ಶಿವ ಸಂಸ್ಕೃತಿ ನೆಲೆಸಲು ವೀರಭದ್ರೇಶ್ವರ ಪಾತ್ರ ಪ್ರಮುಖವಾದುದು; ಗುರುಶಾಂತೇಶ್ವರ ಶ್ರೀ

  • ಶಿವ ಸಂಸ್ಕೃತಿ ನೆಲೆಸಲು ವೀರಭದ್ರೇಶ್ವರ ಪಾತ್ರ ಪ್ರಮುಖವಾದುದು
  • - ವೀರಭದ್ರೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗುರುಶಾಂತೇಶ್ವರ ಶ್ರೀ
Veerabhadreshwars role is important for establishing Shiva culture says Gurushanteshwar Shri

ಗುತ್ತಲ (ಸೆ.2): ಭೂಲೋಕದಲ್ಲಿ ಶಿವ ಸಂಸ್ಕೃತಿಯು ನೆಲೆಸಲು ಹಾಗೂ ಪಸರಿಸುವ ಕಾರ್ಯದಲ್ಲಿ ವೀರಭದ್ರಸ್ವಾಮಿಯ ಪಾತ್ರ ಮಹತ್ವದ್ದಾಗಿದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರು ಹೇಳಿದರು. ಸಮೀಪದ ನೆಗಳೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಜರುಗಿದ ವೀರಭದ್ರೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಅನ್ಯಾಯದ ಹಣದಿಂದ ಅನಾರೋಗ್ಯ: ಸ್ವರ್ಣವಲ್ಲೀ ಶ್ರೀ

ಮೂವತ್ಮೂರು ಕೋಟಿ ದೇವನುದೇವತೆಗಳ ಸಹೋದರನಾಗಿರುವ ವೀರಭದ್ರಸ್ವಾಮಿಯನ್ನು ಎಲ್ಲರೂ ಸಹ ಈರಣ್ಣ ಎಂದು ಕರೆಯಲ್ಪಡುತ್ತಾನೆ. ಪ್ರತಿ ದೇವಾನುದೇವತೆಗಳ ಅವತಾರದ ಹಿಂದೆಯೂ ಒಂದೂಂದು ಐತಿಹಾಸಿಕ ಪೌರಾಣಿಕ ಹಿನ್ನೆಲೆಯಿದೆ. ಅಂತೆಯೇ ವೀರಭದ್ರಸ್ವಾಮಿಗೂ ಸಹ ಒಂದು ಪೌರಾಣಿಕ ಹಿನ್ನಲೆಯಿದ್ದು ದಕ್ಷ ಬ್ರಹ್ಮನ ಸಂಹಾರಕ್ಕೆ ಅವತರಿಸಿದ ವೀರಭದ್ರಸ್ವಾಮಿ ಅಂದರೆ ಅಧರ್ಮದ ನಾಶಕ್ಕಾಗಿ ಧರ್ಮದ ಉದ್ಧಾರಕ್ಕಾಗಿ ಅವತರಿಸಿರುವ ವೀರಭದ್ರನಿಗೆ ವಿರೇಶ, ವೀರಣ್ಣ ಎಂಬ ನಾಮಗಳಿದ್ದು, ಗುಗ್ಗಳಪ್ರಿಯನಾಗಿದ್ದು ದೇವರ ಜಾತ್ರಾಮಹೋತ್ಸವದಲ್ಲಿ ಅಗ್ನಿಕುಂಡ ಮಹೋವನ್ನು ಆಚರಿಸಲಾಗುತ್ತದೆ.

ಹೆಸರೇ ಹೇಳುವಂತೆ ವೀರನೂ ಹೌದು ಭದ್ರನೂ ಸಹ ಹೌದು. ಭದ್ರನೆಂದರೆ ಭಯಂಕರ, ವೀರನೆಂದರೆ ಮಹಾಶೂರ. ವೀರಭದ್ರನೆಂದರೆ ದುಷ್ಟರ ಪಾಲಿಗೆ ಭಯಂಕರ ಸ್ವರೂಪದಲ್ಲಿ ಬಂದು ತನ್ನ ಪರಾಕ್ರಮದಿಂದ ಅವರನ್ನು ಸಂಹಾರಮಾಡಿ ಜಗತ್ತಿಗೆ ಶಿವಧರ್ಮಸಾರವನ್ನು ಸಾರಿದ ಮಹಾತ್ಮನೆನಿಸಿದ್ದು ಇಂತಹ ವೀರಭದ್ರಸ್ವಾಮಿ ಅವತರಿಸಿದ ಪುಣ್ಯದಿನವೇ ಭಾದ್ರಪದ ಮಾಸದ ಶುಕ್ಲ ಪಕ್ಷದ ಪ್ರಥಮ ಮಂಗಳವಾರ ವೀರಭದ್ರೇಶ್ವರ ಜನನವಾಗಿರುವುದು ಎಂದರು.

