Asianet Suvarna News Asianet Suvarna News

ಕನಸಲ್ಲಿ ದೇವರು ಕಂಡ್ರೆ ಏನರ್ಥ?

ರಾತ್ರಿ ಮಲಗಿದ್ದಾಗ ಕನಸು ಬೀಳೋದು ಮಾಮೂಲು.  ಸ್ವಪ್ನ ಶಾಸ್ತ್ರದಲ್ಲಿ ಕನಸಿಗೂ ಅರ್ಥವಿದೆ. ನಿಮ್ಮ ಕನಸಿನಲ್ಲಿ ಬೇರೆ ಬೇರೆ ದೇವರು ಕಾಣಿಸಿದ್ರೆ ಅದನ್ನು ಭಿನ್ನವಾಗಿ ಅರ್ಥೈಸುತ್ತೆ  ಸ್ವಪ್ನ ಶಾಸ್ತ್ರ. 

What Does It Mean To See God In Dream roo
Author
First Published Oct 12, 2023, 3:58 PM IST | Last Updated Oct 12, 2023, 3:58 PM IST

ಕನಸು ನಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷ್ಯದ ಬಗ್ಗೆ ಮಾಹಿತಿ ನೀಡುತ್ತದೆ. ಕನಸಿನಲ್ಲಿ ನಾವು ಕಲ್ಪನೆ ಮಾಡಿಕೊಳ್ಳದ ವಿಷ್ಯಗಳು ಕೂಡ ಕಾಣಿಸಿಕೊಳ್ಳುತ್ತವೆ. ಕೆಲವರ ಕನಸಿನಲ್ಲಿ ದೇವರು ಕಾಣಿಸಿಕೊಳ್ಳುವುದಿದೆ. ವಿವಿಧ ರೂಪಗಳಲ್ಲಿರುವ ದೇವರ ಕನಸು ಬೀಳುತ್ತದೆ. ಕನಸಿನಲ್ಲಿ ವಿಭಿನ್ನ ದೇವರುಗಳನ್ನು ನೋಡುವುದು ವಿಭಿನ್ನ ಸಂಕೇತವಾಗಿದೆ. ಹಾಗೆಯೇ ಸಂತೋಷದಿಂದ ಇರುವ ಹಾಗೂ ಕೋಪಗೊಂಡಿರುವ ದೇವರನ್ನು ನೋಡುವುದು ಕೂಡ ಭಿನ್ನ ಅರ್ಥವನ್ನೇ ನೀಡುತ್ತದೆ.  

ಕನಸಿ (Dream) ನಲ್ಲಿ ದೇವರು ಕಾಣುವುದರ ಅರ್ಥವೇನು? : ನಿಮ್ಮ ಸ್ವಪ್ನದಲ್ಲಿ ದೇವರು ಬಂದರೆ ಅದು ಧನಾತ್ಮಕ ಮತ್ತು ಋಣಾತ್ಮಕ ವಿಷಯಗಳನ್ನು ಸೂಚಿಸುತ್ತದೆ. ಆ ಕನಸಿನ ಅರ್ಥವೇನು ಎಂಬುದನ್ನು ತಿಳಿಯುವ ಮೊದಲು ದೇವರ (God) ಸ್ವರೂಪ, ದೇವರ ನಡವಳಿಕೆ ಮತ್ತು ದೇವರು ಕಾಣಿಸಿಕೊಂಡ ಭಂಗಿಯನ್ನು ಗಮನಿಸಬೇಕಾಗುತ್ತದೆ. ಈ ಕನಸು ನಿಮ್ಮ ಮುಂದಿನ ಜೀವನದಲ್ಲಾಗುವ ಬದಲಾವಣೆಯನ್ನು ತೋರಿಸುತ್ತದೆ. ಕನಸು ನಿಮ್ಮನ್ನು ಆಧ್ಯಾತ್ಮಿಕತೆಯೆಡೆಗೆ ಕೊಂಡೊಯ್ಯುವ ಸೂಚನೆಯೂ ಆಗಬಹುದು. 

