Weekly Love Horoscope: ಸಂಗಾತಿ ಮತ್ತು ಕುಟುಂಬ ಜಗಳದಲ್ಲಿ ಈ ರಾಶಿಯ ವ್ಯಕ್ತಿ ಹೈರಾಣು

ಸಂಗಾತಿಯೆಡೆಗೆ ನೀವು ತೋರುವ ಗೌರವ ನಿಮ್ಮಿಬ್ಬರ ನಡುವೆ ಪ್ರೀತಿ ಹೆಚ್ಚಿಸಲಿದೆ.. ಮೇ 1ರಿಂದ 7ರವರೆಗೆ ದ್ವಾದಶ ರಾಶಿಗಳ ಪ್ರೇಮ ಜೀವನ ಹೇಗಿರಲಿದೆ? ಯಾವ ರಾಶಿಯ ಅವಿವಾಹಿತರಿಗೆ ವಿಶೇಷ ವ್ಯಕ್ತಿಯ ಭೇಟಿ ಸಾಧ್ಯವಾಗುತ್ತದೆ? ಯಾವ ರಾಶಿಯ ವೈವಾಹಿಕ ಜೀವನ ಹೇಗಿರಲಿದೆ? 

Weekly love horoscope from May 1st to 7th 2023 in Kannada SKR

ಮೇಷ(Aries): ಈ ವಾರ ನೀವು ನಿಮ್ಮನ್ನು ನಿಯಂತ್ರಿಸಿಕೊಳ್ಳಬೇಕು ಮತ್ತು ನಿಮ್ಮ ಪಾಲುದಾರರ ನಡುವೆ ಯಾವುದೇ ಮೂರನೇ ವ್ಯಕ್ತಿ ಬರದಂತೆ ತಡೆಯಬೇಕು. ನಿಮ್ಮ ಪ್ರೇಮ ಸಂಬಂಧದಲ್ಲಿ ಸಮಸ್ಯೆ ಇದ್ದರೆ, ಅದರ ಬಗ್ಗೆ ಮೂರನೇ ವ್ಯಕ್ತಿಗೆ ಹೇಳಬೇಡಿ. ಸಂಗಾತಿಗೆ ಕೂಡಾ ನಿಮ್ಮಿಬ್ಬರ ಸಂಗತಿ ನಿಮ್ಮ ನಡುವೆಯೇ ಇರುವಂತೆ ನೋಡಿಕೊಳ್ಳಲು ತಿಳಿಸಿ. ಸಮಸ್ಯೆಗಳನ್ನು ಸಂವಹನದ ಮೂಲಕ ಪರಸ್ಪರ ಹಂಚಿಕೊಳ್ಳಿ. 

ವೃಷಭ(Taurus): ನಿಮ್ಮ ಪ್ರೇಮಿಯ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಕೆಲವು ಅನುಮಾನಗಳು ಉಂಟಾಗಬಹುದು. ಈ ಕಾರಣದಿಂದಾಗಿ ನೀವು ಸ್ವಲ್ಪ ನಿರಾಶೆಗೊಳ್ಳುವ ಸಾಧ್ಯತೆಯಿದೆ. ಆದರೆ, ಪ್ರತ್ಯಕ್ಷ ಕಾಣುವುದನ್ನೂ ಪ್ರಾಮಾಣಿಸಿ ನೋಡಲು ಮರೆಯದಿರಿ. ಸತ್ಯವನ್ನು ಸರಿಯಾಗಿ ಪರಿಶೀಲಿಸಿ. ನಿಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳುವಾಗ ಅಥವಾ ಯೋಜನೆಯನ್ನು ಮಾಡುವಾಗ, ನಿಮ್ಮ ಸಂಗಾತಿಯ ಇಚ್ಛೆಯನ್ನು ನೆನಪಿನಲ್ಲಿಡಿ.

ಮಿಥುನ(Gemini): ಈ ವಾರ ನಿಮ್ಮ ಪ್ರೀತಿಪಾತ್ರರು ನಿಮ್ಮಿಂದ ಅನೇಕ ರೀತಿಯ ಅನಗತ್ಯ ಬೇಡಿಕೆಗಳನ್ನು ಮಾಡುವ ಸಾಧ್ಯತೆಯಿದೆ. ಅವರಿಗೆ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ತಿಳಿಸಿ. ನೀವು ಏನನ್ನು ಕೊಡಿಸಲು ಸಾಧ್ಯವಾಗಬಹುದೋ ಅದರಿಂದ ತೃಪ್ತಿ ಪಡಿಸಲು ಪ್ರಯತ್ನಿಸಿ.  