ದಕ್ಷಬ್ರಹ್ಮನು ಶಿವನಿಗೆ ಮಾಡಿದ ಅಪಮಾನದ ಸೇಡು ತಿರಿಸಿಕೊಳ್ಳುಲು ಶಿವನ ಜಟೆಯಿಂದ ಉದ್ಭವಿಸಿದ ವೀರಭದ್ರ ದಕ್ಷಭ್ರಹ್ಮನನ್ನು ಸಂಹರಿಸಿ ಶಿವದ್ರೋಹಿಗಳ ಪಾಲಿಗೆ ಹೊಸ ಸಂದೇಶ ನೀಡುತ್ತಾನೆ. ಇಂತಹ ವೀರಭದ್ರಸ್ವಾಮಿಯು ಆಂಜನೇಯನಿಗೆ ಲಿಂಗದೀಕ್ಷೆಯನಿತ್ತು ಆತನನ್ನು ವೀರಾಂಜನೇಯ ನಾಮದಿಂದ ಜಗತಿ್ೊ್ರಸಿದ್ದಿಯಾದನು. ಅಂತಹ ವೀರಭದ್ರದೇವರನ್ನು ಯಾರು ಪ್ರತಿನಿತ್ಯ ಪೂಜಿಸುತ್ತರೋ ಆತನ ನಾಮಸ್ಮರಣೆ ಮಾಡುವವರು ಅಂತಹವರಿಗೆ ಯಾವುದೇ ಭಯ. ಭೀತಿ ಇರುವುದಿಲ್ಲ. ಕೇವಲ ವೀರಭದ್ರಸ್ವಾಮಿ ಒಂದೇ ಕುಲಕ್ಕೆ ಸಿಮೀತವಾಗಿಲ್ಲ ಸರ್ವಜನಾಂಗದವರಿಗೂ ಆತ ಮನೆದೇವರಾಗಿದ್ದಾನೆ. ಕರ್ನಾಟಕದ ನಾನಾ ಭಾಗಗಳಲ್ಲಿ ಮುಸ್ಲಿಂ ಭಾಂಧವರು ಸಹ ವೀರಭದ್ರಸ್ವಾಮಿಗೆ ನಡೆದುಕೊಳ್ಳುವುದನ್ನು ಕಾಣಬಹುದಾಗಿದೆ ಎಂದರು.

ಇದಕ್ಕೂ ಪೂರ್ವದಲ್ಲಿ ವೀರಭದ್ರೇಶ್ವರ ಸ್ವಾಮಿಗೆ ಮಹಾ ರುದ್ರಾಭಿಷೇಕ ಅಷ್ಟೋತ್ತರ ಮಹಾ ಮಂಗಳಾರುತಿ ಜರುಗಿದವು. ಶ್ರಾವಣ ಮಾಸ ಪರ್ಯಂತರ ವೀರಭದ್ರಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಿದ ಗುರುಶಾಂತಸ್ವಾಮಿ ಹಿರೇಮಠ ಹಾಗೂ ಫಕ್ಕೀರೇಶ ಪೂಜಾರರನ್ನು ಶ್ರೀಗಳು ಸನ್ಮಾನಿಸಿದರು.

ಸೇವೆಯ ಸಮಾಧಾನ ಭೋಗದಲ್ಲಿಲ್ಲ: ರಾಘವೇಶ್ವರ ಶ್ರೀ

ಈ ವೇಳೆ ಬಸವರಾಜ ಮರಗಬ್ಬಿನ, ಈಶ್ವರ ಶಿಡೇನೂರ, ದೇವಪ್ಪ ಮರಗಬ್ಬಿನ, ಈರಪ್ಪ ಹಾವೇರಿ, ಫಕ್ಕೀರಪ್ಪ ಹೊಸಮನಿ, ಸೋಮೇಶ ಸಪ್ಪಣ್ಣನವರ, ಗುರುರಾಜ ಪತ್ರಿ, ವೀರೇಶ ಗಿರಿಯಣ್ಣನವರ, ಶಿವಾನಂದ ಸಪ್ಪಿನ, ರುದ್ರಪ್ಪ ಅರ್ಕಸಾಲಿ, ಪರಮೇಶ್ವರಯ್ಯ ಮಠಪತಿ, ರಮೇಶ ಶಿಡೇನೂರ, ವಿರೂಪಾಕ್ಷಪ್ಪ ಹ್ಯಾಡಲ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು, ಗ್ರಾಮಸ್ಥರು ಪಾಲ್ಗೊಂಡಿದ್ದರು. ದೇವಸ್ಥಾನದ ಆವರಣದಲ್ಲಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಜರುಗಿತು. ನಂತರ ಅನ್ನ ಸಂರ್ತಪಣೆ ಜರುಗಿತು.

Latest Videos
Follow Us:
Download App:
  • android
  • ios