Asianet Suvarna News Asianet Suvarna News

ನಿಮ್ಮ ಜನ್ಮರಾಶಿಗೆ ಇಂಥದ್ದೊಂದು ಕೊರಗು ಕಾಡುವ ಮೊದಲೇ ಎಚ್ಚೆತ್ತುಕೊಳ್ಳಿ!

ತುಂಬಾ ಮಂದಿಗೆ ನಲುವತ್ತರ ನಂತರ ಜ್ಞಾನೋದಯವಾಗುತ್ತದೆ. ತಾನು ಇನ್ನೇನೋ ಮಾಡಬೇಕಿತ್ತು, ಇನ್ನಷ್ಟು ಖುಷಿಪಡಬೇಕಿತ್ತು, ಇನ್ನಷ್ಟು ಹಣ ಮಾಡಬೇಕಿತ್ತು ಎಂಬಿತ್ಯಾದಿ ಯೋಚನೆಗಳೆಲ್ಲಾ ಆವರಿಸಿಕೊಳ್ಳುತ್ತವೆ. ಹಾಗಾದರೆ, ಯಾವ ಜನ್ಮರಾಶಿಯವರಿಗೆ ಯಾವುದರ ಬಗ್ಗೆ ಹೆಚ್ಚಾಗಿ ಚಿಂತೆ, ವ್ಯಥೆ, ವಿಷಾದ ಉಂಟಾಗುತ್ತದೆ? ಇಲ್ಲಿ ನೋಡೋಣ.

what are the wishes normally not fulfilled in every zodiac signs life
Author
First Published Oct 12, 2023, 10:44 AM IST

ಬಾಲ್ಯದಲ್ಲಿ ಜೀವನದ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸುವುದಿಲ್ಲ. ಯವ್ವನದಲ್ಲಿ ಸುಖ, ಗೆಳೆತನ ಇತ್ಯಾದಿಗಳ ನಡುವೆ ಜೀವನದ ಬಗೆಗೆ ಯೋಚಿಸೋಕೆ ಸಮಯವಿರೋಲ್ಲ. ನಂತರ ಮದುವೆ, ವೃತ್ತಿ, ಮಕ್ಕಳು ಅಂತ ಅದರಲ್ಲೇ ಎಲ್ಲರೂ ಬ್ಯುಸಿಯಾಗಿಬಿಡುತ್ತಾರೆ. ನಿಜಕ್ಕೂ ವ್ಯಕ್ತಿ ಜೀವನದ ಬಗ್ಗೆ ಸೀರಿಯಸ್ಸಾಗಿ ಯೋಚಿಸಲು ಶುರು ಮಾಡುವುದು ನಲುವತ್ತರ ನಂತರ. ಅಷ್ಟು ಹೊತ್ತಿಗೆ ಜೀವನದ ಮೇಜರ್‌ ಭಾಗ ಮುಗಿದಿರುತ್ತದೆ. ತುಂಬಾ ಮಂದಿಗೆ ನಲುವತ್ತರ ನಂತರ ಜ್ಞಾನೋದಯವಾಗುತ್ತದೆ. ತಾನು ಇನ್ನೇನೋ ಮಾಡಬೇಕಿತ್ತು, ಇನ್ನಷ್ಟು ಖುಷಿಪಡಬೇಕಿತ್ತು, ಇನ್ನಷ್ಟು ಹಣ ಮಾಡಬೇಕಿತ್ತು ಎಂಬಿತ್ಯಾದಿ ಯೋಚನೆಗಳೆಲ್ಲಾ ಆವರಿಸಿಕೊಳ್ಳುತ್ತವೆ. ಆದರೂ ಸಕಾರಾತ್ಮಕ ಬದಲಾವಣೆಯನ್ನು ಮಾಡಲು ಯಾವತ್ತೂ ಸಮಯವಿರುತ್ತದೆ. ಇದಕ್ಕೆ ಎಂದಿಗೂ ತಡವಾಗುವುದಿಲ್ಲ. ತಾನು ಎಲ್ಲಿ ತಪ್ಪಿದ್ದೇನೆ ಎಂದು ತಿಳಿದವರು ಆ ಕ್ಷಣವೇ ಅಲ್ಲಿಯೇ ಅದನ್ನು ತಿದ್ದಿಕೊಳ್ಳುವುದು ಮುಖ್ಯ. ಹಾಗಾದರೆ, ಯಾವ ಜನ್ಮರಾಶಿಯವರಿಗೆ ಯಾವುದರ ಬಗ್ಗೆ ಹೆಚ್ಚಾಗಿ ಚಿಂತೆ, ವ್ಯಥೆ, ವಿಷಾದ ಉಂಟಾಗುತ್ತದೆ? ಇಲ್ಲಿ ನೋಡೋಣ.