ನಿಮ್ಮ ಜನ್ಮರಾಶಿಗೆ ಇಂಥದ್ದೊಂದು ಕೊರಗು ಕಾಡುವ ಮೊದಲೇ ಎಚ್ಚೆತ್ತುಕೊಳ್ಳಿ!

ಕನಸಿನಲ್ಲಿ ದುರ್ಗೆ (Durga) ಕಂಡ್ರೆ ಏನು ಸಂಕೇತ : ನಿಮ್ಮ ಕನಸಿನಲ್ಲಿ ತಾಯಿ ದುರ್ಗೆ ಬಂದ್ರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮೆಲ್ಲ ಮುಂದಿನ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ನಿಮ್ಮ ಜೀವನದಲ್ಲಿರುವ ಸಮಸ್ಯೆಗೆ ಮುಕ್ತಿ ಸಿಕ್ಕು, ಸಂತೋಷದ ದಾರಿ ನಿಮಗೆ ಸಿಗಲಿದೆ ಎಂಬ ಸೂಚನೆಯಾಗಿದೆ. ನವರಾತ್ರಿ ಸಂದರ್ಭದಲ್ಲಿ ತಾಯಿ ದುರ್ಗೆ ನಗುಮುಖದಲ್ಲಿ ನಿಮ್ಮ ಕನಸಿನಲ್ಲಿ ಬಂದ್ರೆ ಮತ್ತಷ್ಟು ಶುಭ ಫಲ ನಿಮಗೆ ಸಿಗುತ್ತದೆ. ಅದೇ ದುರ್ಗೆ ಕೋಪಗೊಂಡ ಅವತಾರದಲ್ಲಿ ನಿಮ್ಮ ಮುಂದೆ ಕಾಣಿಸಿಕೊಂಡರೆ ನಿಮ್ಮಿಂದ ಯಾವುದೋ ತಪ್ಪಾಗಿದೆ ಎಂಬ ಸೂಚನೆಯಾಗಿದೆ. ಅದನ್ನು ಶೀರ್ಘವೇ ಪರಿಹರಿಸಿ, ಅದರಿಂದ ಹೊರಗೆ ಬರುವ ಪ್ರಯತ್ನ ನಡೆಸಿ.

ಕನಸಿನಲ್ಲಿ ರಾಮ : ನಿಮ್ಮ ಸ್ವಪ್ನದಲ್ಲಿ ರಾಮನ ದರ್ಶನವಾದ್ರೆ , ನೀವು ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಬೇಕು ಎಂಬ ಸೂಚನೆಯಾಗಿದೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ, ನಿಮ್ಮ ಕರ್ತವ್ಯ ಮಾಡಬೇಕು, ಇದಕ್ಕೆ ಶ್ರೀರಾಮನ ಶಕ್ತಿ ನಿಮಗೆ ಸಿಗುತ್ತದೆ ಎಂಬುದನ್ನು ಸೂಚಿಸುತ್ತದೆ.

ನೀರಿನ ಮಧ್ಯೆ ಗುಹೆಯೊಳಗೆ ನೆಲೆಗೊಂಡಿರುವ ಈ ಶಿವಲಿಂಗ ನೋಡಲೆರಡು ಕಣ್ಣು ಸಾಲದು

ಕನಸಿನಲ್ಲಿ ವಿಷ್ಣುವಿನ ದರ್ಶನ : ಮಹಾವಿಷ್ಣು ನಿಮ್ಮ ಕನಸಿನಲ್ಲಿ ಬಂದ್ರೆ ನೀವು ಖುಷಿಯಾಗಬಹುದು. ನಿಮ್ಮ ಜೀವನದಲ್ಲಿ ಪ್ರಗತಿ ಸಾಧಿಸಲಿದ್ದೀರಿ ಎಂಬುದನ್ನು ಇದು ಅರ್ಥೈಸುತ್ತದೆ. ಎಲ್ಲ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ನಿಮ್ಮ ಜೀವನ ಸುಖಕರವಾಗಿ ಸಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