ಕಟಕ(Cancer): ಬಿಡುವಿಲ್ಲದ ಕೆಲಸದಿಂದಾಗಿ ಈ ವಾರ ನಿಮ್ಮ ಪ್ರೇಮ ಪ್ರಕರಣಗಳಲ್ಲಿ ಪ್ರಣಯವನ್ನು ಬದಿಗೆ ಸರಿಯುತ್ತದೆ. ಇದು ಜಗಳಕ್ಕೆ ಕಾರಣವಾಗಬಹುದು. ಈ ವಾರ, ನಿಮ್ಮ ಸಂಗಾತಿಯ ಅನಗತ್ಯ ಬೇಡಿಕೆಗಳು ನಿಮ್ಮ ವೈವಾಹಿಕ ಜೀವನದ ಶಾಂತಿ, ಸಂತೋಷವನ್ನು ಹಾಳು ಮಾಡಬಹುದು. ನಿಮ್ಮ ಪೋಷಕರ ಬಗ್ಗೆ ಸಂಗಾತಿಯ ದೂರುಗಳು ನಿಮ್ಮ ಮನಸ್ಸನ್ನು ಹಾಳು ಮಾಡುತ್ತವೆ.

ಭಗವಾನ್ ಗಣೇಶನ ಪುತ್ರರು ಮತ್ತು ಮೊಮ್ಮಕ್ಕಳು ಯಾರು ಗೊತ್ತಾ?

ಸಿಂಹ(Leo): ಪ್ರೇಮ ಪ್ರಕರಣಗಳು ಮತ್ತು ಪ್ರಣಯದ ವಿಷಯದಲ್ಲಿ, ವಾರವು ಸಾಮಾನ್ಯವಾಗಿರುತ್ತದೆ. ನಿಮ್ಮ ಸಂಗಾತಿ ನಿಮ್ಮ ಅಗತ್ಯಗಳನ್ನು ನಿರ್ಲಕ್ಷಿಸಬಹುದು. ಅವರ ಬಳಿ ನಿಮಗೆ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಿ. ಸ್ವಭಾವದಲ್ಲಿ ಕಿರಿಕಿರಿ ತೋರುವುದರಿಂದ ಇಬ್ಬರಲ್ಲೂ ನೆಮ್ಮದಿ ಇರಲು ಸಾಧ್ಯವಿಲ್ಲ.

ಕನ್ಯಾ(Virgo): ಈ ವಾರ ನೀವು ನಿಮ್ಮ ಪ್ರೀತಿಪಾತ್ರರನ್ನು ಅನುಮಾನಿಸದೆ ನಿಮ್ಮ ನಂಬಿಕೆಯನ್ನು ತೋರಿಸಬೇಕಾಗುತ್ತದೆ. ಹಾಗಿದ್ದರೆ ಜೀವನದಲ್ಲಿ ಈ ಸಮಯವು ವೈವಾಹಿಕ ಜೀವನದ ಸಂಪೂರ್ಣ ಆನಂದವನ್ನು ನೀಡುತ್ತದೆ. ನಿಮ್ಮಿಬ್ಬರಲ್ಲದ ಸಮಸ್ಯೆ ನಿಮ್ಮ ಪ್ರೇಮ ಸಂಬಂಧ ಹಾಳು ಮಾಡಲು ಬಿಡಬೇಡಿ. ಪ್ರಬುದ್ಧತೆ ತೋರಿಸಿ.

ತುಲಾ(Libra): ಪ್ರೇಮಿಯು ನಿಮ್ಮ ಕುಟುಂಬದ ಬಗ್ಗೆ ಹೇಳುವ ದೂರುಗಳು ನಿಮ್ಮನ್ನು ಕಂಗಾಲಾಗಿಸಬಹುದು. ವಿವಾಹಿತರಾಗಿದ್ದಲ್ಲಿ ನೀವು ಸಂಗಾತಿಯ ಕಷ್ಟಗಳನ್ನು ಮೊದಲು ಅರ್ಥ ಮಾಡಿಕೊಂಡು ಸ್ಪಂದಿಸಬೇಕು. ಅದರರ್ಥ ಕೇವಲ ಪೋಷಕರ ಪರ ವಹಿಸದೆ, ತಪ್ಪಿರುವವರಿಗೆ ಅರ್ಥ ಮಾಡಿಸಿ. ಸಂಗಾತಿಯ ದೂರುಗಳನ್ನು ಕಡೆಗಣಿಸಿ ಪಲಾಯನವಾದ ಮಾಡಬೇಡಿ. ಇದರಿಂದ ಒಂದಿಲ್ಲೊಂದು ದಿನ ಎಲ್ಲವೂ ಬ್ಲ್ಯಾಸ್ಟ್ ಆಗುವ ಸಾಧ್ಯತೆ ಇರುತ್ತದೆ.

ವೃಶ್ಚಿಕ(Scorpio): ಪ್ರೀತಿಯಲ್ಲಿರುವವರಿಗೆ ಈ ವಾರ ಉತ್ತಮವಾಗಿರುತ್ತದೆ. ವಿವಾಹಿತರಿಗೆ ಸಂಗಾತಿಯಿಂದ ಎಲ್ಲ ರೀತಿಯ ಬೆಂಬಲ ದೊರೆಯುತ್ತದೆ. ಸಂಗಾತಿಯ ಅಗತ್ಯಗಳನ್ನು ಅವರು ಹೇಳದೆಯೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮೊಂದಿಗೆ ಸಂಗಾತಿಯು ಎಲ್ಲವನ್ನೂ ಹೇಳುವ ಸಲುಗೆ ಕೊಡುವುದರಿಂದ ಸಂತೋಷದ ದಾಂಪತ್ಯ ನಿಮ್ಮದಾಗುತ್ತದೆ. 