ಮೇಷ ರಾಶಿ: (Aries) ಜೀವನದಲ್ಲಿ ಇನ್ನಷ್ಟು ಆಶಾವಾದಿಯಾಗಿರಬೇಕಿತ್ತು, ಭಯಪಡಬಾರದಿತ್ತು ಎಂದು ಇವರಿಗೆ ಅನಿಸುತ್ತದೆ. ಜೀವನದಲ್ಲಿ ಆಗುವ ಸೋಲು, ಅನ್ಯಾಯವನ್ನು ಗುರುತಿಸಿದರೂ ಆಶಾವಾದಿಯಾಗಿ ಉಳಿಯುವುದು ಅತ್ಯಗತ್ಯ. ಒಳ್ಳೆಯ ಮತ್ತು ಕೆಟ್ಟ ಘಟನೆಗಳು ಯಾರಿಗಾದರೂ ಸಂಭವಿಸಬಹುದು. ಭಯವು ಸಾಮಾನ್ಯ ಭಾವನೆಯಾಗಿದ್ದರೂ, ಅದು ಪ್ರಗತಿಯನ್ನು ತಡೆಯುತ್ತದೆ ಮತ್ತು ನಮ್ಮ ಆಕಾಂಕ್ಷೆಗಳಿಗೆ ಅಡ್ಡಿಪಡಿಸುತ್ತದೆ. ಸಾಧ್ಯವಾದಾಗಲೆಲ್ಲಾ, ಭಯಕ್ಕಿಂತ ಪ್ರೀತಿಗೆ ಆದ್ಯತೆ ನೀಡಿ ಮತ್ತು ಅದು ನಿಮ್ಮ ಕ್ರಿಯೆಗಳಿಗೆ ಮಾರ್ಗದರ್ಶನ ನೀಡಲಿ.

ವೃಷಭ ರಾಶಿ: (Taurus) ಕುಟುಂಬ, ಸ್ನೇಹ ಮತ್ತು ಸಂಬಂಧಗಳು ಬಹಳ ಮುಖ್ಯ ಎಂದು ತಿಳಿದಿರಬೇಕಿತ್ತು ಅನಿಸುತ್ತದೆ. ಇವರು ವೃತ್ತಿಗಾಗಿ ಹೆಚ್ಚಿನ ಸಮಯ ವ್ಯಯಿಸಬಹುದು. ಆದರೆ ಕುಟುಂಬವೇ ಕಡೆಗೂ ಉಳಿಯುವುದು ಎಂಬುದು ನಿಜ. ಕುಟುಂಬವು ನಿಮಗಾಗಿ ಮತ್ತು ನೀವು ಕುಟುಂಬಕ್ಕಾಗಿ ಇರಬೇಕು. ಹಣವೇ ಸರ್ವಸ್ವವಲ್ಲ. ಅನೇಕರು ಸಂಪತ್ತನ್ನು ಸಾಧಿಸಲು ಹಾತೊರೆಯುತ್ತಾರೆ. ಆದರೆ ಜೀವನದ ಅನುಭವಗಳು ಭೌತಿಕ ಸಂಪತ್ತಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿವೆ ಎಂಬ ಅಂಶದಲ್ಲಿ ಸತ್ಯವಿದೆ.

