ಶಂಖವನ್ನು ಊದುವುದರಿಂದ ಹೊರಬರುವ ನಾದ ಸುತ್ತಮುತ್ತಲಿನ ವಾತಾವರಣವನ್ನು ಒಂದು ಬಗೆಯ ಧನಾತ್ಮಕ ಕಂಪನಗಳಿಂದ ತುಂಬುತ್ತದೆ. ಅದಕ್ಕೇ ಭಾರತವೂ ಸೇರಿದಂತೆ ವಿಶ್ವದ ಅನೇಕ ಸಂಸ್ಕೃತಿಗಳಲ್ಲಿ ಜನರು ಶಂಖನಾದವನ್ನು ವಿವಿಧ ಕಾರಣಗಳಿಗೆ ಉಪಯೋಗಿಸುತ್ತಾರೆ. ಮಹಾಭಾರತದ ಕುರುಕ್ಷೇತ್ರ ಯುದ್ಧದ ಆರಂಭದಲ್ಲಿ ಶ್ರೀಕೃಷ್ಣನೂ ಸೇರಿದಂತೆ ಅನೇಕರು ಶಂಖನಾದ ಮಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಪೂಜೆ, ಉತ್ಸವ, ಮದುವೆ ಮುಂತಾದ ಸಮಾರಂಭಗಳಲ್ಲಿ ಹಾಗೂ ನಿತ್ಯ ಸಂಜೆ- ಮುಂಜಾನೆ ದೀಪ ಉರಿಸುವಾಗ ಶಂಖನಾದವನ್ನು ಉಪಯೋಗಿಸುತ್ತಾರೆ. ಒಳ್ಳೆಯ ಶಂಖದಿಂದ ಬರುವ ನಾದವು ಓಂಕಾರವನ್ನು ಹೇಳಿದ ಹಾಗೆ ಕೇಳಿಸುತ್ತದೆ. 

ಬಲಮುರಿ ಶಂಖದ ಬಗ್ಗೆ ಗೊತ್ತಾ?

ಶಂಖವನ್ನು ಊದುವ ರೀತಿಯಲ್ಲಿ ಇಟ್ಟುಕೊಂಡಾಗ ಶಂಖದ ಕಿವಿಯು ಬಲಗಡೆ ಇದ್ದರೆ ಅದು ಬಲಮುರಿ ಶಂಖ. ಹಾಗೆಯೇ ಶಂಖದ ಕಿವಿಯು ಎಡಗಡೆ ಇದ್ದರೆ ಅದು ಎಡಮುರಿ ಶಂಖ. ಬಲಮುರಿ ಅಥವಾ ಎಡಮುರಿ ಶಂಖದಿಂದ ಕಿವಿಯನ್ನು ಮುಚ್ಚಿಟ್ಟುಕೊಂಡಾಗ ಸುತ್ತಮುತ್ತಲ ಪರಿಸರದಲ್ಲಿನ ಶಬ್ದವು ಶಂಖದ ಮೂಲಕ ಕಿವಿಗೆ ಸಮುದ್ರದ ಅಲೆಗಳ ಬಡಿತದ ಶಬ್ದದಂತೆ ಕೇಳಿಸುತ್ತದೆ. ಸಾಮಾನ್ಯವಾಗಿ ಬಲಮುರಿ ಶಂಖವನ್ನು ದೇವರ ಪೂಜೆಯಲ್ಲಿ ಅಭಿಷೇಕ ಮಾಡುವುದಕ್ಕೆ ಉಪಯೋಗಿಸಲಾಗುತ್ತದೆ. ಹಾಗೆಯೇ ಎಡಮುರಿ ಶಂಖವನ್ನು ಪೂಜೆಯ ಆರಂಭ, ಅಭಿಷೇಕ ಹಾಗು ಮಂಗಳಾರತಿಯ ಸಮಯಗಳಲ್ಲಿ ಊದಲು ಉಪಯೋಗಿಸಲಾಗುತ್ತದೆ. ಹೆಚ್ಚಾಗಿ ನಾವು ಬಳಸುವ ಶಂಖಗಳು ಎಡಮುರಿ. ಬಲಮುರಿ ಶಂಖಗಳು ಅತ್ಯಪರೂಪ, ಲಕ್ಷಕ್ಕೊಂದು ಸಿಗಬಹುದು. ಬಲಮುರಿ ಶಂಖವನ್ನು ದಕ್ಷಿಣಾವರ್ತಿ ಶಂಖವೆಂದೂ ಕರೆಯಲಾಗುತ್ತದೆ. ವಿಷ್ಣು ಶಂಖ ಅಥವಾ ಲಕ್ಷ್ಮೀ ಶಂಖವೆಂದೂ ಕರೆಯಲಾಗುತ್ತದೆ. ಮಹಾವಿಷ್ಣು ಮತ್ತು ಲಕ್ಷ್ಮೀದೇವಿಯರು ಕೈಯಲ್ಲಿ ಧರಿಸಿರುವ ಶಂಖ ಇದೇ ಆಗಿದೆ. 

