ಕನ್ಯಾ, ಕಟಕ

ಈ ಎರಡು ರಾಶಿಗಳಲ್ಲಿ ಜನಿಸಿದವರಿಗೆ ಶ್ರೀರಾಮನ ಪೂರ್ಣಾನುಗ್ರಹ ಪ್ರಾಪ್ತ ಆಗುತ್ತದೆ. ಅನೇಕ ಕಷ್ಟಗಳು ಎದುರಾಗುತ್ತವಾದರೂ, ಬಂದಿರುವ ಕಷ್ಟಗಳೆಲ್ಲ ಮಿಂಚಿನಂತೆ ಕಳೆದುಹೋಗುತ್ತವೆ. ಶ್ರೀರಾಮಚಂದ್ರನು ಎಲ್ಲ ದೇವರಿಗಿಂತ ಹೆಚ್ಚು ಕರುಣಾಮಯಿ, ತನ್ನನ್ನು ಪ್ರೀತಿಸಿದವರಿಗೆ ತನ್ನನ್ನೇ ಕೊಟ್ಟುಕೊಳ್ಳುವ ದಯಾಮಯಿ. ಇವನು ನಿಮ್ಮನ್ನು ಕಾಡುವ ಕಷ್ಟಗಳನ್ನು ಪರಿಹರಿಸಲು ತನ್ನ ಕೋದಂಡ ಧನುಸ್ಸನ್ನು ಹೆದೆಯೇರಿಸಿ ನಿಲ್ಲುವನು. ರಾಕ್ಷಸ ಪಡೆಯನ್ನು ಓಡಿಸಿದಂತೆ ನಿಮ್ಮ ದುರಿತಗಳನ್ನು ಇಲ್ಲವಾಗಿಸುವನು. ಶ್ರೀರಾಮ ಜಯ ರಾಮ ಜಯ ಜಯ ರಾಮ' ಎಂಬ ಮಂತ್ರವನ್ನು ಬಿಡದೆ ಜಪಿಸಬೇಕು.

 

ವೃಶ್ಚಿಕ, ಮಿಥುನ

ವಿಕಾರಿ ಸಂವತ್ಸರದ ಕೊನೆಯಲ್ಲಿ ಇವರ ಕಷ್ಟಗಳು ಉಲ್ಬಣಿಸಿವೆ. ಅವು ಶಾರ್ವರಿ ಸಂವತ್ಸರದಲ್ಲೂ ಮುಂದುವರಿದಿವೆಯಾದರೂ, ಶುಭದಿನಗಳು ಹತ್ತಿರದಲ್ಲೇ ಇರುವುದೂ ಕಾಣಿಸುತ್ತಿದೆ. ಮುಖ್ಯವಾಗಿ ವೃತ್ತಿಗೆ ಸಂಬಂಧಿಸಿದಂತೆ, ಹೊಸ ಜವಾಬ್ದಾರಿಗಳು ನಿಮ್ಮ ಹೆಗಲು ಏರಬಹುದು. ಅವುಗಳನ್ನು ಸಮರ್ಥವಾಗಿ ನಿಭಾಯಿಸುವುದರಲ್ಲಿ ನಿಮ್ಮ ಅದೃಷ್ಟ ಅಡಗಿದೆ. ಹೊಸ ಅವಕಾಶಗಳು ಸೃಷ್ಟಿಯಾಗಬಹುದು. ಅವುಗಳನ್ನು ನಿಮ್ಮ ಲಾಭಕ್ಕಾಗಿ ಬಳಸಿಕೊಳ್ಳಿ. ಆಗಾಗ ಶ್ರೀರಾಮನ ಗುಡಿಗೆ ಭೇಟಿ ನೀಡಿ ಶ್ರೀರಾಮಚಂದ್ರನ ಆಶೀರ್ವಾದ ಪಡೆಯಲು ಮರೆಯಬೇಡಿ.

 

ಇಂಥಾ ಕಷ್ಟದ ಟೈಮ್‌ನಲ್ಲೂ ಅದೃಷ್ಟವಿರುವ ಐದು ರಾಶಿಗಳು

 

