Asianet Suvarna News Asianet Suvarna News

ಶುಕ್ರ ಗ್ರಹದ ರಾಶಿ ಪರಿವರ್ತನೆ ಈ 4 ರಾಶಿಯವರಿಗೆ ಶುಭಫಲ..

ಗ್ರಹಗಳ ರಾಶಿ ಪರಿವರ್ತನೆಯು ವ್ಯಕ್ತಿಯ ಜೀವನದ ಮೇಲೆ ಶುಭಾಶುಭ ಪರಿಣಾಮಗಳನ್ನು ಬೀರುತ್ತವೆ. ಇದೇ ಜೂನ್ 22ರಂದು ಶುಕ್ರ ಗ್ರಹವು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶಿಸಲಿದೆ. ಶುಕ್ರ ಗ್ರಹದ ಈ ಗೋಚಾರವು ಕೆಲವು ರಾಶಿಯವರಿಗೆ ಉತ್ತಮ ಫಲವನ್ನು ನೀಡಲಿದೆ. ಹಾಗಾದರೆ ಶುಭ ಫಲವನ್ನು ಪಡೆಯುವ ರಾಶಿಗಳ ಬಗ್ಗೆ ತಿಳಿಯೋಣ...

Venus transit these four zodiac sign people will get benefits
Author
Bangalore, First Published Jun 17, 2021, 9:23 PM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ, ನಕ್ಷತ್ರಗಳ ರಾಶಿ ಪರಿವರ್ತನೆಯು ಪ್ರಕೃತಿ ಮತ್ತು ಜೀವಿಗಳ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಗ್ರಹಗಳ ರಾಶಿ ಪರಿವರ್ತನೆಯು ಕೆಲವು ರಾಶಿಯವರಿಗೆ ಉತ್ತಮ ಪರಿಣಾಮಗಳನ್ನು ನೀಡುತ್ತದೆ. ಅದೇ ಮತ್ತೆ ಕೆಲ ರಾಶಿಯವರಿಗೆ ಅಶುಭ ಫಲವನ್ನು ನೀಡುತ್ತದೆ. ಶುಕ್ರ ಗ್ರಹವು ಸಮೃದ್ಧಿ, ಬಾಂಧವ್ಯ, ಪ್ರೇಮ, ಸಂಗಾತಿ, ಸೌಂದರ್ಯ, ಆಭರಣ, ವಾಹನ ಮತ್ತು ವಿವಾಹ ಇತ್ಯಾದಿಗಳಿಗೆ ಕಾರಕ ಗ್ರಹವಾಗಿದೆ.

ಜೀವನದಲ್ಲಿ ಸುಖ-ಸಮೃದ್ಧಿಗಳು ಶುಕ್ರಗ್ರಹದ ಶುಭ ಪ್ರಭಾವದಿಂದ ದೊರೆಯುತ್ತದೆ. ಇದೇ ಜೂನ್ 22ರಂದು ಶುಕ್ರ ಗ್ರಹವು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶಿಸಲಿದೆ. ಈ ಗ್ರಹವು ಸುಮಾರು 23 ದಿನಗಳ ಕಾಲ ಒಂದು ರಾಶಿಯಲ್ಲಿ ಸ್ಥಿತವಾಗಿರುತ್ತದೆ. ಹಾಗಾಗಿ ಜುಲೈ 17ರ ವರೆಗೆ ಕರ್ಕಾಟಕ ರಾಶಿಯಲ್ಲಿ ಸ್ಥಿತವಾಗಿರಲಿದೆ. 

ಇದನ್ನು ಓದಿ: ಈ ನಾಲ್ಕು ರಾಶಿಯವರು ಮಾತಿನಿಂದಲೇ ಮೋಡಿ ಮಾಡುವರು…! 

ಶುಕ್ರ ಗ್ರಹವು ಭೌತಿಕ ಸುಖ-ಸಮೃದ್ಧಿಯ ಕಾರಕ ಗ್ರಹವಾಗಿದೆ. ಹಾಗಾಗಿ ಶುಕ್ರ ಗ್ರಹದ ಶುಭ ಪ್ರಭಾವಕ್ಕೆ ಒಳಗಾಗುವ ರಾಶಿಯವರ ದಾಂಪತ್ಯ ಜೀವನದಲ್ಲಿ, ಪ್ರೇಮ ವಿಚಾರಗಳಲ್ಲಿ ಒಳಿತಾಗುವುದಲ್ಲದೆ ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ದಾಂಪತ್ಯ ಜೀವನವು ಹೆಚ್ಚು ಮಧುರವಾಗಿರುವುದಕ್ಕೆ ಶುಕ್ರ ಗ್ರಹವು ಕಾರಣವಾಗಿರುತ್ತದೆ. ಶುಕ್ರ ಗ್ರಹವು ಮೀನ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿರುತ್ತದೆ ಮತ್ತು ಕನ್ಯಾ ರಾಶಿಯಲ್ಲಿ ನೀಚ ಸ್ಥಾನದಲ್ಲಿರುತ್ತದೆ. ಶುಕ್ರ ಗ್ರಹದ ಈ ಗೋಚಾರದಿಂದ ಯಾವ್ಯಾವ ರಾಶಿಯವರಿಗೆ ಶುಭಫಲವಿದೆ ಎಂಬುದನ್ನು ನೋಡೋಣ....

