾಗಿ ಮಹತ್ವ ಇರುವುದರ ಜೊತೆಗೆ ವೈಜ್ಞಾನಿಕವಾಗಿ ಸಹ ಮಹತ್ವವಿದೆ. ಗ್ರಹಣದ ಸಮಯದಲ್ಲಿ ಪಾಲಿಸಬೇಕಾದ ಹಲವಾರು ವಿಷಯಗಳನ್ನು ಶಾಸ್ತ್ರದಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಗರ್ಭಿಣಿಯರು (Pregnant) ಈ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಸಹ ಹೇಳಲಾಗಿದೆ.

ಹೌದು. ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಅತ್ಯಂತ ಜಾಗರೂಕರಾಗಿರಬೇಕು. ಗ್ರಹಣದ ಸಮಯದಲ್ಲಿ ನಕಾರಾತ್ಮಕ (Negative) ಪ್ರಭಾವಗಳು (Effects) ಹೆಚ್ಚಾಗಿರುವುದರಿಂದ ಗರ್ಭಣಿಯರಿಗೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಇತರರಿಗಿಂತ ಗರ್ಭಿಣಿಯರು ಈ ಸಮಯದಲ್ಲಿ ಹೆಚ್ಚು ಕಾಳಜಿ (Care) ವಹಿಸಬೇಕು. ಹಾಗಾದರೆ ಶಾಸ್ತ್ರ ಹೇಳಿರುವ ಪ್ರಕಾರ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚೆರಿಕೆಗಳೇನು (Precautions) ಎಂಬುದನ್ನು ತಿಳಿಯೋಣ....

ಗ್ರಹಣದ ಸಮಯದಲ್ಲಿ ಬೀಳುವ ದೂಷಿತ ಕಿರಣಗಳು (Defected Sun rays) ಗರ್ಭದಲ್ಲಿರುವ (Womb) ಶಿಶುವಿನ (Infant) ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತವೆ. ಇದರಿಂದ ಶಿಶುವು ದೈಹಿಕ ಮತ್ತು ಮಾನಸಿಕವಾಗಿ ಅಸ್ವಸ್ಥಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗೆ ಹೇಳುವುದರ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಶಾಸ್ತ್ರ ಹೇಳುವ ಕಾರಣಗಳ ಬಗ್ಗೆ ತಿಳಿಯೋಣ...

- ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಹರಿತವಾದ (Sharp) ವಸ್ತುಗಳಿಂದ ದೂರವಿರಬೇಕು ಅಂದರೆ ಚಾಕು, ಚೂರಿ, ಪಿನ್ ಮತ್ತು ಕತ್ತಿ ಇತ್ಯಾದಿ ವಸ್ತುಗಳಿಂದ ದೂರವಿರಬೇಕು. ಅಷ್ಟೇ ಅಲ್ಲದೆ ಅವರ ಪತಿ (Husband) ಸಹ ತುಂಬಾ ಜಾಗರೂಕತೆಯಿಂದ ಇರಬೇಕು. ಈ ಎಲ್ಲ ವಸ್ತುಗಳನ್ನು ಮುಟ್ಟಬಾರದು. ಹಾಗೊಮ್ಮೆ ಮಾಡಿದರೆ ಶಿಶುವಿನ ಅಂಗಾಂಗಳು ಊನವಾಗುವ ಸಾಧ್ಯತೆ ಇರುತ್ತದೆ.
- ಸೂರ್ಯ ಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯರು ಹೊರಗಡೆ ಹೋಗಬಾರದು, ಮನೆಯಲ್ಲಿಯೇ ಇರಬೇಕು. ಹೊರಗಡೆ ಹೋಗುವುದರಿಂದ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿಯೂ ಸೂರ್ಯನ ಕಿರಣ ಬೀಳುವ ಕಡೆ ಇರಬಾರದು. ಗ್ರಹಣದ ಸಮಯದಲ್ಲಿ ಮಲಗುವುದು ನಿಷಿದ್ಧವಾಗಿದೆ. ಆದರೆ, ಗರ್ಭಿಣಿಯರು ಈ ಸಮಯದಲ್ಲಿ ಮಲಗಬಹುದಾಗಿದೆ. ಆದರೆ ಕುಳಿತು ದೇವರ ಧ್ಯಾನ (Meditation) ಮಾಡಲು ಸಾಧ್ಯವಿದ್ದವರು, ಅದನ್ನು ಪ್ರಯತ್ನಿಸುವುದು ಒಳಿತು.

