Asianet Suvarna News Asianet Suvarna News

May 2023 Vrat Festival: ಮೇನಲ್ಲಿದೆ ಚಂದ್ರಗ್ರಹಣ, ಶನಿ ಜಯಂತಿ ಮತ್ತಷ್ಟು ಹಬ್ಬಹರಿದಿನಗಳು..

ಹಿಂದೂ ಕ್ಯಾಲೆಂಡರ್ ಪ್ರಕಾರ, ಮೇ ಬಹಳ ಮಂಗಳಕರವಾದ ದಿನ ಮತ್ತು ದಿನಾಂಕದಿಂದ ಪ್ರಾರಂಭವಾಗುತ್ತದೆ. 1ನೇ ಮೇ 2023 ಸೋಮವಾರ ಮತ್ತು ಮೋಹಿನಿ ಏಕಾದಶಿ ದಿನಾಂಕ. ಇದಲ್ಲದೆ, ಈ ತಿಂಗಳಲ್ಲಿ ಯಾವಲ್ಲ ಹಬ್ಬಹರಿದಿನಗಳಿವೆ, ಗ್ರಹ ಗೋಚಾರಗಳಿವೆ ಎಂಬ ವಿವರ ಇಲ್ಲಿದೆ.

May 2023 Vrat Festival planet transit skr
Author
First Published Apr 29, 2023, 3:15 PM IST | Last Updated Apr 29, 2023, 3:15 PM IST

2023ರ ಮೇ ತಿಂಗಳು ಹತ್ತಿರದಲ್ಲಿದೆ. ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಪ್ರತಿ ದಿನವೂ ಒಂದಲ್ಲ ಒಂದು ದೇವರಿಗೆ ಮೀಸಲಾಗಿದೆ. ಆಗಾಗ ಒಂದಿಲ್ಲೊಂದು ವ್ರತ,  ಉಪವಾಸ ಮತ್ತು ಹಬ್ಬವನ್ನು ಪ್ರತಿ ದಿನಾಂಕದಂದು ಆಚರಿಸಲಾಗುತ್ತದೆ. ಮೇ ಆರಂಭದಲ್ಲಿ ಮೋಹಿನಿ ಏಕಾದಶಿ, ಪ್ರದೋಷ, ಜ್ಯೇಷ್ಠ ಅಮಾವಾಸ್ಯೆ ಮುಂತಾದ ಉಪವಾಸಗಳನ್ನು ಆಚರಿಸಲಾಗುತ್ತದೆ. ಇದಲ್ಲದೇ ಮೇ ತಿಂಗಳ ಚಂದ್ರಗ್ರಹಣದ ಜೊತೆಗೆ ಹಲವು ಗ್ರಹಗಳ ಸಂಚಾರವೂ ನಡೆಯುತ್ತಿದೆ. ಮೇ 2023 ರಲ್ಲಿ ಯಾವ ಪ್ರಮುಖ ವ್ರತಗಳು, ಹಬ್ಬಗಳು ಮತ್ತು ಗ್ರಹಗಳ ಸಾಗಣೆಗಳು ನಡೆಯಲಿವೆ ಎಂದು ತಿಳಿಯೋಣ. 

ಮೇ ತಿಂಗಳ ಉಪವಾಸ- ಉತ್ಸವ ದಿನಾಂಕ 
ಮೇ 1, ಸೋಮವಾರ, ಮೋಹಿನಿ ಏಕಾದಶಿ
ಮೇ 3, ಬುಧವಾರ, ಪ್ರದೋಷ ವ್ರತ (ಶುಕ್ಲ ಪಕ್ಷ)
ಮೇ 5, ಶುಕ್ರವಾರ, ವೈಶಾಖ ಪೂರ್ಣಿಮಾ ಉಪವಾಸ, ಬುದ್ಧ ಪೂರ್ಣಿಮಾ, ಚಂದ್ರಗ್ರಹಣ
ಮೇ 8, ಸೋಮವಾರ, ಸಂಕಷ್ಟ ಚತುರ್ಥಿ
ಮೇ 15, ಸೋಮವಾರ, ಅಪರ ಏಕಾದಶಿ, ವೃಷಭ ಸಂಕ್ರಾಂತಿ
ಮೇ 17, ಬುಧವಾರ, ಮಾಸಿಕ ಶಿವರಾತ್ರಿ, ಪ್ರದೋಷ ವ್ರತ (ಕೃಷ್ಣ ಪಕ್ಷ)
ಮೇ 19, ಶುಕ್ರವಾರ, ಜ್ಯೇಷ್ಠ ಅಮವಾಸ್ಯೆ, ಶನಿ ಜಯಂತಿ, ವಟ ಸಾವಿತ್ರಿ ವ್ರತ
23 ಮೇ 2023, ಮಂಗಳವಾರ - ವಿನಾಯಕ ಚತುರ್ಥಿ
25 ಮೇ 2023, ಗುರುವಾರ - ಸ್ಕಂದ ಷಷ್ಠಿ ವ್ರತ
30 ಮೇ 2023, ಮಂಗಳವಾರ - ಗಂಗಾ ದಸರಾ
ಮೇ 31, ಬುಧವಾರ, ನಿರ್ಜಲ ಏಕಾದಶಿ, ಗಾಯತ್ರಿ ಜಯಂತಿ, ರಾಮ ಲಕ್ಷ್ಮಣ ದ್ವಾದಶಿ

Monthly Horoscope: ಮೇ ತಿಂಗಳು ಯಾವ ರಾಶಿಗೆ ಏನೆಲ್ಲ ಅಚ್ಚರಿಗಳನ್ನು ಕಾದಿರಿಸಿದೆ?