ಮಿಥುನ ರಾಶಿ: (Gemini) ಸ್ವಯಂ ಪ್ರೀತಿ ಅಗತ್ಯ. ಸ್ವಾಭಿಮಾನವಿಲ್ಲದೆ ಬದುಕಿದೆ ಎಂಬುದು ಜೀವನದ ಕೊನೆಯಲ್ಲಿ ಕೊರಗಾಗಿ ಉಳಿಯುತ್ತದೆ. ಹಾಗಾಗಬಾರದು. ಪ್ರತಿಯೊಬ್ಬನೂ ವಿಶಿಷ್ಟ. ಆದ್ದರಿಂದ ಸಾರ್ಥಕ ಜೀವನವನ್ನು ನಡೆಸಲು ಮತ್ತು ಸ್ವತಃ ಸಹಾನುಭೂತಿ, ದಯೆ ಮತ್ತು ಮೆಚ್ಚುಗೆಯನ್ನು ತೋರಿಸಲು ಆದ್ಯತೆ ನೀಡುವುದು ಬಹಳ ಮುಖ್ಯ. ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಚಿಂತಿಸುತ್ತಾ ನಿಮ್ಮ ಸಮಯವನ್ನು ಕಳೆಯಬೇಡಿ. ವಾಸ್ತವದಲ್ಲಿ, ಹೆಚ್ಚಿನವರು ತಮ್ಮ ಸ್ವಂತ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತಾರೆ, ನಿಮ್ಮ ಬಗ್ಗೆ ಗಮನ ಹರಿಸುವುದಿಲ್ಲ.

ಕಟಕ ರಾಶಿ: (Cancer) ಹಣ ಉಳಿಸಬೇಕಿತ್ತು ಎಂಬ ಹತಾಶೆ ಕಾಡಬಹುದು. ಜೀವನದಲ್ಲಿ ಅನಿರೀಕ್ಷಿತ ಸಂದರ್ಭಗಳಿಗೆ ಸಿದ್ಧವಾಗಿರುವುದು ಯಾವಾಗಲೂ ಬುದ್ಧಿವಂತ ನಡೆ. ಉತ್ತಮವಾದುದನ್ನು ನಿರೀಕ್ಷಿಸಿ. ಆದರೆ ಕೆಟ್ಟ ಸಂದರ್ಭಗಳು ಎದುರಾಗುವಾಗ ಕಾಪಾಡಲು ಹಣದ ಅಗತ್ಯವಿದೆ. ಅಗತ್ಯಗಳಿಗಾಗಿ ಸಾಕಷ್ಟು ಆದಾಯ ಬೇಕು. ಅತೃಪ್ತಿಯೊಂದಿಗೆ ಹಣದ ಕೊರತೆಗೆ ಲಿಂಕ್‌ ಇದೆ.

ಸಿಂಹ ರಾಶಿ: (Leo) ಸಮಯ ವ್ಯರ್ಥ ಮಾಡಿದೆನೆಂಬ ಕೊರಗು ಕಾಡಬಹುದು. ಅನೇಕ ವ್ಯಕ್ತಿಗಳು ಜೀವನದಲ್ಲಿ ಅಡ್ವೆಂಚರಸ್‌ ಆಗಿರುವುದಿಲ್ಲ. ಅವರ ದಿನಚರಿಯ ಗಮನಾರ್ಹ ಭಾಗ ಏಕತಾನತೆಯಿಂದ ಕೂಡಿರುತ್ತದೆ. ಅದೇನೇ ಇದ್ದರೂ, ನಿಮಗೆ ಅತೃಪ್ತಿ ತರುವ ಕೆಲಸವನ್ನು ಸಹಿಸಿಕೊಳ್ಳಬೇಡಿ. ಪ್ರತಿ ದಿನ ಮೊಬೈಲ್‌ ಹಿಡಿದು, ಟಿವಿ ಮುಂದೆ ಕುಳಿತು ಆ ಮೂಲಕ ವರ್ಷಗಳನ್ನು ವ್ಯರ್ಥ ಮಾಡುವುದನ್ನು ತಪ್ಪಿಸಿ.

