ಈ ವಾರ ನಿಮ್ಮ ರಾಶಿಗೆ ಅನುಗುಣವಾಗಿ ಪ್ರೀತಿ ಹಾಗೂ ದಾಂಪತ್ಯ ಜೀವನದ ಹೇಗಿರಲಿದೆ? ಪ್ರೀಯಿಯಲ್ಲಿ ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? 10 ಜುಲೈ‌ನಿಂದ 16ನೇ ಜುಲೈ 2023ರವರೆಗೆ ನಿಮ್ ಪ್ರೀತಿ ಭವಿಷ್ಯ ಹೀಗಿರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ವಾರ ನಿಮ್ಮ ರಾಶಿಗೆ ಅನುಗುಣವಾಗಿ ಪ್ರೀತಿ ಹಾಗೂ ದಾಂಪತ್ಯ ಜೀವನದ ಹೇಗಿರಲಿದೆ? ಪ್ರೀಯಿಯಲ್ಲಿ ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? 10 ಜುಲೈ‌ನಿಂದ 16ನೇ ಜುಲೈ 2023ರವರೆಗೆ ನಿಮ್ ಪ್ರೀತಿ ಭವಿಷ್ಯ ಹೀಗಿರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Add Asianetnews Kannada as a Preferred SourcegooglePreferred

ಮೇಷ(Aries): ಈ ವಾರ ನಿಮ್ಮ ಸಂಗಾತಿ ಜೊತೆ ನಿಮ್ಮ ಸಂಬಂಧವನ್ನು ಸುಧಾರಿಸಲು ನೀವು ಅವರಿಗೆ ಒಂದು ಸಸ್ಯವನ್ನು ಉಡುಗೊರೆಯಾಗಿ ನೀಡಬಹುದು. ಇದರಿಂದ ನಿಮ್ಮಿಬ್ಬರ ನಡುವೆ ಬರುವ ಪ್ರತಿಯೊಂದು ಕಲಹವು ಕೊನೆಗೊಳ್ಳುತ್ತದೆ. ಆ ಸಸ್ಯದ ರೀತಿಯಲ್ಲಿ ನಿಮ್ಮಿಬ್ಬರ ಸಂಬಂಧವೂ ಬೆಳೆಯುತ್ತದೆ. ಯಾವುದೇ ಅಹಿತಕರ ಘಟನೆಯ ಬಗ್ಗೆ ಚಿಂತೆ ಮಾಡದಿರಿ, ನಿಮ್ಮ ವಿವಾಹಿತರ ಬಗ್ಗೆ ಮಾತ್ರ ಯೋಚಿಸಿ. 

ವೃಷಭ(Taurus): ಈ ವಾರ ನೀವು ನಿಮ್ಮ ಪ್ರೀತಿಪಾತ್ರರನ್ನು ತುಂಬಾ ಮಿಸ್ ಮಾಡಿಕೊಳ್ಳುವಿರಿ. ಆದರೆ ಬಿಡುವಿಲ್ಲದ ಕೆಲಸದ ಕಾರಣ ಅವರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ನಿಮ್ಮ ವೈವಾಹಿಕ ಜೀವನವು ಈ ವಾರ ಕಲಹದ ಮೂಲಕ ಸಾಗಬಹುದು. ಅದರ ಹೊರತಾಗಿಯೂ ನಿಮ್ಮ ಸಂಗಾತಿಯೊಂದಿಗಿನ ಪ್ರತಿ ವಿವಾದವನ್ನು ಪರಿಹರಿಸುವ ಬದಲು, ಸಂದರ್ಭ ಬರುವವರೆಗೂ ನೀವು ಕಾಯುತ್ತೀರಿ.

ಮಿಥುನ(Gemini): ನಿಮ್ಮ ಮತ್ತು ನಿಮ್ಮ ಸಂಗಾಯಿಯ ನಡುವೆ ಪ್ರೀತಿಯ ಸಂಬಂಧ ಗಟ್ಟಿಯಾಗಲಿದೆ. ನೀವು ಎಲ್ಲಾ ಸಮಸ್ಯೆಗಳನ್ನು ಜಯಿಸಲು ಸಾಧ್ಯವಾಗುತ್ತದೆ. ನಿಮ್ಮ ಸಂಗಾತಿ ಜತೆ ಸುಂದರ ಸಮಯ ಕಳೆಯಲು ಅವಕಾಶ ಸಿಗಲಿದೆ. ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಅನೇಕ ಸುಂದರ ವಿಷಯಗಳು ಕೇಳಿ ಬರಲಿವೆ. ಈ ವಾರ ನೀವು ಭಾವನಾತ್ಮಕವಾಗುವುದನ್ನು ತಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.

