Dreams Meaning : ಸಲಿಂಗಕಾಮಿ ಕನಸುಗಳು ಬೀಳುವುದೇಕೆ?
ಕನಸುಗಳಿಗೆ ನಾನಾ ಅರ್ಥವಿದೆ. ಒಂದೊಂದು ದಿನ ಒಂದೊಂದು ರೀತಿಯ ಕನಸು ಬೀಳೋದು ಸಹಜ. ಕೆಲ ಕನಸು ಆಪತ್ತಿನ ಬಗ್ಗೆ ಮುನ್ಸೂಚನೆ ನೀಡಿದ್ರೆ ಮತ್ತೆ ಕೆಲ ಕನಸು ನಮ್ಮ ಮನಸ್ಥಿತಿಯನ್ನು ಹೇಳುತ್ತದೆ.
ಕನಸು ಎಂದರೆ ನಮ್ಮದಲ್ಲದ ಲೋಕದಲ್ಲಿ ನಾವು ಸ್ವಚ್ಛಂದವಾಗಿ ವಿಹರಿಸುವುದಾಗಿದೆ. ಕನಸಿಗೆ ಯಾವ ಹಣ, ಐಶ್ವರ್ಯ, ಆಸ್ತಿಗಳ ಹಂಗೂ ಇಲ್ಲ. ಹಾಗಾಗಿ ಒಬ್ಬ ವ್ಯಕ್ತಿ ಕನಸಿನಲ್ಲಿ ಏನು ಬೇಕಾದರೂ ಮಾಡಬಹುದು ಅಥವಾ ಕಾಣಬಹುದಾಗಿದೆ. ಕೆಲವೊಮ್ಮೆ ಕನಸಿನಲ್ಲಿ ನಮ್ಮ ಸಬ್ ಕಾನ್ಶಿಯಸ್ ಮೈಂಡ್ ನಮ್ಮ ಮೆದುಳು ಎಷ್ಟು ಕ್ರಿಯಾಶೀಲವಾಗಿದೆ ಎಂಬುದನ್ನು ತೋರಿಸುತ್ತದೆ.
ಕೆಲವೊಮ್ಮೆ ಕನಸು (Dream) ಗಳು ನಮ್ಮ ಸುಪ್ತ ಮನಸ್ಸಿನಲ್ಲಿ ಆಸೆ, ಬಯಕೆ, ಭಾವನೆ (Feeling) ಗಳಿಗೆ ಕನ್ನಡಿ ಹಿಡಿಯುತ್ತವೆ. ಹಾಗಂತ ಎಲ್ಲ ಸಮಯದಲ್ಲೂ ಕನಸಿನಲ್ಲಿ ನಿಮ್ಮ ಭಾವನೆಗಳೇ ಬರಬೇಕು ಎಂದೇನಿಲ್ಲ. ನಿಮ್ಮ ಅಚ್ಚುಮೆಚ್ಚಿನ ಗೆಳೆಯ ಅವನ ಜೊತೆ ನಿಮಗೆ ಯಾವುದೇ ರೀತಿಯ ಪ್ರೀತಿಯ ಭಾವನೆ ಇಲ್ಲದಿದ್ದರೂ ಕೂಡ ಗೆಳೆಯನಿಗೆ ಸಂಬಂಧಿಸಿದ ಸೆಕ್ಸ್ (Sex) ಡ್ರೀಮ್ಸ್ ನಿಮಗೆ ಕಾಣಬಹುದು. ಇಂತಹ ಕನಸುಗಳನ್ನೇ ಸಲಿಂಗಕಾಮಿ ಕನಸುಗಳು ಎನ್ನುತ್ತಾರೆ.
ASTROLOGY TIPS : ಕಿವಿಗೆ ಬಂಗಾರ ಧರಿಸಿದ್ರೆ ಏನೆಲ್ಲ ಲಾಭ ಗೊತ್ತಾ?