ಕನ್ಯಾ ರಾಶಿ: (Virgo) ಇನ್ನಷ್ಟು ಸಂತೋಷ ಅನುಭವಿಸಬೇಕಿತ್ತು ಅಂತ ಅನಿಸಬಹುದು. ಪ್ರತಿಯೊಬ್ಬರೂ ಕಠಿಣ ದಿನಗಳನ್ನು ಅನುಭವಿಸಿದರೂ, ಸಂತೋಷವು ಹೆಚ್ಚಾಗಿ ಆಯ್ಕೆಯ ಸಂಗತಿ. ಅದರ ನೆರವೇರಿಸುವಿಕೆಗಾಗಿ ಬಾಹ್ಯ ಅಂಶಗಳನ್ನು ಅವಲಂಬಿಸದಿರುವುದು ಮುಖ್ಯ. ಬದಲಿಗೆ, ನಿಜವಾದ ಸಂತೋಷವು ತನ್ನೊಳಗಿಂದಲೇ ಹುಟ್ಟಿಕೊಳ್ಳಬೇಕು. ಸಣ್ಣ ಸಂಗತಿಗಳಲ್ಲೂ ಸಂತೋಷವಾಗಿರಬೇಕು.

ತುಲಾ ರಾಶಿ: (Libra) ಆರೋಗ್ಯ ಕಾಪಾಡಿಕೊಳ್ಳಬೇಕಿತ್ತು ಅಂತ ಖಮಡಿತವಾಗಿಯೂ ಅನಿಸಲಿದೆ. ಆರೋಗ್ಯ ಆಯ್ಕೆಗಳ ದುಷ್ಪರಿಣಾಮಗಳಿಂದ ಪಾರಾಗಲು ಖಂಡಿತವಾಗಿಯೂ ಸಾಧ್ಯವಿದೆ. ಪೌಷ್ಟಿಕಾಂಶದ ಆಹಾರವನ್ನು ಸೇವಿಸುವ ಆಯ್ಕೆಯನ್ನು ಮಾಡುವ ಮೂಲಕ ಆರೋಗ್ಯಕರ ಜೀವನಶೈಲಿಗೆ ಆದ್ಯತೆ ನೀಡಬೇಕು. ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು.

ಮನೆಯಲ್ಲಿ ಈ ಪಕ್ಷಿಯ ಫೋಟೋವನ್ನು ಪೂರ್ವ ದಿಕ್ಕಿಗೆ ಇಟ್ಟರೆ ಹಣವೋ ಹಣ
 

ವೃಶ್ಚಿಕ ರಾಶಿ: (Scorpio) ನಿರೀಕ್ಷೆಗಳನ್ನು ನಿರ್ವಹಿಸಿದರೂ ಕೃತಜ್ಞತೆ ಸಲ್ಲಲಿಲ್ಲ ಎಂಬ ಕೊರಗು. ಹೆಂಡತಿ ಕೇಳಿದ್ದು ಕೊಡಿಸಿದೆ, ಮಕ್ಕಳಿಗೆ ಬೇಕಾದ್ದು ಕೊಡಿಸಿದೆ, ಆದರೆ ಸಂತೋಷ ದೊರೆಯಲಿಲ್ಲ. ತುಂಬಾ ಜನ ಇತರರ ನಿರೀಕ್ಷೆಗಳನ್ನು ಪೂರೈಸಲು ತಮ್ಮ ಜೀವನವನ್ನು ಕಳೆಯುತ್ತಾರೆ. ಹಾಗೆ ಮಾಡದಿರಿ. ನಿಮ್ಮನ್ನು ಮತ್ತು ನಿಮ್ಮ ಸ್ವಂತ ಆಶೆಗಳನ್ನು ಪೂರೈಸಿಕೊಳ್ಳಿ. ಜತೆಗೆ ಇತರರದೂ ಇರಲಿ.

ಧನು ರಾಶಿ: (Sagittarius) ಇನ್ನಷ್ಟು ದೃಢವಾಗಿರಬೇಕಿತ್ತು, ಸತ್ಯ ಹೇಳಬೇಕಿತ್ತು, ಪ್ರಾಮಾಣಿಕ ಜೀವನ ನಡೆಸಬೇಕಿತ್ತು, ಭಯ ತೊರೆಯಬೇಕಿತ್ತು... ಇವೆಲ್ಲಾ ಕಾಡಬಹುದು. ಭಯ ಮತ್ತು ಮುಜುಗರವು ನಮ್ಮ ನೈಜತೆಯನ್ನು ವ್ಯಕ್ತಪಡಿಸಲು ಮತ್ತು ನಮ್ಮ ಕನಸುಗಳನ್ನು ಅನುಸರಿಸಲು ನಮಗೆ ಅಡ್ಡಿಯಾಗುತ್ತದೆ. ನಿಮ್ಮ ಸತ್ಯಾಸತ್ಯತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಯಾವುದಕ್ಕೂ ತಡೆಯಲು ಬಿಡಬೇಡಿ.

