Opal Gemstone : ದಾಂಪತ್ಯದಲ್ಲಿ ಸುಖ ಬೇಕಾ? ಇದನ್ನು ಧರಿಸ್ತಿದ್ದಂತೆ ದೂರವಾಗಲಿದೆ ಪತಿ-ಪತ್ನಿ ನಡುವಿನ ಮುನಿಸು
ಮುರಿದ ಮನಸ್ಸು ಮತ್ತೆ ಒಂದಾಗುವುದು ಕಷ್ಟ. ಕೆಲವೊಮ್ಮೆ ಮ್ಯಾಜಿಕ್ ನಡೆಯಬೇಕಾಗುತ್ತದೆ. ಎಷ್ಟು ಪ್ರಯತ್ನಪಟ್ಟರೂ ನಿಯಂತ್ರಣಕ್ಕೆ ಬರದ ಬಿರುಗಾಳಿ ಒಂದೇ ಒಂದು ಟ್ರಿಕ್ಸ್ ನಿಂದ ಶಾಂತವಾಗಬಹುದು. ಪರಸ್ಪರ ಬೆನ್ನುಹಾಕಿ ಕುಳಿತ ಜೋಡಿಯ ಜೀವನದಲ್ಲಿ ಮತ್ತೆ ಸಂತೋಷದ ಮಳೆಯಾಗಬಹುದು.
ವೈವಾಹಿಕ ಜೀವನ (Marriage life)ದಲ್ಲಿ ಸಣ್ಣಪುಟ್ಟ ಮುನಿಸು,ಕೋಪ(Anger ) ಸಾಮಾನ್ಯ. ಇಬ್ಬರ ಮಧ್ಯೆ ಉತ್ತಮ ಸಂಬಂಧ ಬೆಳೆದಿದ್ದರೆ ವೈವಾಹಿಕ ಜೀವನವನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ. ಆದರೆ ಕೆಲವೊಮ್ಮೆ ಮದುವೆಯಾದ ಕೆಲವು ದಿನಗಳ ನಂತರ ಇಬ್ಬರ ನಡುವೆ ಪರಸ್ಪರ ಜಗಳ ಶುರುವಾಗುತ್ತದೆ. ಜಗಳ ಆ ಕ್ಷಣಕ್ಕೆ ಮುಗಿಯುವುದಿಲ್ಲ. ಸಣ್ಣ ಸಮಸ್ಯೆ ದೊಡ್ಡ ಮರವಾಗಿ ಬೆಳೆದಿರುತ್ತದೆ. ಇಬ್ಬರ ಮನಸ್ಸು ಒಡೆಯುವ ಹಂತ ತಲುಪಿರುತ್ತದೆ. ಮಾತಿನ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಾಗದ ಕೆಲ ಸಮಸ್ಯೆಗೆ ಜ್ಯೋತಿಷ್ಯದಲ್ಲಿ ಪರಿಹಾರವಿದೆ. ಜ್ಯೋತಿಷ್ಯ (Astrology )ಶಾಸ್ತ್ರದಲ್ಲಿ ದಾಂಪತ್ಯವನ್ನು ಗಟ್ಟಿಗೊಳಿಸುವ ಕೆಲ ಉಪಾಯಗಳನ್ನು ಹೇಳಲಾಗಿದೆ. ದಾಂಪತ್ಯ ಸುಖಕರ,ಸಂತೋಷದಾಯಕವಾಗಿರಬೇಕೆಂದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಓಪಲ್ (Opal ) ರತ್ನವನ್ನು ಧರಿಸಬೇಕು. ಇದು ಗಂಡ-ಹೆಂಡತಿ ಮಧ್ಯೆಯಿರುವ ಮುನಿಸನ್ನು ಕಡಿಮೆ ಮಾಡುತ್ತದೆ.
