Asianet Suvarna News Asianet Suvarna News

Varalakshmi Vratham 2023: ಇಂದು ವರಮಹಾಲಕ್ಷ್ಮಿ ಹಬ್ಬ; ವ್ರತ ಏಕೆ ಆಚರಿಸಬೇಕು? ಇಂದು ಏನು ಮಾಡಬೇಕು?

ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮವು ಮನೆ ಮಾಡಿದ್ದು, ಬೆಳಗ್ಗೆಯಿಂದ ಎಲ್ಲೆಡೆ ಭಕ್ತಿ, ಭಾವದಿಂದ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಇದು ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ಹಬ್ಬ. ಈ ವ್ರತದ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

varalakshmi vratham 2023 date significance puja ritual of the auspicious hindu festival suh
Author
First Published Aug 25, 2023, 10:16 AM IST

ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮವು ಮನೆ ಮಾಡಿದ್ದು, ಬೆಳಗ್ಗೆಯಿಂದ ಎಲ್ಲೆಡೆ ಭಕ್ತಿ, ಭಾವದಿಂದ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಇದು ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ಹಬ್ಬ. ಈ ವ್ರತದ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

ಇಂದು ವರಮಹಾಲಕ್ಷ್ಮಿ ಹಬ್ಬ ಅಥವಾ ವ್ರತವನ್ನು ಆಚರಿಸಲಾಗುತ್ತಿದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಈ ದಿನ ಪೂಜಿಸಿದರೆ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಈ ಹಿನ್ನೆಲೆ ವರಮಹಾಲಕ್ಷ್ಮೀ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ವರಮಹಾಲಕ್ಷ್ಮಿ ವ್ರತದಂದು ಲಕ್ಷ್ಮಿ ದೇವಿಯನ್ನು ಮೆಚ್ಚಿಸುವುದು ಹೇಗೆ ಹಾಗೂ ಈ ವ್ರತ ಏಕೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ.

ಶ್ರಾವಣ ಮಾಸದ ಶುಕ್ರವಾರದ ವರಲಕ್ಷ್ಮಿ ವ್ರತ ತುಂಬಾ ವಿಶೇಷವಾಗಿದೆ. ಲಕ್ಷ್ಮಿ ದೇವಿಯ ಆರಾಧನೆಗೆ ಶ್ರಾವಣ ಪೂರ್ಣಿಮಾ ಮುಂಚಿನ ಶುಕ್ರವಾರ ಬಹಳ ಮುಖ್ಯ. ಈ ದಿನ ಲಕ್ಷ್ಮಿಯನ್ನು ಪೂಜಿಸಿದರೆ ಜೀವನದಲ್ಲಿ ಹಣದ ಕೊರತೆ ಎಂದಿಗೂ ಬರುವುದಿಲ್ಲ ಎಂಬ ನಂಬಿಕೆ ನಮ್ಮಲ್ಲಿದೆ.

varalakshmi vratham 2023: ವರಮಹಾಲಕ್ಷ್ಮಿ ವ್ರತಾಚರಣೆ ವಿಧಾನ ಹೇಗಿರುತ್ತೆ?; ಸಿದ್ಧತೆ ಹೇಗೆ ಮಾಡಬೇಕು?

 

ವರಮಹಾಲಕ್ಷ್ಮಿ ವ್ರತ ಏಕೆ ಆಚರಿಸಬೇಕು?

ಶ್ರಾವಣದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ವರಮಹಾಲಕ್ಷ್ಮಿ ವ್ರತದಿಂದ ಸಂಪತ್ತು ಮತ್ತು ಸಮೃದ್ಧಿಯ ಹೆಚ್ಚಳದೊಂದಿಗೆ ಪತಿಯ ಆಯಸ್ಸು ಕೂಡ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಸಂತಾನವಿಲ್ಲದವರು ಸಂತಾನವನ್ನು ಪಡೆದುಕೊಳ್ಳುತ್ತಾರೆ. ವರಮಹಾಲಕ್ಷ್ಮಿ ದೇವಿಯು ಕ್ಷೀರ ಸಾಗರದಿಂದ ಉದ್ಭವಿಸಿದವಳು. ಆದ್ದರಿಂದ, ತಾಯಿಯ ಈ ರೂಪದ ಬಣ್ಣವನ್ನು ಸಹ ಬಿಳಿ ಬಣ್ಣ ಎಂದು ಪರಿಗಣಿಸಲಾಗುತ್ತದೆ. ಆಸೆಗಳನ್ನು ಪೂರೈಸುತ್ತದೆ, ಈ ಕಾರಣಕ್ಕಾಗಿ ಆಕೆಯನ್ನು ವರ ಲಕ್ಷ್ಮಿ ಎಂದು ಕರೆಯಲಾಗುತ್ತದೆ.

 ವರಮಹಾಲಕ್ಷ್ಮಿ ಹಬ್ಬದ ಏನು ಮಾಡಬೇಕು?

ಇಂದು ಕೆಲವೊಂದು ಒಳ್ಳೆಯ ಕೆಲಸಗಳನ್ನ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಹಾಗೂ ಮನೆಗೆ ಒಂದು ಚಿನ್ನದ ನಾಣ್ಯವನ್ನ ಖರೀದಿ ಮಾಡಿ ತಂದರೆ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ ಇದೆ. ಹಾಗೂ ಪಾರಿಜಾತ ಹೂವಿನ ಗಿಡವನ್ನು ಹಬ್ಬದ ದಿನ ತಂದು ನೆಡಬೇಕು. ಇದರಿಂದ ಲಕ್ಷ್ಮಿಯ ಆಶೀರ್ವಾದ ಸಿಗಲಿದೆ.

varalakshmi vratham 2023 : ನಾಳೆ ವರಮಹಾಲಕ್ಷ್ಮಿ ಹಬ್ಬ; ವ್ರತದ ಪೂಜೆಯನ್ನು ಹೇಗೆ ಮಾಡಬೇಕು?

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios