ಹೊಸ ವರ್ಷದ ಹೊಸಿಲಲ್ಲಿ ಶುಕ್ರ ಗ್ರಹವು ಧನು ರಾಶಿಗೆ ಕಾಲಿಡಲಿದೆ. ಇದರಿಂದ ನಾಲ್ಕು ರಾಶಿಗಳಿಗೆ ಬಂಪರ್ ಲಾಭ ಸಿಗಲಿದೆ.
ಶುಕ್ರ ಗಹವು ಬದುಕಿನ ಎಲ್ಲ ಭೌತಿಕ ಸಂತೋಷಗಳಿಗೆ ಕಾರಣನಾಗಿದ್ದಾನೆ. ಬದುಕಿನ ಲಕ್ಷುರಿಗಳ ಕಾರಕನಾಗಿದ್ದಾನೆ. ಶುಕ್ರನ ಅನುಗ್ರಹವಿದ್ದಾಗಲೇ ಸಂಪತ್ತು, ಐಶ್ಯರ್ಯ, ಪ್ರೀತಿ, ವೈವಾಹಿಕ ಸುಖಗಳು ಸಿಗಲು ಸಾಧ್ಯ. ವೃಷಭ ಹಾಗೂ ಕನ್ಯಾ ರಾಶಿಯನ್ನಾಳುವ ಗ್ರಹ ಶುಕ್ರ. ಜಾತಕದಲ್ಲಿ ಶುಕ್ರ ಯಾವ ಸ್ಥಳದಲ್ಲಿದ್ದಾನೆಂಬುದರ ಆಧಾರದ ಮೇಲೆ ನಿಮಗೆ ವ್ಯಾವಹಾರಿಕ ಯಶಸ್ಸು ಸಿಗುತ್ತದೋ ಇಲ್ಲವೋ ಎಂಬುದು ನಿಂತಿದೆ. ಜನವರಿ ನಾಲ್ಕು, 2022ರಂದು ಶುಕ್ರ(Venus) ಗ್ರಹವು ಧನು(Sagittarius) ರಾಶಿಗೆ ಪರಿವರ್ತನೆ ಹೊಂದುತ್ತಿದೆ. ಇದು ಗುರುವಿನ ರಾಶಿಯಾಗಿದ್ದು, ಶುಕ್ರನು ಈ ರಾಶಿಯಲ್ಲಿ ಜನವರಿ 27ರವರೆಗೆ ಇರಲಿದ್ದಾನೆ. ಇದರ ಪರಿಣಾಮವಾಗಿ ನಾಲ್ಕು ರಾಶಿಗಳಿಗೆ ವೃತ್ತಿ ಬದುಕಿನಲ್ಲಿ ಅದೃಷ್ಟ ಖುಲಾಯಿಸಲಿದೆ. ಅವುಗಳಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ.
ಮೇಷ(Aries)
ಗುರುವಿನ ರಾಶಿಯಲ್ಲಿ ಶುಕ್ರನ ಸಂಕ್ರಮಣದಿಂದ ಮೇಷ ರಾಶಿಯವರು ಬಹಳಷ್ಟು ಧನಾತ್ಮಕ ಫಲಿತಾಂಶಗಳನ್ನು ಕಾಣಲಿದ್ದಾರೆ. ಉದ್ಯೋಗ ಹಾಗೂ ಉದ್ಯಮ(business)ದಲ್ಲಿ ಒಳ್ಳೆಯ ಯಶಸ್ಸನ್ನು ಕಾಣಲಿದ್ದೀರಿ. ಈ ಸಂದರ್ಭದಲ್ಲಿ ಮಾಡುವ ಹೂಡಿಕೆಗಳು ಭವಿಷ್ಯದಲ್ಲಿ ಉತ್ತಮ ಲಾಭಗಳನ್ನು ತಂದುಕೊಡಲಿವೆ. ಭೂ ಸಂಬಂಧಿ ಖರೀದಿಗಳು ಲಾಭದಾಯಕವಾಗಲಿವೆ. ಕಚೇರಿಯಲ್ಲಿ ನಿಮ್ಮ ಹೆಸರು, ಗೌರವ ಹೆಚ್ಚಲಿದೆ. ಈ ಸಂದರ್ಭದಲ್ಲಿ ದೊಡ್ಡ ಯೋಜನೆಗಳು ನಿಮ್ಮ ಪಾಲಿಗೆ ಒಲಿದು ಬರಬಹುದು. ಅನಿರೀಕ್ಷಿತ ಧನ ಲಾಭಗಳೂ ಸಾಧ್ಯವಾಗಲಿವೆ. ಶೇರು ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಬಹುದು.
ವೃಷಭ(Taurus)
ಶುಕ್ರ ಪರಿವರ್ತನೆಯು ವೃಷಭ ರಾಶಿಯವರಿಗೆ ಬಹಳಷ್ಟು ಶುಭಗಳನ್ನು ತರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ನೀವು ಉದ್ಯೋಗ ಅರಸುತ್ತಿದ್ದರೆ ಅಥವಾ ಕೆಲಸ ಬದಲಿಸಲು ನೋಡುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ಕನಸು ಈಡೇರುವ ಬಲವಾದ ಸಂಭವಗಳಿವೆ. ನಿಮಗಿರುವ ಸಂಪರ್ಕಗಳು ಹಾಗೂ ಪ್ರಭಾವವು ಈ ಸಂದರ್ಭದಲ್ಲಿ ಹೆಚ್ಚು ಲಾಭಕಾರಕವಾಗಿ ಬದಲಾವಣೆಯಾಗಿ ನಿಮಗೆ ಧನಲಾಭ ತರಲಿವೆ. ಜೊತೆಗೆ, ಉದ್ಯೋಗದ ಭವಿಷ್ಯವನ್ನೂ ಬೆಳಕಾಗಿಸಲಿವೆ. ಸರ್ಕಾರಿ ಕೆಲಸಗಾರರಿಗೆ ಧನಾಗಮನ ಚೆನ್ನಾಗಿರಲಿದೆ. ವರ್ಗಾವಣೆ ಅವಕಾಶಗಳು ಕಾಣಿಸಬಹುದು. ಶುಕ್ರನ ಈ ಸಂಕ್ರಮಣ ಸಂದರ್ಭವನ್ನು ಚೆನ್ನಾಗಿ ಬಳಸಿಕೊಳ್ಳಿ. ವೃತ್ತಿ ಜೀವನದಲ್ಲಿ ಶತ್ರುಗಳು ಕಡಿಮೆಯಾಗಲಿದ್ದಾರೆ.
