ಪತಿ – ಪತ್ನಿಯ ನಡುವಲ್ಲಿದ್ದರೆ ಮನಸ್ತಾಪ ಧರಿಸಿ ಈ ರತ್ನ

ದಂಪತಿಗಳ ನಡುವಿನ ಕಲಹ ಮತ್ತು ಮನಸ್ತಾಪಗಳನ್ನು ನಿವಾರಣೆ ಮಾಡಲು ಕ್ಷೀರ ಸ್ಪಟಿಕ ಧಾರಣೆ ಲಾಭಕರವೆಂದು ಹೇಳಲಾಗುತ್ತದೆ. ಈ ರತ್ನವು ಶುಕ್ರ ಗ್ರಹವನ್ನು ಬಲಗೊಳಿಸುತ್ತದೆ. ದಾಂಪತ್ಯದ ಕಾರಕ ಗ್ರಹ ಶುಕ್ರನಾಗಿರುವ ಕಾರಣ ಶುಕ್ರ ಗ್ರಹದ ಉತ್ತಮ ಪ್ರಭಾವ ಅವಶ್ಯಕವಾಗಿರುತ್ತದೆ. ಹಾಗಾಗಿ ಕ್ಷೀರ ಸ್ಪಟಿಕದ ಲಾಭ ಮತ್ತು ಧಾರಣೆಯ ಬಗ್ಗೆ ತಿಳಿಯೋಣ...

Wear this Gemstone to solve husband and wife problem

ಗಂಡ (Husband) – ಹೆಂಡತಿ ಎಂದ ಮೇಲೆ ಸಹಜವಾಗಿ ವಾದ ವಿವಾದಗಳು, ಚಿಕ್ಕ ಪುಟ್ಟ ಮನಸ್ತಾಪಗಳು (Differences) ಆಗುತ್ತಿರುತ್ತವೆ ಮತ್ತು ಹಾಗೆಯೇ ಅದು ಸರಿ ಕೂಡಾ ಆಗುತ್ತದೆ. ಪ್ರೀತಿ ಇದ್ದ ಜಾಗದಲ್ಲಿ ಸಿಟ್ಟು ಇದ್ದೇ ಇರುತ್ತದೆ ಎಂಬ ಮಾತನ್ನು ಕೇಳಿರುತ್ತೇವೆ. ಹಾಗೆಯೇ ಪತಿ ಪತ್ನಿಯ (Wife) ನಡುವಿನಲ್ಲಿ ಆದ ಜಗಳ ತಕ್ಷಣಕ್ಕೆ ಸರಿ ಹೋಗಬೇಕು. ಅದು ಮುಂದುವರೆದು ಇನ್ನೂ ಹೆಚ್ಚಿನ ಭಿನ್ನಾಭಿಪ್ರಾಯಕ್ಕೆ ಕಾರಣವಾದರೆ ಅದನ್ನು ಸರಿಪಡಿಸುವುದು ಕಷ್ಟಕರ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಹೇಳುವ ಪ್ರಕಾರ ಪತಿ ಪತ್ನಿಯ ನಡುವೆ ಯಾವಾಗಲೂ ಜಗಳವಾಗುತ್ತಿದ್ದರೆ. ಸಂಬಂಧ ಸರಿ ಬರುತ್ತಿಲ್ಲವಾದರೆ ಕ್ಷೀರ ಸ್ಪಟಿಕ (ಓಪಲ್)ವನ್ನು (Opal) ಧರಿಸಬೇಕೆಂದು ಹೇಳಲಾಗುತ್ತದೆ. ಈ ರತ್ನದ (Gemstone) ಬಗ್ಗೆ ಮತ್ತಷ್ಟು ತಿಳಿಯೋಣ.