- ಈ ಶಂಖವನ್ನು ಮನೆಯಲ್ಲಿ ವಾಸ್ತು ಪ್ರಕಾರ ಸಮರ್ಪಕವಾದ ಜಾಗದಲ್ಲಿಟ್ಟರೆ ಮನೆಯ ಬಡತನ ನಿವಾರಣೆಯಾಗುತ್ತದೆ. 

- ಪ್ರತಿದಿನ ಈ ಶಂಖವನ್ನು ಸ್ವಚ್ಛಗೊಳಿಸಿ ಮುಂಜಾನೆ ಹಾಗೂ ಸಂಜೆ ಒಂದಾವರ್ತಿ ಊದಿದರೆ, ಆ ಮನೆಯಲ್ಲಿ ಧನಾತ್ಮಕ ವಾತಾವರಣ ಮೂಡುತ್ತದೆ. ನೆಗೆಟಿವ್‌ ಚಿಂತನೆಗಳಿಗೆ ಅಲ್ಲಿ ಸ್ಥಾನ ಇರುವುದಿಲ್ಲ.

- ಸಂಜೆ ಲಕ್ಷ್ಮೀದೇವಿ ಮನೆಯೊಳಗೆ ಬರುವ ಸಮಯ. ಆಗ ಬಲಮುರಿ ಶಂಖವನ್ನು ಊದುವುದು ಆಕೆಯನ್ನು ಸ್ವಾಗತಿಸಿದಂತೆ. ಪ್ರತಿದಿನ ಬಲಮುರಿ ಶಂಖವನ್ನು ಊದುವ ಮನೆಯನ್ನು ಬಿಟ್ಟು ಸಿರಿದೇವಿ ಎಲ್ಲೂ ಹೋಗುವುದಿಲ್ಲ.

- ಬಲಮುರಿ ಶಂಖದಲ್ಲಿ ಪೂಜೆ ಮಾಡಿದ ತೀರ್ಥದಿಂದ ಸ್ನಾನ ಮಾಡಿದರೆ ವ್ಯಕ್ತಿಯ ಚರ್ಮರೋಗಗಳು ನಿವಾರಣೆಯಾಗುತ್ತವೆ. ಹಾಗೆಯೇ ಆತನ ಕರ್ಮಗಳೂ ನಿವಾರಣೆಯಾಗುತ್ತವೆ.

ಜೂನ್‌ 21ರ ಸೂರ್ಯಗ್ರಹಣದಿಂದ ಈ ರಾಶಿಗಳಿಗೆ ಗಜಕೇಸರಿ ಯೋಗ

- ಈ ಶಂಖವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಟ್ಟರೆ ಶ್ರೇಯಸ್ಕರ. ಆ ಮನೆಯಲ್ಲಿ ಐಶ್ವರ್ಯ ನೆಲೆಸಿರುತ್ತದೆ.