Vastu Tips : ಆಸ್ಪತ್ರೆ ಸುತ್ತಿ ಸುತ್ತಿ ಸುಸ್ತಾಗಿದ್ಯಾ? ಹೀಗೆ ಮಾಡಿದ್ರೆ ಎಲ್ಲ ರೋಗ ಮಾಯ
ಕಟಕ(Cancer)
ಶುಕ್ರ ಪರಿವರ್ತನೆಯ ಕಾರಣದಿಂದ ಜನವರಿಯಲ್ಲಿ ಕಟಕ ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಈ ಸಂದರ್ಭದಲ್ಲಿ ನಿಮ್ಮ ಸಂವಹನ ಕೌಶಲಗಳು(communication skills) ಹೆಚ್ಚಲಿದೆ. ಪರಿಣಾಮವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಎಲ್ಲ ಕೆಲಸಗಳಲ್ಲೂ ನಿಮ್ಮ ಪರ್ಫಾಮೆನ್ಸ್ ಹೆಚ್ಚಲಿದೆ. ಬಹಳಷ್ಟು ಮೂಲಗಳಿಂದ ಹಣ ಬರಲಿದೆ. ಹಿಂದೆಂದಿಗಿಂತಲೂ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಸಂಗಾತಿಯ ಪೂರ್ತಿ ಸಹಕಾರ ಸಿಗಲಿದೆ. ಹಿರಿಯರಿಂದ ಆಸ್ತಿಯ ಪಾಲು ಸಿಗಲಿದೆ. ಮನೆಗೆ ಅಗತ್ಯ ಸೌಕರ್ಯಗಳಿಗಾಗಿ ಧನವ್ಯಯ ಮಾಡಲಿರುವಿರಿ. ನಿಮ್ಮೆಲ್ಲ ಯೋಚನೆಗಳಿಗೆ ಸಹೋದ್ಯೋಗಿಗಳ ನೆರವು ಸಿಗಲಿದೆ. ಸರ್ಕಾರಿ ವೃತ್ತಿ ಅರಸುತ್ತಿರುವವರಿಗೆ ಸಿಗುವ ಸಾಧ್ಯತೆ ಅಧಿಕವಾಗಿದೆ.
Dreams And Meaning : ಪಬ್ಲಿಕ್ ಪ್ಲೇಸಲ್ಲಿ ನೇಕೆಡ್ ಆಗಿ ಓಡಾಡಿದಂತೆ ಕನಸು ಬಿತ್ತಾ? ಅರ್ಥ ಇಲ್ಲಿದೆ..
ತುಲಾ(Libra)
ಶುಕ್ರನ ರಾಶಿ ಪರಿವರ್ತನೆಯಿಂದ ತುಲಾ ರಾಶಿಗೂ ಲಾಭವಿದೆ. ವೃತ್ತಿಯಲ್ಲಿ ನಿಮ್ಮ ಪ್ರಗತಿ ನಿಮಗೇ ಅಚ್ಚರಿ ತರುವುದು. ಹಿರಿಯ ಉದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಲಿರುವಿರಿ. ಉದ್ಯಮಗಳಲ್ಲಿ ಹೊಸ ಹೊಸ ಸಾಹಸ ಮಾಡಿ ಧನಲಾಭ ಗಳಿಸುವುದನ್ನು ಕಂಡುಕೊಳ್ಳುವಿರಿ. ಹಳೆಯ ಕಾಯಿಲೆಗಳು ದೂರಾಗಲಿವೆ. ಹಣದ ಮಿತಿ ಮೀರಿದ ಖರ್ಚನ್ನು ತಗ್ಗಿಸುವಲ್ಲಿ ಯಶಸ್ವಿಯಾಗುವಿರಿ. ಹೂಡಿಕೆಗೆ ಸಮಯ ಪ್ರಶಸ್ತವಾಗಿರುತ್ತದೆ. ಕಠಿಣ ಪರಿಶ್ರಮದಿಂದ ನಿಮ್ಮ ಗುರಿಗಳನ್ನು ತಲುಪುವಿರಿ. ವರ್ಗಾವಣೆ, ಭಡ್ತಿಯ ಅವಕಾಶಗಳಿವೆ. ಆಸ್ತಿ ಖರೀದಿ, ಜಮೀನು ಮಾರಾಟಗಳು ಸಾಧ್ಯವಾಗಲಿವೆ. ಸಾಮಾಜಿಕ ಗೌರವ ಸಂಪಾದಿಸಲು ಸಾಧ್ಯವಾಗುತ್ತದೆ. ವೃತ್ತಿ ಸಂಬಂಧಿ ವಿದೇಶ ಪ್ರಯಾಣದ ಕನಸು ಈಡೇರಬಹುದು. ಸಂಗಾತಿಯ ಕಡೆಯಿಂದಲೂ ಆರ್ಥಿಕ ಮೂಲಗಳು ಹೆಚ್ಚಲಿವೆ.