ಮೇಷ, ಸಿಂಹ

ಈ ರಾಶಿಗಳವರಿಗೆ ಸುಖದ ದಿನಗಳು ಇನ್ನೂ ಬಹಳ ಮುಂದೆ ಹೋಗಿರುವುದು ಕಾಣಿಸುತ್ತಿದೆ, ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ಏರುಪೇರು ಆಗಬಹುದು, ಆದರೆ ತುಂಬಾ ಕಷ್ಟವೇನೂ ಬರಲಾರದು. ಅಗಸ್ತ್ಯ ಋಷಿಗಳು ಶ್ರೀರಾಮನಿಗೆ ಉಪದೇಶಿಸಿದ ಆದಿತ್ಯ ಕವಚ ಮಂತ್ರವನ್ನು ಆಗಾಗ ಜಪಿಸುವ ಪರಿಪಾಠ ರೂಢಿಸಿಕೊಳ್ಳಿ. ಈ ಆದಿತ್ಯ ಕವಚ ಮಂತ್ರದಿಂದಲೇ ರಾವಣನ ಹೃದಯದ ಕವಚವನ್ನು ಭೇದಿಸಿ ಅವನನ್ನು ಸಾಯಿಸುವುದು ಶ್ರೀರಾಮನಿಗೆ ಸಾಧ್ಯವಾಯಿತು. ಹಾಗೇ ನೀವೂ ಕಷ್ಟಗಳನ್ನು ಸೋಲಿಸುತ್ತೀರಿ. ಮನೆಯೇ ಮಂತ್ರಾಲಯ ಎಂಬ ಮಾತನ್ನು ಮರೆಯಬೇಡಿ, ಬಂಧುಗಳನ್ನು ಪ್ರೀತಿಯಿಂದ ಕಾಣಿ. ಅವರು ಕಷ್ಟದಲ್ಲಿ ನಿಮ್ಮ ಜೊತೆಗಿರುತ್ತಾರೆ.

 

ಕುಂಭ, ಮೀನ

ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಯೊಂದು ನಿಮಗೆ ಬಾಧೆ ಕೊಡುವ ಸಂಭವ ಕಾಣಿಸುತ್ತಿದೆ. ಶ್ರೀರಾಮನಿಗೂ ಲಂಕೆಯ ಯುದ್ಧದಲ್ಲಿ ಇಂದ್ರಜಿತುವಿನ ಮಾಯಾವಿ ಯುದ್ಧದಿಂದ ಕಷ್ಟ ಆಗಲಿಲ್ಲವೇ? ಆಯಿತು. ಆದರೆ ಅದರಿಂದ ಹೊರಬರುವ ದೃಢವಾದ ಮಾನಸಿಕ ಶಕ್ತಿ, ಆರೋಗ್ಯ, ಛಲ ಅವನಲ್ಲಿತ್ತು. ಹಾಗಾಗಿ ಉತ್ತಮ ಆರೋಗ್ಯವನ್ನೂ ದೈವಕೃಪೆಯನ್ನೂ ಹೊಂದಿರಿ. ಆಗ ಯಾವ ಕಷ್ಟವೂ ನಿಮಗೆ ವಿನಾಶಕಾರಿ ಅನಿಸಲಾರದು. ಶ್ರೀರಾಮಚಂದ್ರನ ಜೊತೆಗೆ ಆಂಜನೇಯ ಸ್ವಾಮಿಯ ಅನುಗ್ರಹವನ್ನೂ ಪಡೆದುಕೊಳ್ಳಿ. ಹನುಮ ಗುಡಿಯಲ್ಲಿ ತೈಲ ದಾನ ಮಾಡಿ.

 

ಈ ರಾಶಿಯವ್ರಿಗೆ ಟೈಮ್ ಅಷ್ಟು ಚೆನ್ನಾಗಿಲ್ಲ, ನಿಮ್ ರಾಶಿ ಈ ಲಿಸ್ಟ್‌ನಲ್ಲಿ ಇದ್ಯಾ?...

 

ಮಕರ, ಧನು

ಈ ಎರಡು ರಾಶಿಗಳವರಿಗೆ ತಕ್ಷಣ ಸ್ವಲ್ಪ ಸಂಕಷ್ಟಗಳ ಬಾಧೆಯಿದ್ದರೂ, ನಂತರದ ದಿನಗಳಲ್ಲಿ ಶುಭವಿದೆ, ನೀವು ತಕ್ಷಣ ಮಾಡಬೇಕಾದ್ದು ಎಂದರೆ, ಶ್ರೀರಾಮನಂತೆ ವನವಾಸ. ಅಂದರೆ ಈ ಕಷ್ಟಕಾಲದಲ್ಲಿ ನೀವು ಕೈಹಿಡಿಯುವ ಯಾವುದೇ ವೃತ್ತಿ ನಿಮ್ಮ ಕೈಹಿಡಿಯದೆ ಹೋಗಬಹುದು. ಆರೋಗ್ಯ ಸ್ವಲ್ಪ ಏರುಪೇರು ಆಗಬಹುದು. ಮೇಲಧಿಕಾರಿಗಳಿಂದ ಕಷ್ಟ ಎದುರಿಸಬೇಕಾದೀತು. ಕೈಲಿದ್ದ ಹಣ ನೀರಿನಂತೆ ಖರ್ಚಾದೀತು. ಆದರೆ ಲಾಭ ನೀವೆಣಿಸಿದಷ್ಟೇ ಬರಲಿಕ್ಕಿಲ್ಲ. ಶ್ರೀರಾಮಚಂದ್ರ, ಆಂಜನೇಯ, ಶನಿದೇವತಾನುಗ್ರಹದಿಂದ ಈ ವರ್ಷದ ಉತ್ತರಾರ್ಧದಲ್ಲಿ ನೀವು ಮೊದಲಿನಂತೆ ಶುಭಫಲಗಳನ್ನು ಕಾಣುತ್ತೀರಿ. ರಾಮನಾಮ ಜಪ ಸದಾ ಇರಲಿ.