Asianet Suvarna News Asianet Suvarna News

ಗೋಪೂಜೆಯಿಂದ ಪ್ರಯೋಜನವೇನು, ಅದರಿಂದ ನಿಮಗೆ ಆಗುವ ಲಾಭಗಳೇನು?

ದೀಪಾವಳಿ ಎನ್ನುವ ಐದು ದಿನದ ಹಬ್ಬ ಆಚರಣೆಯಲ್ಲಿ ಗೋಮಾತೆಗೆ ವಿಶೇದೀಪಾವಳಿ ಹತ್ತಿರ ಬರುತ್ತಿದೆ. ದೀಪಾವಳಿ ಎಂದರೆ ಗೋಪೂಜೆ ವಿಶೇಷ. ಗೋಪೂಜೆಯಿಂದ ಪ್ರಯೋಜನವೇ, ಅದರಿಂದ ನಿಮಗೆ ಆಗುವ ಪರಮ ಲಾಭಗಳೇನು? ಹಬ್ಬದ ನಾಲ್ಕನೇ ದಿನ ಗೋವಿಗೆ ಅಲಂಕಾರ ಮಾಡುವುದು, ವಿಶೇಷ ತಿನಿಸುಗಳನ್ನು ತಿನ್ನಿಸಿ, ಪೂಜೆ ಮಾಡಲಾಗುತ್ತದೆ. ಪ್ರತಿವರ್ಷವೂ ಗೋಪಾಷ್ಟಮಿಯನ್ನು ಆಚರಿಸಲಾಗುತ್ತದೆ. ಅದು ಕಾರ್ತಿಕ ತಿಂಗಳ ದೀಪಾವಳಿಯಲ್ಲಿ. 

what is the importance of cow worship suh
Author
First Published Nov 13, 2023, 12:54 PM IST

ದೀಪಾವಳಿ ಎನ್ನುವ ಐದು ದಿನದ ಹಬ್ಬ ಆಚರಣೆಯಲ್ಲಿ ಗೋಮಾತೆಗೆ ವಿಶೇದೀಪಾವಳಿ ಹತ್ತಿರ ಬರುತ್ತಿದೆ. ದೀಪಾವಳಿ ಎಂದರೆ ಗೋಪೂಜೆ ವಿಶೇಷ. ಗೋಪೂಜೆಯಿಂದ ಪ್ರಯೋಜನವೇ, ಅದರಿಂದ ನಿಮಗೆ ಆಗುವ ಪರಮ ಲಾಭಗಳೇನು? ಹಬ್ಬದ ನಾಲ್ಕನೇ ದಿನ ಗೋವಿಗೆ ಅಲಂಕಾರ ಮಾಡುವುದು, ವಿಶೇಷ ತಿನಿಸುಗಳನ್ನು ತಿನ್ನಿಸಿ, ಪೂಜೆ ಮಾಡಲಾಗುತ್ತದೆ. ಪ್ರತಿವರ್ಷವೂ ಗೋಪಾಷ್ಟಮಿಯನ್ನು ಆಚರಿಸಲಾಗುತ್ತದೆ. ಅದು ಕಾರ್ತಿಕ ತಿಂಗಳ ದೀಪಾವಳಿಯಲ್ಲಿ. 

