ಜ್ಯೇಷ್ಠ ಮಾಸದ ಶ್ರೇಷ್ಠ ವಿಶೇಷತೆಗಳು, ಸೂರ್ಯ ಕೃಪೆಗೆ ಹೀಗೆ ಮಾಡಿ

ಜ್ಯೇಷ್ಠ ಮಾಸವನ್ನು ಶ್ರೇಷ್ಠ ಮಾಸವೆಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಸೂರ್ಯ ಮತ್ತು ವರುಣ ದೇವನನ್ನು ಆರಾಧಿಸಲಾಗುತ್ತದೆ. ಬಿಸಿಲಿನ ಜಳ ಹೆಚ್ಚಿರುವ ಈ ಮಾಸದಲ್ಲಿ ನೀರು ಮತ್ತು ಆಹಾರವನ್ನು ದಾನವಾಗಿ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲದೆ ಈ ಮಾಸದ ಮಂಗಳವಾರ ಹನುಮನನ್ನು ಪೂಜಿಸುವದರಿಂದ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ.
 

What is the significance of the Jyesta month

ಹಿಂದೂ ಧರ್ಮದ ಪ್ರಕಾರ ಜ್ಯೇಷ್ಠ ಮಾಸವು (Jyeshta month) ಮೂರನೇ ಮಾಸವಾಗಿದೆ. ಈ ಮಾಸದಲ್ಲಿ ವರುಣ ( Lord Varuna) ದೇವ ಮತ್ತು ಸೂರ್ಯ ದೇವನ (Sun) ಉಪಾಸನೆಯನ್ನು ಮಾಡಲಾಗುತ್ತದೆ. ಈ ಮಾಸದಲ್ಲಿ ಸೂರ್ಯನ ಕಿರಣಗಳು (Rays) ತುಂಬಾ ಪ್ರಬಲವಾಗಿರುತ್ತವೆ ಎಂದು ಹೇಳಲಾಗುತ್ತದೆ. ಸೂರ್ಯನ ಪ್ರಖರತೆ ಮತ್ತು ತೀಕ್ಷ್ಣತೆಯ ಜೊತೆಗೆ ಜ್ಯೇಷ್ಠ ನಕ್ಷತ್ರವಿರುವ (Star) ಕಾರಣದಿಂದಲೇ ಈ ಮಾಸಕ್ಕೆ ಜ್ಯೇಷ್ಠ ಮಾಸವೆಂದು ಕರೆಯಲಾಗುತ್ತದೆ. ಈ ಮಾಸದಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುತ್ತದೆ. ಜ್ಯೇಷ್ಠ ಮಾಸದಲ್ಲಿ ಸೂರ್ಯದೇವನ ಉಪಾಸನೆಯ ಜೊತೆಗೆ ವರುಣ ದೇವನನ್ನು ಸಹ ಆರಾಧಿಸಲಾಗುತ್ತದೆ. ಮೇ ಮತ್ತು ಜೂನ್ ತಿಂಗಳಿನಲ್ಲಿ ಬಿಸಿಲಿನ ಜಳವು (Heat) ತ್ರೀವ್ರವಾಗಿರುತ್ತದೆ ಮತ್ತು ಆಗಾಗ ಮಳೆ ಬರುತ್ತದೆ. ಹಾಗಾಗಿ ಈ ಮಾಸದಲ್ಲಿ ವರುಣ ಮತ್ತು ಸೂರ್ಯ ದೇವನನ್ನು ಆರಾಧಿಸಲಾಗುತ್ತದೆ. 

