Asianet Suvarna News Asianet Suvarna News

ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಆರ್‌ಪಿಪಿಯಿಂದ ಸಾಮೂಹಿಕ ವಿವಾಹ; ಗಣಿಧಣಿಗೆ ಮರಳಿ ಬರುತ್ತಾ ಅದೃಷ್ಟ?

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಗಾಲಿ ಜನಾರ್ದನ ರೆಡ್ಡಿಯವರ ಕೆಆರ್‌ಪಿಪಿ ಪಕ್ಷದಿಂದ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಈ ಮೂಲಕ ಮತ್ತೊಮ್ಮೆ ವರಮಹಾಲಕ್ಷ್ಮಿ ಮೊರೆ ಹೋಗಿದ್ದಾರೆ ಗಣಿಧಣಿ.

Varalakshmi Vratham 2023 janardhana Reddy party mass marriage Ballari suh
Author
First Published Aug 25, 2023, 12:14 PM IST

ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಗಾಲಿ ಜನಾರ್ದನ ರೆಡ್ಡಿಯವರ ಕೆಆರ್‌ಪಿಪಿ ಪಕ್ಷದಿಂದ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಈ ಮೂಲಕ ಮತ್ತೊಮ್ಮೆ ವರಮಹಾಲಕ್ಷ್ಮಿ ಮೊರೆ ಹೋಗಿದ್ದಾರೆ ಗಣಿಧಣಿ.

ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತೊಮ್ಮೆ ವರಮಹಾಲಕ್ಷ್ಮಿ ಮೊರೆ ಹೋಗಿದ್ದು, ಅದ್ದೂರಿಯಾಗಿ ಕುಟುಂಬಸ್ಥರೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ನೆಪದಲ್ಲಿ ಈ ಹಿಂದೆ ಜನಾರ್ದನ ರೆಡ್ಡಿ ಸಾಮೂಹಿಕ ವಿವಾಹ ನಡೆಸುತ್ತಿದ್ದರು. ರೆಡ್ಡಿ ಮತ್ತು ಶ್ರೀರಾಮುಲು ಜೊತೆಗೂಡಿ ಮಾಡುತ್ತಿದ್ದ, ಈ ವಿವಾಹ ಕಾರ್ಯಕ್ರಮಕ್ಕೆ  ಸುಷ್ಮಾ ಸ್ವರಾಜ್ ಬರುತ್ತಿದ್ರು.

ಮೊದಲಿನಿಂದಲೂ ಸಾಮೂಹಿಕ ವಿವಾಹ ನಡೆಸುತ್ತಿದ್ದು, 1999ರಿಂದ ಸುಷ್ಮಾ ಸ್ವರಾಜ್ ಬರಲು ಪ್ರಾರಂಭಿಸಿದ್ರು. ಅಂದಿನಿಂದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ರಾಜಕೀಯ ಸ್ಥಿತಿ ಬಲಗೊಂಡಿತ್ತು. 2010ರವರೆಗೂ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬಂದಿದ್ದರು.

Varalakshmi Vratham 2023: ಇಂದು ವರಮಹಾಲಕ್ಷ್ಮಿ ಹಬ್ಬ; ವ್ರತ ಏಕೆ ಆಚರಿಸಬೇಕು? ಇಂದು ಏನು ಮಾಡಬೇಕು?

 

2011ರಂದು ಸುಷ್ಮಾ ಸ್ವರಾಜ್ ಬರಲಿಲ್ಲ, ಆ ವರ್ಷವೇ ಜನಾರ್ದನ ರೆಡ್ಡಿ ಬಂಧನವಾಯ್ತು. ಅಂದಿನಿಂದ ಒಂದೆರಡು ವರ್ಷ ಶ್ರೀರಾಮುಲು ಸಾಮೂಹಿಕ ವಿವಾಹ ಮಾಡಿದ್ರು. ನಂತರ ಕೈಬಿಟ್ರು. ಮದುವೆ, ವರಮಹಾಲಕ್ಷ್ಮಿ ಪೂಜೆ ಕೈಬಿಟ್ಟ ಹಿನ್ನಲೆ ರಾಜಕೀಯದಲ್ಲಿ ಏರಿದಷ್ಟೇ ವೇಗವಾಗಿ ಜನಾರ್ದನ ರೆಡ್ಡಿ ಕೆಳಗಿಳಿದ್ರು.

ಈ ವರ್ಷ ಮತ್ತೆ ಕೆಆರ್‌ಪಿಪಿ ಪಕ್ಷದ ವತಿಯಿಂದ ಅರುಣಾಲಕ್ಷ್ಮಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಮಾಡ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ವರಮಹಾಲಕ್ಷ್ಮಿ‌ ಒಲಿಸಿಕೊಳ್ಳುವುದರ ಜೊತೆಗೆ ರಾಜಕೀಯ ಮೇಲುಗೈ ಸಾಧಿಸಲು ಜನಾರ್ದನ ರೆಡ್ಡಿ ಯತ್ನಿಸುತ್ತಿದ್ದಾರೆ.

ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಡಗರ ನಡೆದಿದ್ದು, ಮನೆ-ಮನೆಯಲ್ಲೂ ಲಕ್ಷ್ಮಿ ಪ್ರತಿಷ್ಠಾಪನೆ ಮಾಡಿ ಲಕ್ಷ್ಮಿಗೆ ರೇಷ್ಮೆ ಸೀರೆಯುಡಿಸಿ, ವಜ್ರಾಭರಣದಿಂದ ಶೃಂಗಾರಗೊಳಿಸಿ ಪೂಜೆ ಮಾಡಲಾಗುತ್ತಿದೆ. ಲಕ್ಷ್ಮಿಗೆ ಪ್ರಿಯವಾದ ಹಣ್ಣು ತಿಂಡಿ ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ ಮನೆ ಮಂದಿ. ಚಾಮುಂಡಿ ಬೆಟ್ಟದಲ್ಲಿ ಮಹಿಳೆಯರಿಗೆ ಅರಿಶಿನ, ಕುಂಕುಮ ಹಾಗೂ ಬಳೆ ವಿತರಣೆ ಮಾಡಲಾಗುತ್ತಿದೆ. ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಅರಿಶಿನ, ಕುಂಕುಮ ಹಾಗೂ ಬಳೆ ಸ್ವೀಕರಿಸುತ್ತಿದ್ದಾರೆ.

Follow Us:
Download App:
  • android
  • ios