ದಾಂಪತ್ಯ ಮಧುರವಾಗಿರಲು ಧರಿಸಿ (Married life)
ಕ್ಷೀರ ಸ್ಪಟಿಕವನ್ನು ಅತ್ಯಂತ ಅದ್ಭುತ ರತ್ನವೆಂದು ಹೇಳಲಾಗುತ್ತದೆ. ಇದು ಶುಕ್ರ (Venus) ಗ್ರಹದ ಸ್ಥಿತಿಯನ್ನು ಮತ್ತುಷ್ಟು ಬಲಗೊಳ್ಳುವಂತೆ ಮಾಡುತ್ತದೆ. ದಾಂಪತ್ಯ ಜೀವನಕ್ಕೆ ಕಾರಕ ಗ್ರಹ ಶುಕ್ರನಾಗಿರುವ ಕಾರಣ, ಶುಕ್ರ ಗ್ರಹದ ಸ್ಥಾನ ಮತ್ತು ಸ್ಥಿತಿ ಚೆನ್ನಾಗಿರುವುದು ಅತ್ಯವಶ್ಯಕ. ಹಾಗಾಗಿ ಈ ರತ್ನವನ್ನು ಧರಿಸುವುದರಿಂದ ದಾಂಪತ್ಯ ಜೀವನ ಉತ್ತಮವಾಗಿರಲು ಸಹಕಾರಿಯಾಗಿರುತ್ತದೆ. ಕ್ಷೀರ ಸ್ಪಟಿಕವು ವಜ್ರಕ್ಕಿಂತ (Diamond) ಉತ್ತಮ ಪರಿಣಾವನ್ನು ನೀಡುತ್ತದೆ ಎಂದು ಸಹ ಹೇಳಲಾಗುತ್ತದೆ. ಕ್ಷೀರ ಸ್ಪಟಿಕ ರತ್ನವನ್ನು ಬೆಳ್ಳಿಯ ಧಾತುವಿನ ಜೊತೆ ಧರಿಸಬೇಕು. ಇದರಿಂದ ಶುಭ ಫಲ ಉಂಟಾಗುತ್ತದೆ.

ಇದನ್ನು ಓದಿ: ನಿಮ್ಮಿಷ್ಟದ ಉದ್ಯೋಗ ಪಡೆಯೋಕೆ ಆಂಜನೇಯನನ್ನು ಹೀಗೆ ಮೆಚ್ಚಿಸಿ..

ಪತಿ- ಪತ್ನಿ ನಡುವೆ ಭಿನ್ನಾಭಿಪ್ರಾಯ ದೂರವಾಗಲು
ಕ್ಷೀರ ಸ್ಪಟಿಕವು ಪತಿ –ಪತ್ನಿ ನಡುವೆ ಇರುವ ಮನಸ್ತಾಪಗಳನ್ನು, ಕಲಹ, ಕ್ಷೇಶಗಳನ್ನು ದೂರ ಮಾಡಲು ಸಹಾಯಕವಾಗುತ್ತದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯವಿಲ್ಲದೆ, ವಿಚ್ಛೇದನದ (Divorce) ಸ್ಥಿತಿಗೆ ತಲುಪಿದ್ದರೂ ಸಹ ಕ್ಷೀರ ಸ್ಪಟಿಕ ಧಾರಣೆಯಿಂದ ದಂಪತಿಗಳ ನಡುವಿನ ಭಿನ್ನಾಭಿಪ್ರಾಯ ದೂರವಾಗಲು ಸಹಾಯಕವಾಗುತ್ತದೆ. ವಿಚ್ಛೇದನದ ಸ್ಥಿತಿಗೆ ತಲುಪಿದ್ದರೂ ಸಹ ಈ ರತ್ನವು ಸಂಬಂಧವನ್ನು ಸರಿಪಡಿಸುವಲ್ಲಿ ಸಹಕಾರಿಯಾಗುತ್ತದೆ.

ಶುಕ್ರ ಗ್ರಹದ ಸ್ಥಿತಿ (Venus planet)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕ್ಷೀರ ಸ್ಪಟಿಕವನ್ನು ಧರಿಸುವುದು ಶುಕ್ರ ಗ್ರಹವನ್ನು ಬಲಗೊಳಿಸುವ ಸಲುವಾಗಿ. ಇದರಿಂದ ಶುಕ್ರ ಗ್ರಹವು ಉತ್ತಮ ಪ್ರಭಾವವನ್ನು ನೀಡುತ್ತದೆ. ವೃಷಭ (Taurus) ಮತ್ತು ತುಲಾ (Libra) ರಾಶಿಯ ವ್ಯಕ್ತಿಗಳು ಕ್ಷೀರ ಸ್ಪಟಿಕವನ್ನು ಧರಿಸಬಹುದಾಗಿದೆ. ಅಷ್ಟೇ ಅಲ್ಲದೆ ಜಾತಕದಲ್ಲಿ (Horoscope) ವೃಷಭ ಮತ್ತು ತುಲಾ ಲಗ್ನವಿದ್ದವರು ಸಹ ಕ್ಷೀರ ಸ್ಪಟಿಕವನ್ನು ಧರಿಸಬಹುದಾಗಿದೆ.