ಧನುಸ್ಸು(Sagittarius): ಈ ವಾರ, ನೀವು ಒಬ್ಬಂಟಿಯಾಗಿದ್ದರೆ ಮತ್ತು ವಿಶೇಷ ವ್ಯಕ್ತಿಯನ್ನು ಹುಡುಕುತ್ತಿದ್ದರೆ, ಯಾರನ್ನಾದರೂ ಹಠಾತ್ತನೆ ಭೇಟಿಯಾಗುವ ಅವಕಾಶವನ್ನು ಪಡೆಯುವ ಸಾಧ್ಯತೆಗಳು ಹೆಚ್ಚು. ಇದು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಈ ವಾರ, ನಿಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರದಲ್ಲಿ ನಿಮ್ಮ ಸಂಗಾತಿಯ ತಂದೆ ತಾಯಿಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯಬಹುದು.

May 2023 Vrat Festival: ಮೇನಲ್ಲಿದೆ ಚಂದ್ರಗ್ರಹಣ, ಶನಿ ಜಯಂತಿ ಮತ್ತಷ್ಟು ಹಬ್ಬಹರಿದಿನಗಳು..

ಮಕರ(Capricorn): ಸಂಗಾತಿಯ ಸಹಾಯವನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಮಾಡಿಕೊಳ್ಳಬೇಡಿ. ಅವರಿಗೆ ಗೌರವ ನೀಡಿ. ನಿಮ್ಮ ಜೀವನೋದ್ಧಾರಕ್ಕಾಗಿಯೇ ಅವರಿರುವುದು ಎಂಬ ಭಾವನೆಯಿಂದ ಹೊರ ಬನ್ನಿ. ಅವರಿಗೆ ನಿಮ್ಮಿಂದ ಏನು ಸಿಗಬಹುದು ಎಂಬ ಬಗ್ಗೆ ಗಮನ ಹರಿಸಿ. ಈ ಸಮಯದಲ್ಲಿ ನಿಮ್ಮ ಸಂಗಾತಿ ನಿಮಗೆ ದೈಹಿಕವಾಗಿ ಹೆಚ್ಚು ಹತ್ತಿರವಾಗದಿರಬಹುದು ಆದರೆ ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅವರು ನಿಮಗೆ ತುಂಬಾ ಹತ್ತಿರವಾಗುತ್ತಾರೆ. 

ಕುಂಭ(Aquarius): ವೈವಾಹಿಕ ಜೀವನದ ಬಗ್ಗೆ ನಿಮ್ಮ ಕಡೆಗಣನೆಯ ಮನೋಭಾವನೆಯು ಸಂಗಾತಿಯ ಅಸಮಾಧಾನಕ್ಕೆ ಕಾರಣವಾಗಬಹುದು. ಮಕ್ಕಳ ಜವಾಬ್ದಾರಿಯನ್ನು ಇಬ್ಬರೂ ಸಮನಾಗಿ ಹಂಚಿಕೊಳ್ಳುವತ್ತ ಗಮನ ಹರಿಸಿ. ಒಬ್ಬರು ತಮ್ಮ ಗೆಳೆಯರೊಂದಿಗೆ ಸುತ್ತುವುದು, ಮತ್ತೊಬ್ಬರು ಮಕ್ಕಳು, ಮನೆಯ ಜವಾಬ್ದಾರಿಯನ್ನು ನಿರ್ವಹಿಸುವುದು ದಾಂಪತ್ಯದಲ್ಲಿ ಸಂತೋಷ ಹಾಳು ಮಾಡುತ್ತದೆ.

ಮೀನ(Pisces): ನಿಮ್ಮ ಮತ್ತು ನಿಮ್ಮ ಪ್ರೇಮಿಯ ನಡುವೆ ಬಹಳ ದಿನಗಳಿಂದ ಜಗಳ ನಡೆಯುತ್ತಿದ್ದರೆ ಈ ವಾರವೇ ಅದನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಎಂದಿನಂತೆ, ಅದನ್ನು ನಾಳೆಗೆ ಮುಂದೂಡುವುದು ಈ ಸಮಯದಲ್ಲಿ ನಿಮ್ಮ ಪ್ರೀತಿಯ ಸಂಬಂಧಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಆದ್ದರಿಂದ, ನಿಮ್ಮ ಅಹಂಕಾರವನ್ನು ತೆಗೆದುಹಾಕಿ, ನಿಮ್ಮ ಪ್ರೇಮಿಯೊಂದಿಗೆ ಸಮಾಧಾನದಿಂದ ಮಾತನಾಡಿ.

Latest Videos
Follow Us:
Download App:
  • android
  • ios