ಇದನ್ನು ಓದಿ: Solar Eclipse 2022 ಪ್ರಭಾವ ಯಾವ ರಾಶಿಗೆ ಏನು?

- ಗರ್ಭಿಣಿಯರು ಸೂರ್ಯ ಗ್ರಹಣವನ್ನು ನೋಡಲೇಬಾರದು. ಈ ಸಮಯದಲ್ಲಿ ಸೂರ್ಯನಿಂದ ಹೊರಸೂಸುವ ಕಿರಣಗಳಿಂದ ಗರ್ಭಿಣಿಯರಿಗೆ ನಕಾರಾತ್ಮಕ (Negativity) ಪ್ರಭಾವಗಳು ಉಂಟಾಗುತ್ತದೆ. ಈ ಕಿರಣಗಳಿಂದ ಲಿವರ್, ಸ್ಕಿನ್ ಮತ್ತು ಕಣ್ಣಿನ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದು ಗರ್ಭದಲ್ಲಿರುವ ಶಿಶುವಿಗೂ ಸಮಸ್ಯೆಯನ್ನುಂಟು ಮಾಡುತ್ತದೆ. ಗರ್ಭಿಣಿಯರು  ಗ್ರಹಣವನ್ನು ನೋಡುವುದರಿಂದ ಶಿಶುವಿಗೆ ಚರ್ಮದ ಸಮಸ್ಯೆ (Skin problem) ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಗ್ರಹಣ ಅಂತ್ಯವಾದ ನಂತರ ಸಾಧ್ಯವಾದಲ್ಲಿ ಗರ್ಭಿಣಿಯರು ಸ್ನಾನ ಮಾಡುವುದು ಒಳ್ಳೆಯದು. ಸ್ನಾನದ ನಂತರ ದೇವರಿಗೆ ತುಪ್ಪದ ದೀಪವನ್ನು ಹಚ್ಚಬೇಕು. ಅದಾದ ಬಳಿಕ ಶಕ್ತಿ ನೀಡುವ ಆಹಾರವನ್ನು ಸೇವಿಸಬೇಕು.
- ಗ್ರಹಣದ ಸಮಯದಲ್ಲಿ ಅಥವಾ ಗ್ರಹಣ ಅಂತ್ಯವಾದ ತಕ್ಷಣ ಗರ್ಭಿಣಿಯರು ಆಹಾರವನ್ನು ಸೇವಿಸ ಬಯಸಿದಲ್ಲಿ ಆ ಆಹಾರದಲ್ಲಿ ತುಳಸಿ ಎಲೆಯನ್ನು (Tulsi leaves) ಹಾಕಿರಬೇಕು. ಗ್ರಹಣದ ಸಮಯದಲ್ಲಿ ಉಂಟಾಗುವ ನಕಾರಾತ್ಮಕ ಶಕ್ತಿಯನ್ನು ತುಳಸಿ ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ. ಹೀಗೆ ಮಾಡುವುದರಿಂದ ಗ್ರಹಣದ ನಂತರವು ಈ ಆಹಾರಗಳು ಶುದ್ಧವಾಗಿರುತ್ತವೆ.

ಇದನ್ನು ಓದಿ: Solar Eclipse 2022: ಸೂರ್ಯಗ್ರಹಣದಂದು ಮಾಡಬೇಕಾದ್ದು, ಮಾಡಬಾರದ್ದು ಏನು?

- ಗ್ರಹಣದ ಸಮಯದಲ್ಲಿ ಗರ್ಭಿಣಿಯರು ದೇವರ ಧಾನ್ಯ, ಸ್ತೋತ್ರಗಳನ್ನು ಪಠಿಸುತ್ತಿರಬೇಕು (Chanting). ಇದರಿಂದ ದೇಹ ಮತ್ತು ಮನಸ್ಸು ಯಾವುದೇ ನಕಾರಾತ್ಮಕ ಪ್ರಭಾವಗಳಿಗೆ ಒಳಗಾಗುವುದಿಲ್ಲ. ಈ ಸಮಯದಲ್ಲಿ ದೇವರ ಸ್ಮರಣೆ ಮಾಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಗ್ರಹಣದ ಪರಿಣಾಗಳು ಉಂಟಾಗುವುದಿಲ್ಲ.

Follow Us:
Download App:
  • android
  • ios