ಓಪಲ್ ಎಂದರೇನು? : ಓಪಲ್ ಒಂದು ರೀತಿಯ ಲೋಹದ ಜೆಲ್ ಆಗಿದೆ.ಇದು ಪಾರದರ್ಶಕ ರತ್ನವಾಗಿದೆ. ಇದು ಎಲ್ಲಾ ಬಣ್ಣಗಳಲ್ಲಿ ಅತ್ಯಂತ ವರ್ಣರಂಜಿತವಾಗಿದೆ ಕಾಣುತ್ತದೆ. ಎಲ್ಲಾ ರತ್ನಗಳಲ್ಲಿ ಅತ್ಯಂತ ಸುಂದರವಾದ ರತ್ನವಾಗಿದೆ. ಕ್ಷೀರ ಬಣ್ಣದ ಓಪಲ್ ವೈವಾಹಿಕ ಜೀವನದ ಸಂತೋಷಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಓಪಲ್ ಪ್ರಯೋಜನ :
ರತ್ನ ಶಾಸ್ತ್ರದ ಪ್ರಕಾರ, ಪತಿ-ಪತ್ನಿಯರ (Husband-Wife )ಜಗಳ ಕೊನೆಗಾಣಿಸಲು ರತ್ನ ಮಹತ್ವದ ಕೆಲಸ ಮಾಡುತ್ತದೆ. ರತ್ನಗಳನ್ನು ಧರಿಸಿದ ತಕ್ಷಣ ದಾಂಪತ್ಯ ಜೀವನದಲ್ಲಿ ಸುಖ-ಸಂತೋಷ ಉಂಟಾಗುತ್ತದೆ.
ವೈವಾಹಿಕ ಜೀವನದಲ್ಲಿನ ಸಮಸ್ಯೆಗಳನ್ನು ನಿವಾರಿಸಿ, ಶುಕ್ರ ಗ್ರಹವನ್ನು ಬಲಪಡಿಸಲು ಓಪಲ್ ರತ್ನವನ್ನು ಧರಿಸಲಾಗುತ್ತದೆ. ಇದು ಕೆಲವೊಮ್ಮೆ ವಜ್ರಗಳಿಗಿಂತ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಬೆಳ್ಳಿಯ ಲೋಹದಲ್ಲಿ ಧರಿಸುವುದು ಶುಭಕರವಾಗಿದೆ.
ಗಂಡ ಮತ್ತು ಹೆಂಡತಿಯ ನಡುವಿನ ಕ್ಲೇಶವನ್ನು ಹೋಗಲಾಡಿಸಲು ಓಪಲ್ ಸಹಾಯ ಮಾಡುತ್ತದೆ. ರತ್ನ ಶಾಸ್ತ್ರದ ಪ್ರಕಾರ, ಪತಿ-ಪತ್ನಿ ಮಧ್ಯೆ ಇರುವ ಮುನಿಸು ವಿಚ್ಛೇದನಕ್ಕೆ ಹೋಗಿ ನಿಲ್ಲುತ್ತಿದ್ದೆ ಎಂದವರು ಕೂಡ ಇದನ್ನು ಧರಿಸಬಹುದು. ವಿಚ್ಛೇದನ ತಡೆಯುವ ಶಕ್ತಿ ಕೂಡ ಇದಕ್ಕಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
Chinese Tiger year: ಚೈನೀಸ್ ಹುಲಿ ವರ್ಷದ ಭವಿಷ್ಯ, 2022 ನಿಮಗೇನು ತರಲಿದೆ?
ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹವನ್ನು ಬಲಪಡಿಸಲು ಓಪಲ್ ಅನ್ನು ಧರಿಸಲಾಗುತ್ತದೆ. ಓಪಲ್ ಕೆಲ ರಾಶಿಯವರಿಗೆ ಶುಭ ಫಲವನ್ನು ನೀಡುತ್ತದೆ. ತುಲಾ ಮತ್ತು ವೃಷಭ ರಾಶಿಯ ಜನರು ಓಪಲ್ ರತ್ನವನ್ನು ಧರಿಸಬಹುದು. ಅದೇ ಸಮಯದಲ್ಲಿ, ಯಾರ ಜಾತಕವು ವೃಷಭ ಅಥವಾ ತುಲಾ ಆರೋಹಣವನ್ನು ಹೊಂದಿದೆಯೋ ಅವರು ಸಹ ಓಪಲ್ ರತ್ನವನ್ನು ಧರಿಸಬಹುದು.