ಈ ಬಾರಿ ಮೇ 31ರಂದು ಆರಂಭವಾಗುವ ಜ್ಯೇಷ್ಠ ಮಾಸವು ಜೂನ್ 29ಕ್ಕೆ ಅಂತ್ಯವಾಗುತ್ತದೆ. ಈ ಮಾಸದಲ್ಲಿ ವಿಶೇಷವಾಗಿ ಸೂರ್ಯ ದೇವನಿಗೆ ಅರ್ಘ್ಯವನ್ನು ನೀಡುವುದರಿಂದ ಮನೆಗೆ ಒಳಿತಾಗುವುದಲ್ಲದೇ, ಸೂರ್ಯ ದೇವನ ಕೃಪೆ ಪ್ರಾಪ್ತವಾಗುತ್ತದೆ. ಹಾಗೆಯೇ ವರುಣ ದೇವನನ್ನು ಪೂಜಿಸುವುದರಿಂದ (Worship) ಮುಂದಿನ ದಿನಗಳಲ್ಲಿ ಆರಂಭವಾಗುವ ಮುಂಗಾರು ಮಳೆಯು (Rain) ಚೆನ್ನಾಗಿ ಆಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಬೆಳೆಗೆ ಬೇಕಾಗುವಷ್ಟು ಮಳೆಯಾಗಿ ಕೃಷಿಗೆ ಅನೂಕೂಲವು ಆಗುತ್ತದೆ. ಹಾಗಾದರೆ ಈ ಮಾಸದ ಬಗ್ಗೆ ಇನ್ನಷ್ಟು ತಿಳಿಯೋಣ...

ಇದನ್ನು ಓದಿ : ಜಾಬ್ ಪ್ರಾಬ್ಲಂ ಆಗ್ತಿದ್ರೆ ಅದಕ್ಕೆ ಈ ಗ್ರಹಗಳೇ ಕಾರಣ..

ಜ್ಯೇಷ್ಠ ಮಾಸದ ವೈಜ್ಞಾನಿಕ (Scientific) ಮಹತ್ವ ಹೀಗಿದೆ..
ಜ್ಯೇಷ್ಠ ಮಾಸದಲ್ಲಿ ಸೂರ್ಯನ ತೀಕ್ಷ್ಣತೆಯ ಕಾರಣದಿಂದ ನೀರಿಗೆ ತಾಪತ್ರಯವಾಗಿರುತ್ತದೆ. ಹಾಗಾಗಿ ನೀರನ್ನು ಬಳಸುವಾಗ ಮಿತವಾಗಿ ಬಳಸಬೇಕೆಂದು ಹೇಳುತ್ತಾರೆ. ಅಷ್ಟೇ ಅಲ್ಲದೆ ಹೀಟ್ ಸ್ಟ್ರೋಕ್ ಮತ್ತು ಆಹಾರ –ನೀರಿನಿಂದ ಬರುವ ರೋಗಗಳಿಂದ ದೂರವಿರುವುದು ಉತ್ತಮ. ಇದಕ್ಕೆ ಬೇಕಾದ ಮುನ್ನೆಚ್ಚರಿಕೆ (Precautions) ಕ್ರಮಗಳನ್ನು ಪಾಲಿಸಿಕೊಳ್ಳುವುದು ಉತ್ತಮ. ಈ ಜ್ಯೇಷ್ಠ ಮಾಸದಲ್ಲಿ  ಹಸಿರು ಸೊಪ್ಪುಗಳು, ನೀರಿನ ಅಂಶ ಹೆಚ್ಚಾಗಿರುವ ಹಣ್ಣು ಮತ್ತು ತರಕಾರಿಗಳನ್ನು ಬಳಸುವುದರಿಂದ ಆರೋಗ್ಯ (Health) ಉತ್ತಮವಾಗಿರುತ್ತದೆ. ಈ ಮಾಸದಲ್ಲಿ ಬಿಸಿಲಿನಲ್ಲಿ ಹೆಚ್ಚು ತಿರುಗಾಡದಿರುವುದು ಮತ್ತು ಮಧ್ಯಾಹ್ನದ ಸಮಯದಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ.