ಕಟಕ(Cancer): ಈ ವಾರ ಗ್ರಹಗಳ ಶುಭ ಸಂಯೋಜನೆಯಿಂದಾಗಿ ಪ್ರೇಮವಿವಾಹದ ಸಾಧ್ಯತೆಗಳಿವೆ. ಈ ವಾರ ನಿಮಗೆ ಮತ್ತು ನಿಮ್ಮ ಪ್ರೀತಿಗೆ ತುಂಬಾ ಒಳ್ಳೆಯದು ಹಾಗೂ
ಜೀವನವು ಪ್ರೀತಿಯಿಂದ ಮುಂದುವರಿಯುತ್ತದೆ. ಇಡೀ ವಾರದಲ್ಲಿ ನಿಮ್ಮ ಹಾಗೂ ಸಂಗಾತಿಯ ನಡುವೆ ಯಾವುದೇ ಗೊಂದಲಗಳು ಬರುವುದಿಲ್ಲ. ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು.

Weekly Horoscope: ನಿಮ್ಮ ಬಗ್ಗೆ ನಿಮಗೆ ಕಾಳಜಿ ಇರಲಿ; ಈ ರಾಶಿಯವರು ಮಾನಸಿಕರಾಗುವ ಸಾಧ್ಯತೆ ಇದೆ..!

ಸಿಂಹ(Leo): ನೀವು ಯಾರನ್ನಾದರೂ ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಈ ವಾರ ನಿಮಗೆ ಪ್ರೀತಿ ಸಿಗುವ ಸಾಧ್ಯತೆ ಇದೆ. ಮತ್ತೊಂದೆಡೆ ನೀವು ಇನ್ನೂ ಒಂಟಿಯಾಗಿದ್ದರೆ, ನಿಮಗೆ ಸಂಗಾತಿ ಭೇಟಿಯಾಗುವ ಅವಕಾಶ ಸಿಗಲಿದೆ. ಕುಟುಂಬ ಸದಸ್ಯರ ಸಹಾಯದಿಂದ ಈ ರಾಶಿಚಕ್ರದ ವಿವಾಹಿತರ ಜೀವನವು ಚೆನ್ನಾಗಿ ಇರುತ್ತದೆ. ಈ ವಾರ ಸಾಕಷ್ಟು ಅನುಕೂಲಕರವಾಗಿದೆ. ನಿಮ್ಮ ಮಗುವಿನ ಕಡೆಯಿಂದ ಕೆಲವು ರೀತಿಯ ಒಳ್ಳೆಯ ಸುದ್ದಿ ಸಿಗಲಿದೆ.

ಕನ್ಯಾ(Virgo): ಈ ವಾರ ನೀವು ಪ್ರೀತಿಯ ಸಂಗಾತಿಯೊಂದಿಗೆ ಸಮಯ ಕಳೆಯುತ್ತೀರಿ. ಈ ಮೂಲಕ ಜೀವನದ ತೊಂದರೆಗಳನ್ನು ಮರೆತುಬಿಡುತ್ತೀರಿ. ನಿಮ್ಮ ಪ್ರೀತಿಯ ಸಂಗಾತಿಯು ನಿಮ್ಮನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ನಿಮ್ಮ ಪ್ರೇಮ ಜೀವನವು ಉತ್ತುಂಗಕ್ಕೇರುತ್ತದೆ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಆತ್ಮೀಯ ಕ್ಷಣಗಳನ್ನು ಕಳೆಯಲು ಸಹ ಅವಕಾಶವನ್ನು ಪಡೆಯಿರಿ. 

ತುಲಾ(Libra): ಶುಕ್ರ ಗ್ರಹ ಇರುವುದರಿಂದ ಈ ವಾರ ನಿಮ್ಮ ಪ್ರೇಮ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣುವಿರಿ. ನಿಮ್ಮ ಪ್ರೀತಿಯ ಸಂಗಾತಿಯ ಮುಂದೆ ನೀವಾಡುವ ಮಾತುಗಳು ಅವರಿಗೆ ತುಂಬಾ ಸಂತೋಷವನ್ನು ನೀಡುತ್ತವೆ. ಪ್ರೀತಿಯ ಸಂಗಾತಿಯನ್ನು ಮೆಚ್ಚಿಸಲು ಅವರನ್ನು ಕೆಲವು ಸುಂದರವಾದ ಸ್ಥಳಕ್ಕೆ ಕರೆದೊಯ್ಯಿರಿ. ಇತ್ತೀಚೆಗೆ ಮದುವೆಯಾದ ಈ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಸುಂದರವಾದ ಸ್ಥಳಕ್ಕೆ ಹೋಗಬಹುದು. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ನಿಕಟತೆ ಹೆಚ್ಚಾಗುತ್ತದೆ.