ಕನಸಿನಲ್ಲಿ ಶಿವ ಬಂದ್ರೆ ಏನು ಅರ್ಥ? : ನಿಮ್ಮ ಕನಸಿನಲ್ಲಿ ಮಹಾದೇವ ಶಿವನ ದರ್ಶನವಾದ್ರೆ ಇದು ಕೂಡ ಜೀವನದಲ್ಲಿ ಪ್ರಗತಿ ಸಾಧನೆ ಮಾಡಲಿದ್ದೀರಿ ಎಂಬ ಚಿಹ್ನೆಯಾಗಿದೆ. ಕನಸಿನಲ್ಲಿ ಶಿವಲಿಂಗ ಕಾಣಿಸಿಕೊಂಡ್ರೆ ನಿಮ್ಮ ನಿಂತ ಕೆಲಸವೆಲ್ಲ ಮತ್ತೆ ಆರಂಭವಾಗಲಿದೆ ಎಂಬುದನ್ನು ಅರ್ಥೈಸುತ್ತದೆ. ಒಂದ್ವೇಳೆ ನಿಮ್ಮ ಕನಸಿನಲ್ಲಿ ಶಿವ, ಶಿವಲಿಂಗ ಕಾಣಿಸಿದ್ರೆ ನೀವು ಶಿವಲಿಂಗಕ್ಕೆ ಜಲವನ್ನು ಅರ್ಪಿಸಲು ಮರೆಯಬೇಡಿ.

ಸ್ವಪ್ನದಲ್ಲಿ ಶ್ರೀಕೃಷ್ಣನ ದರ್ಶನ : ಪ್ರೀತಿಗೆ ಮತ್ತೊಂದು ಹೆಸರೇ ಶ್ರೀಕೃಷ್ಣ. ನಿಮ್ಮ ಕನಸಿನಲ್ಲಿ ಶ್ರೀಕೃಷ್ಣ ಕಾಣಿಸಿಕೊಂಡ್ರೆ ಜೀವನ ಪ್ರೀತಿಯಿಂದ ತುಂಬಲಿದೆ ಎಂದೇ ಅರ್ಥ. ಶೀಘ್ರವೇ ನಿಮಗೆ ಸಂಗಾತಿ ಸಿಗಲಿದ್ದಾರೆ ಇಲ್ಲವೆ ಹದಗೆಟ್ಟ ದಾಂಪತ್ಯದಲ್ಲಿ ಮತ್ತೆ ಸಂತೋಷ ಸಿಗಲಿದೆ ಎಂಬುದನ್ನು ಇದು ಸೂಚಿಸುತ್ತದೆ. ಕೃಷ್ಣ ನಗ್ತಿರುವ ಸ್ವಪ್ನ ಬಿದ್ದಲ್ಲಿ ನಿಮ್ಮ  ವೈವಾಹಿಕ ಜೀವನ ಮಂಗಳಕರವಾಗಿರಲಿದೆ. 

ದೇವರು ಕನಸಿನಲ್ಲಿ ಬಂದ್ರೆ ಮಿಶ್ರಫಲವನ್ನು ನೀವು ಕಾಣ್ಬಹುದು. ಕೋಪಗೊಂಡ ಅಥವಾ ದುಃಖದ ಸ್ಥಿತಿಯಲ್ಲಿ ದೇವರು ಕಾಣಿಸಿದ್ರೆ ನಿಮ್ಮಿಂದ ತಪ್ಪಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಕನಸು ಹೇಗೆ ಇರಲಿ, ಮರುದಿನ ಆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಲು ಮರೆಯಬೇಡಿ. 
 

Latest Videos
Follow Us:
Download App:
  • android
  • ios