ಮೇ 2023 ಗ್ರಹಗಳ ಸಂಚಾರ
02 ಮೇ, ಮಂಗಳವಾರ, ಮಿಥುನ ರಾಶಿಯಲ್ಲಿ ಶುಕ್ರ ಸಂಕ್ರಮಣ
ಮೇ 05, ಶುಕ್ರವಾರ, ಚಂದ್ರಗ್ರಹಣ
ಮೇ 10, ಬುಧವಾರ, ಕರ್ಕ ರಾಶಿಯಲ್ಲಿ ಮಂಗಳ ಸಂಚಾರ
ಮೇ 10, ಬುಧವಾರ ಮೇಷದಲ್ಲಿ ಬುಧ ಉದಯ
ಮೇ 15, ಶನಿವಾರದಂದು ಮಿಥುನ ರಾಶಿಯಲ್ಲಿ ಶುಕ್ರ ಸಂಕ್ರಮಣ
ಮೇ 15, ಶನಿವಾರ, ಮೇಷ ರಾಶಿಯಲ್ಲಿ ಬುಧ
ಮೇ 30ರ ಭಾನುವಾರದಂದು ಕರ್ಕ ರಾಶಿಯಲ್ಲಿ ಶುಕ್ರ ಸಂಕ್ರಮಣ

ಮೋಹಿನಿ ಏಕಾದಶಿ: ಈ ವರ್ಷದ ಮೋಹಿನಿ ಏಕಾದಶಿ ಉಪವಾಸವನ್ನು 1 ನೇ ಮೇ 2023 ರಂದು ಸೋಮವಾರ ಆಚರಿಸಲಾಗುತ್ತದೆ. ಈ ದಿನ ಉಪವಾಸವಿದ್ದು ವಿಷ್ಣುವಿನ ಮೋಹಿನಿ ರೂಪವನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಸಾವಿರ ಗೋವುಗಳ ದಾನ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.

ಚಂದ್ರಗ್ರಹಣ: ವರ್ಷದ ಮೊದಲ ಚಂದ್ರಗ್ರಹಣವು ಶುಕ್ರವಾರ, ಮೇ 5, 2023ರಂದು ರಾತ್ರಿ 08.45 ಕ್ಕೆ ಪ್ರಾರಂಭವಾಗುತ್ತದೆ ಮತ್ತು 1.00 ಕ್ಕೆ ಕೊನೆಗೊಳ್ಳುತ್ತದೆ. ಈ ದಿನವು ವೈಶಾಖ ಮಾಸದ ಹುಣ್ಣಿಮೆಯಾಗಿದೆ, ಇದನ್ನು ಬುದ್ಧ ಪೂರ್ಣಿಮಾ ಎಂದೂ ಕರೆಯುತ್ತಾರೆ. ಈ ದಿನ ವೈಶಾಖ ಪೂರ್ಣಿಮಾ ಪ್ರಯುಕ್ತ ಪವಿತ್ರ ನದಿಗಳಲ್ಲಿ ಸ್ನಾನ, ದಾನದ ನಂತರ ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ. ಹುಣ್ಣಿಮೆಯಂದು ಭಗವಾನ್ ವಿಷ್ಣುವಿನ ಆರಾಧನೆಯಿಂದ ಇಷ್ಟಾರ್ಥಗಳು ಈಡೇರುತ್ತವೆ.

Grah Gochar May 2023: 5 ರಾಶಿಗಳಿಗೆ ಮಂಗಳಕರ ಮೇ

ನಿರ್ಜಲ ಏಕಾದಶಿ: ನೀರ್ಜಲ ಏಕಾದಶಿಯಂದು ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಈ ಉಪವಾಸವನ್ನು ಎಲ್ಲಾ ಏಕಾದಶಿಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.

ನರಸಿಂಹ ಜಯಂತಿ 2023: ನರಸಿಂಹ ಜಯಂತಿಯನ್ನು ವೈಶಾಖ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವು ಈ ದಿನದಂದು ನರಸಿಂಹನಾಗಿ ಅವತರಿಸಿದನು ಮತ್ತು ಈ ಜಗತ್ತಿನಲ್ಲಿ ಧರ್ಮವನ್ನು ಸ್ಥಾಪಿಸಲು ಹಿರಣ್ಯಕಶ್ಯಪನನ್ನು ಕೊಂದನು.

ಶನಿ ಜಯಂತಿ 2023: ಉತ್ತರ ಭಾರತದಲ್ಲಿ, ಶನಿ ಜಯಂತಿಯನ್ನು ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ದಿನ ಶನಿದೇವನನ್ನು ಪೂಜಿಸುವುದರಿಂದ ಶನಿಯ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ.

ವಟ ಸಾವಿತ್ರಿ ವ್ರತ 2023: ಜ್ಯೇಷ್ಠ ಅಮಾವಾಸ್ಯೆಯಂದು, ವಿವಾಹಿತ ಮಹಿಳೆಯರು ಅಖಂಡ ಸೌಭಾಗ್ಯಕ್ಕಾಗಿ ವಟ ಸಾವಿತ್ರಿ ವ್ರತವನ್ನು ಆಚರಿಸುತ್ತಾರೆ. ಈ ಉಪವಾಸವನ್ನು ನೀರಿಲ್ಲದೆ ಆಚರಿಸಲಾಗುತ್ತದೆ. 

ಗಂಗಾ ದಸರಾ 2023: ಗಂಗಾ ದಸರಾವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಹತ್ತನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ಗಂಗಾ ಮಾತೆ ಭೂಮಿಯನ್ನು ಮೊದಲ ಬಾರಿಗೆ ಮುಟ್ಟಿದಳು ಎಂದು ಹೇಳಲಾಗುತ್ತದೆ. ಈ ದಿನ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ.
 

Latest Videos
Follow Us:
Download App:
  • android
  • ios