Asianet Suvarna News Asianet Suvarna News

Vastu Tips : ಹೇಗೇಗೋ ದುಡ್ಡು ಎಣಿಸಿದರೆ, ಪರ್ಸಲ್ಲಿ ಹಣವಿಲ್ಲವಾಗುತ್ತೆ, ಜೋಪಾನ

ಲಕ್ಷ್ಮಿ ಒಲಿಸಿಕೊಳ್ಳಲು ಭಕ್ತರು ಹರಸಾಹಸ ಮಾಡ್ತಾರೆ. ಎಷ್ಟೇ ಹರಕೆ ತೀರಿಸಿದ್ರೂ ಲಕ್ಷ್ಮಿ ಮನೆಗೆ ಬರೋದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣವಿದೆ. ಲಕ್ಷ್ಮಿ ಕೃಪೆ ತೋರಬೇಕೆಂದ್ರೆ ಕೆಲ ತಪ್ಪುಗಳನ್ನು ಜನರು ಮಾಡಬಾರದು.
 

Vastu Tips For Money To Impress God Laxmi
Author
First Published Oct 14, 2022, 3:03 PM IST | Last Updated Oct 14, 2022, 3:03 PM IST

ಹಣವಿಲ್ಲದೆ ಜೀವನ ನಿರ್ವಹಣೆ ಅಸಾಧ್ಯ. ತಟ್ಟಿದ್ದು, ಮುಟ್ಟಿದ್ದಕ್ಕೆಲ್ಲ ಹಣ ನೀಡುವ ಕಾಲವಿದು. ಕೈನಲ್ಲಿ ಎಷ್ಟು ಹಣವಿದ್ರೂ ಸಾಲೋದಿಲ್ಲ. ಮನೆಯಿಂದ ಹೊರಗೆ ಬಂದ್ರೆ ಸಾವಿರಾರು ರೂಪಾಯಿ ಖರ್ಚಾಗುತ್ತೆ.  ಹಣದ ಗಿಡ ನೆಡಬೇಕು ಎನ್ನುವವರನ್ನು ನೀವು ಕೇಳಿರಬಹುದು. ಹಣ ಮಾಡಲು ಜನರು ಸಾಕಷ್ಟು ಶ್ರಮಪಡ್ತಾರೆ. ಇದ್ರ ಜೊತೆಗೆ ತಾಯಿ ಲಕ್ಷ್ಮಿ ಆರಾಧನೆ ಮಾಡ್ತಾರೆ. ಲಕ್ಷ್ಮಿ ಒಲಿದ್ರೆ ಮನೆಗೆ ಸಂಪತ್ತು ಎನ್ನುವ ಜನರು, ಲಕ್ಷ್ಮಿ ದೇವಿಯ ಪೂಜೆ, ಪ್ರಾರ್ಥನೆ ಮಾಡ್ತಾರೆ. ಕೆಲವೊಮ್ಮೆ ಈ ಶ್ರಮ, ದೇವಿ ಆರಾಧನೆ ಎಷ್ಟು ಮಾಡಿದ್ರೂ ಹಣ ಮಾತ್ರ ಕೈನಲ್ಲಿರೋದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ತಿಂಗಳ ಕೊನೆಯಲ್ಲಿ ಬೇರೆಯವರಿಂದ ಸಾಲ ಪಡೆಯಬೇಕಾಗುತ್ತದೆ. ಇದಕ್ಕೆಲ್ಲ ಅನೇಕ ಕಾರಣವಿದೆ. ನೀವು ಹಣವನ್ನು ಇಡುವ ಹಾಗೂ ಎಣಿಸುವ ರೀತಿ ಕೂಡ ನಿಮ್ಮ ಮನೆಯ ಖಜಾನೆ ಖಾಲಿ ಮಾಡಬಹುದು. ನೀವು ಮಾಡುವ ಕೆಲಸ ಲಕ್ಷ್ಮಿ ಮುನಿಸಿಗೆ ಕಾರಣವಾಗಬಹುದು. ಹಾಗಾಗಿ ಲಕ್ಷ್ಮಿಗೆ ಸಂಬಂಧಿಸಿದ ಕೆಲ ಸಂಗತಿಯನ್ನು ನೀವು ತಿಳಿಯುವ ಅಗತ್ಯವಿದೆ.