ಹೋಮೋಸೆಕ್ಸುವಲ್ ಫೀಲಿಂಗ್ಸ್ : ಅನೇಕ ಜನರಿಗೆ ತಮ್ಮ ಲೈಂಗಿಕ ಇಚ್ಛೆ ಅಥವಾ ಭಾವನೆಗಳ ಬಗ್ಗೆ ಹೇಳಿಕೊಳ್ಳಲು ಮುಜುಗರವಾಗುತ್ತದೆ ಅಥವಾ ಅದರ ಕುರಿತು ಮಾತನಾಡಲು ಅವರಿಗೆ ಮನಸ್ಸು ಇರುವುದಿಲ್ಲ. ಅಂತಹ ಸಮಯದಲ್ಲಿ ಅವರಿಗೆ ಸಲಿಂಗಕಾಮಿ ಅಥವಾ ಹೋಮೋಸೆಕ್ಸುವಲ್ ಕನಸುಗಳು ಬೀಳುತ್ತವೆ. ಹೀಗೆ ಕನಸು ಬಿದ್ದ ಮಾತ್ರಕ್ಕೆ ನೀವು ಆ ಸಂಬಂಧವನ್ನು ಇಷ್ಟಪಡುತ್ತಿದ್ದೀರಿ ಅಥವಾ ನಿಮ್ಮ ಮೆದುಳು ಅದರ ಕಡೆಗೆ ವಾಲುತ್ತಿದೆ ಎಂಬ ಅರ್ಥ ಕೂಡ ಅಲ್ಲ.
ಒಬ್ಬ ವ್ಯಕ್ತಿಯ ಬಗ್ಗೆ ಹೆಚ್ಚಿನ ಭಾವನೆ : ಕನಸಿನಲ್ಲಿನ ನಿಮ್ಮ ಭಾವನೆಗಳು ಗೆಳೆತನ, ಅವಲಂಬನೆ, ಕೋಪ, ದುಃಖ ಮುಂತಾದ ಯಾವುದೇ ರೀತಿಯದ್ದಾಗಿರಬಹುದು. ಅದು ಸಲಿಂಗಕಾಮಿ ಪ್ರೀತಿಯೇ ಆಗಿರಬೇಕು ಎಂದೇನಿಲ್ಲ. ಇದು ಕೇವಲ ನಿಮ್ಮ ಮೆದುಳಿನ ಕಾರ್ಯದ ಒಂದು ರೀತಿ ಅಷ್ಟೇ. ಕನಸಿನ ಮೂಲಕ ಆ ವ್ಯಕ್ತಿ ನಿಮಗೆ ಯಾವುದೇ ಒಂದು ರೀತಿಯಲ್ಲಿ ಬಹಳ ಮುಖ್ಯವಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ.
ಮನೆ ಮೇಲೆ ಹದ್ದು ಹಾರಾಡೋದು ಶುಭವೋ? ಅಶುಭವೋ?
ಮನಸ್ಸಿನ ಕ್ರಿಯಾಶೀಲತೆ : ನಮ್ಮ ಮನಸ್ಸು ಬಹಳ ಕ್ರಿಯಾಶೀಲವಾಗಿರುತ್ತದೆ. ನಮ್ಮ ಸುಪ್ತ ಮನಸ್ಸು ನಾವು ಎಂದೋ ನೋಡಿದ ಅಥವಾ ಕೇಳಿದ ಸಂಗತಿಗಳನ್ನೇ ನಮಗೆ ಕನಸಿನಲ್ಲಿ ತೋರಿಸುತ್ತದೆ. ಹಾಗಾಗಿ ನಮ್ಮ ಮನಸ್ಸಿನ ಕ್ರಿಯಾಶೀಲತೆಯೇ ನಮ್ಮ ಕನಸಿಗೆ ಹೊಣೆಯಾಗಿದೆ.