 ಶ್ರೀಕೃಷ್ಣನಿಗೆ ಗೋವುಗಳನ್ನು ಮೇಯಿಸುವುದೆಂದರೆ ಬಹು ಇಷ್ಟವಾದ ಕೆಲಸವಾಗಿತ್ತು. ಹಾಗಾಗಿಯೇ ಗೋಪಾಲ ಎಂದು ಕರೆಯುತ್ತಾರೆ. ಹಿಂದೂ ಪುರಾಣಗಳ ಪ್ರಕಾರ ಇಂದ್ರನ ಕೋಪಕ್ಕೆ ಒಳಗಾದ ವೃಂದಾವನ, ಹಸುಗಳು ಮತ್ತು ಜನರು ತತ್ತರಿಸಿ ಹೋಗಿದ್ದರು. ಆಸಂದರ್ಭದಲ್ಲಿ ಕೃಷ್ಣನು ಅವರನ್ನು ರಕ್ಷಿಸುವ ಉದ್ದೇಶದಿಂದ ಗೋವರ್ಧನ ಬೆಟ್ಟವನ್ನು ಎತ್ತಿದನು. ಅವನ ಕಿರು ಬೆರಳಿನಲ್ಲಿ ಎತ್ತಿದ ಗುಡ್ಡವನ್ನು 7 ದಿನಗಳ ಕಾಲ ಹಾಗೇ ಹಿಡಿದು ನಿಂತಿದ್ದನು. ಅದು ಕಾರ್ತಿಕ ಶುಕ್ಲ ಪಕ್ಷ ಪ್ರತಿಪಾದಿಂದ ಸಪ್ತಮಿಯವರೆಗಿನ ದಿನವಾಗಿತ್ತು.

ಎಂಟನೇ ದಿನ ಇಂದ್ರನು ತನ್ನ ತಪ್ಪನ್ನು ಅರಿತುಕೊಂಡನು. ನಂತರ ಭೂ ಲೋಕಕ್ಕೆ ಬಂದು, ಕೃಷ್ಣನಲ್ಲಿ ಕ್ಷಮೆಯಾಚಿಸಿದನು. ಈ ಕಥೆಯ ಹಿನ್ನೆಲೆಯಲ್ಲಿಯೇ ದೀಪಾವಳಿಯಂದು ಹಸುವನ್ನು ಸುಂದರವಾಗಿ ಅಲಂಕರಿಸುವುದು, ಕೋಡುಗಳನ್ನು ಮೊನಚಾಗಿಸುವುದು, ಸಿಹಿಯಾದ ಕಬ್ಬು, ತಿಂಡಿ ಹಾಗೂ ಹುಲ್ಲನ್ನು ನೀಡಲಾಗುತ್ತದೆ. ಈ ರೀತಿ ಮಾಡುವುದು ವರ್ಷದುದ್ದಕ್ಕೂ ನಮಗಾಗಿ ಸಹಾಯ ಮಾಡುವ ಹಸುವಿಗೆ ಕೃತಜ್ಞತೆಯನ್ನು ಹೇಳುವ ಪರಿ ಎಂದು ಪರಿಗಣಿಸಲಾಗುತ್ತದೆ.

 ದಿನನಿತ್ಯ ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ಹಸು. ಹಸು ಭೂಮಿತಾಯಿ, ಸಕಲ ದೇವರ ಆವಾಸ ಸ್ಥಾನ ಎಂಬ ನಂಬಿಕೆಯೂ ಇದೆ. ಹಸುವಿನಿಂದ ಮನುಷ್ಯನಿಗೆ ಅನೇಕ ಪ್ರಯೋಜನಗಳಿವೆ. ನಿತ್ಯ ಬೇಕಾಗುವ ಹಾಲು ಮಜ್ಜಿಗೆ, ಸಗಣಿಯನ್ನು ಗೊಬ್ಬರ ತಯಾರಿಕೆಗೆ, ಗಂಜಲವನ್ನು ಔಷಧಿ ತಯಾರಿಸಲು ಉಪಯೋಗಿಸುತ್ತಾರೆ. ನಿತ್ಯವೂ ಈ ಗೋಮಾತೆಯ ಆರಾಧನೆ ಮಾಡಿದರೆ ನಮ್ಮ ಪಾಪಕರ್ಮಗಳು ನಾಶವಾಗಿ, ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ. 