ಲಕ್ಷ್ಮಿ (Lakshmi) ಒಲಿಸಿಕೊಳ್ಳಬೇಕೆಂದ್ರೆ ಈ ತಪ್ಪು ಮಾಡ್ಬೇಡಿ :

ನೋಟು (Note) ಗಳನ್ನು ಎಣಿಸುವಾಗ ಈ ತಪ್ಪು ಮಾಡಬೇಡಿ : ಕಂತೆ ಕಂತೆ ನೋಟುಗಳಿರಲಿ ಇಲ್ಲ ಸಣ್ಣ ನೋಟಿನ ಕಟ್ಟಿರಲಿ, ಜನರು ನೋಟುಗಳನ್ನು ಎಣಿಸುವಾಗ ಎಂಜಲು ಬಳಸ್ತಾಳೆ. ಲಕ್ಷ್ಮಿಯನ್ನು ನಾವು ದೇವರೆಂದು ಪೂಜೆ ಮಾಡ್ತಾವೆ. ಹಣವನ್ನು ಲಕ್ಷ್ಮಿಗೆ ಹೋಲಿಕೆ ಮಾಡ್ತಾವೆ. ಹೀಗಿರುವಾಗ ಲಕ್ಷ್ಮಿ ಸ್ವರೂಪದ ನೋಟಿಗೆ ಎಂಜಲು ಹಚ್ಚಿದ್ರೆ ಎಷ್ಟು ಸರಿ ನೀವೇ ಹೇಳಿ. ಎಂಜಲು ಬಳಸದೆ ನೋಟು ಎಣಿಸೋದು ಕಷ್ಟ ಎನ್ನುವುದಾದ್ರೆ ನೀವು ನೀರ (Water) ನ್ನು ಬಳಸಬಹುದು. ಒಂದು ಬಟ್ಟಲಿನಲ್ಲಿ ನೀರನ್ನಿಟ್ಟು ಅಥವಾ ಸ್ಪಂಜ್ ಗೆ ನೀರನ್ನು ಹಾಕಿ ನೋಟನ್ನು ಎಣಿಸಬಹುದು. ಆಗ ಲಕ್ಷ್ಮಿಗೆ ಅಗೌರವ ತೋರಿದಂತಾಗುವುದಿಲ್ಲ. 

ಪತಿ–ಪತ್ನಿ ಸಂಬಂಧ ಗಟ್ಟಿಗೊಳಿಸುತ್ತೆ ಕರ್ಪೂರ, ಹೇಗೆ ಬಳಸಿದರೊಳಿತು?

ಹಣವನ್ನು ಕೆಳಗೆ ಬೀಳಿಸ್ಬೇಡಿ : ಮೊದಲೇ ಹೇಳಿದಂತೆ ಹಣ ಅಂದ್ರೆ ಲಕ್ಷ್ಮಿ. ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಅನೇಕರು ಹಣದ ಬಗ್ಗೆ ವಿಶೇಷ ಗಮನ ನೀಡುವುದಿಲ್ಲ. ಕಂಡ ಕಂಡಲ್ಲಿ ನೋಟು ಅಥವಾ ನಾಣ್ಯವನ್ನು ಇಟ್ಟು ಹೋಗ್ತಾರೆ. ಈ ಹಣ ಆಗಾಗ ಕೆಳಗೆ ಬೀಳ್ತಿರುತ್ತದೆ. ಹಣ ಕೆಳಗೆ ಬಿದ್ರೆ ಲಕ್ಷ್ಮಿಗೆ ಅವಮಾನ ಮಾಡಿದಂತೆ. ಮನೆಯಲ್ಲಿ ಹಣವನ್ನು ಭದ್ರವಾದ ಸ್ಥಳದಲ್ಲಿ ಇಡಿ. ಕೆಳಗೆ ಬೀಳದಂತೆ ನೋಡಿಕೊಳ್ಳಿ. ಒಂದ್ವೇಳೆ ಕೈತಪ್ಪಿ ಕೆಳಗೆ ಬಿದ್ರೆ ಅದಕ್ಕೆ ನಮಸ್ಕಾರ ಮಾಡಿ. 