- ಶಂಖದಲ್ಲಿ ಗೋವಿನ ಹಾಲು ಹಾಕಿ, ಪೂಜೆಯ ಬಳಿಕ ಮಹಾವಿಷ್ಣುವಿಗೆ ಅಥವಾ ಮಹಾಶಿವನಿಗೆ ಅಭಿಷೇಕ ಮಾಡುವುದರಿಂದ ಬಯಸಿದ ಸುಖ ಭೋಗ ಐಶ್ವರ್ಯಗಳು ಪ್ರಾಪ್ತವಾಗುತ್ತವೆ. 

- ಪ್ರತಿದಿನ ರಾತ್ರಿ ಶಂಖದಲ್ಲಿ ನೀರು ಹಾಕಿ ಇಟ್ಟು, ಮರುದಿನ ಮುಂಜಾನೆ ಅದನ್ನು ಸೇವಿಸಿದರೆ ಅದರಿಂದ ಅನೇಕ ಆರೋಗ್ಯ ಭಾಗ್ಯಗಳುಂಟು. ಮುಖ್ಯವಾಗಿ ಸಕ್ಕರೆ ಕಾಯಿಲೆ ಬಾಧಿಸದು.

ಚಿರು ಸಾವಿಗೆ ಕಾರಣವೇ ಅಷ್ಟಮ ಕುಜ ದೋಷ? ಇದಕ್ಕೇನು ಪರಿಹಾರ?

- ಸರಿಯಾದ ರೀತಿಯಲ್ಲಿ ಶಂಖವನ್ನು ಊದಬೇಕು. ಊದುವ ಮೊದಲು ಪೂರ್ತಿಯಾಗಿ ಉಸಿರು ಒಳಗೆ ಎಳೆದುಕೊಂಡು, ನಂತರ ಶಂಖದ ಬಾಯಿಯನ್ನು ಪೂರ್ತಿಯಾಗಿ ತುಟಿಗಳು ಮುಚ್ಚುವಂತೆ ಇಟ್ಟು, ನಿಧಾನವಾಗಿ ಉಸಿರನ್ನು ಬಿಡುತ್ತ ಊದಬೇಕು.

- ಹೀಗೆ ಊದುವ ಮೂಲಕ ನಿಮ್ಮ ಶ್ವಾಸಕೋಶಕ್ಕೆ ವ್ಯಾಯಾಮವಾಗುತ್ತದೆ. ಎದೆಗೆ ಹಾಗೂ ಎದೆಯ ಸ್ನಾಯುಗಳಿಗೆ ವ್ಯಾಯಾಮವಾಗುತ್ತದೆ. ಇದು ಒಂದು ಬಾರಿ ಪ್ರಾಣಾಯಾಮ ಮಾಡಿದಷ್ಟೇ ಲಾಭವನ್ನು ನಿಮಗೆ ನೀಡುತ್ತದೆ.

- ಕೆಲಸದಲ್ಲಿ ಒತ್ತಡ ಅನುಭವಿಸುವವರು ದಿನಕ್ಕೊಮ್ಮೆಯಾದರೂ ಇದನ್ನು ಊದುವುದರಿಂದ ಒತ್ತಡ ಕಡಿಮೆಯಾಗುತ್ತದೆ.

- ರಾತ್ರಿ ನೀರು ಹಾಕಿಟ್ಟು, ಬೆಳಗ್ಗೆ ಅದಕ್ಕೆ ರೋಸ್‌ ವಾಟರ್‌ ಸೇರಿಸಿ ಚರ್ಮಕ್ಕೆ ಮಸಾಜ್‌ ಮಾಡಿದರೆ ಚರ್ಮದ ಸಮಸ್ಯೆಗಳು ದೂರವಾಗುತ್ತವೆ.

ಜೂನ್ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!