ಮೇಷ ರಾಶಿ
ಶುಕ್ರ ಗ್ರಹದ ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ಉತ್ತಮ ಪರಿಣಾಮವನ್ನು ಬೀರಲಿದೆ. ಈ ಗೋಚಾರದ ಅವಧಿಯಲ್ಲಿ ಈ ರಾಶಿಯವರ ಸುಖವು ಹೆಚ್ಚುತ್ತದೆ. ಹಣಕಾಸು ಮತ್ತು ಆಸ್ತಿ-ಪಾಸ್ತಿ ವೃದ್ಧಿಸುವ ಸಂಭವ ಹೆಚ್ಚಿದೆ. ಮೇಷ ರಾಶಿಯವರು ಈ ಸಮಯದಲ್ಲಿ ಮನೆ ಅಥವಾ ವಾಹನವನ್ನು ಖರೀದಿಸಬಹುದಾಗಿದೆ. ಕುಟುಂಬದವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಮನಸ್ಸಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಆಗುವ ಬದಲಾವಣೆಯು ನಿಮಗೆ ಲಾಭವನ್ನು ತರುತ್ತದೆ. ಆರ್ಥಿಕ ಸ್ಥಿತಿ ಮತ್ತಷ್ಟು ಉತ್ತಮವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಲಭಿಸುವ ಸೂಚನೆಯೂ ಇದೆ. ಒಟ್ಟಾರೆಯಾಗಿ ಮೇಷ ರಾಶಿಯವರಿಗೆ ಈ ಗೋಚಾರವು ಶುಭಫಲವನ್ನು ನೀಡಲಿದೆ.

ಇದನ್ನು ಓದಿ: ಗುರುವಾರ ಹೀಗೆ ಮಾಡಿ ಜೀವನ-ಉದ್ಯೋಗದಲ್ಲಿ ಯಶಸ್ಸು ಗಳಿಸಿ..! 

ಮಿಥುನ ರಾಶಿ
ಶುಕ್ರ ಗ್ರಹದ ಗೋಚಾರವು ಮಿಥುನ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹಣವನ್ನು ಉಳಿಸುವಲ್ಲಿ ಸಫಲರಾಗುತ್ತೀರಿ. ಸಾಲವಾಗಿ ಕೊಟ್ಟಿರುವ ಹಣ ವಾಪಸ್ ನಿಮ್ಮ ಕೈ ಸೇರುವ ಸಂಭವ ಹೆಚ್ಚಿದೆ. ಈ ರಾಶಿಯ ವಿದ್ಯಾರ್ಥಿಗಳಿಗೆ ಈ ಗೋಚಾರವು ಉತ್ತಮ ಫಲವನ್ನು ನೀಡಲಿದೆ. ಈ ಅವಧಿಯು ಮಿಥುನ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಸಂಭವವಿದೆ. ಮಿಥುನ ರಾಶಿಯವರ ಆರೋಗ್ಯ ಸ್ಥಿರವಾಗಿರಲಿದೆ.

Venus transit these four zodiac sign people will get benefits



ಮಕರ ರಾಶಿ
ಶುಕ್ರ ಗ್ರಹದ ಗೋಚಾರವು ಮಕರ ರಾಶಿಯವರ ವೈವಾಹಿಕ ಜೀವನದಲ್ಲಿ ಮಧುರತೆಯನ್ನು ತರಲಿದೆ. ಪರಸ್ಪರ ಭಾವನೆಗಳನ್ನು ಅರ್ಥೈಸಿಕೊಳ್ಳುವುದರಿಂದ ಸಂಗಾತಿಯೊಂದಿಗಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ. ಕಾರ್ಯಕ್ಷೇತ್ರದಲ್ಲಿ ಉನ್ನತ ಪದವಿಯನ್ನು ಪಡೆಯುವ ಸಂಭವವಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಕಾರ್ಯಕ್ಷೇತ್ರದಲ್ಲಿ ನೀವು ಮಾಡುವ ಕೆಲಸ ಪ್ರಶಂಸೆಗೆ ಪಾತ್ರವಾಗುತ್ತದೆ.

ಇದನ್ನು ಓದಿ: ಈ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟವಂತರು...! 

ಮೀನ ರಾಶಿ
ಶುಕ್ರ ಗ್ರಹದ ಈ ಗೋಚಾರವು ಮೀನ ರಾಶಿಯವರಿಗೆ ಶುಭಫಲವನ್ನು ನೀಡಲಿದೆ. ಈ ಸಮಯದಲ್ಲಿ ನಿಮಗೆ ಅದೃಷ್ಟವು ಜೊತೆಗಿರಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಕಾರ್ಯಕ್ಷೇತ್ರದಲ್ಲಿ ಮಾಡುವ ಕೆಲಸಗಳು ಸಫಲತೆಯನ್ನು ಕಾಣುತ್ತವೆ. ಹೊಸತನ್ನು ಕಲಿಯುವ ಆಸಕ್ತಿ ಉಳ್ಳವರಿಗೆ ಇದು ಸಕಾಲವಾಗಿದೆ. ಖರ್ಚಿನಲ್ಲಿ ನಿಯಂತ್ರಿಸುವಲ್ಲಿ ಸಫಲರಾಗುವ ಕಾರಣ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಕಾರ್ಯಕ್ಷೇತ್ರದಲ್ಲಿ ಶುಭಸುದ್ಧಿ ಲಭಿಸುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಸಫಲತೆ ದೊರೆಯುತ್ತದೆ. 

Follow Us:
Download App:
  • android
  • ios