ನವರಾತ್ರಿ ಹಬ್ಬಕ್ಕೆ ಕಡಿಮೆ ಬೆಲೆಯ ಗಿಫ್ಟ್ ಹುಡುಕುತ್ತಿದ್ದೀರಾ? ಸಾಂಪ್ರದಾಯಿಕ ಬಳೆಗಳು, ಆಕ್ಸಿಡೈಸ್ಡ್ ಜ್ಯುವೆಲರಿ, ಅಲಂಕಾರಿಕ ದೀಪಗಳು ಹಾಗೂ ಮನೆಯಲ್ಲೇ ಮಾಡಿದ ಸಿಹಿತಿಂಡಿಗಳವರೆಗೆ ನಿಮ್ಮ ಪ್ರೀತಿಪಾತ್ರರಿಗೆ ನೀಡಬಹುದಾದ 15 ಬಜೆಟ್ ಸ್ನೇಹಿ ಗಿಫ್ಟ್ ಐಡಿಯಾಗಳು ಇಲ್ಲಿವೆ.

ನವರಾತ್ರಿ ಅಂದ್ರೆ ಭಕ್ತಿ, ಸಂಭ್ರಮ ಹಾಗೂ ಪ್ರೀತಿಪಾತ್ರರೊಂದಿಗೆ ಉಡುಗೊರೆ ಹಂಚಿಕೊಳ್ಳುವ ಸಮಯ. ಹೆಚ್ಚು ಖರ್ಚು ಮಾಡದೆ ಹಬ್ಬದ ಖುಷಿಯನ್ನು ಹೆಚ್ಚಿಸಲು ನೀವು ಯೋಚಿಸುತ್ತಿದ್ದರೆ, ಸಂಪ್ರದಾಯ ಹಾಗೂ ಕ್ರಿಯೇಟಿವಿಟಿ ಇರುವ ಹಲವು ಬಜೆಟ್ ಸ್ನೇಹಿ ಆಯ್ಕೆಗಳಿವೆ. ಈ ಒಂಬತ್ತು ದಿನಗಳ ಹಬ್ಬವನ್ನು ಇನ್ನಷ್ಟು ಸ್ಪೆಷಲ್ ಮಾಡಲು ಇಲ್ಲಿವೆ 15 ಬೆಸ್ಟ್ ಗಿಫ್ಟ್ ಐಡಿಯಾಗಳು.

1. ಸಾಂಪ್ರದಾಯಿಕ ಬಳೆಗಳು

ಬಣ್ಣಬಣ್ಣದ ಗಾಜಿನ ಬಳೆಗಳು ಹಾಗೂ ಆಕ್ಸಿಡೈಸ್ಡ್ ಬ್ರೇಸ್‌ಲೆಟ್‌ಗಳು ಹಬ್ಬದ ಉಡುಪಿಗೆ ಮ್ಯಾಚ್ ಆಗುತ್ತವೆ. ಇವುಗಳನ್ನು ನೀವು ಕಡಿಮೆ ಬೆಲೆಗೆ ಗಿಫ್ಟ್ ಆಗಿ ನೀಡಬಹುದು.

2. ಅಲಂಕಾರಿಕ ದೀಪಗಳು

ಕೈಯಿಂದ ಪೇಂಟ್ ಮಾಡಿದ ಮಣ್ಣಿನ ದೀಪಗಳು ಹಾಗೂ ಟೀ-ಲೈಟ್ ಹೋಲ್ಡರ್‌ಗಳು ಮನೆಗೆ ಹಬ್ಬದ ಕಳೆ ತರುತ್ತವೆ.

3. ಮಿನಿ ಫೆಸ್ಟಿವ್ ಹ್ಯಾಂಪರ್ಸ್

ಚಾಕೊಲೇಟ್, ಸಿಹಿತಿಂಡಿ, ಡ್ರೈ ಫ್ರೂಟ್ಸ್ ಅಥವಾ ಸಾಂಪ್ರದಾಯಿಕ ಸ್ನ್ಯಾಕ್ಸ್ ಸೇರಿಸಿ ನೀವೇ ಒಂದು ಸುಂದರವಾದ ಹ್ಯಾಂಪರ್ ರೆಡಿ ಮಾಡಬಹುದು.

4. ಎಥ್ನಿಕ್ ದುಪಟ್ಟಾಗಳು

ಗಾರ್ಬಾ ನೈಟ್ಸ್ ಹಾಗೂ ಫ್ಯಾಮಿಲಿ ಫಂಕ್ಷನ್‌ಗಳಿಗೆ ಬ್ರೈಟ್ ಕಲರ್ ದುಪಟ್ಟಾಗಳು ಮತ್ತು ಸ್ಟೋಲ್‌ಗಳು ಹೇಳಿಮಾಡಿಸಿದ ಗಿಫ್ಟ್.

5. ಇಂಡೋರ್ ಪ್ಲಾಂಟ್ಸ್

ಸಣ್ಣ ಸಕ್ಯುಲೆಂಟ್ಸ್, ಲಕ್ಕಿ ಬ್ಯಾಂಬೂ ಹಾಗೂ ಇತರ ಇಂಡೋರ್ ಗಿಡಗಳು ಬೆಳವಣಿಗೆ ಮತ್ತು ಪಾಸಿಟಿವಿಟಿಯ ಸಂಕೇತ. ಇವು ಬೆಸ್ಟ್ ಗಿಫ್ಟ್ ಆಗಬಲ್ಲವು.

6. ಸುವಾಸನೆಯ ಕ್ಯಾಂಡಲ್‌ಗಳು

ಹೂವು ಅಥವಾ ಹಬ್ಬದ ಸುವಾಸನೆ ಬೀರುವ ಅಲಂಕಾರಿಕ ಕ್ಯಾಂಡಲ್‌ಗಳು ನೋಡಲು ರಿಚ್ ಆಗಿದ್ದರೂ, ಕಡಿಮೆ ಬೆಲೆಗೆ ಸಿಗುತ್ತವೆ.

7. ಹ್ಯಾಂಡ್‌ಮೇಡ್ ಗ್ರೀಟಿಂಗ್ ಕಾರ್ಡ್ಸ್

ಪ್ರೀತಿಯಿಂದ ಕೈಯಾರೆ ಬರೆದ ಶುಭಾಶಯದ ಸಂದೇಶವು ಎಂಥದ್ದೇ ಸಿಂಪಲ್ ಗಿಫ್ಟ್‌ನ ಮೌಲ್ಯವನ್ನೂ ಹೆಚ್ಚಿಸುತ್ತದೆ.

8. ಆಕ್ಸಿಡೈಸ್ಡ್ ಜ್ಯುವೆಲರಿ

ಎಥ್ನಿಕ್ ಫ್ಯಾಷನ್ ಇಷ್ಟಪಡುವ ಸ್ನೇಹಿತರಿಗೆ ಜುಮುಕಿ, ಸ್ಟೇಟ್‌ಮೆಂಟ್ ಕಿವಿಯೋಲೆ ಹಾಗೂ ಸಾಂಪ್ರದಾಯಿಕ ನೆಕ್ಲೇಸ್‌ಗಳನ್ನು ಉಡುಗೊರೆಯಾಗಿ ನೀಡಬಹುದು.

9. ಪರ್ಸನಲೈಸ್ಡ್ ಕೀಚೈನ್‌ಗಳು

ಹೆಸರಿನ ಮೊದಲ ಅಕ್ಷರ, ಫೋಟೋ ಅಥವಾ ವಿಶೇಷ ಸಂದೇಶವಿರುವ ಕಸ್ಟಮೈಸ್ಡ್ ಕೀಚೈನ್‌ಗಳು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ.

10. ಮಿನಿ ಪೂಜಾ ತಟ್ಟೆಗಳು

ದೀಪ, ಕುಂಕುಮ ಹಾಗೂ ಇತರ ಪೂಜಾ ಸಾಮಗ್ರಿಗಳಿರುವ ಸಣ್ಣ ಪೂಜಾ ತಟ್ಟೆಯು ಹಬ್ಬಕ್ಕೆ ಹೇಳಿಮಾಡಿಸಿದ ಸಾಂಪ್ರದಾಯಿಕ ಉಡುಗೊರೆ.