ಆರೋಗ್ಯ (Health) ವೃದ್ಧಿಗೆ ಓಪಲ್ :
ವೈವಾಹಿಕ ಸಂಬಂಧ ಗಟ್ಟಿಗೊಳಿಸಲು ಮಾತ್ರವಲ್ಲ ಓಪಲ್ ಕಣ್ಣುಗಳಿಗೆ ಸಂಬಂಧಿಸಿದ ಕಾಯಿಲೆಗಳು, ಮಾನಸಿಕ ಒತ್ತಡ, ನಿರಾಸಕ್ತಿ, ಸೋಮಾರಿತನ, ಕೆಂಪು ರಕ್ತ ಕಣಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ. ಲೈಂಗಿಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ. ಇದು ದೈಹಿಕ ಸಾಮರ್ಥ್ಯವನ್ನು ಸಹ ನೀಡುತ್ತದೆ. ಈ ರತ್ನವು ನಿಮ್ಮ ದೇಹದ ಹಾರ್ಮೋನ್ ಸ್ರವಿಸುವಿಕೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈ ಕಲ್ಲು ಮೂತ್ರಪಿಂಡದ ಕಾಯಿಲೆಯನ್ನೂ ಗುಣಪಡಿಸುತ್ತದೆ.
ಆಕರ್ಷಣೆಗೆ ಹೆಚ್ಚಿಸುವ ಜೊತೆಗೆ ಸಂಗೀತ, ಚಿತ್ರಕಲೆ, ನೃತ್ಯ,ಚಲನಚಿತ್ರ, ರಂಗಭೂಮಿ, ಕಂಪ್ಯೂಟರ್, ಐಟಿ ಕೆಲಸ ಮಾಡುವವರಿಗೆ ಈ ರತ್ನವನ್ನು ಧರಿಸುವುದು ತುಂಬಾ ಪ್ರಯೋಜನಕಾರಿ. ಬಟ್ಟೆ, ಫ್ಯಾಷನ್, ಆಭರಣಗಳು, ಕಲಾಕೃತಿಗಳು, ಕಾರು ವ್ಯಾಪಾರ ಮಾಡುವವರೂ ಇದನ್ನು ಧರಿಸಬಹುದು.
ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..
ಯಾವಾಗ ಧರಿಸಬೇಕು? : ಓಪಲ್ ರತ್ನವನ್ನು ಧರಿಸಲು, ಯಾವುದೇ ತಿಂಗಳ ಶುಕ್ಲ ಪಕ್ಷದ ಶುಕ್ರವಾರ ಒಳ್ಳೆಯ ದಿನ. ಇದನ್ನು ಬಲಗೈಯ ಉಂಗುರ ಬೆರಳಿಗೆ ಧರಿಸುವುದು ಒಳ್ಳೆಯದು. ಓಪಲ್ ರತ್ನವನ್ನು ಧರಿಸುವ ಮೊದಲು, ಅದನ್ನು ಗಂಗಾ ನೀರಿನಲ್ಲಿ ಅಥವಾ ಶುದ್ಧವಾದ ನೀರಿನಿಂದ ಶುದ್ಧೀಕರಿಸಬೇಕಾಗುತ್ತದೆ. ಕರ್ಕಾಟಕ ಲಗ್ನ ಮತ್ತು ಮಕರ ಲಗ್ನದ ಜನ್ಮ ಕುಂಡಲಿಯಲ್ಲಿ ಶುಕ್ರನು ಯೋಗ ಕಾರಕ ಗ್ರಹವಾಗಿರುತ್ತಾನೆ. ಬೇರೆ ಯಾವ ಲಗ್ನಸ್ಥರ ಜಾತಕದಲ್ಲಿಯೂ ಹೀಗೆ ಆಗುವುದಿಲ್ಲ. ಆದ್ದರಿಂದ, ಈ ಲಗ್ನದ ಜಾತಕವನ್ನು ಹೊಂದಿರುವ ವ್ಯಕ್ತಿ ಓಪಲ್ ರತ್ನವನ್ನು ಧರಿಸಬಹುದು.