ಹಣದೊಂದಿಗೆ ಎಂದೂ ಆಟ ಆಡ್ಬೇಡಿ : ಕೈನಲ್ಲಿ ನಾಣ್ಯಗಳಿದ್ದರೆ ಅನೇಕರು ಅದನ್ನು ಆಡ್ತಿರುತ್ತಾರೆ. ಆದ್ರೆ ಹಣದ ಜೊತೆ ಆಟವಾಡುವುದು ತಪ್ಪು. ಇದ್ರಿಂದ ಲಕ್ಷ್ಮಿ ಬೇಸರಗೊಳ್ತಾಳೆ. ಹಾಗಾಗಿ ಎಂದೂ ಹಣದ ಜೊತೆ ಆಟವಾಡಬೇಡಿ. ಅನೇಕರ ಮನೆಗಳಲ್ಲಿ ಮಕ್ಕಳ ಆಟದ ವಸ್ತು ನಾಣ್ಯಗಳಾಗಿರುತ್ತವೆ. ಮಕ್ಕಳಿಗೆ ಆಟಕ್ಕೆಂದು ನಾಣ್ಯಗಳನ್ನು ನೀಡಬೇಡಿ. ಇದ್ರಿಂದ ಲಕ್ಷ್ಮಿ ಮನೆಯಿಂದ ಹೊರಗೆ ಹೋಗೋದು ಮಾತ್ರವಲ್ಲ, ಮಕ್ಕಳು ನಾಣ್ಯಗಳನ್ನು ಬಾಯಿಗೆ ಹಾಕಿಕೊಳ್ಳುವ ಅಪಾಯವಿರುತ್ತದೆ. 

ಹಣವಿದೆ ಎಂಬ ಸೊಕ್ಕು ಬೇಡ : ಹಣದ ದೇವಿ ಲಕ್ಷ್ಮಿ ಚಂಚಲೆ. ಆಕೆ ಎಲ್ಲಿಯೂ ನೆಲೆ ನಿಲ್ಲುವುದಿಲ್ಲ. ಈಗ ಕೈನಲ್ಲಿ ಹಣವಿದೆ ಎನ್ನುವ ಕಾರಣಕ್ಕೆ ನೀವು ಜಂಬ ತೋರಿಸಿದ್ರೆ ಮುಂದೊಂದು ದಿನ ಖಾಲಿ ಕೈನಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಬಹುದು. ಹಣದ ಬಗ್ಗೆ ಎಂದಿಗೂ ಅಹಂಕಾರ ತೋರಿಸಬೇಡಿ. 

ದೀಪಾವಳಿ ಟೈಮಲ್ಲಾದರೂ ಇವನ್ನೆಲ್ಲ ಮನೆಯಿಂದ ಹೊರ ಹಾಕಿ, ಇಲ್ಲವೆಂದರೆ ಲಕ್ಷ್ಮಿ ಒಲಿಯೋಲ್ಲ

ಅಗತ್ಯವಿರುವವರಿಗೆ ನೆರವಾಗಿ : ಹಣ ಇದ್ದಷ್ಟು ಸಾಲುವುದಿಲ್ಲ. ಮನುಷ್ಯನ ಆಸೆಗೆ ಮಿತಿಯಿಲ್ಲ. ಆದ್ರೆ ಇದ್ದ ಹಣದಲ್ಲಿಯೇ ಅಗತ್ಯವಿರುವವರಿಗೆ ನೆರವಾದ್ರೆ ಲಕ್ಷ್ಮಿ ಒಲಿಯುತ್ತಾಳೆ. ಮತ್ತಷ್ಟು ಸಂಪತ್ತನ್ನು ನಿಮಗೆ ನೀಡ್ತಾಳೆ.
 

Latest Videos
Follow Us:
Download App:
  • android
  • ios