ಯಾವುದೋ ಘಟನೆ ಕಾರಣವಾಗಿರಬಹುದು : ಬೆಳಿಗ್ಗೆಯಿಂದ ಸಂಜೆಯ ತನಕ ನಾವು ಎಷ್ಟೋ ಜನರನ್ನು ನೋಡುತ್ತೇವೆ, ಅವರೊಂದಿಗೆ ಬೆರೆಯುತ್ತೇವೆ. ಹಾಗೆ ನಿಮ್ಮ ನಡುವೆ ನಡೆಯುವ ಮಾತು ಅಥವಾ ಕೆಲವು ಕ್ರಿಯೆಗಳು ಮೆದುಳಿನಲ್ಲಿ ಸ್ಥಾಪನೆಯಾಗುತ್ತದೆ. ಅದನ್ನೇ ಅದು ಒಂದು ಕಥೆಯ ರೂಪದಲ್ಲೋ ಅಥವಾ ಚಿತ್ರದ ರೂಪದಲ್ಲೋ ನಿಮಗೆ ತೋರಿಸುತ್ತದೆ. ಇದರ ಹೊರತಾಗಿ ಟಿವಿಯ ಕೆಲವು ಸನ್ನಿವೇಶಗಳು, ಅದನ್ನು ನೋಡಿ ನಿಮ್ಮಲ್ಲಿ ಮೂಡುವ ಕೆಲವು ಭಾವನೆಗಳು ಕೂಡ ಕನಸ್ಸಿನಲ್ಲಿ ಬರುತ್ತವೆ.
ಹೆದರಿಕೆ (Fear) : ಅನೇಕ ರೀತಿಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮಸ್ಯೆಗಳು ಮನಸ್ಸಿನಲ್ಲಿ ಓಡುತ್ತಿರುವಾಗಲೂ ಮನಸ್ಸಿನಲ್ಲಿ ಭಯ ಸೃಷ್ಟಿಯಾಗುತ್ತದೆ. ಟಿವಿ ಮುಂತಾದ ಮಾದ್ಯಮಗಳಲ್ಲಿ ಸಲಿಂಗಕಾಮಿಗಳ ಕುರಿತು ವರದಿ ಪ್ರಸಾರವಾದಾಗಲೋ ಅಥವಾ ಕೋರ್ಟ್ ನಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು ಎಂಬಂತಹ ಸುದ್ದಿಗಳು ಹರಡುತ್ತಿರುವಾಗಲೂ ನಿಮಗೆ ಸಲಿಂಗಕಾಮಿ ಕನಸುಗಳು ಕಾಡಬಹುದು. ನೀವು ಅದರ ಪರ ಅಥವಾ ವಿರೋಧಿಯೇ ಆಗಿದ್ದರೂ ಕೂಡ ಕನಸಿಗೆ ಯಾವುದೇ ರೀತಿಯ ತಹಬಂಧಿಯಿರುವುದಿಲ್ಲ.
ಸಲಿಂಗಕಾಮಿ (Homo Sexual) ಕನಸು ಕಾಣುವುದು ಕೆಟ್ಟದ್ದೆ? : ಸಲಿಂಗಕಾಮಿ ಕನಸು ಕಾಣುವುದು ಖಂಡಿತವಾಗಿಯೂ ತಪ್ಪಲ್ಲ ಎಂದು ವೈದ್ಯಲೋಕ ಹೇಳುತ್ತದೆ. ಇದರ ಕುರಿತಾಗಿ ಚಿಂತಿಸುವ ಅಗತ್ಯವೇ ಇಲ್ಲ. ಇದು ನಮ್ಮ ಮನಸ್ಸಿನ ಒಂದು ಸ್ಥಿತಿ ಅಷ್ಟೇ. ಈ ರೀತಿ ಸಲಿಂಗಕಾಮಿ ಕನಸು ಕಂಡ ಮಾತ್ರಕ್ಕೆ ನೀವು ಸಲಿಂಗಕಾಮಿ ಎಂದೋ ಅಥವಾ ನೀವು ಏನೋ ಪಾಪ ಮಾಡಿದ್ದೀರಿ ಎಂದೇನಿಲ್ಲ. ಆದರೆ ಇಂತಹ ಕನಸುಗಳು ನಿಮ್ಮ ದೈನಂದಿನ ಕೆಲಸಗಳಿಗೆ ಅಡ್ಡಿಯಾದಾಗ ಅಥವಾ ನೆಮ್ಮದಿ ಕೆಡಿಸಿದಾಗ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.