ಮನುಷ್ಯನ ಅನೇಕ ಅವಶ್ಯಕತೆಗಳನ್ನು ಈಡೇರಿಸುವ ಕಾಮಧೇನು ದೇವಾನುದೇವತೆಗಳ ಆವಾಸ ಸ್ಥಾನ ಎಂದು ಪರಿಗಣಿಸಲಾಗಿದೆ. ಇದರ ಆರಾಧನೆ ಹಾಗೂ ಪೂಜೆಯಿಂದ ಪುಣ್ಯ ಪ್ರಾಪ್ತಿಯಾಗುವುದೆಂದು ವೇದಗಳಲ್ಲೂ ಸಹ ಉಲ್ಲೇಖವಿದೆ. ಕಾಮಧೇನುವನ್ನು ಪೂಜಿಸುವುದರಿಂದ ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪ ಕರ್ಮಗಳು ಸಹ ತೊಳೆದುಹೋಗುತ್ತವೆ. ಒಮ್ಮೆಲೇ ಎಲ್ಲಾ ದೇವರನ್ನು ಪೂಜಿಸಿರುವ ಪುಣ್ಯವು ಪ್ರಾಪ್ತಿಯಾಗಿ, ಜೀವನದಲ್ಲಿ ಅನೇಕ ಅದೃಷ್ಟಗಳು ಕೈಗೂಡಿ ಬರುತ್ತವೆ. ಭಗವತ್ ಗೀತೆ, ಮಹಾ ಭಾರತ ಸೇರಿದಂತೆ ಅನೇಕ ಹಿಂದೂ ಪವಿತ್ರ ಗ್ರಂಥಗಳಲ್ಲಿ ಕಾಮಧೇನುವಿನ ಮಹಿಮೆ ಹಾಗೂ ಶ್ರೇಷ್ಠತೆಯ ಬಗ್ಗೆ ವರ್ಣಿಸಿರುವುದನ್ನು ಕಾಣಬಹುದು.

ವಾರದ ಏಳು ದಿನಗಳಲ್ಲಿ ಹಸುವನ್ನು ಪೂಜಿಸಬೇಕು. ಪ್ರತಿಯೊಂದು ದಿನವೂ ಒಂದೊಂದು ವಿಶೇಷತೆಯಿಂದ ಕೂಡಿರುತ್ತದೆ. ಸೋಮವಾರ ಹಸುವಿಗೆ ಹುಲ್ಲು, ಆಹಾರ, ಸೊಪ್ಪು, ಬಾಳೆಹಣ್ಣನ್ನು ನೀಡುವುದರಿಂದ ನಮ್ಮ ಮನಸ್ಸು ಮೃದುವಾಗುತ್ತದೆ ಹಾಗೂ ಪಿತೃ ದೋಷವು ಕಳೆಯುತ್ತದೆ. ಮಂಗಳವಾರ ಹಸುವಿಗೆ ನೀರು ಮತ್ತು ಆಹಾರವನ್ನು ನೀಡುವುದರಿಂದ ವಸತಿ ಮತ್ತು ಭೂ ಖರೀದಿಗೆ ಅವಕಾಶ ಕಲ್ಪಿಸಿಕೊಡುತ್ತದೆ. ಬುಧವಾರ ಹಸುವಿಗೆ ಆಹಾರ ನೀಡುವುದು ಹಾಗೂ ಪೂಜಿಸುವುದರಿಂದ ವೃತ್ತಿ ಜೀವನದಲ್ಲಿ ಪ್ರತಿ ಉಂಟಾಗುತ್ತದೆ.

 ಗುರುವಾರ ಪೂಜಿಸುವುದು ಹಾಗೂ ಅಕ್ಕಿ ಗಂಜಿ ನೀಡುವುದರಿಂದ ಪೂರ್ವ ಜನ್ಮದ ದೋಷವು ಕಳೆಯುವುದು. ಶುಕ್ರವಾರ ಗೋ ಪೂಜೆ ಮಾಡುವುದರಿಂದ ಮಹಾಲಕ್ಷ್ಮಿಯ ಆಶೀರ್ವಾದ ಲಭಿಸುವುದು. ಶನಿವಾರ ಹುಲ್ಲು, ಸೊಪ್ಪನ್ನು ಕೊಡುವುದರಿಂದ ಬಡತನವು ಕಳೆಯುವುದು. ಗೋವಿಗೆ ಆರಾಧನೆ ಹಾಗೂ ಆಹಾರ ನೀಡುವುದರಿಂದ ಸಾವಿರ ಜನರಿಗೆ ಅನ್ನದಾನ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುವುದು.
 

Follow Us:
Download App:
  • android
  • ios