ಮಕರ ರಾಶಿ: (Capricorn)  ವಯಸ್ಸಾಗುತ್ತಿದೆ. ಆದರೆ ಏನೂ ಸಾಧನೆ ಮಾಡಿಲ್ಲ. ವಿದೇಶಕ್ಕೆ ಹೋಗಬೇಕಿತ್ತು, ಆದರೂ ಇಲ್ಲೇ ಇದ್ದೇನೆ ಇತ್ಯಾದಿ ಕೊರಗುಗಳು. ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಎಂಬುದು ನೆನಪಿನಲ್ಲಿರಲಿ. ಇತರರು ಏನು ಹೇಳಬಹುದು ಎಂಬುದನ್ನು ಲೆಕ್ಕಿಸದೆ ಹೊಸ ವಿಷಯಗಳನ್ನು ಅನ್ವೇಷಿಸಲು ವಯಸ್ಸಿನ ಮಿತಿಯಿಲ್ಲ. ನಿಮ್ಮ ಬಗ್ಗೆ ಕಾಳಜಿ ವಹಿಸಿ ಮತ್ತು ನಿಮ್ಮ ಆಕಾಂಕ್ಷೆಗಳನ್ನು ಅನುಸರಿಸಿ.

ಕುಂಭ ರಾಶಿ: (Aquarius) ತನ್ನ ಬದುಕಿನಲ್ಲೇ ಗುರಿಯೇ ಇರಲಿಲ್ಲ ಎಂಬುದು ತಡವಾಗಿ ಅರಿವಾಗುತ್ತದೆ. ಮನಸ್ಸಿನಲ್ಲಿ ಸ್ಪಷ್ಟವಾದ ಗಮ್ಯ ಸ್ಥಾನವನ್ನು ಹೊಂದಿರಿ. ನೀವು ಯಾರಾಗಲು ಬಯಸುತ್ತೀರಿ, ನೀವು ಏನನ್ನು ಸಾಧಿಸಲು ಬಯಸುತ್ತೀರಿ ಮತ್ತು ನೀವು ಎಲ್ಲಿಗೆ ಹೋಗಬೇಕು ಎಂಬ ಸ್ಪಷ್ಟ ದೃಷ್ಟಿಯನ್ನು ಹೊಂದಿರುವುದು ಅತ್ಯಗತ್ಯ. ಆದರೆ ಇದೊಂದು ಸಮಗ್ರ ಯೋಜನೆಯೂ ಅಲ್ಲ. ಪ್ರಯತ್ನವಿರಬೇಕು.

ಮೀನ ರಾಶಿ: (Pisces) ಬದುಕಿನಲ್ಲಿ ಎಲ್ಲವನ್ನೂ ಸಾಧಿಸದೆ, ಆದರೆ ಆನಂದವಾಗಿರಲೇ ಇಲ್ಲ! ಇಂಥದೊಂದು ಭಾವ ಕಾಡಬಹುದು. ಜೀವನವು ಗಂಭೀರ ಮತ್ತು ಸವಾಲು, ನಿಜ. ಅದನ್ನು ನಿರ್ಲಕ್ಷಿಸಲಾಗುವುದಿಲ್ಲ. ಅದೇನೇ ಇದ್ದರೂ, ವಿಶ್ರಾಂತಿ, ವಿನೋದ ಮತ್ತು ಸಂತೋಷದ ಕ್ಷಣಗಳನ್ನು ಕಂಡುಹಿಡಿಯುವುದು, ಪಡೆಯುವುದು ಬಹಳ ಮುಖ್ಯ. ಜೀವನವು ಸಂಕ್ಷಿಪ್ತ. ಸಿಕ್ಕಿದ ಕಿರು ಅವಧಿಯಲ್ಲೇ ಆನಂದಪಡಿರಿ.

ನಿಮ್ಮ signature ವ್ಯಕ್ತಿತ್ವವನ್ನೆ ರೂಪಿಸುತ್ತೆ,ಅದೃಷ್ಟ ಬದಲಾಯಿಸುತ್ತದೆ
 

Follow Us:
Download App:
  • android
  • ios