ವೃಶ್ಚಿಕ(Scorpio): ಈ ವಾರ ಪ್ರೀತಿಯಲ್ಲಿ ಬೀಳುವ ಜನರು ಪ್ರೀತಿಗಾಗಿ ಎಲ್ಲ ರೀತಿಯ ಅನೇಕ ಪ್ರಯತ್ನ ಮಾಡುತ್ತಾರೆ. ತಮ್ಮ ಪ್ರೇಮಿಗಳಿಗೆ ಹೆಚ್ಚಿನ ಪ್ರೀತಿಯನ್ನು ತೋರಿಸುತ್ತಾರೆ. ನಿಮ್ಮ ಸಂಗಾತಿಗಾಗಿ ಸಮಯ ಮೀಸಲಿಡುವಿರಿ. ಈ ವಾರ ನಿಮ್ಮೊಂದಿಗೆ ಅನೇಕ ಘಟನೆಗಳು ಸಂಭವಿಸುತ್ತವೆ. ಆಗ ನೀವು ಎಲ್ಲವನ್ನೂ ಅನುಭವಿಸುವಿರಿ. ಮದುವೆಯ ಸಮಯದಲ್ಲಿ ಮಾಡಿದ ಭರವಸೆಗಳು ನಿಜ ಆಗಲಿವೆ.

ಧನುಸ್ಸು(Sagittarius): ದಾಂಪತ್ಯ ಜೀವನದಲ್ಲಿ ಪರಸ್ಪರ ನಂಬಿಕೆಯನ್ನು ಬಲಪಡಿಸುವ ಇದು ಉತ್ತಮ ಸಮಯ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಂಗಾತಿಯು ನಿಮ್ಮ ಮುಂದೆ ತಮ್ಮ ಮನಸಿನ ಮಾತು ಹೇಳಬಹುದು. ಅವರ ಜೀವನಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ನೀವು ಪಡೆಯಬಹುದು.

ಮಕರ(Capricorn): ಪ್ರೀತಿಯಲ್ಲಿರುವ ಈ ರಾಶಿಚಕ್ರದ ಜನರು ಪ್ರಣಯ ಸಮಯವನ್ನು ಕಳೆಯಲು ಉತ್ತಮ ಅವಕಾಶವನ್ನು ಸಿಗಲಿದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಹೃದಯದ ಮಾತು ಹಂಚಿಕೊಳ್ಳುವ ಅವಕಾಶ ಸಿಗಲಿದೆ. ಇಲ್ಲಿಯವರೆಗೆ ನೀವು ಮದುವೆ ಎಂದರೆ ಒಪ್ಪಂದದ ವಿಷಯ ಎಂದು ಭಾವಿಸಿದ್ದರೆ ಈ ವಾರ ಅದು ತಪ್ಪು ಎಂದೆನಿಸಲಿದೆ.

ಕುಂಭ(Aquarius): ಈ ವಾರ ನಿಮ್ಮ ಪ್ರೀತಿಪಾತ್ರರು ನಿಮ್ಮಿಂದ ಅನೇಕ ಅನಗತ್ಯ ಬೇಡಿಕೆಗಳನ್ನು ಕೇಳಬಹುದು. ಅವರೊಂದಿಗೆ ಈ ವಿಷಯದ ಬಗ್ಗೆ ಅಗತ್ಯ ಮಾತುಕತೆಗಳನ್ನು ನಡೆಸಿ. ಈ ವಾರ ಸಂಗಾತಿಯು ನಿಮ್ಮನ್ನು ನಿಂದಿಸಬಹುದು. ಇದರಿಂದಾಗಿ ನೀವು ಅವರೊಂದಿಗೆ ಜಗಳ ಆಡಬಹುದು. ಅಂತಹ ಒಂದು
ಪರಿಸ್ಥಿತಿಯಲ್ಲಿ ನೀವು ತಾಳ್ಮೆಯಿಂದ ಇರಲು ಪ್ರಯತ್ನಿಸಿ.

Daily Horoscope: ಇಂದು ಈ ರಾಶಿಯವರ ದಾಂಪತ್ಯದಲ್ಲಿ ವಿವಾದ ಶುರುವಾಗಲಿದೆ..!

ಮೀನ(Pisces): ನಿಮ್ಮ ಇಚ್ಛೆಗೆ ವಿರುದ್ಧವಾಗಿ ನೀವು ಅನೇಕ ಕೆಲಸಗಳನ್ನು ಮಾಡುತ್ತಿದ್ದೀರಿ ಎಂದು ಈ ವಾರ ನೀವು ಅರಿತುಕೊಳ್ಳುತ್ತೀರಿ. ನೀವು ನಿಮ್ಮ ಸ್ವಭಾವವನ್ನು ಸುಧಾರಿಸಬೇಕು ಮತ್ತು ನಿಮ್ಮ ಪ್ರೇಮಿಗೆ ಗುಲಾಮರಂತೆ ವರ್ತಿಸುವುದನ್ನು ತಪ್ಪಿಸಬೇಕು. ಪ್ರೀತಿಯ ಸಂಬಂಧದಲ್ಲಿ ಈ ವಾರ ನಿಮ್ಮ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಕಾಡಲಿವೆ.