Asianet Suvarna News Asianet Suvarna News

ಕಲ್ಲು ಬಂಡೆಗೆ, ತಲೆಯಿಂದ ಡಿಚ್ಚಿ ಹೊಡೆಯೋ ಜಾತ್ರೆ: ರಕ್ತನೂ ಬರೊಲ್ಲ, ಗಾಯವೂ ಆಗೊಲ್ಲ!

ತಲೆ ಗಟ್ಟಿಯಾಗಿದೆ ಅಂತಾ ಕಲ್ಲುಬಂಡೆಗೆ ಚಚ್ಚಿಕೊಳ್ಳಬೇಡಿ ಎಂಬ ಗಾದೆ ಕೇಳಿದ್ದೇವೆ. ಆದರೆ, ವಿಜಯಪುರದ ಸೋಮೇಶ್ವರ ಜಾತ್ರೆಯಲ್ಲಿ ಬಂಡೆಗೆ ತಲೆಯಿಂದ ಡಿಚ್ಚಿ ಹೊಡೆಯೋ ಜಾತ್ರೆಯನ್ನೇ ಮಾಡಲಾಗುತ್ತಿದೆ.

Vijayapura Gani village someshwara fair some devotees are Collision the big rock sat
Author
First Published Dec 18, 2023, 7:21 PM IST

ವರದಿ - ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಡಿ.18):
ತಲೆಗೆ ಸಣ್ಣ ಕಲ್ಲು ತಾಗಿದ್ರೆ ಏನಾಗುತ್ತೆ? ಅಥವಾ ನಡೆಯುತ್ತಾ ಹೋಗುವಾಗ ಬಿದ್ದರೆ ಹಣೆಗೆ ಗಾಯವಾಗಿ ರಕ್ತ ಸುರಿಯುತ್ತಲ್ವಾ? ಆದ್ರೆ ಇಲ್ಲಿ ಓಡೋಡಿ ಬಂದು ಜನರು ಬಂಡೆಗೆ ತಲೆಯನ್ನ ಡಿಕ್ಕಿ ಹೊಡೆಸಿದ್ರು ಏನು ಆಗೋದಿಲ್ಲ. ಗಾಯವಿರಲಿ, ಹಣೆಗೆ ನೋವು ಸಹ ಆಗೋದಿಲ್ಲ.‌ ವಿಜಯಪುರ ಜಿಲ್ಲೆಯ ಅದೊಂದು ಗ್ರಾಮದಲ್ಲಿ ನಡೆಯುವ ವಿಚಿತ್ರ ಜಾತ್ರೆಯಲ್ಲಿ ಸ್ವತಃ ಭಕ್ತರೆ ಬಂದು ಬಂಡೆ, ಕಲ್ಲಿಗೆ ತಲೆ ಜಜ್ಜಿಕೊಳ್ತಾರೆ..

ಕಲ್ಲಿನ ಬಂಡೆ.. ಮನುಷ್ಯನ ಮಂಡೆಯ ನಡುವೆ ಸಂಘರ್ಷ: ಹೌದು ಇಲ್ಲಿ ನಡೆಯುವ ಜಾತ್ರೆಯಲ್ಲಿ ಅಕ್ಷರಶಃ ಕಲ್ಲಿನ ಬಂಡೆ ಮನುಷ್ಯನ ಮಂಡೆಯ ನಡುವೆ ಸಂಘರ್ಷ ನಡೆಯುತ್ತೆ.. ಓಡೋಡಿ ಬರುವ ಭಕ್ತರು ವೀರ ಬಂಡೆಗೆ ತಮ್ಮ‌ ತಲೆಯನ್ನ ಡಿಕ್ಕಿ ಹೊಡೆಸುತ್ತಾರೆ.‌‌ ಈ ದೃಶ್ಯಗಳು ಎಂಥವರನ್ನು ಬೆಚ್ಚಿ ಬೀಳಿಸುವ ಹಾಗೆ ಇರುತ್ವೆ. ಓಡೋಡಿ ಬಂದು ಭಕ್ತರು ಬಂಡೆಗಳಿಗೆ ಡಿಕ್ಕಿ ಹೊಡೆಯುತ್ತಿದ್ದರೆ, ಢನ್ ಎಂದು ಸದ್ದು ಕೇಳಿ‌ ಬರುತ್ತೆ.. ಒಬ್ಬೊಬ್ಬ ಭಕ್ತರು 

ತಲೆ ಜಜ್ಜಿಕೊಂಡು ಸೋಮೇಶ್ವರನಿಗೆ ಭಕ್ತಿ ಸಮರ್ಪಿಸುವ ಭಕ್ತರು: ಅಷ್ಟಕ್ಕು ವಿಚಿತ್ರ ಜಾತ್ರೆ ನಡೆಯುವುದು ಜಿಲ್ಲೆಯ ಕೋಲ್ಹಾರ ತಾಲೂಕಿನ ಗಣಿ ಗ್ರಾಮದಲ್ಲಿ. ಗ್ರಾಮ ದೇವರಾಗಿರುವ ಸೋಮೇಶ್ವರ ದೇವರ ಜಾತ್ರೆಯಲ್ಲಿ ಈ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ ಈ ಜಾತ್ರೆ ಬಲು ವಿಚಿತ್ರ. ಇಲ್ಲಿ ಭಕ್ತರು ದೇವರಿಗೆ ನಮಿಸಲು ಓಡೋಡಿ ಬಂದು ಬಂಡೆಗೆ ತಲೆ ಜಜ್ಜಿಕೊಳ್ತಾರೆ‌. ಹೀಗೆ ಗ್ರಾಮದ ಬಹುತೇಕರು ವಿಶೇಷ ರೀತಿಯಲ್ಲಿ ದೇವರಿಗೆ ನಮಸ್ಕರಿಸುತ್ತಾರೆ. 

ಹಾಸಿಗೆ ಹಿಡಿದ 'ಕೆಚ್ಚೆದೆಯ ಕನ್ನಡತಿ ಅಕ್ಕ ಅನು' : ಈಗ್ಲಾದ್ರೂ ನಿಮ್ಮ ಶಾಲೆ ಕೆಲಸ ನೀವೇ ಮಾಡ್ಕೊಳ್ಳಿ!

ಗ್ರಾಮದ ಬಿಂಗಿ ಜುಟ್ಟುಧಾರಿಗಳಿಂದ ಆಚರಣೆ: ಗಣಿ ಗ್ರಾಮದಲ್ಲಿ ವರ್ಷಕ್ಕೊಮ್ಮೆ ನಡೆಯುವ ಸೋಮೇಶ್ವರ ಜಾತ್ರೆಯಲ್ಲಿ ಈ ಅಪರೂಪದ ದೃಶ್ಯಗಳು ನೋಡಲು ಸಿಗುತ್ತವೆ.‌ ಸೋಮೇಶ್ವರ ದೇವರ ಪೂಜಾರಿಗಳು,‌ ಹಾಗೂ ಬಿಂಗಿ ಜುಟ್ಟುಧಾರಿಗಳಿಂದ ಈ ವಿಚಿತ್ರ ಬಂಡೆಗೆ ಡಿಕ್ಕಿ ನಮಸ್ಕಾರದ ಭಕ್ತಿ ಸಮರ್ಥನೆ ನಡೆಯುತ್ತೆ. ಗ್ರಾಮದ ಸಾವಿರಾರು ಜನರು ನಿಂತು ಈ ವಿಚಿತ್ರವನ್ನ ಭಯ ಪಡದೆ ಕಣ್ತುಂಬಿಕೊಳ್ತಾರೆ. ಪೂಜಾರಿಗಳು, ಬಿಂಗಿಗಳು ಮೂರು ಬಾರಿ ಓಡೋಡಿ ಬಂದು ಬಂಡೆಗೆ ತಲೆ ಹೊಡೆದುಕೊಂಡು ನಮಸ್ಕಾರ ಮಾಡಬೇಕಂತೆ.. ಹೀಗೆ ಮಾಡಿದ್ರೆ ಒಳಿತಾಗುತ್ತೆ ಅನ್ನೋ ನಂಬಿಕೆ ಇದೆ.