ವರುಣ ಮತ್ತು ಸೂರ್ಯ ದೇವನ ಕೃಪೆ
ಜ್ಯೇಷ್ಠ ಮಾಸದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ ಗಿಡಗಳಿಗೆ (Plants) ನೀರು ಹಾಕುವುದರಿಂದ ಒಳಿತಾಗುತ್ತದೆ. ಬಾಯಾರಿಕೆ ಆದವರಿಗೆ ನೀರು ಕೊಡುವುದು, ಪ್ರಾಣಿ ಮತ್ತು ಪಕ್ಷಿಗಳಿಗೆ ಒಂದು ಪಾತ್ರೆಯಲ್ಲಿ ನೀರಿಡುವುದರಿಂದ ಪುಣ್ಯ ಪ್ರಾಪ್ತವಾಗುತ್ತದೆ. ದೇವಸ್ಥಾನ ಮತ್ತು ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ನೀರಿನ ವ್ಯವಸ್ಥೆ ಮಾಡುವುದರಿಂದ ಬಾಯಾರಿದವರು ನೀರು ಕುಡಿದು ಹರಸುತ್ತಾರೆ. ಮಡಕೆ ನೀರು ಮತ್ತು ಸಾಧ್ಯವಾದಲ್ಲಿ ಬೀಸಣಿಗೆಯನ್ನು (Fan) ದಾನವಾಗಿ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸೂರ್ಯ ಮಂತ್ರವನ್ನು ಜಪಿಸಬೇಕು. ಸೂರ್ಯ ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ದೋಷಗಳೇನಾದರೂ ಇದ್ದಲ್ಲಿ ಜ್ಯೇಷ್ಠ ಮಾಸದ ಪ್ರತಿ ಭಾನುವಾರ (Sunday) ಉಪವಾಸ ಮಾಡುವುದರಿಂದ ದೋಷ ನಿವಾರಣೆಯಾಗುತ್ತದೆ.

ಇದನ್ನು ಓದಿ : ಮದುವೆಯಲ್ಲಿ ಕನ್ಯಾದಾನ ಮಾಡುವುದೇಕೆ? ನಿಮಗಿದು ಗೊತ್ತೆ..?

ಜ್ಯೇಷ್ಠ ಮಂಗಳವಾರಕ್ಕಿದೆ (Tuesday) ವಿಶೇಷ ಮಹತ್ವ
ಜ್ಯೇಷ್ಠ ಮಾಸದ ಮಂಗಳವಾರ ಅತ್ಯಂತ ವಿಶೇಷವೆಂದು ಹೇಳಲಾಗುತ್ತದೆ.  ಈ ಮಾಸದ ಪ್ರತಿ ಮಂಗಳವಾರ ಹನುಮಂತನಿಗೆ (Lord Hanuman) ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದ ಮನೋಕಾಮನೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಈ ದಿನ ಹನುಮಂತನಿಗೆ ತುಳಸಿ ದಳವನ್ನು ಅರ್ಪಿಸಿ ಪೂಜಿಸಲಾಗುತ್ತದೆ. ಅಷ್ಟೇ ಅಲ್ಲದೆ ನೈವೇದ್ಯಕ್ಕೆ ವಿಧ ವಿಧವಾದ ಸಿಹಿ (Sweet) ಖಾದ್ಯಗಳನ್ನು ತಯಾರಿಸಿ ಅರ್ಪಿಸಲಾಗುತ್ತದೆ. ನಂತರ ಹನುಮಂತನನ್ನು ಭಜಿಸಿ, ಸಂಬಂಧಿಸಿದ ಸ್ತೋತ್ರಗಳನ್ನು ಪಠಿಸಲಾಗುತ್ತದೆ. ಈ ದಿನ ನಿರ್ಗತಿಕರಿಗೆ ಮತ್ತು ಬಡವರಿಗೆ ನೀರು (Water), ಆಹಾರ ಮತ್ತು ಸಿಹಿ ಖಾದ್ಯಗಳನ್ನು ವಿತರಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲದೆ ಮಂಗಳನಿಗೆ (Mars) ಸಂಬಂಧಿಸಿದ ದೋಷವಿದ್ದಲ್ಲಿ ಅದೂ ಸಹ ಪರಿಹಾರವಾಗುತ್ತದೆ. ಹನುಮಂತನ ಕೃಪೆ ಸಹ ಪ್ರಾಪ್ತವಾಗುತ್ತದೆ. 

Latest Videos
Follow Us:
Download App:
  • android
  • ios