ಕ್ಷೀರ ಸ್ಪಟಿಕ ಧಾರಣೆ ವಿಧಿ
ಈ ರತ್ನವನ್ನು ಶುಕ್ರವಾರದ (Friday) ದಿನ ಧರಿಸಬೇಕು. ಯಾವುದೇ ಮಾಸದ ಶುಕ್ಲಪಕ್ಷದ ಶುಕ್ರವಾರದಂದು ಕ್ಷೀರ ಸ್ಪಟಿಕವನ್ನು ಧಾರಣೆ ಮಾಡಬೇಕು. ಇದನ್ನು ಬಲಗೈ ಉಂಗುರ ಬೆರಳಿಗೆ  ಧರಿಸಿದರೆ ಶುಭ. ಇದನ್ನು ಧರಿಸುವ ಮೊದಲು ಹಾಲು ಅಥವಾ ಗಂಗಾಜಲದಲ್ಲಿ ಶುದ್ಧಿಕರಣ ಮಾಡಿಕೊಳ್ಳಬೇಕು. ನಂತರ ದೇವರ ಸ್ಮರಣೆ ಮಾಡುತ್ತಾ ರತ್ನವನ್ನು ಧರಿಸಬೇಕು.

ಇದನ್ನು ಓದಿ: ಚಾತುರ್ಮಾಸದಲ್ಲಿ ನೀವೇನು ಮಾಡಬೇಕು ಎಂಬುದ ತಿಳಿಯಿರಿ..

ಯಾರು ಧರಿಸಬೇಕು?
ಕರ್ಕಾಟಕ ಲಗ್ನ ಮತ್ತು ಮಕರ ಲಗ್ನದ ವ್ಯಕ್ತಿಗಳ ಜಾತಕದಲ್ಲಿ ಶುಕ್ರನು ಯೋಗ ಕಾರಕ ಗ್ರಹವಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಬೇರೆ ಲಗ್ನದವರ ಜಾತಕದಲ್ಲಿ ಹೀಗಿರುವುದಿಲ್ಲ. ಹಾಗಾಗಿ ಕರ್ಕಾಟಕ ಮತ್ತು ಮಕರ (Capricorn) ಲಗ್ನದ ವ್ಯಕ್ತಿಗಳು ಕ್ಷೀಕ ಸ್ಪಟಿಕವನ್ನು ಧಾರಣೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ ವೃಷಭ ಮತ್ತು ತುಲಾ ರಾಶಿಯವರು ಸಹ ಈ ರತ್ನವನ್ನು ಧರಿಸಬಹುದಾಗಿದೆ.

ಗಮನಿಸಬೇಕಾದ ಅಂಶ : ಯಾವುದೇ ರತ್ನವನ್ನು ಧರಿಸುವ ಮೊದಲು ನುರಿತ ಜ್ಯೋತಿಷ್ಯ ಶಾಸ್ತ್ರಜ್ಞರು ಅಥವಾ ರತ್ನಗಳ ವಿಷಯದಲ್ಲಿ ಪಾಂಡಿತ್ಯ ಉಳ್ಳವರ ಬಳಿ ಜಾತಕವನ್ನು ಪರೀಶೀಲಿಸಿಕೊಂಡು, ಆಗಿಬರುತ್ತದೆ ಎಂದರೆ ಮಾತ್ರ ರತ್ನವನ್ನು ಧರಿಸಬೇಕು. ಜಾತಕದಲ್ಲಿರುವ ಗ್ರಹಗಳ ಪರಿಣಾಮವನ್ನು (Effects) ಆಧರಿಸಿ ರತ್ನಧಾರಣೆ ಮಾಡಬೇಕಾಗುತ್ತದೆ. ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ರತ್ನ ಧರಿಸುವ ಮೊದಲು ಪರೀಶಿಲಿಸಿಕೊಳ್ಳಬೇಕು.

Latest Videos
Follow Us:
Download App:
  • android
  • ios