ಬಂಡೆಗೆ ಹೊಡೆದುಕೊಂಡ್ರು ಯಾವುದೇ ಗಾಯವಾಗಲ್ಲ: ವಿಸ್ಮಯಕಾರಿ ವಿಚಾರ ಅಂದ್ರೆ ಗಣಿ ಗ್ರಾಮದಲ್ಲಿ ನಡೆಯೋ ಸೋಮೇಶ್ವರ ಜಾತ್ರೆಯಲ್ಲಿ ಹೀಗೆ ಓಡೋಡಿ ಬಂದು ಬಂಡೆಗೆ ತಲೆ ಜಜ್ಜಿಕೊಂಡ್ರೆ ಏನು ಆಗೋದಿಲ್ಲವಂತೆ. ಅಂದ್ರೆ ತಲೆಗೆ ಗಾಯ, ತಲೆ‌ ನೋವು ಯಾವುದೇ ಸಮಸ್ಯೆ ಆಗಲ್ಲವಂತೆ. ಇದನ್ನ ಸೋಮೇಶ್ವರ ದೇವರ ಪವಾಡ ಎನ್ನಲಾಗ್ತಿದೆ. ಅದೇಷ್ಟೋ ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದ್ದರು ಈ ವರೆಗೆ ಯಾರೊಬ್ಬರೂ ಸಣ್ಣ ಗಾಯವಾಗಿಲ್ಲ..‌ ಮೂರು ಮೂರು ಬಾರಿ ಬಂಡೆಗೆ ಡಿಕ್ಕಿ ಹೊಡೆದರು ಹನಿ ರಕ್ತ ಸಹ ಕಂಡಿಲ್ಲವಂತೆ. ಸ್ಥಳೀಯರು ಹಾಗೂ ಭಕ್ತರು ಇದೆಲ್ಲ ಸೋಮೇಶ್ವರ ದೇವರ ಪವಾಡ ಅಲ್ಲದೆ ಮತ್ತೇನು ಅಲ್ಲಾ ಎನ್ತಾರೆ...

Davanagere: ಉಪ್ಪಿನಕಾಯಿ ಕೇಳೋಕೆ ಬಂದು ಅತ್ಯಾಚಾರಕ್ಕೆ ಯತ್ನಿಸಿ, ಕೆನ್ನೆ ಕಚ್ಚಿದ: ಮಹಿಳೆ ಚೀರಾಡ್ತಿದ್ದಂತೆ ಪರಾರಿ!

ಬಂಡೆ-ಮಂಡೆ ಸಂಘರ್ಷದ ಹಿಂದೆ‌‌ ಇದೆ ಅಚ್ಚರಿ: ಇನ್ನೊಂದು ವಿಚಿತ್ರ ಅಂದ್ರೆ ಜಾತ್ರೆಯ ವೇಳೆ ಹೀಗೆ ಡಿಕ್ಕಿ ಹೊಡೆದು ನಮಸ್ಕಾರ ಮಾಡಿದ್ರೆ ಯಾವುದೆ ಗಾಯವಾಗಲ್ಲ, ಹನಿ ರಕ್ತ ಸುರಿಯಲ್ಲ. ಅಷ್ಟೇಯಾಕೆ ಕೊಂಚ ನೋವು ಸಹ ಆಗಲ್ಲವಂತೆ. ಆದ್ರೆ ಅದೆ ಮಾಮೂಲಿ ದಿನಗಳಲ್ಲಿ ಬಂಡೆಗೆ ಡಿಕ್ಕಿ ಹೊಡೆದರೆ ಗಾಯವಾಗುತ್ತೆ. ಇದೆಲ್ಲ ದೇವರ ಪವಾಡವಂತೆ‌. ಇದನ್ನ ಪರೀಕ್ಷಿಸಲು ಹೋದವರಿಗು ಅಚ್ಚರಿ ಮೂಡಿಸಿದೆ..

Follow Us:
Download App:
  • android
  • ios