11. ಅಲಂಕಾರಿಕ ತೋರಣಗಳು

ಮಣಿಗಳು, ಬಟ್ಟೆ ಅಥವಾ ಕೃತಕ ಹೂವುಗಳಿಂದ ಮಾಡಿದ ಬಣ್ಣಬಣ್ಣದ ತೋರಣಗಳು ಹಬ್ಬದ ಸಮಯದಲ್ಲಿ ಮನೆಯ ಬಾಗಿಲಿನ ಅಂದ ಹೆಚ್ಚಿಸುತ್ತವೆ.

12. ಪೋಟ್ಲಿ ಬ್ಯಾಗ್‌ಗಳು

ಎಂಬ್ರಾಯ್ಡರಿ ಮಾಡಿದ ಪೋಟ್ಲಿ ಬ್ಯಾಗ್‌ಗಳು ಸ್ಟೈಲಿಶ್ ಆಗಿರುತ್ತವೆ. ಹಬ್ಬದ ಓಡಾಟದ ವೇಳೆ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಲು ಇವು ತುಂಬಾ ಉಪಯುಕ್ತ.

13. ಸಾಂಪ್ರದಾಯಿಕ ಜುಟ್ಟಿಗಳು

ಕಡಿಮೆ ಬೆಲೆಗೆ ಸಿಗುವ ಎಂಬ್ರಾಯ್ಡರಿ ಜುಟ್ಟಿಗಳು ಎಥ್ನಿಕ್ ಡ್ರೆಸ್‌ಗಳಿಗೆ ಪರ್ಫೆಕ್ಟ್ ಮ್ಯಾಚ್. ಹಬ್ಬದ ಸಂಭ್ರಮಕ್ಕೆ ಇವು ಹೇಳಿಮಾಡಿಸಿದಂತಿವೆ.

14. ಫೆಸ್ಟಿವ್ ಮಗ್‌ಗಳು

ಬಣ್ಣಬಣ್ಣದ ಪ್ರಿಂಟ್, ಸಾಂಪ್ರದಾಯಿಕ ಡಿಸೈನ್ ಅಥವಾ ಪರ್ಸನಲ್ ಮೆಸೇಜ್ ಇರುವ ಮಗ್‌ಗಳನ್ನು ನೀವು ದಿನನಿತ್ಯದ ಬಳಕೆಗೆ ಗಿಫ್ಟ್ ಮಾಡಬಹುದು.

15. ಮನೆಯಲ್ಲೇ ಮಾಡಿದ ಸಿಹಿತಿಂಡಿಗಳು

ಲಡ್ಡು, ಬರ್ಫಿ ಅಥವಾ ಮನೆಯಲ್ಲೇ ಮಾಡಿದ ಇತರ ಹಬ್ಬದ ಸಿಹಿತಿಂಡಿಗಳನ್ನು ಹಂಚಿಕೊಳ್ಳುವ ಮೂಲಕ ನವರಾತ್ರಿಯ ಖುಷಿಯನ್ನು ಇಮ್ಮಡಿಗೊಳಿಸಬಹುದು.

ಇನ್ನು ನವರಾತ್ರಿ ಗಿಫ್ಟಿಂಗ್ ಅಂದ್ರೆ ಸಂಬಂಧಗಳನ್ನು ಸಂಭ್ರಮಿಸುವುದು ಹಾಗೂ ಖುಷಿ ಹಂಚಿಕೊಳ್ಳುವುದು. ಒಂದು ಸ್ಪೆಷಲ್ ಗಿಫ್ಟ್ ದುಬಾರಿಯಾಗಿರಲೇಬೇಕು ಅಂತೇನಿಲ್ಲ. ಅದು ಸಾಂಪ್ರದಾಯಿಕ ವಸ್ತುವಿರಲಿ, ಕೈಯಾರೆ ಮಾಡಿದ ಗಿಫ್ಟ್ ಇರಲಿ ಅಥವಾ ಮನೆಯಲ್ಲೇ ಮಾಡಿದ ಸಿಹಿತಿಂಡಿಗಳ ಬಾಕ್ಸ್ ಇರಲಿ, ಆ ಗಿಫ್ಟ್ ಹಿಂದಿರುವ ನಿಮ್ಮ ಪ್ರೀತಿಯೇ ಅದನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.